ಭಾರಿ ಬೇಡಿಕೆ ಹಿನ್ನೆಲೆ: ಇವಿ ಉತ್ಪಾದನೆ ಹೆಚ್ಚಿಸಲಿರುವ ಟಾಟಾ ಮೋಟಾರ್ಸ್

By Suvarna NewsFirst Published Apr 13, 2022, 10:37 AM IST
Highlights

ಎಲೆಕ್ಟ್ರಿಕ್ ವಾಹನಗಳ (ಇವಿ) ಭಾರಿ ಬೇಡಿಕೆ ಹಿನ್ನೆಲೆಯಲ್ಲಿ ಟಾಟಾ ಮೋಟಾರ್ಸ್ (Tata Motors), ಇವಿ (EV) ಉತ್ಪಾದನೆಯನ್ನು ಹೆಚ್ಚಿಸಲು ಮುಂದಾಗಿದೆ.

ಎಲೆಕ್ಟ್ರಿಕ್ ವಾಹನಗಳ (ಇವಿ) ಭಾರಿ ಬೇಡಿಕೆ ಹಿನ್ನೆಲೆಯಲ್ಲಿ ಟಾಟಾ ಮೋಟಾರ್ಸ್ (Tata Motors), ಇವಿ (EV) ಉತ್ಪಾದನೆಯನ್ನು ಹೆಚ್ಚಿಸಲು ಮುಂದಾಗಿದೆ. ಏಕೆಂದರೆ, ಸದ್ಯ ಇರುವ ಉತ್ಪಾದನಾ ಪ್ರಮಾಣ, ಬೇಡಿಕೆಗಿಂತ ಅತಿ ಕಡಿಮೆ ಇದೆ ಎಂದು ಕಂಪನಿಯ  ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ಆರ್ಥಿಕ ವರ್ಷದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಪ್ರಯಾಣಿಕ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುರವ ಮುಂಬೈ ಮೂಲದ ವಾಹನ ತಯಾರಕ ಸಂಸ್ಥೆಯು ತನ್ನ ಇವಿ (EV) ಶ್ರೇಣಿಗಾಗಿ ಕಳೆದ ಎರಡು ತಿಂಗಳುಗಳಲ್ಲಿ ಸರಾಸರಿ 5,500 ರಿಂದ 6,000 ಬುಕಿಂಗ್‌ಗಳನ್ನು ಪಡೆಯುತ್ತಿದೆ.
ಕಂಪನಿಯ ಮೂರು ಎಲೆಕ್ಟ್ರಿಕ್ ಉತ್ಪನ್ನಗಳಾದ  ನೆಕ್ಸಾನ್ ಇವಿ (Nexon EV), ಟಿಗೋರ್ ಇವಿ (Tigor EV) ಮತ್ತು ಎಕ್ಸ್ಪ್ರೆಸ್-ಟಿ (Express T) ದೇಶೀಯ ಮಾರುಕಟ್ಟೆಯಲ್ಲಿ ಲಭ್ಯವಿವೆ. ಇದು ಇತ್ತೀಚೆಗೆ ಕೂಪ್ (Coupe) ಶೈಲಿಯ SUV ಅನ್ನು ಅನಾವರಣಗೊಳಿಸಿದ್ದು, ಮುಂದಿನ ಎರಡು ವರ್ಷಗಳಲ್ಲಿ ಬಿಡುಗಡೆ ಮಾಡಲು ಯೋಜಿಸಿದೆ.

ಈ ಕುರಿತು ಮಾತನಾಡಿರುವ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ ಮತ್ತು ಎಲೆಕ್ಟ್ರಿಕ್ ವೆಹಿಕಲ್ಸ್ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ, ಇವಿ ಶ್ರೇಣಿಗೆ ಭಾರಿ ಬೇಡಿಕೆಯಿಂದ ಆರ್ಡರ್‌ಗಳ ಬ್ಯಾಕ್‌ಲಾಗ್‌ ಹೆಚ್ಚಳವಾಗಿದೆ. ಬೇಡಿಕೆ ಹಾಗೂ ಪೂರೈಕೆ ನಡುವೆ ವ್ಯತ್ಯಾಸ ಹೆಚ್ಚುತ್ತಿದೆ ಎಂದರು. ಜನರು ಇವಿ ಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಕಳೆದ ಒಂದು-ಎರಡು ತಿಂಗಳುಗಳಲ್ಲಿ, ಕಂಪನಿಯು ತಿಂಗಳಿಗೆ ಸರಾಸರಿ 5,500-6,000 ಬುಕಿಂಗ್‌ಗಳನ್ನು ಪಡೆಯುತ್ತಿದೆ. ಆದರೆ, ಕಂಪನಿಯು ಕಳೆದ ತಿಂಗಳು ಕೇವಲ 3,300-3,400 ವಾಹನಗಳನ್ನು ಪೂರೈಸಲು ಸಾಧ್ಯವಾಯಿತು. ಈಗ ಪ್ರತಿ ತಿಂಗಳು ಹಲವು ಆರ್ಡರ್‌ಗಳು ಪೂರೈಕೆಗೆ ಬಾಕಿ ಉಳಿಯತ್ತಿವೆ ಎಂದರು.

