ಜುಲೈ ತಿಂಗಳಲ್ಲಿ ಅನಾವರಣ ಮಾಡಲಾಗಿದ್ದ ಟೋಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಕಾರಿನ ಬೆಲೆ ಪ್ರಕಟಗೊಂಡಿದೆ. ಸ್ಪರ್ಧಾತ್ಮಕ ಬೆಲೆಯಲ್ಲಿ ಹೊಚ್ಚ ಹೊಸ ಕಾರು ಲಭ್ಯವಿದೆ. ಬೆಲೆ ವಿವರ ಇಲ್ಲಿವೆ.
ಬೆಂಗಳೂರು(ಸೆ.09): ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇಂದು ತನ್ನ ಹೊಚ್ಚ ಹೊಸ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಬೆಲೆ ಪ್ರಕಟಿಸಿದೆ. 15,11,000 ರೂಪಾಯಿಗಳಿಂದ(ಎಕ್ಸ್ ಶೋ ರೂಂ) ಹೊಚ್ಚ ಹೊಸ ಕ್ರೂಸರ್ ಹೈರೈಡರ್ ಕಾರಿನ ಬೆಲೆ ಆರಂಭಗೊಳ್ಳುತ್ತಿದ್ದು, ಗರಿಷ್ಠ 18,99,000 ರೂಪಾಯಿ(ಎಕ್ಸ್ ಶೋ ರೂಂ) ವರಿಗಿದೆ. ಹೊಚ್ಚ ಹೊಸ ಎಸ್ .ಯು.ವಿ.ಯನ್ನು ಜುಲೈ ತಿಂಗಳ ಆರಂಭದಲ್ಲಿ ಅನಾವರಣಗೊಳಿಲಾಗಿತ್ತು. . ಇದೇ ಸಮಯದಲ್ಲಿ ಬುಕಿಂಗ್ ಕೂಡ ಆರಂಭಿಸಲಾಗಿತ್ತು. ಟೊಯೊಟಾದ ಸುಸ್ಥಿರ ಚಲನಶೀಲತೆಯ ಕೊಡುಗೆಗಳಲ್ಲಿ ಒಂದಾಗಿ ಅರ್ಬನ್ ಕ್ರೂಸರ್ ಹೈರಿಡರ್ ಟೊಯೊಟಾದ ಪ್ರಸಿದ್ಧ ಜಾಗತಿಕ ಎಸ್.ಯು.ವಿ ಲಿನೇಜ್ , ಬೋಲ್ಡ್ ಮತ್ತು ಅತ್ಯಾಧುನಿಕ ಸ್ಟೈಲಿಂಗ್ ಹೊಂದಿದೆ. ಸುಧಾರಿತ ತಂತ್ರಜ್ಞಾನ ವೈಶಿಷ್ಟ್ಯಗಳೊಂದಿಗೆ ಗ್ರಾಹಕರಿಗೆ ಪರಿಪೂರ್ಣ ಆಯ್ಕೆಯಾಗಲಿದೆ.
ಟೋಯೋಟಾ ಅರ್ಬನ್ ಕ್ರೂಸರ್ ಬೆಲೆ ವಿವರ
V eDrive 2WD HYBRID: 18,99,000 ರೂಪಾಯಿ(ಎಕ್ಸ್ ಶೋ ರೂಂ)
G eDrive 2WD HYBRID: 17,49,000 ರೂಪಾಯಿ(ಎಕ್ಸ್ ಶೋ ರೂಂ)
S eDrive 2WD HYBRID: 15,11,000 ರೂಪಾಯಿ(ಎಕ್ಸ್ ಶೋ ರೂಂ)
V AT 2WD NEO DRIVE: 17,09,000 ರೂಪಾಯಿ(ಎಕ್ಸ್ ಶೋ ರೂಂ)
undefined
ಭಾರತದಲ್ಲಿ ಲ್ಯಾಂಡ್ ಕ್ರೂಸರ್ ಎಲ್‌ಸಿ 300 ಬುಕಿಂಗ್ ಆರಂಭ
ಅರ್ಬನ್ ಕ್ರೂಸರ್ ಹೈರೈಡರ್ ಗೆ(Urban Cruiser Hyryder) ಅಭೂತಪೂರ್ವ ಪ್ರತಿಕ್ರಿಯೆಯನ್ನು ಪಡೆದಿದ್ದು, ಇದಕ್ಕಾಗಿ ನಾವು ನಿಜವಾಗಿಯೂ ವಿನಮ್ರರಾಗಿದ್ದೇವೆ. ನಮ್ಮ ಗ್ರಾಹಕರು ಬ್ರಾಂಡ್ ಟೊಯೊಟಾದಲ್ಲಿ ತಮ್ಮ ನಂಬಿಕೆ ಮತ್ತು ವಿಶ್ವಾಸವನ್ನು ಇರಿಸಿದ್ದಕ್ಕಾಗಿ ನಾವು ಕೃತಘ್ನರಾಗಿದ್ದೇವೆ. ಇಂದು ಅರ್ಬನ್ ಕ್ರೂಸರ್ ಹೈರೈಡರ್(Toyota) ಬೆಲೆಯನ್ನು ಹಂತ ಹಂತವಾಗಿ ಘೋಷಿಸಲು ನಾವು ನಿರ್ಧರಿಸಿದ್ದೇವೆ. ಉಳಿದ ಗ್ರೇಡ್ ಗಳ ಬೆಲೆಗಳನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಟಿಕೆಎಂನ ಸೇಲ್ಸ್ ಮತ್ತು ಸ್ಟ್ರಾಟೆಜಿಕ್ ಮಾರ್ಕೆಟಿಂಗ್ ನ ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್ ಅತುಲ್ ಸೂದ್ ಹೇಳಿದ್ದಾರೆ.
