50 ಸಾವಿರ ರೂಗೆ ಬುಕ್ ಮಾಡಿ ಹೊಚ್ಚ ಹೊಸ ಇನೋವಾ ಕ್ರಿಸ್ಟಾ ಡೀಸೆಲ್ ಕಾರು!

By Suvarna News  |  First Published Jan 27, 2023, 7:43 PM IST

ಐಕಾನಿಕ್ ಇನೋವಾ ಇದೀಗ ಹಲವು ಹೊಸತನಗಳ ಮೂಲಕ ಬಿಡುಗಡೆಯಾಗಿದೆ. ಡೀಸಲ್ ವರ್ಶನ್ ಇನೋವಾ ಕ್ರಿಸ್ಟಾ ಬುಕಿಂಗ್ ಆರಂಭಗೊಂಡಿದೆ. 50,000 ರೂಪಾಯಿ ನೀಡಿ ಕಾರು ಬುಕ್ ಮಾಡಿಕೊಳ್ಳಬಹುದು.


ಬೆಂಗಳೂರು(ಜ.27) ಟೊಯೊಟಾ ಕಿರ್ಲೋಸ್ಕರ್  ಮೋಟಾರ್ (ಟಿಕೆಎಂ)  ಹೊಸ ಇನ್ನೋವಾ ಕ್ರಿಸ್ಟಾ ಕಾರಿನ ಬುಕಿಂಗ್  ಪ್ರಾರಂಭಿಸಿದೆ. 2005 ರಲ್ಲಿ ಪರಿಚಯಿಸಿದಾಗಿನಿಂದ, ಈ ವಾಹನವು ಭಾರತೀಯ ಮಾರುಕಟ್ಟೆಯಲ್ಲಿ ಮನೆಮಾತಾಗಿದೆ, ಅದರ ವಿಶ್ವಾಸಾರ್ಹತೆ, ಆರಾಮದಾಯಕ, ಸುರಕ್ಷತೆ, ಐಷಾರಾಮಿ ಮತ್ತು ಶಕ್ತಿಗಾಗಿ ಗ್ರಾಹಕರ ಮೆಚ್ಚುಗೆಯನ್ನು ಗಳಿಸಿದೆ. ಹೊಸ ಇನ್ನೋವಾ ಕ್ರಿಸ್ಟಾ ಈಗ ಅತ್ಯಾಧುನಿಕ  ಫ್ರಂಟ್ ಫ್ಯಾಸಿಯಾದೊಂದಿಗೆ ಬಿಡುಗಡೆಯಾಗಿದೆ. ಇದನ್ನು ಒರಟಾದ ಮತ್ತು ದೃಢವಾದ ನೋಟಕ್ಕಾಗಿ ನಿರ್ಧಿಷ್ಟ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ.  ಆ ಮೂಲಕ ಭಾರತೀಯ ಕುಟುಂಬಗಳು, ಉದ್ಯಮಿಗಳು, ಕಾರ್ಪೋರೇಟ್ಸ್  ಮತ್ತು ಫ್ಲೀಟ್ ಮಾಲೀಕರ ಅಗತ್ಯಗಳನ್ನು ಪೂರೈಸುತ್ತದೆ.

ಇತ್ತೀಚೆಗೆ ಬಿಡುಗಡೆಯಾದ ಇನ್ನೋವಾ ಹೈಕ್ರಾಸ್ (ಗ್ಯಾಸೋಲಿನ್ ಮತ್ತು ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ಪವರ್ ಟ್ರೇನ್  ಲಭ್ಯವಿದೆ) ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಇದನ್ನು ಅನುಸರಿಸಿ ಹೊಸ ಇನ್ನೋವಾ ಕ್ರಿಸ್ಟಾ ಬುಕಿಂಗ್ ತೆರೆಯಲಾಗಿದೆ.  ಇದು ಅದರ ಗ್ಲಾಮರ್  , ಸುಧಾರಿತ ತಂತ್ರಜ್ಞಾನ, ಆರಾಮದ ಜೊತೆಗೆ ಸುರಕ್ಷತೆ ಮತ್ತು ಚಾಲನೆ ಮಾಡಲು ರೋಮಾಂಚನದಿಂದಾಗಿ ಏಕಾಂಗಿಯಾಗಿ ಅಥವಾ ಕುಟುಂಬದೊಂದಿಗೆ ಪ್ರಯಾಣಿಸಲು ಪ್ರತಿ  ಸಂದರ್ಭಕ್ಕೂ ಸೂಕ್ತವಾದ ವಾಹನವಾಗಿದೆ.

Tap to resize

Latest Videos

undefined

Auto Expo 2023 ಅತ್ಯಾಧುನಿಕ ತಂತ್ರಜ್ಞಾನ, ಭಾವನಾತ್ಮಕ ಪಯಣದ ಟೋಯೋಟಾ ವಿಶೇಷ ಕಾರು ಅನಾವರಣ!

