ಟಾಟಾ ನೆಕ್ಸಾನ್ ಇವಿ ಬೆಲೆ 85,000 ರೂ ಕಡಿತ, 453 ಕಿ.ಮೀಗೆ ಮೈಲೇಜ್ ಹೆಚ್ಚಳ!

By Suvarna News  |  First Published Jan 19, 2023, 5:24 PM IST

ಟಾಟಾ ನೆಕ್ಸಾನ್ ಇವಿ 3ನೇ ವರ್ಷಾಚರಣೆಯಲ್ಲಿ ಗ್ರಾಹಕರಿಗೆ ಭರ್ಜರಿ ಕೂಡುಗೆ ನೀಡಿದೆ. ಟಾಟಾ ನೆಕ್ಸಾನ್ ಇವಿ ಬೆಲೆಯನ್ನು 85,000 ರೂಪಾಯಿ ಕಡಿತಗೊಳಿಸಲಾಗಿದೆ. ಇಷ್ಟೇ ಅಲ್ಲ ಮೈಲೇಜ್ ಹೆಚ್ಚಿಸಲಾಗಿದೆ.


ಮುಂಬೈ(ಜ.19):  ಟಾಟಾ ಮೋಟಾರ್ಸ್ ಭಾರತದಲ್ಲಿ ಎಲೆಕ್ಟ್ರಾನಿಕ್ ವಾಹನಗಳ ಮಾರುಕಟ್ಟೆ ಆಕ್ರಮಿಸಿಕೊಂಡಿದೆ. ಇದರಲ್ಲಿ ಪ್ರಮುಖವಾಗಿ ಟಾಟಾ ನೆಕ್ಸಾನ್ ಇವಿ ಬಹುಬೇಡಿಕೆಯ ವಾಹನವಾಗಿದೆ. ಇತ್ತೀಚೆಗೆ ನೆಕ್ಸಾನ್ ಇವಿ ಮ್ಯಾಕ್ಸ್ ಬಿಡುಗಡೆ ಮಾಡಿದೆ. ಇದೀಗ ನೆಕ್ಸಾನ್ ಇವಿ 3ನೇ ವರ್ಚಾಚರಣೆ ಪ್ರಯುಕ್ತ ಭರ್ಜರಿ ಕೊಡುಗೆ ಘೋಷಿಸಿದೆ. ನೆಕ್ಸಾನ್ ಇವಿ ಬೆಲೆ ಬರೋಬ್ಬರಿ 85,000 ರೂಪಾಯಿ ಕಡಿತಗೊಂಡಿದೆ. ಇಷ್ಟ ಅಲ್ಲ ನೆಕ್ಸಾನ್ ಇವಿ ಮ್ಯಾಕ್ಸ್ ಮೈಲೇಜ್ 437 ಕಿಲೋಮೀಟರ್ ನಿಂದ 453 ಕಿಲೋಮೀಟರ್‌ಗೆ ಹೆಚ್ಚಿಸಲಾಗಿದೆ.  

ಟಾಟಾ ಇದೀಗ ನೆಕ್ಸಾನ್  EV MAX ಟ್ರಿಮ್ ಬಿಡುಗಡೆ ಮಾಡಿದೆ.  16.49 ಲಕ್ಷ ರೂಪಾಯಿ ಆಕರ್ಷಕ ಬೆಲೆಯಲ್ಲಿ ನೂತನ ಕಾರು ಬಿಡುಗಡೆ ಮಾಡಲಾಗಿದೆ.  ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, i-VBAC, LED DRLs ಮತ್ತು LED ಟೈಲ್ ಲ್ಯಾಂಪ್ ಇರುವ ಪ್ರೊಜೆಕರ್ ಹೆಡ್‌ಲ್ಯಾಂಪ್ಸ್, ಪುಶ್ ಬಟನ್ ಸ್ಟಾರ್ಟ್, ಡಿಜಿಟಲ್ ಟಿಎಫ್‌ಟಿ ಇನ್ಸ್‌ಟ್ರುಮೆಂಟ್ ಕ್ಲಸ್ಟರ್, ಸ್ಮಾರ್ಟ್ ವಾಚ್ ಸಂಪರ್ಕತೆ ಮತ್ತು ರೇರ್ ಡಿಸ್ಕ್ ಬ್ರೇಕ್ ಇರುವ ZConnect ಸಂಪರ್ಕಗೊಂಡ ಕಾರ್ ಟೆಕ್ ಇರುವ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೊಗ್ರಾಮ್(ESP) ಹೊಂದಿದೆ.

Tap to resize

Latest Videos

undefined

ಹೆಚ್ಚುವರಿ ಫೀಚರ್ಸ್, 315 ಕಿ.ಮೀ ಮೈಲೇಜ್, ಹೊಸ ರೂಪದಲ್ಲಿ ಟಾಟಾ ಟಿಗೋರ್ ಇವಿ!

