ನವದೆಹಲಿ(ಡಿ.31): ಹೊಸ ವಿನ್ಯಾಸ, SUV ಕಾರುಗಳನ್ನೇ ಮೀರಿಸಬಲ್ಲ ಆಕರ್ಷಕ ಲುಕ್, 7 ಸೀಟರ್ ಸಾಮರ್ಥ್ಯ ಹೊಚ್ಚ ಹೊಸ ಮಹೀಂದ್ರ ಸ್ಕಾರ್ಪಿಯೋ(mahindra scorpio) ಬಿಡುಗಡೆಗೆ ತಯಾರಿ ನಡೆಸುತ್ತಿದೆ. ಕಳೆದ 3 ವರ್ಷಗಳಿಂದ ಮಹೀಂದ್ರ ನ್ಯೂ ಜನರೇಶನ್ ಸ್ಕಾರ್ಪಿಯೋ ಅಭಿವೃದ್ಧಿ ಮಾಡುತ್ತಿದೆ. ಹಲವು ರೋಡ್ ಟೆಸ್ಟ್ ಸೇರಿದಂತೆ ಪರೀಕ್ಷೆಗಳನ್ನು ಎದುರಿಸಿರುವ ಮಹೀಂದ್ರ ಸ್ಕಾರ್ಪಿಯೋ ಇದೀಗ ಬಿಡುಗಡೆಗೆ ರೆಡಿಯಾಗಿದೆ. ಮಹೀಂದ್ರ XUV700 ಬಳಿಕ ಬಿಡುಗಡೆಯಾಗುತ್ತಿರುವ ಬಹುನಿರೀಕ್ಷಿತ ಹಾಗೂ 7 ಸೀಟರ್ ಕಾರು ಇದಾಗಿದೆ.
ನೂತನ ಮಹೀಂದ್ರ ಸ್ಕಾರ್ಪಿಯೋ ಕಾರು 2022ರ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ. ಸ್ಕಾರ್ಪಿಯೋ ಕಾರಿನ ಬುಕಿಂಗ್(Car Booking) ಅಕ್ಟೋಬರ್ 2 ರಿಂದ ಆರಂಭಗೊಳ್ಳುವ ಸಾಧ್ಯತೆ ಇದೆ. ಇನ್ನು ನವೆಂಬರ್ 1 ರಿಂದ ಸ್ಕಾರ್ಪಿಯೋ ಕಾರು ವಿತರಣೆ ಆರಂಭಿಸಲಿದೆ(Car Delivery) ಎಂದು ಮೂಲಗಳು ಹೇಳಿವೆ. ಹೊಸ ವರ್ಷದಲ್ಲಿ(New Year 2022) ಬಿಡುಗಡೆಯಾಗಲಿರುವ ಕಾರುಗಳ ಪೈಕಿ ಭಾರಿ ಕುತೂಹಲ ಕೆರಳಿಸಿರುವ ಕಾರುಗಳಲ್ಲಿ ಮಹೀಂದ್ರ ಸ್ಕಾರ್ಪಿಯೋ ಕೂಡ ಒಂದಾಗಿದೆ. 2022ರ ಜೂನ್ ತಿಂಗಳಲ್ಲಿ ಮಹೀಂದ್ರ ಸ್ಕಾರ್ಪಿಯೋ ಭಾರತದಲ್ಲಿ ಬಿಡುಗಡೆಯಾಗಿ 20 ವರ್ಷ ಪೂರೈಸಲಿದೆ. ಹೀಗಾಗಿ ನೂತನ ಸ್ಕಾರ್ಪಿಯೋ ಕಾರನ್ನು 2022ರ ಜೂನ್ ತಿಂಗಳಲ್ಲಿ ಅನಾವರಣ ಮಾಡುವ ಸಾಧ್ಯತೆ ಇದೆ.
