
Auto Desk: ಭಾರತೀಯ ಮಾರುಕಟ್ಟೆಯಲ್ಲಿ ಕುಸಿದ ಬೇಡಿಕೆ ಹಾಗೂ ಭಾರಿ ನಷ್ಟದ ಹಿನ್ನೆಲೆಯಲ್ಲಿ ಭಾರತವನ್ನು ತೊರೆದು ಮರಳಿದ್ದ ಆಟೋ ಮೇಜರ್ ಫೋರ್ಡ್ ಕಂಪನಿ (Ford Company), ಈಗ ತಮಿಳುನಾಡಿನ ಕಾರ್ಖಾನೆಯಲ್ಲಿ ಉತ್ಪಾದನೆಯನ್ನು ಪುನಾರಂಭಿಸಿದೆ.ಉತ್ತಮ ಬೇರ್ಪಡಿಕೆ ಪ್ಯಾಕೇಜ್ಗೆ ಒತ್ತಾಯಿಸಿ ಕಳೆದ ಮೇ 30 ರಿಂದ ಮುಷ್ಕರ ನಡೆಸುತ್ತಿದ್ದ ನೌಕರರ ಒಂದು ವಿಭಾಗವು ಕೆಲಸ ಮುಂದುವರಿಸಲು ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ, ಉತ್ಪಾದನೆಯನ್ನು ಪುನರಾರಂಭಿಸಲಾಗಿದೆ ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.ಅಮೆರಿಕದ ಕಾರು ತಯಾರಕ ಸಂಸ್ಥೆಯ ಅಂಗಸಂಸ್ಥೆಯಾದ ಫೋರ್ಡ್ ಇಂಡಿಯಾದ ಕಾರ್ಖಾನೆಯಲ್ಲಿನ 300 ಕ್ಕೂ ಹೆಚ್ಚು ನೌಕರರು ಉತ್ಪಾದನೆಯನ್ನು ಪುನರಾರಂಭಿಸಲು ಒಪ್ಪಿಗೆ ನೀಡಿದ್ದಾರೆ. ಈ ಪೈಕಿ 100ರಿಂದ 150 ನೌಕರರು ಕೆಲಸಕ್ಕೆ ಹಾಜರಾಗಿದ್ದಾರೆ ಮತ್ತು ಸ್ಥಾವರವು ಜೂನ್ 14 ರಿಂದ ಎರಡು ಪಾಳಿಗಳಲ್ಲಿ (Two shifts) ಕಾರ್ಯಾಚರಣೆಯನ್ನು ಪುನರಾರಂಭಿಸಿದೆ.
ಈ ಕುರಿತು ಪಿಟಿಐಗೆ ನೀಡಿದ ಹೇಳಿಕೆಯಲ್ಲಿ ಕಂಪನಿ, "ಜೂನ್ 14 ರಿಂದ ಜಾರಿಗೆ ಬರುವಂತೆ ಚೆನ್ನೈ ಸ್ಥಾವರವು ಎರಡು ಪಾಳಿಗಳಲ್ಲಿ ಕಾರ್ಯಾಚರಣೆಯನ್ನು ಪುನರಾರಂಭಿಸಿದೆ. 300 ಕ್ಕೂ ಹೆಚ್ಚು ಜನರು ಉತ್ಪಾದನೆಯನ್ನು ಪುನರಾರಂಭಿಸಲು ತಮ್ಮ ಒಪ್ಪಿಗೆಯನ್ನು ನೀಡಿದರು ಮತ್ತು ಅದು ಹೆಚ್ಚುತ್ತಲೇ ಇದೆ. ಅಕ್ರಮವಾಗಿ ಮುಷ್ಕರದಲ್ಲಿ ಮುಂದುವರಿಯುತ್ತಿರುವ ನೌಕರರಿಗೆ, ಜೂನ್ 14ರಿಂದ ವೇತನ ನಷ್ಟದ ನಿಯಮ ಜಾರಿಗೊಳಿಸಲಾಗಿದೆ" ಎಂದು ಫೋರ್ಡ್ ಹೇಳಿದೆ.
ಜೂನ್ 14 ರಿಂದ ಉತ್ಪಾದನೆಯನ್ನು ಪುನರಾರಂಭಿಸುವ ಮತ್ತು ಉತ್ಪಾದನಾ ವೇಳಾಪಟ್ಟಿಯನ್ನು ಪೂರ್ಣಗೊಳಿಸಲು ಕಂಪನಿಯನ್ನು ಬೆಂಬಲಿಸುವ ಉದ್ಯೋಗಿಗಳಿಗೆ ಮಾತ್ರ ಬೇರ್ಪಡಿಕೆ ಪ್ಯಾಕೇಜ್ ಲಭ್ಯವಿರುತ್ತದೆ ಎಂದು ಫೋರ್ಡ್ ಹೇಳಿದೆ.
ಇದನ್ನೂ ಓದಿ: ಟೆಸ್ಲಾ ಸಿಇಓ ಎಲಾನ್ ಮಸ್ಕ್ಗೆ ವ್ಯಂಗ್ಯವಾಡಿದ ಫೋರ್ಡ್ ಜಾಹೀರಾತು
ಸದ್ಯ ಕಂಪನಿಯು ರಫ್ತು ಉತ್ಪಾದನೆಯನ್ನು ಪೂರ್ಣಗೊಳಿಸುವತ್ತ ಗಮನ ಹರಿಸಲಾಗಿದೆ. ಉದ್ಯೋಗಿಗಳು ಜೂನ್ 14 ರಿಂದ ಉತ್ಪಾದನೆಯನ್ನು ಪುನರಾರಂಭಿಸದಿದ್ದರೆ, ಕಂಪನಿಯು ಉಳಿದ ರಫ್ತು ಪ್ರಮಾಣಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿ ವಾಹನ ಉತ್ಪಾದನೆಯನ್ನು ಕೂಡ ಸ್ಥಗಿತಗೊಳಿಸಲಾಗುವುದು ಎಂದು ನೌಕರರಿಗೆ ಕಂಪನಿ ಎಚ್ಚರಿಕೆ ನೀಡಿದೆ.
