EV sales ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಶೇ.352 ರಷ್ಟು ಏರಿಕೆ, ಹೊಸ ದಾಖಲೆ ಬರೆದ ಟಾಟಾ!

By Suvarna News  |  First Published Apr 2, 2022, 4:59 PM IST
  • 2021-22ರಲ್ಲಿ ಹೊಸ ದಾಖಲೆ ಬರೆದ ಟಾಟಾ ಮೋಟಾರ್ಸ್
  • ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಟಾಟಾ ನಂ.1
  • ಅತ್ಯುತ್ತಮ ಎಲೆಕ್ಟ್ರಿಕ್ ಕಾರು ನೀಡುತ್ತಿದೆ ಟಾಟಾ ಮೋಟಾರ್ಸ್

ಮುಂಬೈ(ಏ.02):ಭಾರತದಲ್ಲಿ ಸರ್ಕಾರ ಎಲೆಕ್ಟ್ರಿಕ್ ವಾಹನಗಳಿಗೆ (Electric Vehicle) ಹೆಚ್ಚಿನ ಒತ್ತು ನೀಡುತ್ತಿದೆ. ಆದರೆ ಬೆಲೆ, ಮೂಲಭೂತ ಸೌಕರ್ಯಗಳ ಕೊರತೆಯಿಂದ ನಿಧಾನವಾಗಿ ಪ್ರಗತಿ ಕಾಣುತ್ತಿದೆ. ಇದರ ನಡುವೆ ಟಾಟಾ ಮೋಟಾರ್ಸ್ ಹೊಸ ದಾಖಲೆ ಬರೆದಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿರುವ ಟಾಟಾ ಮೋಟಾರ್ಸ್ (Tata Motors) 2021-22ರ ಸಾಲಿನಲ್ಲಿ ಶೇಕಡಾ 352.86 ರಷ್ಟು ಏರಿಕೆ ಕಂಡಿದೆ.

ಎಲೆಕ್ಟ್ರಿಕ್ ಕಾರು ಮಾರಾಾಟದಲ್ಲಿ ಟಾಟಾ ಮೋಟಾರ್ಸ್ ಆಗ್ರಸ್ಥಾನದಲ್ಲಿದೆ. ಆರ್ಥಿಕ ವರ್ಷ 2021-22ರ ಸಾಲಿನಲ್ಲಿ 19,106 ಎಲೆಕ್ಟ್ರಿಕ್ ವಾಹನಗಳನ್ನು ಟಾಟಾ ಮಾರಾಟ ಮಾಡಿದೆ. ಕಳೆದ ಆರ್ಥಿಕ ವರ್ಷದಲ್ಲಿ ಟಾಟಾ ಮೋಟಾರ್ಸ್ 4,219 ಎಲೆಕ್ಟ್ರಿಕ್ ಕಾರು ಮಾರಾಟ ಮಾಡಿತ್ತು. ಗಣನೀಯ ಏರಿಕೆಯಿಂದ ಟಾಟಾ ಮೋಟಾರ್ಸ್ ಆತ್ಮವಿಶ್ವಾಸ ಹೆಚ್ಚಿದೆ.

Tap to resize

Latest Videos

undefined

ಇತರ ಎಲ್ಲಾ ಎಲೆಕ್ಟ್ರಿಕ್ ವಾಹನಗಳನ್ನು ಹಿಂದಿಕ್ಕಿರುವ ಟಾಟಾ ಮೋಟಾರ್ಸ್ ಶೀಘ್ರದಲ್ಲೇ ಹೊಸ ಎಲೆಕ್ಟ್ರಿಕ್ ವಾಹನ ಬಿಡುಗಡೆ ಮಾಡುವುದಾಗಿ ಹೇಳಿದೆ. ಇದರಿಂದ ಹೊಸ ಆರ್ಥಿಕ ವರ್ಷದಲ್ಲೂ ಟಾಟಾ ಮೋಟಾರ್ಸ್ ತನ್ನದೇ ದಾಖಲೆ ಮುರಿದಿ ಹೊಸ ದಾಖಲೆ ನಿರ್ಮಿಸುವ ಸಾಧ್ಯತೆ ಹೆಚ್ಚಿದೆ.

