ತಮಿಳುನಾಡಿನ ಕೃಷ್ಣಗಿರಿ ಬಳಿಯಲ್ಲಿನ ಕಂಪನಿಯ ಮುಂಬರುವ ಸೌಲಭ್ಯದ ಸ್ಥಳದಲ್ಲಿ ನಡೆದ ‘ಓಲಾ ಗ್ರಾಹಕರ ದಿನ’ ಕಾರ್ಯಕ್ರಮದ ಸಮಯದಲ್ಲಿ ಓಲಾ, ತನ್ನ ಮುಂಬರುವ ಪ್ರೀಮಿಯಂ ಎಲೆಕ್ಟ್ರಿಕ್ ಕಾರುಗಳ ಟೀಸರ್ ವೀಡಿಯೊವನ್ನು ಬಿಡುಗಡೆ ಮಾಡಿದೆ.
ಓಲಾ ಎಲೆಕ್ಟ್ರಿಕ್ ತನ್ನ ಎಸ್ 1 (S1 )ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದ ನಂತರ, ಭಾರತೀಯ ನಾಲ್ಕು ಚಕ್ರದ ಎಲೆಕ್ಟ್ರಿಕ್ ವಾಹನಗಳ ವಿಭಾಗದಲ್ಲಿ ಹೊಸದೊಂದು ಕ್ರಾಂತಿ ಮೂಡಿಸಲು ಮುಂದಾಗಿರುವುದು ರಹಸ್ಯವಾಗೇನು ಉಳಿದಿಲ್ಲ. ಕಂಪನಿ ತನ್ನ ಎಸ್1 (S1) ಸ್ಕೂಟರ್ನ ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ವಿತರಣಾ ಟೈಮ್ಲೈನ್ ಸಮಸ್ಯೆಗಳಿಗೆ ಸಂಬಂಧಿಸಿದ ಹಲವಾರು ದೂರುಗಳನ್ನು ಎದುರಿಸುತ್ತಿದ್ದರೂ, ಅದರ ಬೆನ್ನಲ್ಲೇ ಎಲೆಕ್ಟ್ರಿಕ್ ಕಾರಿನ ಅಭಿವೃದ್ಧಿ ಚಟುವಟಿಕೆಗಳು ವೇಗವಾಗಿ ಮುಂದುವರಿಯುತ್ತಿವೆ.
ತಮಿಳುನಾಡಿನ ಕೃಷ್ಣಗಿರಿ ಬಳಿಯಲ್ಲಿನ ಕಂಪನಿಯ ಮುಂಬರುವ ಸೌಲಭ್ಯದ ಸ್ಥಳದಲ್ಲಿ ನಡೆದ ‘ಓಲಾ ಗ್ರಾಹಕರ ದಿನ’ ಕಾರ್ಯಕ್ರಮದ ಸಮಯದಲ್ಲಿ ಓಲಾ, ತನ್ನ ಮುಂಬರುವ ಪ್ರೀಮಿಯಂ ಎಲೆಕ್ಟ್ರಿಕ್ ಕಾರುಗಳ ಟೀಸರ್ ವೀಡಿಯೊವನ್ನು ಬಿಡುಗಡೆ ಮಾಡಿದೆ. 30 ಸೆಕೆಂಡುಗಳ ಟೀಸರ್ ಒಂದಕ್ಕಿಂತ ಹೆಚ್ಚು ಓಲಾ ಎಲೆಕ್ಟ್ರಿಕ್ ಕಾರುಗಳ ಟೀಸರ್ ಅನ್ನು ತೋರಿಸುತ್ತದೆ.