ಟಾಪ್ ಎಂಡ್ ಟ್ರಿಮ್ ಆದ ನೆಕ್ಸಾನ್ EV MAX XZ+ Lux ರೂ. 18.49 ಲಕ್ಷ ಬೆಲೆಯಲ್ಲಿ ಲಭ್ಯವಿದೆ.  XM ನಲ್ಲಿರುವ ಅಂಶಗಳ ಜೊತೆಗೆ, ಇದು, ವೆಂಟಿಲೇಶನ್ ಇರುವ ಲೆದರೆಟ್ ಸೀಟ್‌ಗಳು, ವೈರ್ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ಆಟೋ ಡಿಮ್ಮಿಂಗ್ IRVM, ಕ್ಯಾಬಿನ್ ಏರ್ ಪ್ಯೂರಿಫೈಯರ್, ಎಲೆಕ್ಟ್ರಿಕ್ ಸನ್‌ರೂಫ್, 8 ಸ್ಪೀಕ್‌ಗಳಿರುವ ಹಾರ್ಮನ್(HARMAN)ನ 17.78 ಸೆಂ.ಮೀ ಫ್ಲೋಟಿಂಗ್ ಇನ್ಫೋಟೇನ್ಮೆಂಟ್ ಮ್ಸಿಸ್ಟಮ್, 16-ಅಂಗುಲ ಅಲಾಯ್ ವೀಲ್ಸ್, ಹಿಲ್ ಡೆಸೆಂಟ್ ಕಂಟ್ರೋಲ್, ಶಾಫ್‌ಕಿನ್ ಆಂಟೆನ್ನಾ ಇತ್ಯಾದಿಗಳನ್ನು ಹೊಂದಿದೆ. 

ಪ್ರೊಜೆಕರ್ ಹೆಡ್‌ಲ್ಯಾಂಪ್ಸ್ ಮತ್ತು LED DRLs, ಪುಶ್ ಬಟನ್ ಸ್ಟಾರ್ಟ್, ಡಿಜಿಟಲ್ ಟಿಎಫ್‌ಟಿ ಇನ್ಸ್‌ಟ್ರುಮೆಂಟ್ ಕ್ಲಸ್ಟರ್, ಕ್ರೂಸ್ ಕಂಟ್ರೋಲ್, ಸ್ಮಾರ್ಟ್ ವಾಚ್ ಸಂಪರ್ಕತೆ ಮತ್ತು ರೇರ್ ಡಿಸ್ಕ್ ಬ್ರೇಕ್ ಇರುವ ZConnect ಸಂಪರ್ಕಗೊಂಡ  ಕಾರ್ ಟೆಕ್, ಹಾರ್ಮನ್ ಇನ್ಫೋಟೇನ್ಮೆಂಟ್ ಸಿಸ್ಟಮ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮುಂತಾದ ಅಂಶಗಳನ್ನು ಹೊಂದಿರುವ ನೆಕ್ಸಾನ್ EV Prime XMದ ಬೆಲೆ ಈಗ  14.49 ಲಕ್ಷ ರೂಪಾಯಿ(ಎಕ್ಸ್ ಶೋರೂಂ).ನೆಕ್ಸಾನ್ EV ಲೈನ್‌ಅಪ್‌ಗಾಗಿ ಬುಕಿಂಗ್‌ಗಳು ತಕ್ಷಣದಿಂದಲೇ ತೆರೆದಿವೆ. ಹೊಸ ವೈವಿಧ್ಯವಾದ ನೆಕ್ಸಾನ್ EV MAX XMದ ಡೆಲಿವರಿ ಏಪ್ರಿಲ್ 2023ರ ನಂತರದಿಂದ ಆರಂಭಗೊಳ್ಳಲಿದೆ.   

ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿನೂತನ ಇಂಜಿನಿಯರಿಂಗ್ ತಂತ್ರಗಳ ಅನುಷ್ಠಾನದ ಮೂಲಕ ಟಾಟಾ ಮೋಟರ್ಸ್ ಉತ್ಪಾದನಾ ಪ್ರಕ್ರಿಯೆಗಳನ್ನು ಕ್ರಮಬದ್ಧಗೊಳಿಸಿ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಿದೆ. ಇದರ ಜೊತೆಗೆ, ಪ್ರಾದೇಶೀಕರಣದಿಂದಾಗಿ, ದೀರ್ಘಕಾಲ ಉಳಿಯುವಂತಹ ಮತ್ತು ಪರಿಸರ ಸ್ನೇಹಿಯಾದ ಸಾರಿಗೆಯ ಅಳವಡಿಕೆಯನ್ನು ಉತ್ತೇಜಿಸುವಂತಹ ಸರ್ಕಾರೀ ಉತ್ಪಾದನಾ ಸಂಪರ್ಕಿತ ಪ್ರೋತ್ಸಾಹ  ಯೋಜನೆಗಳ ಪ್ರಯೋಜನವನ್ನೂ ಪಡೆದುಕೊಳ್ಳುತ್ತಿದೆ. ಈ ಯೋಜನೆಗಳು, ವೆಚ್ಚ ಉಳಿತಾಯ ಮಾಡುತ್ತಿದ್ದು, ಇದನ್ನು ಬೆಲೆ ಇಳಿಕೆಯ ರೂಪದಲ್ಲಿ ಗ್ರಾಹಕರಿಗೇ ವರ್ಗಾಯಿಸಲಾಗುತ್ತಿದೆ.