ಟಾಟಾ ಮೋಟಾರ್ಸ್ ಗ್ರಾಹಕರಿಗೆ ಎರಡು ಅತ್ಯುತ್ತಮ ಎಲೆಕ್ಟ್ರಿಕ್ ಕಾರು ನೀಡಿದೆ. ಟಾಟಾ ನೆಕ್ಸಾನ್ ಇವಿ (Tata Nexon EV) ಹಾಗೂ ಟಾಟಾ ಟಿಗೋರ್ ಇವಿ (Tata Tigor EV). ಟಾಟಾ ನೆಕ್ಸಾನ್ ಇವಿ ಬೆಲೆ 14.54 ಲಕ್ಷ ರೂಪಾಯಿಯಿಂದ 17.15 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿ 30.2 kWh ಬ್ಯಾಟರಿ ಬಳಸಲಾಗಿದೆ. ಇದು 129 PS ಪವರ್ ಹಾಗೂ 245 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ನೆಕ್ಸಾನ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 312 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. ಫಾಸ್ಟ್ ಚಾರ್ಜಿಂಗ್ ಮೂಲಕ 1 ಗಂಟೆಯಲ್ಲಿ ಸಂಪೂರ್ಣ ಚಾರ್ಜ್ ಮಾಡಬಹುದು. ಇನ್ನು ಮನೆಯಲ್ಲಿನ ಚಾರ್ಜಿಂಗ್ ಮೂಲಕ ಸಂಪೂರ್ಣ ಚಾರ್ಜ್ ಆಗಲು 7 ರಿಂದ 8 ಗಂಟೆ ಸಮಯ ತೆಗೆದುಕೊಳ್ಳಲಿದೆ.

ಟಾಟಾ ಎಲೆಕ್ಟ್ರಿಕ್ ಕಾರಿನ ಪೈಕಿ ಕೈಗೆಟುಕುವ ದರದ ಕಾರಾಗಿರುವ ಟಾಟಾ ಟಿಗೋರ್ ಅತ್ಯುತ್ತಮ ಮಾರಾಟ ದಾಖಲೆಯನ್ನು ಹೊಂದಿದೆ. ಟಿಗೋರ್ ಇವಿ ಕಾರಿನ ಆರಂಭಿಕ ಬೆಲೆ  12.24 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಹಾಗೂ ಗರಿಷ್ಠ ಬೆಲೆ 13.29 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 26 kWh ಬ್ಯಾಟರಿ ಪ್ಯಾಕ್ ಈ ಕಾರಿನಲ್ಲಿ ಬಳಸಲಾಗಿದೆ. 74.7 PS ಪವರ್ ಹಾಗೂ 170 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಟಿಗೋರ್ ಇವಿ ಕಾರು ಸಂಪೂರ್ಣ ಚಾರ್ಜ್‌ಗೆ 306 ಕಿ.ಮೀ ಮೈಲೇಜ್ ನೀಡಲಿದೆ.

ಟಾಟಾ ಮೋಟಾರ್ಸ್‌ನ ಫ್ಲೀಟ್‌ ಎಡ್ಜ್‌
ವಾಹನಗಳ ಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ಟಾಟಾ ಮೋಟಾರ್ಸ್‌ ಫ್ಲೀಟ್‌ ಎಡ್ಜ್‌ ಎಂಬ ಪರಿಹಾರವನ್ನು ಬಿಡುಗಡೆ ಮಾಡಿದೆ. ಇದು ಟೆಲಿ ಮ್ಯಾಟಿಕ್‌ ಕಂಟ್ರೋಲ್‌ ಯುನಿಟ್‌ ಅನ್ನು ಒಳಗೊಂಡಿದ್ದು ವಾಹನದಲ್ಲಿ ಏನಾದ್ರೂ ಸಮಸ್ಯೆಯಾದಾಗ ಕೂಡಲೇ ತಿಳಿಯಬಹುದು. ಮೈಲೇಜ್‌ ಎಷ್ಟುಸಿಗುತ್ತೆ ಅನ್ನೋದು ಗೊತ್ತಾಗುತ್ತೆ. ಎಲ್ಲಾದರೂ ಇಂಧನ ವೇಸ್ಟ್‌ ಆಗ್ತಿದ್ರೆ ಈ ಡಿಜಿಟಲ್‌ ಪ್ಲಾಟ್‌ಫಾಮ್‌ರ್‍ ಅದನ್ನು ತಕ್ಷಣ ನಿಮ್ಮ ಗಮನಕ್ಕೆ ತರುತ್ತೆ. ಇದರಲ್ಲಿ ನಿಮ್ಮ ವಾಹನದ ವಿವರಗಳೂ ಇದರಲ್ಲಿ ಸ್ಟೋರ್‌ ಆಗಿರುತ್ತೆ

click me!