ಉದ್ಯೋಗಿಗಳಿಗೆ ನೀಡಲಾಗುವ ಬೇರ್ಪಡಿಕೆ ಪ್ಯಾಕೇಜ್ನಲ್ಲಿ, ಅನೇಕ ಉದ್ಯೋಗಿಗಳು ಬೇರ್ಪಡುವಿಕೆ (ಪ್ಯಾಕೇಜ್) ಪ್ರಸ್ತಾಪದ ಬಗ್ಗೆ ಪ್ರಶ್ನೆಗಳನ್ನು ಹೊಂದಿದ್ದಾರೆ ಮತ್ತು ಒಪ್ಪಿಗೆ ನೀಡಲು ಹೆಚ್ಚಿನ ಸಮಯವನ್ನು ಕೋರುತ್ತಿದ್ದಾರೆ. ಫೋರ್ಡ್ ಪ್ರಕಾರ, ಕಂಪನಿಯು ಪ್ರತಿ ಸೇವೆ ಪೂರ್ಣಗೊಂಡ ನೌಕರನಿಗೆ ಸರಿಸುಮಾರು 115 ದಿನಗಳ ಒಟ್ಟು ವೇತನಕ್ಕಾಗಿ ಬೇರ್ಪಡಿಕೆ ಪ್ಯಾಕೇಜ್ಗಳನ್ನು ನೀಡಿದೆ. ಇದು ಶಾಸನಬದ್ಧ ಬೇರ್ಪಡಿಕೆ ಪ್ಯಾಕೇಜ್ಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ.
ಭಾರತೀಯ ಮಾರುಕಟ್ಟೆಯಲ್ಲಿ ತನ್ನ ವಾಹನಗಳಿಗೆ ಉತ್ತಮ ಸ್ಥಾನಮಾನ ಕಂಡುಕೊಂಡಿದ್ದ ಫೋರ್ಡ್(Ford), ನಂತರ ದಿನಗಳಲ್ಲಿ ಭಾರಿ ನಷ್ಟ ಅನುಭವಿಸಿತ್ತು. ಪರಿಣಾಮವಾಗಿ 2021ರ ಸೆಪ್ಟೆಂಬರ್ 9 ರಂದು, ಗಮನಾರ್ಹವಾದ ಸಂಗ್ರಹವಾದ ನಷ್ಟಗಳು ಮತ್ತು ಸುಸ್ಥಿರ ಮಾರ್ಗವನ್ನು ಕಂಡುಹಿಡಿಯಲು ಅಸಮರ್ಥತೆಯ ಕಾರಣದಿಂದಾಗಿ ಫೋರ್ಡ್ ತನ್ನ ಚೆನ್ನೈ ಸ್ಥಾವರದಲ್ಲಿ ಜೂನ್ 2022 ರ ವೇಳೆಗೆ ವಾಹನ ಉತ್ಪಾದನಾ ಕಾರ್ಯಾಚರಣೆಯನ್ನು ನಿಲ್ಲಿಸುವುದಾಗಿ ಘೋಷಿಸಿತು. ಪ್ರಸ್ತುತ, ಫೋರ್ಡ್ನ ಚೆನ್ನೈ ಘಟಕವು ವಾಹನ ಜೋಡಣೆ ಮತ್ತು ಪವರ್ಟ್ರೇನ್ ಕಾರ್ಯಾಚರಣೆಗಳಲ್ಲಿ ಸುಮಾರು 2,600 ಖಾಯಂ ಗಂಟೆಯ ಉದ್ಯೋಗಿಗಳನ್ನು ಹೊಂದಿದೆ.ʼ
ಇದನ್ನೂ ಓದಿ: Sanand Unit ಫೋರ್ಡ್ ಘಟಕ ಸ್ವಾಧೀನಕ್ಕೆ ಟಾಟಾ ಮೋಟಾರ್ಸ್‌ಗೆ ಗ್ರೀನ್ ಸಿಗ್ನಿಲ್!
ನಂತರ ಈ ಉದ್ಯೋಗಿಗಳು ತಮಗೆ ಸೂಕ್ತ ಭತ್ಯೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಆರಂಭಿಸಿದ್ದರು. ನೌಕರರ ಉದ್ಯೋಗ ಕಳೆದುಕೊಳ್ಳುವ ಭೀತಿ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಕೂಡ ಫೋರ್ಡ್ ಕಂಪನಿಗೆ ಉತ್ಪಾದನೆ ಸ್ಥಗಿತಗೊಳಿಸುವ ಬದಲು ಪರ್ಯಾಯ ಮಾರ್ಗ ಅರಸುವಂತೆ ಸಲಹೆ ನೀಡಿತ್ತು. ಕಂಪನಿ ಕಳೆದ 10 ವರ್ಷಗಳಲ್ಲಿ 15000 ಕೋಟಿ ರೂ. ನಷ್ಟವಾಗಿರುವುದಾಗಿ ತಿಳಿಸಿದೆ.