ಟಾಟಾ ನೆಕ್ಸಾನ್ ಮೇ ತಿಂಗಳಲ್ಲಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ನಂಬರ್-1 ಸ್ಥಾನದಿಂದ ಕೇವಲ ಒಂದು ಹೆಜ್ಜೆ ದೂರದಲ್ಲಿದೆ.
ಕಳೆದ ಕೆಲ ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಯಶಸ್ಸು ದಾಖಲಿಸಿರುತ್ತಿರುವ ದೇಶದ ಆಟೋಮೊಬೈಲ್ ಕಂಪನಿ ಟಾಟಾ ಮೋಟಾರ್ಸ್ (Tata Motors), ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ. ಕಳೆದ ಕೆಲವು ತಿಂಗಳುಗಳಿಂದ, ಗ್ರಾಹಕರು ಹೆಚ್ಚಾಗಿ ಟಾಟಾ ಕಾರುಗಳ ಮೊರೆ ಹೋಗುತ್ತಿದ್ದು, ಅದರಲ್ಲೂ ಹೆಚ್ಚಿನ ಗ್ರಾಹಕರು ಟಾಟಾ ನೆಕ್ಸಾನ್ಗೆ (Tata Nexon)ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಟಾಟಾ ವಾಹನಗಳ ಮಾರಾಟದ ಹೆಚ್ಚಳದ ಹಿಂದಿನ ಪ್ರಮುಖ ಕಾರಣವೆಂದರೆ ಅದರ ಸುರಕ್ಷತಾ ಅಂಶಗಳು. ಗ್ಲೋಬಲ್ ಎನ್ಸಿಎಪಿ (Gobal NCAP) ನಿಂದ ಸುರಕ್ಷತೆಗಾಗಿ ಬಹುತೇಕ ಎಲ್ಲಾ ಟಾಟಾ ಕಾರುಗಳು 4 ರಿಂದ 5 ಸ್ಟಾರ್ಗಳನ್ನು ಪಡೆದುಕೊಂಡಿದೆ. ಟಾಟಾ ನೆಕ್ಸನ್ 5 ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ.
ಟಾಟಾ ನೆಕ್ಸಾನ್ ದಾಖಲೆಯ ಮಾರಾಟ
ಟಾಟಾ ನೆಕ್ಸಾನ್ ಮೇ ತಿಂಗಳಲ್ಲಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ನಂಬರ್-1 ಸ್ಥಾನದಿಂದ ಕೇವಲ ಒಂದು ಹೆಜ್ಜೆ ದೂರದಲ್ಲಿದೆ. ಟಾಟಾ ನೆಕ್ಸಾನ್ 2022 ರ ಮೇನಲ್ಲಿ ಒಟ್ಟು 16,614 ವಾಹನಗಳನ್ನು ಮಾರಾಟ ಮಾಡಿದ್ದರೆ, ಮಾರುತಿ ವ್ಯಾಗನ್ಆರ್ ಮೊದಲ ಸ್ಥಾನದಲ್ಲಿದೆ. ಇದು ಒಟ್ಟು 16,814 ವಾಹನಗಳನ್ನು ಮಾರಾಟ ಮಾಡಿದೆ. ಅಂದರೆ ಈ ಕಾರುಗಳ ನಡುವೆ ಇರುವುದು ಕೇವಲ 200 ವಾಹನಗಳ ಅಂತರವಷ್ಟೇ.
ಮೇ 2022 ರಲ್ಲಿ ಹೆಚ್ಚು ಮಾರಾಟವಾಗಿರುವ ಕಾರುಗಳು: ಮೇ
ತಿಂಗಳಲ್ಲಿ ಟಾಪ್-10 ಅತ್ಯುತ್ತಮ ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಮಾರುತಿ ಪ್ರಾಬಲ್ಯವನ್ನು ಮುಂದುವರೆಸಿದೆ. ಟಾಪ್-10 ಪಟ್ಟಿಯಲ್ಲಿ ಎಂಟು ವಾಹನಗಳು ಮಾರುತಿ ಸುಜುಕಿಗೆ ಸೇರಿವೆ. ಉಳಿದ ಎರಡರಲ್ಲಿ ಟಾಟಾ ನೆಕ್ಸಾನ್ ಎರಡನೇ ಸ್ಥಾನದಲ್ಲಿದೆ ಮತ್ತು ಹುಂಡೈ ಕ್ರೆಟಾ 8 ನೇ ಸ್ಥಾನದಲ್ಲಿದೆ. ಇದು ಮೇ ತಿಂಗಳಲ್ಲಿ ಒಟ್ಟು 10,972 ವಾಹನಗಳನ್ನು ಮಾರಾಟ ಮಾಡಿದೆ.