ಇನ್ನೋವಾ ಹೈಕ್ರಾಸ್ ಬಿಡುಗಡೆಯ ನಂತರ ಹೊಸ ಇನ್ನೋವಾ ಕ್ರಿಸ್ಟಾಗಾಗಿ ಬುಕಿಂಗ್ ಪ್ರಾರಂಭವು ಗ್ರಾಹಕರಿಗೆ ಟೊಯೊಟಾದ ಬಹು ತಂತ್ರಜ್ಞಾನ ವಿಧಾನಕ್ಕೆ ಸಾಕ್ಷಿಯಾಗಿದೆ ಮತ್ತು ಡೀಸೆಲ್ ಪವರ್ ಟ್ರೇನ್ ಹೊಂದಲು ಬಯಸುವವರಿಗೆ ಸೇವೆ ಸಲ್ಲಿಸುತ್ತದೆ.

ಟೊಯೊಟಾ ಕಿರ್ಲೋಸ್ಕರ್  ಮೋಟಾರ್ ನ ಸೇಲ್ಸ್ ಮತ್ತು ಸ್ಟ್ರಾಟೆಜಿಕ್ ಮಾರ್ಕೆಟಿಂಗ್  ವಿಭಾಗದ ಉಪಾಧ್ಯಕ್ಷ ಅತುಲ್ ಸೂದ್ ರವರು ಮಾತನಾಡಿ, 2005 ರಲ್ಲಿ ಬಿಡುಗಡೆಯಾದಾಗಿನಿಂದ ಭಾರತದಲ್ಲಿ ಐಕಾನಿಕ್ ಇನ್ನೋವಾ ಪ್ರಯಾಣವು ಮೈಲಿಗಲ್ಲುಗಳಿಂದ ಕೂಡಿದೆ. ಪ್ರಶ್ನಾತೀತ ಸೆಗ್ಮೆಂಟ್ ಲೀಡರ್ ಆಗಿರುವುದರ ಹೊರತಾಗಿ, ಈ ವಾಹನವು ತನ್ನ ಎಲ್ಲಾ ಅವತಾರಗಳಲ್ಲಿ ದೇಶಾದ್ಯಂತ ಅಪಾರ ಮೆಚ್ಚುಗೆಯನ್ನು ಗಳಿಸಿದೆ ಮತ್ತು ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾದ ಗುಣಮಟ್ಟ, ಬಾಳಿಕೆ ಮತ್ತು ವಿಶ್ವಾಸಾರ್ಹತೆಯ ಗುಣಲಕ್ಷಣಗಳನ್ನು ದೃಢಪಡಿಸಿದೆ. ನಾವು ಇಂದು ಹೊಸ ಇನ್ನೋವಾ ಕ್ರಿಸ್ಟಾ ಡೀಸೆಲ್ ಗಾಗಿ ಬುಕಿಂಗ್ ತೆರೆಯುತ್ತಿದ್ದಂತೆ, ಅವರ ನೆಚ್ಚಿನ ಎಂಪಿವಿ ಈಗ ನಾಲ್ಕು ಗ್ರೇಡ್ ಗಳಲ್ಲಿ ಲಭ್ಯವಿದೆ. ಸರಿ ಸಾಟಿಯಿಲ್ಲದ ಆರಾಮ ಮತ್ತು ಸುರಕ್ಷತೆಗೆ ಹೆಸರುವಾಸಿಯಾದ ಒರಟಾದ ಮತ್ತು ಪ್ರಾಕ್ಟಿಕಲ್ ವಾಹನವನ್ನು ಬಯಸುವ ಗ್ರಾಹಕರಿಗೆ ಈ ವಾಹನವು ಪರಿಪೂರ್ಣ ಆಯ್ಕೆಯಾಗಿದೆ.

 

50 ಸಾವಿರ ರೂಗೆ ಬುಕ್ ಮಾಡಿ ಹೊಚ್ಚ ಹೊಸ ಸೆಲ್ಫ್ ಚಾರ್ಜಿಂಗ್ ಹೈಬ್ರಿಡ್ ಇನೋವಾ ಹೈಕ್ರಾಸ್!
 
ಹೊಸ ಇನ್ನೋವಾ ಕ್ರಿಸ್ಟಾ ಮತ್ತು ಇನ್ನೋವಾ ಹೈಕ್ರಾಸ್ ಈಗ ವಿತರಕರಲ್ಲಿ ಮತ್ತು ಆನ್ ಲೈನ್ ನಲ್ಲಿ  ಬುಕಿಂಗ್ಗೆ ಲಭ್ಯವಿದೆ. ತಮ್ಮ ನೆಚ್ಚಿನ ಇನ್ನೋವಾವನ್ನು ಬಯಸುವ ನಮ್ಮ ಗ್ರಾಹಕರು ತಮ್ಮ ಡ್ರೈವ್ ಅನ್ನು ಆನಂದಿಸಲು ಅನೇಕ ಪವರ್ ಟ್ರೇನ್ ಆಯ್ಕೆಯನ್ನು ಹೊಂದಿದ್ದಾರೆ ಎಂದು ತಿಳಿಸಲು ನಾವು ಸಂತಸಪಡುತ್ತೇವೆ.

