Upcoming Tata Cars: 2022ರಲ್ಲಿ ಟಾಟಾ ಟಿಗೋರ್, ಟಿಯಾಗೋ ಸಿಎನ್ಜಿ ಕಾರುಗಳು ಮಾರುಕಟ್ಟೆಗೆ

By Suvarna NewsFirst Published Dec 22, 2021, 4:20 PM IST
Highlights

•ಟಾಟಾ ಮೋಟಾರ್ಸ್ ಸಿಎನ್ಜಿ ವಾಹನಗಳ ಬಿಡುಗಡೆ
•ಟಾಟಾ ಟಿಯಾಗೋ, ಟಿಗೋರ್ ಸಿಎನ್ಜಿಗಳು ಮಾರುಕಟ್ಟೆಗೆ
•ಮಾರುತಿ ಸುಜುಕಿ, ಹ್ಯುಂಡೈಗಳಿಗೆ ಪ್ರತಿಸ್ಪರ್ಧೆ

Auto Desk: ಆಟೊಮೊಬೈಲ್ ಕ್ಷೇತ್ರದ ಎಲ್ಲಾ ವಲಯಗಳಲ್ಲಿ ಛಾಪು ಮೂಡಿಸಿರುವ ಟಾಟಾ ಮೋಟಾರ್ಸ್ ಶೀಘ್ರದಲ್ಲೇ ಸಿಎನ್ಜಿ (CNG) ಪ್ರಯಾಣಿಕ ವಾಹನ ವಲಯವನ್ನೂ ಪ್ರವೇಶಿಸಲು ಮುಂದಾಗಿದೆ. ಈ ವಲಯದಲ್ಲಿ ಸದ್ಯ ಮಾರುತಿ ಸುಜುಕಿ (Maruti Suzuki) ಮತ್ತು ಹ್ಯುಂಡೈ  (Hyundai) ತಯಾರಕರು ಮಾತ್ರ ಸಿಎನ್ಜಿ ವಲಯದಲ್ಲಿ ಪ್ರಾಬಲ್ಯ ಹೊಂದಿವೆ. ಟಾಟಾ ಮೋಟಾರ್ಸ್ ಹಲವು ವರ್ಷಗಳ ಹಿಂದೆಯೇ ಸಿಎನ್ಜಿ ವಾಹನಗಳ ತಯಾರಿಕೆಗೆ ಮುಂದಾಗಿತ್ತಾದರೂ, ಕೋವಿಡ್ ಸಾಂಕ್ರಾಮಿಕ ಮತ್ತು ಜಾಗತಿಕ ಸೆಮಿಕಂಡಕ್ಟರ್ ಕೊರತೆಯ ಹಿನ್ನೆಲೆಯಲ್ಲಿ ಇದು ವಿಳಂಬವಾಗಿದೆ. 
ಟಾಟಾ ಮೋಟಾರ್ಸ್ ಕೊನೆಗೂ ತಮ್ಮ ಮೊದಲ ಸಿಎನ್ಜಿ ಚಾಲಿತ ವಾಹನಗಳ ಬಿಡುಗಡೆಗೆ ಸಿದ್ಧವಾಗಿದೆ. ಮೂಲಗಳ ಪ್ರಕಾರ, 2022ರ ಜನವರಿಯಲ್ಲಿ ಟಾಟಾ ಸಿಎನ್ಜಿ ಮತ್ತು ಟಿಗೋರ್ ಸಿಎನ್ಜಿ ವಾಹನಗಳನ್ನು ಟಾಟಾ ಮೋಟಾರ್ಸ್ ಬಿಡುಗಡೆಗೊಳಿಸಲಿದೆ. 

