Year End 2021 ಕೈಗೆಟುಕುವ ದರದಲ್ಲಿ ಬಿಡುಗಡೆಯಾದ ಟಾಪ್ 5 ಕಾರು!

By Suvarna News  |  First Published Dec 23, 2021, 5:09 PM IST
  • 2021ರಲ್ಲಿ ಹಲವು ಏರಿಳಿತ ಕಂಡ ಭಾರತೀಯ ಆಟೋಮೊಬೈಲ್ ಕ್ಷೇತ್ರ
  • ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಿದೆ ಹಲವು ಕಾರು
  • 2021ರ ಟಾಪ್ 5 ಬಜೆಟ್ ಫ್ರೆಂಡ್ಲಿ ಕಾರು 

ಬೆಂಗಳೂರು(ಡಿ.20):  ಹೊಸ ವರ್ಷದಲ್ಲಿ(New Year 2021) ಹಲವು ಕಾರುಗಳು ಬಿಡುಗಡೆಗೆ ಸಜ್ಜಾಗಿದೆ. ಆದರೆ ಪ್ರಸಕ್ತ ವರ್ಷ ಬಿಡುಗಡೆಯಾದ ಕೆಲ ಕಾರುಗಳು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಹೀಗೆ ಭಾರಿ ಜನಮನ್ನಣೆ ಹಾಗೂ ಮಾರಾಟ, ಬುಕಿಂಗ್‌ನಲ್ಲಿ ಗಣನೀಯ ಸಾಧನೆ ಮಾಡಿದ ಕಾರುಗಳ ಪಟ್ಟಿಯಲ್ಲಿ ಕೈಗೆಟುಕುವ ದರದ ಕಾರುಗಳೇ ಹೆಚ್ಚಾಗಿದೆ. 2021ರಲ್ಲಿ ಬಿಡುಗಡೆಯಾದ(Year end 2021) ಕೈಗೆಟುಕುವ ದರದ ಕಾರುಗಳಲ್ಲಿ(Affordable car) ಟಾಪ್ ಕಾರುಗಳ ಪಟ್ಟಿ ಇಲ್ಲಿದೆ.

ರೆನಾಲ್ಟ್ ಕ್ವಿಡ್ 2021
ಬೆಲೆ: 4.11 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

Tap to resize

Latest Videos

undefined

2021ರಲ್ಲಿ ರೆನಾಲ್ಟ್ ಕ್ವಿಡ್(Renault Kwid) ಮತ್ತಷ್ಟು ಹೊಸ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಿದೆ. ಡ್ಯುಯೆಲ್ ಫ್ರಂಟ್ ಏರ್‌ಬ್ಯಾಗ್ ಸ್ಟಾಂಡರ್ಡ್ ಹಾಗೂ ಕ್ವಿಡ್ ಕ್ಲೈಂಬರ್ ಕಾರಿನಲ್ಲಿ ಡ್ಯುಯೆಲ್ ಟೋನ್ ಕಲರ್ ಆಯ್ಕೆ ಕೂಡ ಲಭ್ಯವಿದೆ. ಎಲೆಕ್ಟ್ರಿಕ್ ಔಟ್‌ಸೈಡ್ ರೈರ್ ವಿವ್ಯೂ ಮಿರರ್ ಹಾಗೂ IRVM ಕೂಡ ಲಭ್ಯವಿದೆ. ಈ ಎಲ್ಲಾ ಪೀಚರ್ಸ್ ಬೇಸ್ ಮಾಡಲೆ ಕ್ವಿಡ್ ಕಾರಿನಲ್ಲಿ ಲಭ್ಯವಿದೆ. ಎರಡು ಎಂಜಿನ್ ಆಯ್ಕೆ ಲಭ್ಯವಿದೆ. 0.8 ಲೀಟರ್ ಎಂಜಿನ್,  53 bhp ಪವರ್ ಹಾಗೂ 72 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು 1.0 ಲೀಟರ್ ಎಂಜಿನ್ 67 bhp ಪವರ್ ಹಾಗೂ 91 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.

Vehicle Deregistration ಹೊಸ ವರ್ಷದಿಂದ 10 ವರ್ಷಕ್ಕಿಂತ ಹಳೆಯ ಎಲ್ಲಾ ಡೀಸೆಲ್ ವಾಹನದ ರಿಜಿಸ್ಟ್ರೇಶನ್ ಕ್ಯಾನ್ಸಲ್!

ಟಾಟಾ ಪಂಚ್
ಬೆಲೆ: 5.49 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

ಟಾಟಾ ಮೋಟಾರ್ಸ್ ಇತ್ತೀಚೆಗೆ ಬಿಡುಗಡೆಯಾದ ಮೈಕ್ರೋ SUV ಕಾರು Tata Punch. ಕೈಗೆಟುಕುವ ದರ, ಅತ್ಯಂತ ಆಕರ್ಷಕ ವಿನ್ಯಾಸ, ಒಳಾಂಗಣದಲ್ಲಿ ಅತ್ಯಂತ ಸ್ಥಳಾವಕಾಶದ ಕಾರು ಬಿಡುಗಡೆ ಮಾಡಿದೆ. ಅತ್ಯಂತ ಸುರಕ್ಷತೆ ಕಾರು ಇದಾಗಿದ್ದು, NCAPನಿಂದ 5 ಸ್ಟಾರ್ ರೇಟಿಂಗ್ ಪಡೆದಿದೆ. ಟಾಟಾ ಪಂಚ್ ಕಾರು 85 bhp ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ ಎಂಎಟಿ ಆಯ್ಕೆ ಹೊಂದಿದೆ. 7 ಇಂಚಿನ ಟಚ್ ಸ್ಕ್ರೀನ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ. ಕಾರಿನ ಬೆಲೆ 5.49 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ಮಾರುತಿ ಸುಜುಕಿ ಸ್ಪಿಫ್ಟ್ ಫೇಸ್‌ಲಿಫ್ಟ್
ಬೆಲೆ: 5.73 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭ

ಭಾರತದಲ್ಲಿ ಅತೀ ಹೆಚ್ಚು ಮಾರಾಟ ದಾಖಲೆ ಹೊಂದಿರುವ ಮಾರುತಿ ಸುಜುಕಿ ಕಾರುಗಳು ಸ್ವಿಫ್ಟ್(Maruti Suzuki swift) ಮೂಲಕ ಗ್ರಾಹಕರಿಗೆ ಕೈಗೆಟುಕವ ದರದಲ್ಲಿ ಹ್ಯಾಚ್‌ಬ್ಯಾಕ್ ಕಾರು ನೀಡಿದೆ. 5.73 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ಯಿಂದ ಆರಂಭಗೊಳ್ಳುವ ಸ್ವಿಫ್ಟ್ ಕಾರು 2021ರಲ್ಲಿ ಮತ್ತಷ್ಟು ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಿದೆ. ಮಾರುತಿ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ 2021 ಕಾರು, 88 bhp ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 1.2 ಲೀಟರ್ ಪೆಟ್ರೋಲ್ ಎಂಜಿನ್ ಕಾರು ಡ್ಯುಯೆಲ್ ಜೆಟ್ VVT ಪೆಟ್ರೋಲ್ ಪವರ್‌ಪ್ಲಾಂಟ್ ಹೊಂದಿದೆ

Hyundai Ioniq 5 EV ಕೈಗೆಟುಕುವ ದರ, 480 ಕಿ.ಮೀ ಮೇಲೇಜ್, ಶೀಘ್ರದಲ್ಲೇ ಭಾರತದಲ್ಲಿ ಕಾರು ಬಿಡುಗಡೆ!

ಬೆಲೆ: 5.64 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

ಭಾರತದಲ್ಲಿ SUV ಕಾರುಗಳ ಬೇಡಿಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಎಲ್ಲಾ ಆಟೋ ಕಂಪನಿಗಳು ಸಬ್‌ಕಾಂಪಾಕ್ಟ್ SUV ಕಾರು ಬಿಡುಗಡೆ ಮಾಡುತ್ತಿದೆ. ಮಾರುತಿ ಸಜುಕಿ ಬ್ರೆಜಾ, ಟಾಟಾ ನೆಕ್ಸಾನ್ ಸೇರಿದಂತೆ ಸಬ್ ಕಾಂಪಾಕ್ಟ್ SUV ಕಾರುಗಳಿಗೆ ಪೈಪೋಟಿ ನೀಡಲು ರೆನಾಲ್ಟ್ ಕಿಗರ್(Renult Kiger) SUV ಕಾರು ಬಿಡುಗಡೆ ಮಾಡಿದೆ. 5.64 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿರುವ ಕಿಗರ್ ಕಾರು 

ಮಾರುತಿ ಸುಜುಕಿ ಸೆಲೆರಿಯೋ
ಬೆಲೆ: 4.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

ನ್ಯೂಜನರೇಶನ್ ಮಾರುತಿ ಸುಜುಕಿ ಸೆಲೆರಿಯೋ(Maruti Suzuki Celerio) ಕಾರು ಭಾರಿ ಪ್ರಮಾಣದಲ್ಲಿ ಜನರನ್ನು ಆಕರ್ಷಿಸುತ್ತಿದೆ. ಗರಿಷ್ಠ ಬುಕಿಂಗ್ ದಾಖಲೆಯನ್ನೂ ಕಂಡಿದೆ. ಹೊಸ ರೂಪದಲ್ಲಿ ಬಿಡುಗಡೆಯಾಗಿರುವ ನೂತನ ಸೆಲೆರಿಯೋ, ದಕ್ಷ ಎಂಜಿನ್, ಅತ್ಯುತ್ತಮ ಬೂಟ್ ಸ್ಪೇಸ್ ಹಾಗೂ ಕ್ಯಾಬಿನ್ ಸ್ಪೇಸ್ ಹೊಂದಿದೆ. ಇನ್ನು K10C 1.0 ಲೀಟರ್, 3 ಸಿಲಿಂಡರ್ ಡ್ಯುಯೆಲ್ ಜೆಟ್ ಎಂಜಿನ್ ಹಾಗೂ ಡ್ಯುಯೆಲ್  VVT ಹೊಂದಿದೆ. 66 bhp ಪವರ್ ಹಾಗೂ 89 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಸ್ಟಾರ್ಟ್, ಸ್ಟಾಪ್ ಬಟನ್, 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಕಿಲೆಸ್ ಎಂಟ್ರಿ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ. 4.99 ಲಕ್ಷ ರೂಪಾಯಿಯಿಂದ ಸೆಲೆರಿಯೋ ಕಾರು ಆರಂಭಗೊಳ್ಳುತ್ತಿದೆ.

click me!