ಇಂದಿನಿಂದ ಹೊಸ ಇನ್ನೋವಾ ಕ್ರಿಸ್ಟಾ ಬುಕಿಂಗ್ 50000 ರೂ.ಗೆ ಲಭ್ಯವಿದೆ.  ಹೊಸ ಇನ್ನೋವಾ ಕ್ರಿಸ್ಟಾ G, GX, VX &ZX , ಎಂಬ ನಾಲ್ಕು ಗ್ರೇಡ್ ಗಳಲ್ಲಿ ಲಭ್ಯವಿದೆ ಮತ್ತು ವೈಟ್ ಪಿಯರ್ಲ್  ಕ್ರಿಸ್ಟಲ್ ಶೈನ್, ಸೂಪರ್ ವೈಟ್, ಸಿಲ್ವರ್, ಆಟಿಟ್ಯೂಡ್ ಬ್ಲ್ಯಾಕ್ ಮತ್ತು ಅವಂತ್ ಗ್ರೇಸ್ ಬ್ರೋನ್ಸ್ ಎಂಬ ಐದು ಬಣ್ಣಗಳಲ್ಲಿ ಲಭ್ಯವಿದೆ.

•        2.4 ಲೀಟರ್ ಡೀಸೆಲ್ ಎಂಜಿನ್ , ಇಕೋ ಮತ್ತು ಪವರ್ ಡ್ರೈವ್ ಮೋಡ್  5  ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ನೊಂದಿಗೆ ಇದು ಲಭ್ಯವಿದೆ.
•        ಸುರಕ್ಷತಾ ವೈಶಿಷ್ಟ್ಯಗಳಲ್ಲಿ  7 ಎಸ್ ಆರ್ ಎಸ್ ಏರ್ ಬ್ಯಾಗ್ ಗಳು, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್  ಸೆನ್ಸಾರ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್), ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ) ಮತ್ತು ಬ್ರೇಕ್ ಅಸಿಸ್ಟ್ (ಬಿಎ), 3-ಪಾಯಿಂಟ್ ಸೀಟ್ ಬೆಲ್ಟ್ ಮತ್ತು ಹೆಡ್ ರೆಸ್ಟ್ ಸೇರಿವೆ.
•        ಡಿಜಿಟಲ್ ಡಿಸ್ಪ್ಲೇ, 8-ವೇ ಪವರ್ ಅಡ್ಜಸ್ಟ್ ಡ್ರೈವರ್ ಸೀಟ್, ಸ್ಮಾರ್ಟ  ಎಂಟ್ರಿ ಸಿಸ್ಟಮ್, ಸೀಟ್ ಬ್ಯಾಕ್ ಟೇಬಲ್, ವಿವರವಾದ ಡ್ರೈವ್ ಮಾಹಿತಿಯೊಂದಿಗೆ ಟಿಎಫ್ಟಿ ಎಂಐಡಿ, ಲೆದರ್ ಸೀಟ್ ಕಲರ್ ಆಯ್ಕೆಗಳು (ಬ್ಲ್ಯಾಕ್ ಮತ್ತು ಕ್ಯಾಮಲ್ ಟ್ಯಾನ್ ), ಆಂಬಿಯೆಂಟ್ ಇಲ್ಯುಮಿನೇಷನ್ ಮತ್ತು ಒನ್ ಟಚ್ ಟಂಬಲ್ ಸೆಕೆಂಡ್ ರೋಮ್ ಸೀಟ್ ಗಳೊಂದಿಗೆ ಪ್ರಯಾಣಿಕರ ಆರಾಮವನ್ನು ಮತ್ತಷ್ಟು ಹೆಚ್ಚಿಸಲಾಗಿದೆ.
•        ಆಂಡ್ರಾಯ್ಡ್ ಆಟೋ / ಆಪಲ್ ಕಾರ್ ಪ್ಲೇ  ನೊಂದಿಗೆ  ಸ್ಮಾರ್ಟ್  ಪ್ಲೇಕಾಸ್ಟ್ 8” ಟಚ್ ಸ್ಕ್ರೀನ್ ಆಡಿಯೊ ಮನಮೋಹಕ  ಮಲ್ಟಿಮೀಡಿಯಾ ಅನುಭವ ನೀಡಲಿದೆ.

click me!