ಇಲೋನ್ ಮಸ್ಕ್(Elon musk) ಮತ್ತು ಟೆಸ್ಲಾ ಕಂಪನಿಯನ್ನು ಭಾರತಕ್ಕೆ ಸ್ವಾಗತಿಸುತ್ತೇವೆ ಆದರೆ ಸರ್ಕಾರವು ಆತ್ಮನಿರ್ಭರ ಭಾರತ ಅಥವಾ ಸ್ವಾವಲಂಬಿ ಭಾರತದ ನೀತಿಯಲ್ಲಿ ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕೇಂದ್ರ ಸಚಿವ ಮಹೇಂದ್ರ ನಾಥ್ ಪಾಂಡೆ ಹೇಳಿದ್ದಾರೆ.
ಅಮೆರಿಕದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಟೆಸ್ಲಾ (tesla), ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಿರುವುದು ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಅಮೆರಿಕದಲ್ಲಿ ಯಶಸ್ವಿಯಾಗಿ ಮಾರಾಟವಾಗುತ್ತಿರುವ ಟೆಸ್ಲಾ (tesla)ಕಾರುಗಳನ್ನು, ವಿಶ್ವದ ಅತಿ ದೊಡ್ಡ ಮಾರುಕಟ್ಟೆಗಳಲ್ಲಿ ಒಂದಾದ ಭಾರತೀಯ ಮಾರುಕಟ್ಟೆ ಪರಿಚಯಿಸಲು ಆಮದು ಸುಂಕದಲ್ಲಿ ವಿನಾಯಿತಿ ನೀಡುವಂತೆ ಟೆಸ್ಲಾ ಸಿಇಓ(CEO) ಇಲಾನ್ ಮಸ್ಕ್ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ, ಇದನ್ನು ಸರ್ಕಾರ ತಿರಸ್ಕರಿಸಿತ್ತು.
ಆದರೆ, ಇಲೋನ್ ಮಸ್ಕ್(Elon musk) ಮತ್ತು ಟೆಸ್ಲಾ ಕಂಪನಿಯನ್ನು ಭಾರತಕ್ಕೆ ಸ್ವಾಗತಿಸುತ್ತೇವೆ ಆದರೆ ಸರ್ಕಾರವು ಆತ್ಮನಿರ್ಭರ ಭಾರತ ಅಥವಾ ಸ್ವಾವಲಂಬಿ ಭಾರತದ ನೀತಿಯಲ್ಲಿ ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕೇಂದ್ರ ಸಚಿವ ಮಹೇಂದ್ರ ನಾಥ್ ಪಾಂಡೆ ಹೇಳಿದ್ದಾರೆ.
ಇತ್ತೀಚೆಗೆ ಜಾಗತಿಕ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಭಾರೀ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ಯಮಗಳ ಸಚಿವರು: “ಕೇಂದ್ರ ಸರ್ಕಾರವು ಆತ್ಮನಿರ್ಭರ ಭಾರತ ನೀತಿಯ ಅನುಷ್ಠಾನದ ಹಾದಿಯಲ್ಲಿ ತ್ವರಿತವಾಗಿ ಮುನ್ನಡೆದಿದೆ ಮತ್ತು ಅದರ ಬಗ್ಗೆ ಉತ್ತಮ ಪ್ರತಿಕ್ರಿಯೆಯನ್ನು ಕೂಡ ಪಡೆದಿದೆ ಮತ್ತು ನಾವು ಈ ವಿಷಯದಲ್ಲಿ ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದರು.
ಟೆಸ್ಲಾ ಮಾರಾಟಕ್ಕೆ ಅನುಮತಿ ಸಿಗದ ಹೊರತು, ಕಾರಿನ ಘಟಕ ಭಾರತದಲ್ಲಿಲ್ಲ
ಭಾರತದಲ್ಲಿ ತನ್ನ ವಾಹನಗಳನ್ನು ಮಾರಾಟ ಮಾಡಲು ಆಮದು ಸುಂಕವನ್ನು ಕಡಿತಗೊಳಿಸಲು ಬಯಸುತ್ತಿರುವ ಅಮೆರಿಕದ ಎಲೆಕ್ಟ್ರಿಕ್ ಕಾರು ತಯಾರಕ ಟೆಸ್ಲಾ, ದೇಶದ ನೀತಿಗಳನ್ನು ಪಾಲಿಸಬೇಕು ಎಂಬುದು ಸರ್ಕಾರದ ಷರತ್ತಾಗಿದೆ. ಟೆಸ್ಲಾ ತನ್ನ ವಾಹನಗಳನ್ನು ಸ್ಥಳೀಯವಾಗಿ ಉತ್ಪಾದಿಸಬೇಕು ಹಾಗೂ ಇದಕ್ಕೆ ಸ್ಥಳೀಯ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಳ್ಳಬೇಕು. ಹಾಗಿದ್ದಲ್ಲಿ ಮಾತ್ರ ಸುಂಕ ವಿನಾಯಿತಿ ಬಗ್ಗೆ ವಿಚಾರ ಮಾಡಲಾಗುವುದು ಎಂದು ಸರ್ಕಾರ ಈ ಹಿಂದೆಯೇ ಟೆಸ್ಲಾಗೆ ಸ್ಪಷ್ಟ ಸಂದೇಶ ರವಾನಿಸಿದೆ.
