ರೋಡ್ ಫಂಡಿಂಗ್ ಮೇಲೆ ಶೇ.90 ರಷ್ಟು ಕೊಡುಗೆ, ಟೋಯೋಟಾ ಕಾರುಗಳಿಗೆ ಭರ್ಜರಿ ಆಫರ್!

Published : Sep 10, 2022, 09:32 PM IST
 ರೋಡ್ ಫಂಡಿಂಗ್ ಮೇಲೆ ಶೇ.90 ರಷ್ಟು ಕೊಡುಗೆ, ಟೋಯೋಟಾ ಕಾರುಗಳಿಗೆ ಭರ್ಜರಿ ಆಫರ್!

ಸಾರಾಂಶ

ದೇಶಾದ್ಯಂತದ ಗ್ರಾಹಕರಿಂದ ನಾವಿನ್ಯ ರಿಟೇಲ್ ಫಂಡಿಂಗ್ ಆಯ್ಕೆಗಳನ್ನು ಒದಗಿಸಲು ಹೊಸ ಪಾಲುದಾರಿಕೆಯನ್ನು ಟೋಯೋಟಾ ಘೋಷಿಸಿದೆ. ರೋಡ್ ಫಂಡಿಂಗ್ ಮೇಲೆ ಶೇ.90% ವರೆಗೆ ಕೊಡುಗೆಗಳನ್ನು ಘೋಷಿಸಲಾಗಿದೆ.

ಬೆಂಗಳೂರು(ಸೆ.10): ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇಂದು ಭಾರತದ ಪ್ರಮುಖ ಬ್ಯಾಂಕಿಂಗ್ ವೇದಿಕೆಯಾದ ಯುಕೋ ಬ್ಯಾಂಕ್ ನೊಂದಿಗೆ  ಒಪ್ಪಂದ ಮಾಡಿಕೊಂಡಿದೆ.  ಟೊಯೊಟಾದ ವಿಶ್ವದರ್ಜೆಯ ಉತ್ಪನ್ನಗಳು ಮತ್ತು ಸೇವೆಗಳಿಗೆ ಹೆಚ್ಚು ಹೆಚ್ಚು ಗ್ರಾಹಕರನ್ನು ಆಕರ್ಷಿಸುವ ಮಹತ್ವಾಕಾಂಕ್ಷೆಯನ್ನು ಈ  ಪಾಲುದಾರಿಕೆ ಹೊಂದಿದೆ. ಶ್ರೇಣಿ 1 ಮಾರುಕಟ್ಟೆಗಳ ಮಾತ್ರವಲ್ಲದೆ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಗ್ರಾಹಕರಿಗೆ ಪ್ರಯೋಜ ನೀಡಲಿದೆ. ಶ್ರೇಣಿ 2 ಮತ್ತು ಶ್ರೇಣಿ 3 ಮಾರುಕಟ್ಟೆಗಳ ಮೇಲೆ ಹೆಚ್ಚಿನ ಗಮನವನ್ನು ನೂತನ ಪಾಲುದಾರಿಕೆ ಕೇಂದ್ರೀಕರಿಸುತ್ತದೆ. ಕೂಲ್ ನ್ಯೂ ಗ್ಲಾಂಝಾ, ಅರ್ಬನ್ ಕ್ರೂಸರ್ ಮತ್ತು ಇತ್ತೀಚೆಗೆ ಅನಾವರಣಗೊಂಡ ಅರ್ಬನ್ ಕ್ರೂಸರ್ ಹೈರೈಡರ್ ನಂತಹ ಹೊಸ ಮಾದರಿ ಬಿಡುಗಡೆಯೊಂದಿಗೆ  ಎ&ಬಿ-ವಿಭಾಗಕ್ಕೆ ಪ್ರವೇಶಿಸುವ ಮೂಲಕ  ಟಿಕೆಎಂ ಶ್ರೇಣಿ 2 ಮತ್ತು ಶ್ರೇಣಿ 3 ಮಾರುಕಟ್ಟೆಗಳ ಮೇಲೆ ವಿಶೇಷ ಗಮನ ಹರಿಸುವುದರೊಂದಿಗೆ ಭಾರತದಾದ್ಯಂತ ತನ್ನ ಹೆಜ್ಜೆ ಗುರುತುಗಳನ್ನು ವಿಸ್ತರಿಸುವತ್ತ ನಿರಂತರ ಗಮನ ಹರಿಸಿದೆ.  ಈ ಹೊಸ ಒಪ್ಪಂದವು ಶ್ರೇಣಿ 2 ಮತ್ತು 3 ಮಾರುಕಟ್ಟೆಗಳ ಆಧಾರದ ಮೇಲೆ ಗ್ರಾಹಕರಿಗೆ ಮೌಲ್ಯಾಧಾರಿತ ಕೊಡುಗೆಗಳನ್ನು ಹೆಚ್ಚಿಸುವ ಟಿಕೆಎಂನ ಪ್ರಯತ್ನಗಳನ್ನು ಬಲಪಡಿಸುತ್ತದೆ. ಆ ಮೂಲಕ ಭಾರತದಲ್ಲಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಮಾರಾಟ ಮಾಡುವ ವಾಹನಗಳ ಸಂಪೂರ್ಣ ಶ್ರೇಣಿಗೆ ಗ್ರಾಹಕರ ಸುಲಭ ಪ್ರವೇಶವನ್ನು ಒದಗಿಸಲಿದೆ.