ಈಗಾಗಲೇ ಆಯ್ದ ಆಯ್ದ ಟಾಟಾ ಡೀಲರ್ಶಿಪ್ಗಳು ಸಿಎನ್ಜಿ-ಚಾಲಿತ ಟಿಯಾಗೊ ಮತ್ತು ಟಿಗೊರ್ಗಾಗಿ ಪೂರ್ವ-ಬುಕಿಂಗ್ಗಳನ್ನು ಸ್ವೀಕರಿಸಲು ಪ್ರಾರಂಭಿಸಿವೆ, ಆದರೂ ಕಂಪನಿ ಇನ್ನೂ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಟಾಟಾ ಮೋಟಾರ್ಸ್ ಮುಂಬರುವ ವಾರಗಳಲ್ಲಿ ಟಿಯಾಗೊ (Tiago) ಸಿಎನ್ಜಿ ಮತ್ತು ಟಿಗೊರ್ (Tigor) ಸಿಎನ್ಜಿಗಾಗಿ ಔಪಚಾರಿಕವಾಗಿ ಬುಕಿಂಗ್ಗಳನ್ನು ತೆರೆಯಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಸಿಎನ್ಜಿ-ಚಾಲಿತ  ಟಿಯಾಗೋ(Tiago) ಮತ್ತು ಟಿಗೋರ್ (Tigor) ವಾಹನಗಳು ಹಲವು ಬಾರಿ ರಸ್ತೆಗಳಲ್ಲಿ ಪರೀಕ್ಷಾರ್ಥ ಚಾಲನೆ ನಡೆಸುತ್ತಿರುವುದು ಕಂಡುಬಂದಿದೆ  ಸಿಎನ್ಜಿ ಚಾಲಿತ ವಾಹನಗಳು ಹಾಗೂ ಇತರ ವಾಹನಗಳ ವಿನ್ಯಾಸಗಳಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಆದರೆ ಟಾಟಾ ಮೋಟಾರ್ಸ್, ಯಾವ ಟ್ರಿಮ್ಗಳಲ್ಲಿ ಸಿಎನ್ಜಿ (CNG) ಕಿಟ್ ಅನ್ನು ಪರಿಚಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ. 

Latest Videos

ಹ್ಯುಂಡೈ ಸ್ಯಾಂಟ್ರೊ ಮತ್ತು ಮಾರುತಿ ವ್ಯಾಗನ್ ಆರ್ ಸಿಎನ್ಜಿಗೆ ಸ್ಪರ್ಧೆ!

ಸದ್ಯ ಟಿಯಾಗೋ ಮತ್ತು ಟಿಗೋರ್ ಎರಡೂ 1.2-ಲೀಟರ್, ಮೂರು-ಸಿಲಿಂಡರ್ ರೆವೋಟ್ರಾನ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಅದು 86 ಎಚ್ಪಿ (hp) ಮತ್ತು 113 ಎನ್ಎಂ (Nm) ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸಿಎನ್ಜಿ ಆವೃತ್ತಿಗಳು ಕೂಡ ಅದೇ ಎಂಜಿನ್ ಅನ್ನು ಬಳಸುವ ನಿರೀಕ್ಷೆಯಿದೆ, ಆದರೆ, ಪವರ್ ಹಾಗೂ ಟಾರ್ಕ್ ಶಕ್ತಿ ಕಡಿಮೆ ಇರಬಹುದು ಎನ್ನಲಾಗುತ್ತಿದೆ. ಟಾಟಾ ಪೆಟ್ರೋಲ್ ಚಾಲಿತ ಟಿಯಾಗೋ ಮತ್ತು ಟಿಗೋರ್ ಮ್ಯಾನುಯಲ್ ಮತ್ತು ಎಎಂಟಿ (AMT) ಗೇರ್ಬಾಕ್ಸ್ ಆಯ್ಕೆಗಳನ್ನು ನೀಡುತ್ತದೆ. ಆದರೆ ಸಿಎನ್ಜಿ CNG ಆವೃತ್ತಿಗಳು ಮ್ಯಾನ್ವುವಲ್ ವೇರಿಯಂಟ್ನಲ್ಲಿ ಮಾತ್ರ ಬರುತ್ತವೆ. ಈ ಕಾರುಗಳಲ್ಲಿ ಸಿಎನ್ಜಿ ಬ್ಯಾಡ್ಜ್ಗಳನ್ನು ಕಾಣಬಹುದಾಗಿದೆ.

