Tata Safety Cars 200 ಅಡಿ ಆಳಕ್ಕೆ ಉರುಳಿ ಬಿದ್ದ ಟಾಟಾ ನೆಕ್ಸಾನ್ ಕಾರು, ಯಾವುದೇ ಗಾಯಗಳಿಲ್ಲದೇ ಪ್ರಯಾಣಿಕರು ಸೇಫ್!

By Suvarna NewsFirst Published Jan 18, 2022, 10:07 PM IST
Highlights
  • ಭಾರತದಲ್ಲಿ ಕೈಗೆಟುಕುವ ದರದ ಗರಿಷ್ಠ ಸುರಕ್ಷತೆ ಕಾರು ಟಾಟಾ
  • 200 ಅಡಿ ಆಳದ ಪ್ರಪಾತಕ್ಕೆ ಉರುಳಿದ ಟಾಟಾ ನೆಕ್ಸಾನ್
  • ಪ್ರಯಾಣಿಕರು ಸಂಪೂರ್ಣ ಪ್ರಯಾಣಿಕರು ಸೇಫ್
     

ಹಿಮಾಚಲ ಪ್ರದೇಶ(ಜ.18): ಟಾಟಾ ಮೋಟಾರ್ಸ್(Tata Motors) ಭಾರತದಲ್ಲಿ ಅತ್ಯಂತ ಸುರಕ್ಷಿತ ಕಾರುಗಳನ್ನು ನೀಡುತ್ತಿದೆ. ಪ್ರತಿ ಕಾರುಗಳು 5 ಸ್ಟಾರ್ ರೇಟಿಂಗ್ ಹೊಂದಿದ ಕಾರುಗಳಾಗಿವೆ. ಟಾಟಾ ಕಾರಿನ 5 ಸ್ಟಾರ್ ಸುರಕ್ಷತೆ(Safety Cars) ಈಗಾಗಲೇ ಕೆಲವರ ಜೀವನಗಳನ್ನು ಉಳಿಸಿದ ಘಟನೆಗಳು ವರದಿಯಾಗಿವೆ. ಇದೀಗ ಬರೋಬ್ಬರಿ 200 ಅಡಿ ಆಳಕ್ಕೆ ಟಾಟಾ ನೆಕ್ಸಾನ್(Tata Nexon) ಕಾರೊಂದು ಉರುಳಿಬಿದ್ದಿದೆ. ಭೀಕರ ಅಪಘಾತದಲ್ಲಿ ಪ್ರಯಾಣಿಕರೆಲ್ಲರೂ ಯಾವುದೇ ಅಪಾಯವಿಲ್ಲದೆ ಸೇಫ್ ಆಗಿದ್ದಾರೆ. 

ಈ ಘಟನೆ ಹಿಮಾಚಲ ಪ್ರದೇಶದಲ್ಲಿ(Himachal Pradesh) ನಡೆದಿದೆ. ಹಿಮಾಚಲ ಪ್ರದೇಶದಲ್ಲಿ ಅತ್ಯಂತ ದುರ್ಗಮ ಹಾದಿಗಳಿವೆ. ಬೆಟ್ಟ ಗಡ್ಡುಗಳ ನಡುವಿನ ದಾರಿ ಅತ್ಯಂತ ಸವಾಲಿನಿಂದ ಕೂಡಿದೆ. ಎಚ್ಚರ ತಪ್ಪಿದರೆ ಅಪಾಯ ತಪ್ಪಿದ್ದಲ್ಲ. ಜೊತೆಗೆ ಡಿಸೆಂಬರ್, ಜನವರಿ, ಫೆಬ್ರವರಿ ವಿಪರೀತ ಮಂಜು, ಹಿಮಗಳಿಂದ ಪ್ರಯಾಣ ಮತ್ತಷ್ಟು ದುಸ್ತರ. ಇದೇ ದಾರಿಯಲ್ಲಿ ಸಾಗಿದ ಟಾಟಾ ನೆಕ್ಸಾನ್ ಕಾರು 200 ಅಡಿ ಪ್ರಪಾತಕ್ಕೆ ಉರುಳಿ ಬಿದ್ದಿದೆ.

