ಟೊಯೋಟಾ ಕಾರುಗಳಿಗೆ ಇರುವ ಮರ್ಯಾದೆಯೇ ಬೇರೆ. ಹಾಗಾಗಿ ಹೊಸ ಕಾರುಗಳು ಬಂದಾಗೆಲ್ಲಾ ಟೊಯೋಟಾಭಿಮಾನಿಗಳ ಸಂಘ ಒಮ್ಮೆ ಅತ್ತ ನೋಡಿಯೋ ನೋಡುತ್ತದೆ. ಈಗ ಮತ್ತೆ ಟೊಟೋಟಾ ಕಡೆಗೆ ನೋಡುವ ಸಂದರ್ಭ ಬಂದಿದೆ. ಟೊಯೋಟಾ ತನ್ನ ಹೊಚ್ಚ ಹೊಸ ಎಸ್‌ಯುವಿ ಅರ್ಬನ್ ಕ್ರೂಸರ್ ಬಿಡುಗಡೆ ಮಾಡಿದೆ. ಅಟೋಮ್ಯಾಟಿಕ್ ಮತ್ತು ಮ್ಯಾನ್ಯುವಲ್ ಎರಡೂ ಮಾದರಿಗಳಲ್ಲಿ ಕಾರು ಲಭ್ಯ. ನಿಮಗೆ ಯಾವುದು ಸುಲಭವೋ ಅದರ ಕಡೆ ಮನಸ್ಸು ಕೊಡಬಹುದು. ಟೊಯೋಟಾ ಮತ್ತು ಮಾರುತಿ ಸುಜುಕಿ ಕಂಪನಿಗಳು ಒಂದಾದ ಮೇಲೆ ಹೊರಬರುತ್ತಿರುವ ಟೊಯೋಟಾದ ಎರಡನೇ ಕಾರು ಇದು. ಮಾರುತಿ ಬ್ರೆಜ್ಜಾ ಕಾರಿನ ಟೊಯೋಟಾ ವರ್ಷನ್.
ಟೊಯೋಟಾ ಅರ್ಬನ್ ಕ್ರೂಸರ್ vs ಕಿಯಾ ಸೊನೆಟ್; ಇಲ್ಲಿದೆ ಬೆಲೆ, ವಿಶೇಷತೆ
undefined
ಕೆ ಸೀರೀಸ್ 1.5 ಲೀಟರ್, 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಈ ಕಾರು ರೇನ್ ಸೆನ್ಸಿಂಗ್ ವೈಪರ್‌ನಿಂದ ಹಿಡಿದು ಕ್ರೂಸರ್ ಕಂಟ್ರೋಲ್‌ವರೆಗೆ ಬಹುತೇಕ ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿದೆ. ಮ್ಯಾನ್ಯುವಲ್ ಕಾರುಗಳ ಆರಂಭಿಕ ಬೆಲೆ ರು.8.40 ಲಕ್ಷ. ಅಟೋಮ್ಯಾಟಿಕ್ ಕಾರುಗಳ ಆರಂಭಿಕ ಬೆಲೆ ರು.9.80 ಲಕ್ಷ.
ಟೊಯೋಟಾ ಕಿರ್ಲೋಸ್ಕರ್ ಕಂಪನಿಯ ಎಂಡಿ ಮಸಕಜು ಯೊಶಿಮುರ, ಹಿರಿಯ ಉಪಾಧ್ಯಕ್ಷ ನವೀನ್ ಸೋನಿ ಮತ್ತು ತದಶಿ ಅಸಝಮಾ ಈ ಕಾರನ್ನು ಲೋಕಾರ್ಪಣೆಗೊಳಿಸಿದ್ದಾರೆ.