 

ಕೈಗೆಟುಕುವ ದರದಲ್ಲಿ ಟಾಟಾ ಟಿಯಾಗೊ ಎನ್‍ಆರ್‌ಜಿ CNG ಕಾರು ಬಿಡುಗಡೆ! 

ಅತ್ಯಾಧುನಿಕವಾದ ಅತಿಶಕ್ತಿಶಾಲಿಯಾದ ZIPTRON ತಂತ್ರಜ್ಞಾನದ ನೆರವಿನೊಂದಿಗೆ ನೆಕ್ಸಾನ್ EV ಪ್ರಮಾಣಿತ IP67ಹವಾಮಾನ-ನಿರೋಧಕ ಮತ್ತು ಧೂಳು ನಿರೋಧಕ ಬ್ಯಾಟರಿ ಪ್ಯಾಕ್ ಮತ್ತು ಮೋಟಾನಿಂದ ಸಜ್ಜುಗೊಂಡಿದ್ದು, 8 ವರ್ಷಗಳು ಅಥವಾ 160,000 ಕಿ.ಮೀಗಳ ವಾರಟಿಯೊಂದಿಗೆ ಸಂಪೂರ್ಣ ಮನಶ್ಶಾಂತಿ ಒದಗಿಸುತ್ತದೆ. ಡಿಸಿ ಫಾಸ್ಟ್ ಚಾರ್ಜಿಂಗ್, 4-ಹಂತದ ಮಲ್ಟಿ ಮೋಡ್ ರೀಜೆನ್, ಅವಶ್ಯಕತೆಗೆ ಪರಿವರ್ತಿಸಬಹುದಾದ ಸಿಂಗಲ್ ಪೆಡಲ್ ಡ್ರೈವಿಂಗ್, ಸಾಮಾನ್ಯ ಅಳವಡಿಕೆಯಾಗಿ ZConnect ಸಂಪರ್ಕಗೊಂಡ ಕಾರ್ ತಂತ್ರಜ್ಞಾನ, ಕ್ರೂಸ್ ಕಂಟ್ರೋಲ್, ಸಂಪೂರ್ಣವಾಗಿ ಸ್ವಯಂಚಾಲಿತವಾದ ಹವಾಮಾನ ನಿಯಂತ್ರಣ,  i-TPMS, ಲೆದರೆಟ್ ಸೀಟುಗಳು ಮತ್ತು ಬ್ರ್ಯಾಂಡ್ ಇರುವ ಹಾರ್ಮನ್‌ನ ಇನ್ಫೋಟೇನ್ಮೆಂಟ್ ಸಿಸ್ಟಮ್ ಮೊದಲಾದ ಪ್ರಮುಖಾಂಶಗಳನ್ನು ವಿವಿಧ ವೈವಿಧ್ಯಗಳಾದ್ಯಂತ ಒದಗಿಸಲಾಗುತ್ತಿದೆ. 

ಹೊಸ ಹಾಗೂ ಪ್ರಸ್ತುತದ ಗ್ರಾಹಕರು ಇಬ್ಬರಿಗಾಗಿಯೂ ಮುಖ್ಯಾಂಶಗಳು ಹಾಗೂ ಶ್ರೇಣಿಯನ್ನು ಗರಿಷ್ಟಗೊಳಿಸುವ ಸಲುವಾಗಿ ಟಾಟಾ ಮೋಟರ್ಸ್ ಚಾಲನಾ ನಡವಳಿಕೆಗಳ ಕುರಿತು ನಿರಂತರವಾಗಿ ಡಾಟಾ ಪಾಯಿಂಟ್‌ಗಳನ್ನು ವಿಶ್ಲೇಷಿಸುತ್ತಿರುತ್ತದೆ. ಶೀಘ್ರ ಅಳವಡಿಕೆಗೆ ಹೆಚ್ಚಿನ ಬೆಂಬಲ ಒದಗಿಸಲು, ಸಂಸ್ಥೆಯು ಸಮಗ್ರವಾದ ಚಾರ್ಜಿಂಗ್ ಮೂಲಸೌಕರ್ಯದ ನಿರ್ಮಾಣ ಮಾಡಿ ಇವಿ ಮಾಲೀಕರಿಗೆ ಬೆಂಬಲ ಒದಗಿಸಲು ಅದ್ವಿತೀಯವಾದ ಗ್ರಾಹಕ ಸೇವೆಯನ್ನು ಒದಗಿಸುವುದಕ್ಕೂ ಬದ್ಧವಾಗಿದೆ
 

click me!