Safety Car 120ರ ವೇಗದಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು 4 ಪಲ್ಟಿಯಾದ ಟಾಟಾ ಪಂಚ್, ಐವರು ಪ್ರಯಾಣಿಕರು ಸೇಫ್!

ನೆಕ್ಸಾನ್ ಕಾರಿನಲ್ಲಿ ಇಬ್ಬರು ಪ್ರಯಾಣಿಕರಿದ್ದರು. ಕಾರು ಬೆಟ್ಟದ ಮೇಲಿನ ರಸ್ತೆಯಿಂದ ಸಂಚರಿಸುತ್ತಿತ್ತು. ಈ ವೇಳೆ ಮಂಜು ಕವಿದ ದಾರಿ, ಮೈನಸ್ ಡಿಗ್ರಿ ಟೆಂಪರೇಚರ್‌ನಿಂದ ದಾರಿಯಲ್ಲಿ ಹರಿಯುತ್ತಿದ್ದ ನೀರು ಮಂಜುಗಡ್ಡೆಯಾಗಿದೆ. ಆದರೆ ಮೇಲ್ನೋಟಕ್ಕೆ ನೀರಿ ಘನೀಕರಣಗೊಂಡಿರುವುದು ತಿಳಿಯುದಿಲ್ಲ. ಆದರೆ ಕಾರು ಇದರ ಮೇಲೆ ತೆರಳಿದಾಗ ಸ್ಕೀಡ್ ಆಗಿದೆ. ಹೀಗಾಗಿ ಅಪಘಾತ(Accident) ಸಂಭವಿಸಿದೆ. ಕಾರು ನೇರವಾಗಿ ಪ್ರಪಾತಕ್ಕ ಉರುಳಿದೆ. ಹಲವು ಪಲ್ಟಿಯಾಗಿ 200 ಅಡಿ ಆಳಕ್ಕೆ ಬಿದ್ದಿದೆ.  ಬಿದ್ದ ಮರುಕ್ಷಣದಲ್ಲೇ ಕಾರಿನೊಳಗಿದ್ದ ಇಬ್ಬರು ಪ್ರಯಾಣಿಕರು ಯಾವುದೇ ಗಾಯಗಳಿಲ್ಲದ ಹೊರಬಂದಿದ್ದಾರೆ. ಮತ್ತೊಂದು ಗಮನಿಸಬೇಕಾದ ಅಂಶ ಎಂದರೆ ಇಬ್ಬರೂ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಿದ್ದರು.

ಟಾಟಾ ಮೋಟಾರ್ಸ್ ಕಾರಿನ 5 ಸ್ಟಾರ್ ಸುರಕ್ಷತೆ, ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಿದ ಕಾರಣ ಕಾರು ಪಲ್ಟಿಯಾಗಿ ಪ್ರಪಾತಕ್ಕೆ ಬಿದ್ದರೂ ಯಾವುದೇ ಅಪಾಯ ಸಂಭವಿಸಿಲ್ಲ.  ಕಾರಿನ ಏರ್‌ಬ್ಯಾಗ್ಸ್ ತೆರೆದುಕೊಂಡಿದೆ. ಹೀಗಾಗಿ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಕಾರಿನಿಂದ ಹೊರಬಂದಿದ್ದಾರೆ. ಅದೆಷ್ಟೇ ಸುರಕ್ಷತೆ ಕಾರಾಗಿದ್ದರೂ ಸೀಟ್ ಬೆಲ್ಟ್ ಧರಿಸದಿದ್ದರೆ ಪ್ರಯಾಣಿಕರ ಪರಿಸ್ಥಿತಿ ಊಹಿಸಲು ಸಾಧ್ಯವಿಲ್ಲ. ಕ್ರೇನ್ ಸಹಾಯದಿಂದ ನೆಕ್ಸಾನ್ ಕಾರನ್ನು ಪ್ರಪಾತದಿಂದ ಮೇಲಕ್ಕೆ ಎತ್ತಲಾಗಿದೆ. 