ಕಳೆದ ಕೆಲವು ತಿಂಗಳುಗಳಲ್ಲಿ ಟಾಟಾದ ಮಾರಾಟದ ವೇಗ ಹೆಚ್ಚಿದೆ ಮತ್ತು ಕಂಪನಿಯು ಹೆಚ್ಚು ಮಾರಾಟವಾದ ಪಟ್ಟಿಯಲ್ಲಿ ಎರಡನೇ ಸಂಖ್ಯೆಯನ್ನು ತಲುಪಿದೆ. ಶೀಘ್ರದಲ್ಲೇ ಅದು ಅಗ್ರಸ್ಥಾನಕ್ಕೇರುವ ಸಾಧ್ಯತೆಯಿದೆ.
undefined
ಆದರೆ, , ಕಳೆದ ಕೆಲವು ವರ್ಷಗಳಿಂದ, ಮಾರುತಿ ನಿರಂತರವಾಗಿ ನಂಬರ್ -1 ದಲ್ಲಿಯೇ ಇದೆ. ಈಗ ಅದು ಬದಲಾಗುವ ಲಕ್ಷಣಗಳು ಕಾಣುತ್ತಿವೆಈ ಮಧ್ಯೆ, ಮಾರುತಿ ಸುಜುಕಿ ಬ್ರೀಝಾ ಸೇರಿದಂತೆ ಹಲವು ಹೊಸ ವಾಹನಗಳನ್ನು ತರುತ್ತಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಸ್ಪರ್ಧೆ ಕುತೂಹಲ ಮೂಡಿಸಲಿದೆ.
ಮೇ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳು:
ಮಾರುತಿ ವ್ಯಾಗನ್ ಆರ್ ( 16,814), ಟಾಟಾ ನೆಕ್ಸಾನ್ (16,614), ಮಾರುತಿ ಸ್ವಿಫ್ಟ್ (14,133), ಮಾರುತಿ ಬಲೆನೋ (13,970), ಮಾರುತಿ ಆಲ್ಟೋ ( 12,933) ಮಾರುತಿ ಎರ್ಟಿಗಾ (12,226), ಮಾರುತಿ ಡಿಸೈರ್ (11,603), ಹ್ಯುಂಡೈ ಕ್ರೇಟಾ (10,973), ಮಾರುತಿ ಎಕೋ (10,482), ಮಾರುತಿ ಬ್ರೀಜಾ (10,312) ಟಾಟಾ ನೆಕ್ಸಾನ್ ಬೆಲೆ 7.55 ಲಕ್ಷ ರೂ.ಗಳಿಂದ 13.90 ಲಕ್ಷ ರೂ.ಗಳವರೆಗೆ ಇದೆ. ಇದು ಐದು ವಿಶಾಲವಾದ ಟ್ರಿಮ್ಗಳಲ್ಲಿ ಬರುತ್ತದೆ: ಎಕ್ಸ್ಎ, ಎಕ್ಸ್ಎಂ, ಎಕ್ಸ್ಝೆಡ್,ಎಕ್ಸ್ಝೆಡ್ ಪ್ಲಸ್ ಮತ್ತು ಎಕ್ಸ್ಝೆಡ್ ಪ್ಲಸ್ (ಒ) ( XE, XM, XZ, XZ+, ಮತ್ತು XZ+(O)). ಇದು ಡಾರ್ಕ್ ಆವೃತ್ತಿಯಲ್ಲಿ ಕೂಡ ಲಭ್ಯವಿದೆ. ಇದು ಐದು ಆಸನಗಳ ಉಪ-ಕಾಂಪ್ಯಾಕ್ಟ್ SUV ಆಗಿದೆ. ಟಾಟಾ ನೆಕ್ಸನ್ 1.2-ಲೀಟರ್ ಟರ್ಬೊ-ಪೆಟ್ರೋಲ್ (120PS/170ಎನ್ಎಂ) ಮತ್ತು 1.5-ಲೀಟರ್ ಟರ್ಬೊ-ಡೀಸೆಲ್ (110PS/260ಎನ್ಎಂ) ಅನ್ನು ಪಡೆಯುತ್ತದೆ, ಪ್ರತಿಯೊಂದೂ ಸ್ಟ್ಯಾಂಡರ್ಡ್ 6-ಸ್ಪೀಡ್ MT ಮತ್ತು ಐಚ್ಛಿಕ 6-ಸ್ಪೀಡ್ AMTಗಳನ್ನು ಒಳಗೊಂಡಿದೆ.