undefined
ಸೆಮಿಕಂಡ್ಟರ್ ಚಿಪ್(semiconductor chip) ಕೊರತೆಯಿಂದ ಮಹೀಂದ್ರ ಈಗಾಲೇ ಹಲವು ವಾಹನಗಳು ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಬುಕಿಂಗ್ ಕಾಯುವಿಕೆ ಅವಧಿ ಕೂಡ ಹೆಚ್ಚಾಗಿದೆ. ಹೀಗಾಗಿ ಸ್ಕಾರ್ಪಿಯೋ ಬಿಡುಗಡೆ ವಿಳಂಭವಾಗಿದೆ. ಮಹೀಂದ್ರ XUV700 ಸೇರಿದಂತೆ ಹಲವು ಕಾರುಗಳು ಚಿಪ್ ಕೊರತೆ ಕಾರಣ ಉತ್ಪಾದನೆ ಕೂಡ ವಿಳಂಬವಾಗುತ್ತಿದೆ.
ನೂತನ ಸ್ಕಾರ್ಪಿಯೋ ಕಾರಿನ ಬೆಲೆ:
ಮಹೀಂದ್ರ ಬಿಡುಗಡೆ ಮಾಡಲಿರುವ ನೂತನ ಸ್ಕಾರ್ಪಿಯೋ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯೆಂಟ್‌ನಲ್ಲಿ ಲಭ್ಯವಿದೆ. ಪೆಟ್ರೋಲ್ ವೇರಿಯೆಂಟ್ ಕಾರಿನ ಬೆಲೆ 9.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳಲಿದೆ. ಇನ್ನು ಡೀಸೆಲ್ ವೇರಿಯೆಂಟ್ ಬೆಲೆ 12.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಈ ಮೂಲಕ ಆಕರ್ಷಕ ಬೆಲೆಯಲ್ಲಿ ಸ್ಕಾರ್ಪಿಯೋ ಬಿಡುಗಡೆ ಮಾಡಲು ಮಹೀಂದ್ರ ಸಜ್ಜಾಗಿದೆ.
ನೂತನ ಕಾರಿನ ಎಂಜಿನ್
ನೂತನ ಮಹೀಂದ್ರ ಸ್ಕಾರ್ಪಿಯೋ ಎಂಜಿನ್ ತೀರಾ ಹೊಸದಲ್ಲ. ಕಾರಣ ಮಹೀಂದ್ರ ಥಾರ್ ಹಾಗೂ ಮಹೀಂದ್ರ XUV700 ಕಾರಿನಲ್ಲಿ ಬಳಸಿರುವ ಎಂಜಿನ್ ಇದೀಗ ಸ್ಕಾರ್ಪಿಯೋ ಕಾರಿನಲ್ಲಿ ಬಳಸುವ ಸಾಧ್ಯತೆ ಇದೆ. 2.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಹಾಗೂ 2.2 ಲೀಟರ್ ಡೀಸೆಲ್ ಎಂಜಿನ್ ಇರಲಿದೆ. ಸದ್ಯ ಮಹೀಂದ್ರ ಥಾರ್ ಲೋವರ್ ವೇರಿಯೆಂಟ್ ಕಾರಿನಲ್ಲಿ ಬಳಸಿರುವ ಎಂಜಿನ್ 130 Bhp ಪವರ್ ಹಾಗೂ 300 nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಆದರೆ ಸ್ಕಾರ್ಫಿಯೋ ಕಾರು ಥಾರ್‌ಗಿಂತ ದೊಡ್ಡದಾಗಿದೆ. ಹೀಗಾಗಿ ಹೈಯರ್ ವೇರಿಯೆಂಟ್ ಕಾರಿನಲ್ಲಿ ಬಳಸಿದ ಎಂಜಿನ್ ಬಳಸುವ ಸಾಧ್ಯತೆ ಇದೆ.
ಹೈಯರ್ ವೇರಿಯೆಂಟ್ ಎಂಜಿನ್ 150 ರಿಂದ 170 bhp ಪವರ್ ಹಾಗೂ 360 nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಮಹೀಂದ್ರ XUV700 ಕಾರಿನ MX ಟ್ರಿಮ್ ಮಾಡೆಲ್‌ನಲ್ಲಿ ಈ ರೀತಿಯ ಶಕ್ತಿಶಾಲಿ ಎಂಜಿನ್ ಬಳಸಲಾಗಿದೆ. ