Kia Carens Details Revealed: ಕಂಪನಿಯ ಹೊಸ 7 ಸೀಟರ್‌ ಕಾರು: ಮುಂದಿನ ವರ್ಷ ಅದ್ದೂರಿ ಎಂಟ್ರಿ!

Published : Dec 21, 2021, 11:52 AM IST
Kia Carens Details Revealed: ಕಂಪನಿಯ ಹೊಸ 7 ಸೀಟರ್‌ ಕಾರು: ಮುಂದಿನ ವರ್ಷ ಅದ್ದೂರಿ ಎಂಟ್ರಿ!

ಸಾರಾಂಶ

ಕಿಯಾ ಕರೆನ್ಸ್‌ನ ಫೀಚರ್‌ಗಳು, ಅಂದ ಚಂದ ಇತ್ಯಾದಿಗಳನ್ನೆಲ್ಲಾ ಹೇಳಿರುವ ಕಿಯಾ ಸಂಸ್ಥೆ ಈ ಕಾರಿನ ಬಿಡುಗಡೆ ದಿನಾಂಕ, ಬೆಲೆ ಇತ್ಯಾದಿಗಳನ್ನು ಸಸ್ಪೆನ್ಸ್‌ನಲ್ಲಿ ಇಟ್ಟಿದೆ. 2022ರ ಆದಿಯಲ್ಲೇ ಈ ಕಾರು ಮಾರುಕಟ್ಟೆಯಲ್ಲಿ ಸಿಗುತ್ತದೆ ಎಂಬ ಭರವಸೆ ನೀಡಿದೆ.

Auto Desk: ಕಿಯಾ ಸೆಲ್ಟೋಸ್‌, ಕಿಯಾ ಸಾನೆಟ್‌ ಮೂಲಕ ಭಾರತದಲ್ಲಿ ಕಾರು ಮಾರುಕಟ್ಟೆಯಲ್ಲಿ ಹವಾ ಸೃಷ್ಟಿಸಿರುವ ಕಿಯಾ ಕಂಪನಿ ಈಗ ಹೊಸ ಕಾರನ್ನು ಅನಾವರಣ ಮಾಡಿದೆ. 6 ಸೀಟರ್‌ ಅಥವಾ 7 ಸೀಟರ್‌ನ ಈ ಹೊಸ ಕಾರಿನ ಹೆಸರು ಕಿಯಾ ಕರೆನ್ಸ್‌ (Kia Carens). ಕಿಯಾ ಕರೆನ್ಸ್‌ನ ಫೀಚರ್‌ಗಳು, ಅಂದ ಚಂದ ಇತ್ಯಾದಿಗಳನ್ನೆಲ್ಲಾ ಹೇಳಿರುವ ಕಿಯಾ ಸಂಸ್ಥೆ ಈ ಕಾರಿನ ಬಿಡುಗಡೆ ದಿನಾಂಕ, ಬೆಲೆ ಇತ್ಯಾದಿಗಳನ್ನು ಸಸ್ಪೆನ್ಸ್‌ನಲ್ಲಿ ಇಟ್ಟಿದೆ. 2022ರ ಆದಿಯಲ್ಲೇ ಈ ಕಾರು ಮಾರುಕಟ್ಟೆಯಲ್ಲಿ ಸಿಗುತ್ತದೆ ಎಂಬ ಭರವಸೆ ನೀಡಿದೆ.

ನೋಡಲು ಆಕರ್ಷಕವಾಗಿರುವ ಈ ಕಿಯಾ ಕರೆನ್ಸ್‌ನ ಒಳಗೆ ಸ್ಪೇಸ್‌ ಕೂಡ ವಿಶಾಲವಾಗಿದೆ. ಮೂರನೇ ಸಾಲಿನ ಸೀಟಿಗೆ ಹೋಗಬೇಕಾದರೆ ಈ ಕಾರಿನಲ್ಲಿ ಕಷ್ಟವಿಲ್ಲ. ಎರಡನೇ ಸಾಲಿನ ಸೀಟಿನ ಮೇಲೆ ಒಂದು ಬಟನ್‌ ಇದೆ. ಅದನ್ನು ಒತ್ತಿದರೆ ಎರಡನೇ ಸಾಲಿನ ಸೀಟು ತನ್ನಿಂತಾನೇ ಮಡಚಿಕೊಳ್ಳುತ್ತದೆ. ಕಾರಿನ ಟೈರಿನ ಕತೆ ಹೇಗೆ ಎಂದು ತಲೆಕೆಡಿಸಿಕೊಳ್ಳುವ ಅವಶ್ಯಕತೆಯೂ ಕರೆನ್ಸ್‌ ಓಡಿಸುವವರಿಗೆ ಇರುವುದಿಲ್ಲ. ಯಾಕೆಂದರೆ ಕಾರಿನಲ್ಲಿ ಟೈರ್‌ ಪ್ರೆಷರ್‌ ಮಾನಿಟರಿಂಗ್‌ ಸಿಸ್ಟಮ್‌ ಇದೆ. ಕಾರಿನ ರೂಫ್‌ನಲ್ಲಿ ಏಸಿ ವೆಂಟ್‌ ಇರುವುದು ಇಲ್ಲಿನ ವಿಶೇಷ.

ಎಲೆಕ್ಟ್ರಿಕ್‌ ಸನ್‌ರೂಫ್‌, 10.25 ಇಂಚಿನ ಇನ್‌ಫೋಟೇನ್‌ಮೆಂಟ್‌ ಸಿಸ್ಟಮ್‌, ವೈರ್‌ಲೆಸ್‌ ಚಾರ್ಜರ್‌, ಕಿಯಾ ಕನೆಕ್ಟ್ (Kia Connect) ಎಂಬ ಇಂಟರ್‌ನೆಟ್‌ ತಂತ್ರಜ್ಞಾನ ಈ ಕಾರನ್ನು ಬಳಸುವವರ ಪ್ರಯಾಣವನ್ನು ಹಗುರಗೊಳಿಸುತ್ತದೆ. ಆರು ಏರ್‌ಬ್ಯಾಗುಗಳು (Air Bags), ಹಿಲ್‌ ಸ್ಟಾರ್ಟ್‌ ಅಸಿಸ್ಟ್‌- ಬ್ರೇಕ್‌ ಅಸಿಸ್ಟ್‌ ಇತ್ಯಾದಿ ಅತ್ಯಾಧುನಿಕ ಫೀಚರ್‌ಗಳು ಆರಾಮದಾಯಕ ಡ್ರೈವಿಂಗ್‌ಗೆ ನೆರವಾಗುತ್ತದೆ ಅನ್ನುವುದು ಕಂಪನಿ ಘೋಷಣೆ.

ಫ್ಯಾಮಿಲಿ ಕಾರುಗಳ ವಿಭಾಗದಲ್ಲಿ ಕ್ರಾಂತಿ!

ಈ ಹೊಸ ಕಿಯಾ ಕರೆನ್ಸ್‌ ಅನ್ನು ಕಿಯಾದ ಅಧ್ಯಕ್ಷರಾದ ಹೋ ಸಂಗ್‌ ಸಾಂಗ್‌ ಮತ್ತು ಕಿಯಾ ಇಂಡಿಯಾ ಎಂಡಿ ಟೇ ಜಿನ್‌ ಪಾರ್ಕ್ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಹೋ ಸಂಗ್‌ ಸಾಂಗ್‌, ಈ ಕಾರು ಫ್ಯಾಮಿಲಿ ಕಾರುಗಳ ವಿಭಾಗದಲ್ಲಿ ಕ್ರಾಂತಿ ಮಾಡಲಿದೆ ಎಂದು ತಿಳಿಸಿದರು. ಕಿಯಾ ಕರೆನ್ಸ್‌ನ ಪೂರ್ತಿ ಸೌಂದರ್ಯ ಸವಿಯಲು www.kia.com ಗೆ ಭೇಟಿ ನೀಡಬಹುದು. ಭಾರತೀಯ ಮಾರುಕಟ್ಟೆಯಲ್ಲಿ ಈಗ ದೊಡ್ಡ ಕಾರುಗಳ ಬೇಡಿಕೆ ಹೆಚ್ಚಾಗಿದೆ. ಹಾಗಾಗಿಯೇ ಬಹುತೇಕ ಕಂಪನಿಗಳು, ಸಬ್ ಕಾಂಪಾಕ್ಟ್ ಕಾರ್, ಎಂಪಿವಿ, ಎಸ್‌ಯುವಿಗಳನ್ನು ಲಾಂಚ್ ಮಾಡುತ್ತಿವೆ. ಈ ಹಿನ್ನೆಲೆಯಲ್ಲೇ ಕಿಯಾ ಇಂಡಿಯಾ ಕೂಡ, ಇದೇ ಸೆಗ್ಮೆಂಟ್‌ನಲ್ಲಿ ಮತ್ತೊಂದು ಪರೀಕ್ಷೆಗೆ ಮುಂದಾಗಿದೆ. 

ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಇಂಡಿಯಾ ಈಗಾಗಲೇ ಎಂಪಿವಿ (MPV) ಸೆಗ್ಮೆಂಟ್‌ನಲ್ಲಿ ಕಾರ್ನಿವಾಲ್ (Carnival) ಎಂಬ ಹೆಸರಿನ ಕಾರನ್ನು ಮಾರಾಟ ಮಾಡುತ್ತಿದೆ. ಹಾಗಿದ್ದೂ, ಮತ್ತೊಂದು ಎಂಪಿವಿ ಬಿಡುಗಡೆಗೆ ಎದುರು ನೋಡುತ್ತಿದೆ. "ಭಾರತವು ಜಾಗತಿಕವಾಗಿ ಕಿಯಾಗೆ ಬಹಳ ಮುಖ್ಯವಾದ ಮಾರುಕಟ್ಟೆಯಾಗಿದೆ, ಮಾರಾಟದ ಪರಿಮಾಣದ ಪ್ರಕಾರ ಮಾತ್ರವಲ್ಲ, ಇದು ಉತ್ಪಾದನೆ ಮತ್ತು ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವಾಗುವ ಸಾಮರ್ಥ್ಯವನ್ನು ಹೊಂದಿದೆ" ಎಂದು ಕಿಯಾ ಇಂಡಿಯಾ (Kia India)ದ ಎಂಡಿ (MD) ಮತ್ತು ಸಿಇಒ (CEO) ಟೇ-ಜಿನ್ ಪಾರ್ಕ್ (Teae-Jin Park) ಹೇಳಿದರು.

ಇದನ್ನೂ ಓದಿ:

1) Safety Alerts Navigation ಕೇಂದ್ರದಿಂದ ಚಾಲಕರಿಗೆ ಅಪಘಾತ, ಅಪಾಯ ಎಚ್ಚರಿಸುವ ಉಚಿತ ನ್ಯಾವಿಗೇಶನ್ ಆ್ಯಪ್ ಬಿಡುಗಡೆ!

2) ಕಡಿಮೆ ದರ, ಸುರಕ್ಷತೆ: ಹೋಂಡಾ ಅಮೇಜ್ ಕಾರಿನ ಮಾರಾಟ ಅಮೇಜಿಂಗ್!

3) Electric Vehicle ಕಾರು ಸಾಲದಿಂದ ಆದಾಯ ತೆರಿಗೆ ಉಳಿಸಲು ಸಾಧ್ಯ, ಇಲ್ಲಿದೆ ಟಿಪ್ಸ್!

PREV
Read more Articles on
click me!

Recommended Stories

Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ
ಭಾರತದ ಮೊದಲ 7 ಸೀಟರ್ ಎಲೆಕ್ಟ್ರಿಕ್ SUV ಕಾರು XEV 9S ಪರಿಚಯಿಸಿದ ಮಹೀಂದ್ರ,ಟಾಟಾಗೆ ಠಕ್ಕರ್