ಹೊಸ ಓಲಾ ಎಲೆಕ್ಟ್ರಿಕ್ ಕಾರ್ ಟೀಸರ್ ನಮಗೆ ಒಂದಲ್ಲ, ಮೂರು ಎಲೆಕ್ಟ್ರಿಕ್ ಕಾರುಗಳ ಹೊರನೋಟವನ್ನು ನೀಡುತ್ತದೆ. ಟೀಸರ್ ಸೂಚಿಸುವಂತೆ, ಮುಂಬರುವ ಓಲಾ ಎಲೆಕ್ಟ್ರಿಕ್ ಕಾರ್, ಕೂಪ್ ರೂಫ್-ಲೈನ್ ಮತ್ತು ಆಧುನಿಕ ವಿನ್ಯಾಸದೊಂದಿಗೆ ಕಡಿಮೆ-ಸ್ಲಂಗ್ ಸ್ಪೋರ್ಟಿ ಸೆಡಾನ್ ಆಗಿರಬಹುದು. ಇತರ ಎರಡು ಎಲೆಕ್ಟ್ರಿಕ್ ಎಸ್ಯುವಿ (SUV) / ಕೂಪ್ (Coupe) ಮತ್ತು ಹ್ಯಾಚ್ಬ್ಯಾಕ್(hatchback) ಆಗಿರಬಹುದು ಎಂದು ಅಂದಾಜಿಸಲಾಗುತ್ತಿದೆ.
ಓಲಾ ಸೆಡಾನ್ ತನ್ನ ಬಾಹ್ಯ ಶೈಲಿಯಲ್ಲಿ ಸಾಕಷ್ಟು ಏರೋಡೈನಾಮಿಕ್ ಪ್ರಯೋಗಗಳನ್ನು ಮಾಡಿದೆ. ಇಲ್ಲದಿದ್ದರೆ, ಐಸ್ ಇಂಜಿನ್ನ ಕಾರುಗಳಿಗೆ ಸ್ಪರ್ಧೆ ನೀಡುವುದು ಸವಾಗಾಲಬಹುದು. ಪ್ರಮುಖ ವಿನ್ಯಾಸದ ವೈಶಿಷ್ಟ್ಯಗಳಲ್ಲಿ ವೆಡ್ಜ್ ಆಕಾರದ ವಿನ್ಯಾಸ, LED ಲೈಟಿಂಗ್ ಸಿಗ್ನೇಚರ್, ಸ್ವೂಪಿಂಗ್ ರೂಫ್ಲೈನ್ ಮತ್ತು ಕಿಯಾ ಮಾದರಿಯ ಫೇಸಿಯಾಗಳನ್ನು ಕಾಣಬಹಹುದಾಗಿದೆ.
ಸದ್ಯಕ್ಕೆ ಕಂಪನಿ ಈ ಕುರಿತು ಯಾವುದೇ ಹೆಚ್ಚಿನ ವಿವರಗಳನ್ನು ಹಂಚಿಕೊಂಡಿಲ್ಲ. ಆದರೆ, ಓಲಾ ಎಲೆಕ್ಟ್ರಿಕ್ನ ಸಿಇಒ ಭವಿಶ್ ಅಗರ್ವಾಲ್ ಆಗಸ್ಟ್ 15 ರಂದು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುವುದಾಗಿ ಹೇಳಿದ್ದಾರೆ. ವರದಿಗಳ ಪ್ರಕಾರ, ಈ ಕಾರಿನ ವಿನ್ಯಾಸಕ್ಕಾಗಿ ಓಲಾ, ಮಾಜಿ ಮಹೀಂದ್ರಾ ವಿನ್ಯಾಸಕ ರಾಮ್ಕೃಪಾ ಅನಂತನ್ ಅವರನ್ನು ನೇಮಿಸಿಕೊಂಡಿದೆ. ಅವರು ಪ್ರಸ್ತುತ XUV700, ಥಾರ್, XUV300 ಅನ್ನು ವಿನ್ಯಾಸಗೊಳಿಸಿದ್ದಾರೆ.