ಬಿ ಎಸ್.ಯು.ವಿ ಸೆಗ್ಮೆಂಟ್ ನಲ್ಲಿ(SUV) ಮೊದಲ ಬಾರಿಗೆ ಸೆಲ್ಫ್-ಚಾರ್ಜಿಂಗ್(Self Charging) ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್(Hybrid Electrical Vehicle) ವೆಹಿಕಲ್ ಆಗಿರುವ ಅರ್ಬನ್ ಕ್ರೂಸರ್ ಹೈರೈಡರ್ ಮಾದರಿ ಕಾರ್ಯಕ್ಷಮತೆ, ಅತ್ಯುತ್ತಮ ದರ್ಜೆಯ ಇಂಧನ ದಕ್ಷತೆ, ತ್ವರಿತ ವೇಗವರ್ಧನೆ, ಸಂಪರ್ಕಿತ ಕಾರು ವೈಶಿಷ್ಟ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿದ್ದು, ಹಸಿರು ಭವಿಷ್ಯಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ನಾವು ಅರ್ಬನ್ ಕ್ರೂಸರ್ ಹೈರೈಡರ್ ಗೆ ಅತ್ಯಂತ ಸ್ಪರ್ಧಾತ್ಮಕ ಬೆಲೆಯನ್ನು ಪರಿಚಯಿಸಿದ್ದೇವೆ, ಏಕೆಂದರೆ ಹೈರೈಡರ್ ಮೂಲಕ ನಾವು ಪರಿಸರ ಸ್ನೇಹಿ ತಂತ್ರಜ್ಞಾನಗಳ ವ್ಯಾಪಕ ಸ್ವೀಕಾರವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ್ದೇವೆ. ಆ ಮೂಲಕ ಸಕಾರಾತ್ಮಕ ಪರಿಣಾಮವನ್ನು ಸೃಷ್ಟಿಸಲಿದ್ದು, ದೇಶದ ಇಂಧನ ಭದ್ರತೆಯನ್ನು ಹೆಚ್ಚಿಸುತ್ತದೆ ಎಂದರು.
Toyota Mirai ಭಾರತದ ಮೊದಲ ಹೈಡ್ರೋಜನ್ ಎಲೆಕ್ಟ್ರಿಕ್ ಕಾರು ಟೊಯೋಟಾ ಮಿರಾಯ್ ಬಿಡುಗಡೆ!
ಸೆಲ್ಫ್-ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ಪವರ್ಟ್ರೇನ್ ಮತ್ತು ನಿಯೋ ಡ್ರೈವ್ ಎಂಬ ಎರಡು ಪವರ್ಟ್ರೇನ್ ಗಳಲ್ಲಿ ಲಭ್ಯವಿರುವ ಸೆಲ್ಫ್-ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ ಇ-ಡ್ರೈವ್ ಟ್ರಾನ್ಸ್ಮಿಷನ್ ನಿಂದ ಚಾಲಿತವಾಗಿದೆ ಮತ್ತು ಎಂಜಿನ್ ಶಟ್-ಆಫ್ ನೊಂದಿಗೆ ವಿದ್ಯುತ್ ನಿಂದ ಶೇ.40% ದೂರ ಮತ್ತು ಶೇ.60% ಸಮಯವನ್ನು ಚಲಾಯಿಸುತ್ತದೆ, ಎಂಜಿನ್ ಶಟ್ ಆಫ್ ನೊಂದಿಗೆ 27.97 ಕಿ.ಮೀ/ ಲೀಟರ್ ಇಂಧನ ದಕ್ಷತೆಯನ್ನು ಒದಗಿಸಲಿದೆ. ಜೊತೆಗೆ ಇದು ನಿಯೋ ಡ್ರೈವ್ 1.5-ಲೀಟರ್ ಕೆ-ಸರಣಿಯೊಂದಿಗೆ ಬರಲಿದ್ದು, ಇದರ ಎಂಜಿನ್, ಐದು-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್, ಮತ್ತು 2 ಡಬ್ಲ್ಯೂಡಿ ಮತ್ತು 4 ಡಬ್ಲ್ಯೂಡಿ ಆಯ್ಕೆಗಳೊಂದಿಗೆ ಆರು-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ವೈಶಿಷ್ಯವನ್ನು ಹೊಂದಿದೆ.