ಆಟೊಮೊಬೈಲ್‌ ವಲಯದಲ್ಲಿ ಕಂಡು ಬರುತ್ತಿರುವ ಸೆಮಿ ಕಂಡಕ್ಟರ್‌ ಕೊರತೆಯನ್ನು ಮೀರಿಸಲು ಕಂಪನಿ ಸೆಮಿ ಕಂಡಕ್ಟರ್‌ ಸೋರ್ಸಿಂಗ್ ಹೆಚ್ಚಿಸುವ ಮೂಲಕ ತನ್ನ  ಸಾಮರ್ಥ್ಯಗಳನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ.ಕಂಪನಿಯು ಈಗಾಗಲೇ ವಿನ್ಯಾಸ ಮಾರ್ಪಾಡುಗಳಂತಹ ವಿವಿಧ ಹಂತಗಳನ್ನು ಪ್ರಾರಂಭಿಸಿದೆ ಮತ್ತು ಅಗತ್ಯ ಅರೆವಾಹಕಗಳ ಲಭ್ಯತೆಯನ್ನು ಹೆಚ್ಚಿಸಲು ಬಹು ಮಾರಾಟಗಾರರಿಂದ ಸೋರ್ಸಿಂಗ್ ಮಾಡಿದೆ ಎಂದು ಅವರು ವಿವರಿಸಿದರು.

ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಗಳ ಚಿಲ್ಲರೆ ಮಾರಾಟ ಮೂರು ಪಟ್ಟು ಜಿಗಿತ-ಎಫ್ಎಡಿಎ ವರದಿ

ಈ ಕ್ರಮಗಳು ನಮಗೆ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಲು ಅವಕಾಶ ಮಾಡಿಕೊಟ್ಟಿವೆ. ಕೇವಲ ಏಳು ತಿಂಗಳ ಹಿಂದೆ ನಾವು ಕೇವಲ 600 ವಾಹನಗಳನ್ನು ಉತ್ಪಾದಿಸುತ್ತಿದ್ದೆವು ಆದರೆ ನಂತರ ಅಂತಹ ಕ್ರಮಗಳು ಅದನ್ನು 1,500-1,700 ಮಟ್ಟಗಳಿಗೆ ಮತ್ತು ನಂತರ 3,000-3500 ಮಟ್ಟಗಳಿಗೆ ಹೆಚ್ಚಿಸಲು ಸಹಾಯ ಮಾಡಿದೆ. ಇದು ಮುಂದುವರಿಯುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ವರ್ಷದ ಮಾರಾಟದ ಮಹತ್ವಾಕಾಂಕ್ಷೆಗಳ ಬಗೆಗಿನ ಪ್ರಶ್ನೆಗೆ ಅವರು, ಕಳೆದ ವರ್ಷಕ್ಕೆ ಹೋಲಿಸಿದರೆ ನಾವು ಐದು ಪಟ್ಟು ಬೆಳೆದಿದ್ದೇವೆ ಮತ್ತು ಆದ್ದರಿಂದ ಆಕಾಂಕ್ಷೆಗಳು ಏರಿಕೆಯಾಗಿದೆ. ಜೊತೆಗೆ, ನಾವು ಗುಣಮಟ್ಟದಲ್ಲಿಯೂ ಬೆಳೆಯುತ್ತದೆ ಎಂದರು. ಎಫ್‌ಎಡಿಎ (FADA) ಪ್ರಕಾರ, ಟಾಟಾ ಮೋಟಾರ್ಸ್ 2021-22 ರಲ್ಲಿ ಎಲೆಕ್ಟ್ರಿಕ್ ಪ್ಯಾಸೆಂಜರ್ ವಾಹನ ವಿಭಾಗದಲ್ಲಿ 15,198 ವಾಹನಗಳ ಚಿಲ್ಲರೆ ವ್ಯಾಪಾರಗಳೊಂದಿಗೆ ಶೇ.85.37 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.

ಇದನ್ನೂ ಓದಿ: Electric Vehicle: ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಆರಂಭ

2030ರ ವೇಳೆಗೆ ಎಲೆಕ್ಟ್ರಿಕ್‌ ವಾಹನಗಳ ಬೇಡಿಕೆ ಶೇ.30ಕ್ಕಿಂತ ಹೆಚ್ಚಾಗಬಹುದು ಎಂದಿರುವ ಚಂದ್ರು ಅವರು,ಅಗತ್ಯ ಮೂಲಭೂತ ಸೌಕರ್ಯಗಳ ಹೆಚ್ಚಳ, ಚಾರ್ಜಿಂಗ್‌ ವ್ಯವಸ್ಥೆ, ಜನರಲ್ಲಿ ಶ್ರೇಣಿಯ ಕುರಿತು ವಿಶ್ವಾಸ ಮೂಡುವ ಪ್ರಯತ್ನಗಳು ಸಾಗಿವೆ. ಜನರು ನಿಧಾನವಾಗಿ ಎಲೆಕ್ಟ್ರಿಕ್‌ ಕಡೆಗೆ ಪರಿವರ್ತನೆಗೊಳ್ಳುತ್ತಿದ್ದಾರೆ. ಇದು ಸಕಾರಾತ್ಮಕ ಬೆಳವಣಿಗೆ. ಮುಂದಿನ ಹತ್ತು ವರ್ಷಗಳಲ್ಲಿ ಇದು ದೊಡ್ಡ ಮಟ್ಟದ ಬೆಳವಣಿಗೆಗೆ ಕಾರಣವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
 

click me!