ಭಾರತದಲ್ಲಿ ಟೆಸ್ಲಾಗೆ ಸ್ವಾಗತ: ಆದರೆ, ಭಾರತೀಯ ನೀತಿಗೆ ತಕ್ಕಂತೆ
ಸುಮಾರು ಮುಂದಿನ 2 ವರ್ಷಗಳಲ್ಲಿ ಓಲಾ ಎಲೆಕ್ಟ್ರಿಕ್ನ ಪ್ರಯಾಣಿಕ ಕಾರು ಮಾರುಕಟ್ಟೆಗೆ ಬರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಸಾಂಪ್ರದಾಯಿಕ ಅಸಲಿ ಇಂಜಿನ್ ಉತ್ಪಾದಕರು (OEM) ಗೆ ಹೋಲಿಸಿದರೆ ಉತ್ಪನ್ನ ತಯಾರಿ ವೇಗವಾಗಿಯೇ ನಡೆಯುತ್ತಿದೆ. ಈ ಹೊಸ ಓಲಾ ಕಾರು ಸುಮಾರು 60-80 kWh ಸಾಮರ್ಥ್ಯದ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ನಿಂದ ಬೆಂಬಲಿತವಾಗಿದೆ ಎಂದು ನಿರೀಕ್ಷಿಸಲಾಗುತ್ತಿದೆ.. ಪ್ರಭಾವಶಾಲಿಯಾಗಿ ಕಡಿಮೆ ಏರೋಡೈನಾಮಿಕ್ ಸಮರ್ಥ ಮತ್ತು ಮುಂಭಾಗದಲ್ಲಿ ಹೆಚ್ಚಿನ ಸ್ಪೇಸ್ ಅನ್ನು ಕೂಡ ಒದಗಿಸಲಾಘಿದೆ. ಇದರ ಬ್ಯಾಟರಿ ಪ್ಯಾಕ್ 500 ಕಿಮೀಗಿಂತ ಹೆಚ್ಚಿನ ಪ್ರಮಾಣೀಕೃತ ಶ್ರೇಣಿಯ ಬ್ಯಾಟರಿ ಪ್ಯಾಕ್ ಹೊಂದಿರುವ ನಿರೀಕ್ಷೆಯಿದೆ. 7 ಸೆಕೆಂಡ್ಗಳಿಗಿಂತ ಕಡಿಮೆ ಅವಧಿಯಲ್ಲಿ 0-100 ಕಿಲೋಮೀಟರ್ ವೇಗ ಪಡೆದುಕೊಳ್ಳಬಹುದು ಎನ್ನಲಾಗುತ್ತಿದೆ. ಜೊತೆಗೆ, ಇದು 150 ಕಿಮೀಗಿಂತ ಹೆಚ್ಚಿನ ವೇಗ ನೀಡಲಿದೆ.
ಹೊಸ ಓಲಾ ಎಲೆಕ್ಟ್ರಿಕ್ ಕಾರುಗಳನ್ನು ಭಾರತೀಯ ಎಲೆಕ್ಟ್ರಿಕ್ ವಾಹನಗಳ ವಿಭಾಗದಲ್ಲಿ ವಿಶೇಷ ಸ್ಥಾನ ಪಡೆಯಲಿದ್ದು, ಕೈಗೆಟಕುವ ಬೆಲೆಯಲ್ಲಿ ದೊರೆಯುವ ನಿರೀಕ್ಷೆ ಮಾಡಲಾಗುತ್ತಿದೆ. ADAS ವೈಶಿಷ್ಟ್ಯಗಳೊಂದಿಗೆ ಸುದೀರ್ಘವಾದ ಇಂಟೀರಿಯರ್ ಹಾಗೂ ತಂತ್ರಜ್ಞಾನ ಇರಲಿದೆ ಎಂದು ಕೂಡ ಹೇಳಲಾಗುತ್ತಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಟಾಟಾ (Tata), ಕಿಯಾ (Kia), ಮಹೀಂದ್ರಾ(Mahindra), ಹ್ಯುಂಡೈ (Hyundai) ನಂತಹ ಪ್ರಮುಖ ಕಂಪನಿಗಳು ಭಾರತದಲ್ಲಿ ಇನ್ನಷ್ಟು ಹೊಸ EVಗಳನ್ನು ಪ್ರಾರಂಭಿಸಲು ಬದ್ಧವಾಗಿವೆ. ಇದರ ಜೊತೆಗೆ, ಆಡಿ (Audi), ಮರ್ಸಿಡಿಸ್ (Mercedes), BMW, ಜಾಗ್ವಾರ್(Jaguar) ಮುಂತಾದ ಪ್ರೀಮಿಯಂ ಬ್ರ್ಯಾಂಡ್ಗಳು ಸಹ EV ಕ್ರಾಂತಿಯಲ್ಲಿ ಸೇರಿಕೊಂಡಿವೆ.
ಓಲಾ, ಸಿಂಪಲ್ ಒನ್‌ಗೆ ಏಥರ್ ಸ್ಪರ್ಧೆ