ನೂತನ ಒಪ್ಪಂದದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡು ಮಾತನಾಡಿದ ಯುಕೋ ಬ್ಯಾಂಕ್ ನ ಮಾರ್ಕೆಟಿಂಗ್ ಮತ್ತು ವೆಲ್ತ್ ಮ್ಯಾನೇಜ್ಮೆಂಟ್ ವಿಭಾಗದ ಜನರಲ್ ಮ್ಯಾನೇಜರ್ ಆಗಿರುವ ಸತ್ಯ ರಂಜನ್ ಪಾಂಡಾ, "ಟೊಯೊಟಾ ಕಿರ್ಲೋಸ್ಕರ್ ಮೋಟಾರ್(Toyota Cars) ಪ್ರಮುಖ ಕಾರು ತಯಾರಕರಲ್ಲಿ ಒಂದಾಗಿರುವುದರಿಂದ ಅವರೊಂದಿಗೆ ಸಹಕರಿಸಲು ನಾವು ಉತ್ಸುಕರಾಗಿದ್ದೇವೆ. ಈ ಹೊಸ ಪಾಲುದಾರಿಕೆಯೊಂದಿಗೆ, 3,000 ಕ್ಕೂ ಹೆಚ್ಚು ಶಾಖೆಗಳ ನಮ್ಮ ಬೃಹತ್ ಜಾಲದ ಮೂಲಕ ಶ್ರೇಣಿ 1, 2 ಮತ್ತು 3 ನಗರಗಳು ಮತ್ತು ಪಟ್ಟಣಗಳಲ್ಲಿನ ನಮ್ಮ ಗ್ರಾಹಕ ನೆಲೆಯನ್ನು ತಲುಪುವ ವಿಶ್ವಾಸ ವ್ಯಕ್ತಪಡಿಸಿದರು.

Toyota SUV Price ಅರ್ಬನ್ ಕ್ರೂಸರ್ ಹೈರೈಡರ್ ಬೆಲೆ ಘೋಷಿಸಿದ ಟೋಯೋಟಾ, ಸ್ಪರ್ಧಾತ್ಮಕ ಬೆಲೆಯಲ್ಲಿ SUV!

ಈ ಒಪ್ಪಂದವು ಟೊಯೊಟಾವನ್ನು ಖರೀದಿಸಲು ಯೋಜಿಸುವ ನಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ(Customers) ತ್ವರಿತ ಮತ್ತು ತಡೆರಹಿತ ಖರೀದಿ ಅನುಭವವನ್ನು(On road Funding) ಒದಗಿಸಲಿದೆ. ಇದು ಯುಕೋ ಬ್ಯಾಂಕ್ ಮತ್ತು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ನಡುವಿನ ಸಂಬಂಧದಲ್ಲಿ ಗ್ರಾಹಕರಿಗೆ ಒಟ್ಟಿಗೆ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ರೋಮಾಂಚಕ ಹಂತದ ಆರಂಭವನ್ನು ಸೂಚಿಸುತ್ತದೆ ಎಂದು ಯುಕೋ ಬ್ಯಾಂಕ್ ನ ರಿಟೇಲ್ ಬ್ಯಾಂಕಿಂಗ್ ವಿಭಾಗದ ಜನರಲ್ ಮ್ಯಾನೇಜರ್ ಎಸ್.ಕೆ.ಸಾಂಖ್ಯನ್ ಹೇಳಿದ್ದಾರೆ.