ಟಾಟಾ ಟಿಗೊರ್ ಈಗಾಗಲೇ ಇವಿಯಲ್ಲಿ ಲಭ್ಯವಿರುವುದರಿಂದ, ಟಾಟಾ ಟಿಗೋರ್ ಪೆಟ್ರೋಲ್, ಸಿಎನ್ ಹಾಗೂ ಎಲೆಕ್ಟ್ರಿಕ್ ವೇರಿಯಂಟ್ಗಳಲ್ಲಿ ಲಭ್ಯವಿರುವ ಏಕೈಕ ಸೆಡಾನ್ ಆಗಲಿದೆ. ಮಾರುತಿ ಸುಜುಕಿ ಈಗಾಗಲೇ ಆಲ್ಟೊದಿಂದ  (Alto) ಹಿಡಿದು ಎರ್ಟಿಗಾ (Ertiga) ಎಂಪಿವಿ (MPV) ವರೆಗೆ ಎಲ್ಲಾ ಮಾದರಿಗಳಲ್ಲಿ ಸಿಎನ್ಜಿ ವಾಹನಗಳನ್ನು ಹೊಂದಿದೆ. ಟಾಟಾ ಟಿಯಾಗೊ ಸಿಎನ್ಜಿ ಮಾರುಕಟ್ಟೆಯಲ್ಲಿ ಹ್ಯುಂಡೈ ಸ್ಯಾಂಟ್ರೊ ಮತ್ತು ಮಾರುತಿ ವ್ಯಾಗನ್ ಆರ್ ಸಿಎನ್ಜಿಗೆ ಸ್ಪರ್ಧೆ ನೀಡಲಿದೆ. ಟಾಟಾ ಟಿಗೋರ್ ಸಿಎನ್ಜಿ ಹ್ಯುಂಡೈ ಔರಾ (Aura) ಸಿಎನ್ಜಿಗೆ ಸ್ಪರ್ಧೆ ನೀಡಲಿದೆ. ಮಾರುತಿ ಸುಜುಕಿ ಕೂಡ ತನ್ನ ಸ್ವಿಫ್ಟ್, ಡಿಜೈರ್ ಮತ್ತು ಹೊಸ ಸೆಲೆರಿಯೋ ಮಾದರಿಯನ್ನು ಕೂಡ ಸಿಎನ್ಜಿ ರೂಪಾಂತರಗಳಲ್ಲಿ ತರಲು ಸಿದ್ಧತೆ ನಡೆಸಿದೆ ಎನ್ನಲಾಗುತ್ತಿದೆ. 

ಪೆಟ್ರೋಲ್ ಬೆಲೆ ಏರಿಕೆ: ಸಿಎನ್ಜಿ ವಾಹನಗಳ ಮೊರೆ ಹೋದ ಗ್ರಾಹಕರು!

ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ, ಅನೇಕ ಕಾರು ಖರೀದಿದಾರರು, ವಿಶೇಷವಾಗಿ ಸಿಎನ್ಜಿ ಸುಲಭವಾಗಿ ಲಭ್ಯವಿರುವ ನಗರ ಪ್ರದೇಶಗಳಲ್ಲಿ ನೆಲೆಸಿರುವರು, ಸಿಎನ್ಜಿ ವಾಹನಗಳ ಮೊರೆ ಹೋಗಲು ಬಯಸುತ್ತಿದ್ದಾರೆ. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (SIAM) ವರದಿಯ ಪ್ರಕಾರ, ಸಿಎನ್ಜಿ ನೆಟ್ವರ್ಕ್ ಪ್ರಸ್ತುತ 293 ನಗರಗಳಲ್ಲಿ ಸುಮಾರು 3,500 ಫಿಲ್ಲಿಂಗ್ ಸ್ಟೇಷನ್ಗಳಲ್ಲಿ ಲಭ್ಯವಿದೆ. 2019 ರಲ್ಲಿ 143 ನಗರಗಳಲ್ಲಿ 1,300 ನಿಲ್ದಾಣಗಳು. ಇದು 2025 ರ ವೇಳೆಗೆ 6,000 ಫಿಲ್ಲಿಂಗ್ ಸ್ಟೇಷನ್ ಹಾಗೂ 2030 ರ ವೇಳೆಗೆ 10,000 ಸ್ಟೇಷನ್ಗಳಿಗೆ ವಿಸ್ತರಿಸುವ ನಿರೀಕ್ಷೆಯಿದೆ. 
 

click me!