ಸುರಕ್ಷತೆಯಲ್ಲಿ ಭಾರತದ ಕಾರುಗಳಿಗೆ ಅಗ್ರಸ್ಥಾನ, ವಿದೇಶಿ ಕಾರುಗಳಿಗಿಲ್ಲ ಸ್ಥಾನ!

ಟಾಟಾ ನೆಕ್ಸಾನ್ ಕಾರು ಭಾರತದಲ್ಲಿ ಕೈಗೆಟುಕವ ದರದಲ್ಲಿ ಲಭ್ಯವಿರುವ ಗರಿಷ್ಠ ಸುರಕ್ಷತೆಯ ಸಬ್ ಕಾಂಪಾಕ್ಟ್ SUV ಕಾರಾಗಿದೆ. ಟಾಟಾ ನೆಕ್ಸಾನ್ 4 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಗ್ಲೋಬಲ್ NCAP ಕ್ರಾಶ್ ಟೆಸ್ಟ್‌ನಲ್ಲಿ ಟಾಟಾ ನೆಕ್ಸಾನ್ ಕಾರು 17ರಲ್ಲಿ 16.06 ಅಂಕ ಪಡೆದುಕೊಂಡಿದೆ. ಈ ಮೂಲಕ ಭಾರತದಲ್ಲಿ ಉತ್ಪಾದನೆಯಾದ ಕಾರುಗಳ ಪೈಕಿ ಗರಿಷ್ಠ ಸೇಫ್ಟಿ ಅಂಕ ಪಡೆದ ಕಾರು ಅನ್ನೋ ಹೆಗ್ಗಳಿಕೆಗೆ ಟಾಟಾ ನೆಕ್ಸಾನ್ ಪಾತ್ರವಾಗಿದೆ.

ಬ್ಲಾಕ್ ಐಸ್ ಡ್ರೈವಿಂಗ್ ಸವಾಲು
ಹಿಮಾಚಲ ಪ್ರದೇಶ ಸೇರಿದಂತೆ ಮೈನಸ್ ಡಿಗ್ರಿ ಹವಾಮಾನ ತಲುಪುವ ಪ್ರದೇಶಗಲ್ಲಿ ಡ್ರೈವಿಂಗ್ ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಹಿಮಾಚಲದಲ್ಲಿ ಬೆಟ್ಟ ಗುಡ್ಡಗಳ ನಡುವಿನ ರಸ್ತೆಯಲ್ಲಿ ಹಲವು ತೊರೆಗಳು ಸಿಗಲಿದೆ. ಈ ತೊರೆ ನೀರು ರಸ್ತೆ ಮೇಲಿನಿಂದಲೇ ಹರಿಯಲಿದೆ. ಆದರೆ ಮೈನಸ್ ಡಿಗ್ರಿ ತಾಪಮಾನದಿಂದ ಈ ನೀರು ಘನೀಕರಣಗೊಳ್ಳಲಿದೆ. ಮೇಲ್ನೋಟಕ್ಕೆ ದಾರಿ ನೀರು ಹರಿದು ಒದ್ದೆಯಾಗಿದೆ ಎಂದು ಗೋಚರಿಸುತ್ತಿದೆ. ಆದರೆ ಇದರ ಮೇಲೆ ವಾಹನದ ಚಕ್ರ ತೆರಳಿದಾಗ ಸ್ಕಿಡ್ ಆಗಲಿದೆ. ಇದು ಅತೀ ಹೆಚ್ಚಿನ ಅಪಾಯ ತಂದೊಡ್ಡಲಿದೆ. ಇದೇ ಕಾರಣದಿಂದ ಹಿಮಾಚಲ ಪ್ರದೇಶದಲ್ಲಿ ನೆಕ್ಸಾನ್ ಕಾರು ಪ್ರಪಾತಕ್ಕೆ ಉರುಳಿಬಿದ್ದಿದೆ.
 

click me!