ಆದರೆ, ಕಳೆದ ತಿಂಗಳು ಮೊದಲು ದೇಶದಲ್ಲಿ ತನ್ನ ಕಾರುಗಳನ್ನು ಮಾರಾಟ ಮಾಡಲು ಮತ್ತು ಸೇವೆ ಒದಗಿಸಲು ಅನುಮತಿಸದ ಹೊರತು ತನ್ನ ಉತ್ಪನ್ನಗಳನ್ನು ಸ್ಥಳೀಯವಾಗಿ ಉತ್ಪಾದಿಸುವುದಿಲ್ಲ ಎಂದಿದ್ದ ಕಂಪನಿಯ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಎಲೋನ್ ಮಸ್ಕ್ ಭಾರತೀಯ ಮಾರುಕಟ್ಟೆ ಪ್ರವೇಶದ ಯೋಜನೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವುದಾಗಿ ಘೋಷಿಸಿದ್ದರು.
'ಕಾರುಗಳನ್ನು ಮಾರಾಟ ಮಾಡಲು ಮತ್ತು ಸೇವೆ ಮಾಡಲು ನಮಗೆ ಮೊದಲು ಅನುಮತಿಸದ ಯಾವುದೇ ಸ್ಥಳದಲ್ಲಿ ಟೆಸ್ಲಾ ಉತ್ಪಾದನಾ ಘಟಕವನ್ನು ಹಾಕುವುದಿಲ್ಲ' ಎಂದು ಮಸ್ಕ್ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, 'ಟೆಸ್ಲಾ ಹಾಗೂ ಎಲಾನ್ ಮಸ್ಕ್‌ಗೆ (Elon Musk) ಭಾರತಕ್ಕೆ ಸ್ವಾಗತ. ಆದರೆ ದೇಶದ ನೀತಿಗಳ ಪ್ರಕಾರ ಮಾತ್ರ' ಎಂದಿದ್ದಾರೆ. 2021ರ ಆಗಸ್ಟ್ನಲ್ಲಿ, ದೇಶದಲ್ಲಿ ಆಮದು ಮಾಡಿಕೊಂಡ ವಾಹನಗಳೊಂದಿಗೆ ಟೆಸ್ಲಾ ಮೊದಲು ಯಶಸ್ವಿಯಾದರೆ, ನಂತರ ಭಾರತದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಯೋಚಿಸಬಹುದು ಎಂದು ಮಸ್ಕ್ ಹೇಳಿದ್ದರು.
ಎಲಾನ್ ಮಸ್ಕ್‌ಗೆ ಕುಹಕವಾಡಿದ ಜಾಹೀರಾತು
ಪ್ರಸ್ತುತ, ಭಾರತವು 40,000 ಅಮೆರಿಕನ್ ಡಾಲರ್ ಮೊತ್ತಕ್ಕಿಂತ ಹೆಚ್ಚು ಸಿಐಎಫ್ (CIF)-ವೆಚ್ಚ, ವಿಮೆ ಮತ್ತು ಸರಕು ಸಾಗಣೆ ಮೌಲ್ಯದೊಂದಿಗೆ ಸಂಪೂರ್ಣವಾಗಿ ಆಮದು ಮಾಡಿಕೊಂಡ ಕಾರುಗಳ ಮೇಲೆ ಶೇ.100ರಷ್ಟು ಆಮದು ಸುಂಕ ವಿಧಿಸುತ್ತದೆ ಮತ್ತು ಮೊತ್ತಕ್ಕಿಂತ ಕಡಿಮೆ ಬೆಲೆಯ ಕಾರುಗಳ ಮೇಲೆ ಶೇ.60ರಷ್ಟು ಆಮದು ಸುಂಕ ವಿಧಿಸುತ್ತದೆ. ಆದರೆ, ಇದರಿಂದ ಅಮೆರಿಕದಲ್ಲಿ ತಕ್ಕಮಟ್ಟಿಗೆ ಕೈಗೆಟಕುವ ದರದಲ್ಲಿ ದೊರೆಯುತ್ತಿರುವ ಟೆಸ್ಲಾ ಇವಿಗಳು ಭಾರತದಲ್ಲಿ ದುಬಾರಿ ಬೆಲೆಗೆ ಮಾರಾಟವಾಗಲಿದೆ. ಇದರಿಂದ ಜನರು ಟೆಸ್ಲಾ ಖರೀದಿಯಿಂದ ಹಿಂದೆ ಸರಿಯುವ ಸಾಧ್ಯತೆಗಳೇ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಟೆಸ್ಲಾ ಸುಂಕ ಕಡಿತಕ್ಕೆ ನಿರಂತರವಾಗಿ ಮನವಿ ಮಾಡುತ್ತಿದೆ.