ಎ&ಬಿ-ಸೆಗ್ಮೆಂಟ್ ಗೆ ನಮ್ಮ ಯಶಸ್ವಿ ಪ್ರವೇಶದ ನಂತರ, ಗ್ರಾಮೀಣ ಮಾರುಕಟ್ಟೆಗಳಲ್ಲಿ ಟೊಯೊಟಾ ವಾಹನಗಳಿಗೆ ಹೆಚ್ಚಿನ ಬೇಡಿಕೆಯಿದೆ. ಹೆಚ್ಚುತ್ತಿರುವ ಏರಿಕೆಯನ್ನು ಪೂರೈಸಲು ಮತ್ತು ದೇಶಾದ್ಯಂತ ನಮ್ಮ ಗ್ರಾಹಕರ ಮಾರಾಟದ ಅನುಭವವನ್ನು ಸುಧಾರಿಸಲು ನಾವು ನಿರ್ಧರಿಸಿದ್ದೇವೆ. ಗ್ರಾಹಕ ಕೇಂದ್ರಿತ ಕಂಪನಿಯಾಗಿ, ಭಾರತದಲ್ಲಿ ನಮ್ಮ ವಿಶ್ವದರ್ಜೆಯ ಟೊಯೊಟಾ ವಾಹನಗಳ ಸಾಲಿಗೆ ಸುಲಭವಾಗಿ ಪ್ರವೇಶಿಸಲು ನಮ್ಮ ಗ್ರಾಹಕರಿಗೆ ಅನನ್ಯ ಮತ್ತು ಆಕರ್ಷಕ ಹಣಕಾಸು ಯೋಜನೆಗಳು ಮತ್ತು ಕೊಡುಗೆಗಳನ್ನು ಒದಗಿಸಲು ನಾವು ಮುಂದಾಗಿದ್ದೇವೆ. ಯುಕೋ ಬ್ಯಾಂಕಿನ ವ್ಯಾಪಕ ನೆಟ್ವರ್ಕ್, ಮತ್ತು ಡೇಟಾಬೇಸ್ ಬಳಕೆಯು ಹೊಸ ಗ್ರಾಹಕರನ್ನು ಗುರುತಿಸಲು ನಮಗೆ ಸಹಾಯ ಮಾಡುತ್ತದೆ. ನಮ್ಮ ಗೌರವಾನ್ವಿತ ಗ್ರಾಹಕರಿಗೆ ಉತ್ತಮ ಪರಿಹಾರಗಳನ್ನು ಒಟ್ಟಿಗೆ ರಚಿಸಲು ಆಶಿಸುತ್ತವೆ ಎಂದರು  ಟಿಕೆಎಂನ ಸೇಲ್ಸ್ ಮತ್ತು ಸ್ಟ್ರಾಟೆಜಿಕ್ ಮಾರ್ಕೆಟಿಂಗ್ ನ  ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್  ಅತುಲ್ ಸೂದ್ ಹೇಳಿದ್ದಾರೆ.

 

ಭಾರತದಲ್ಲಿ ಲ್ಯಾಂಡ್‌ ಕ್ರೂಸರ್‌ ಎಲ್‌ಸಿ 300 ಬುಕಿಂಗ್‌ ಆರಂಭ

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಯಾವಾಗಲೂ ಸುಲಭ ಹಣಕಾಸು ಆಯ್ಕೆಗಳಂತಹ ಸಮಯೋಚಿತ ಮತ್ತು ಸಂಬಂಧಿತ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ  ಲೈಫ್ ಸೈಕಲ್ ನಾದ್ಯಂತ ಗ್ರಾಹಕರ ಅನುಭವವನ್ನು ಸುಧಾರಿಸಲು ಶ್ರಮಿಸುತ್ತದೆ. ಟೊಯೊಟಾ ವಾಹನಗಳ ಮಾಲೀಕತ್ವವನ್ನು ಗ್ರಾಹಕರಿಗೆ ಸುಲಭ ಪ್ರಕ್ರಿಯೆಯನ್ನಾಗಿ ಮಾಡುವ ಗುರಿಯನ್ನು ಹೊಂದಿರುವ ಟಿಕೆಎಂ ಯಾವಾಗಲೂ ದೇಶಾದ್ಯಂತದ ಪ್ರಮುಖ ಹಣಕಾಸು ಸಂಸ್ಥೆಗಳೊಂದಿಗೆ ಹೊಸತನದ ಒಪ್ಪಂದಗಳನ್ನು ಮಾಡಿಕೊಳ್ಳಲಿದೆ. ಈ ಕೊಡುಗೆಗಳು  ನೂತನ ವಾಹನ ಖರೀದಿಗೆ ಮಾತ್ರವಲ್ಲದೇ ಬಳಸಿದ (ಯೂಸ್ಡ್ ಕಾರ್ಡ್ ), ಸರ್ವೀಸ್ ಪ್ಯಾಕೇಜ್ ಗಳನ್ನು ಸಹ ಒಳಗೊಂಡಿದೆ. ಇದರಿಂದಾಗಿ ಟೊಯೊಟಾ ಕಾರುಗಳ ಒಟ್ಟಾರೆ ಸಕಾರಾತ್ಮಕ ಖರೀದಿ ಮತ್ತು ಮಾಲೀಕತ್ವದ ಅನುಭವ ನೀಡಲಿದೆ.
 

PREV
Read more Articles on
click me!

Recommended Stories

Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ
ಭಾರತದ ಮೊದಲ 7 ಸೀಟರ್ ಎಲೆಕ್ಟ್ರಿಕ್ SUV ಕಾರು XEV 9S ಪರಿಚಯಿಸಿದ ಮಹೀಂದ್ರ,ಟಾಟಾಗೆ ಠಕ್ಕರ್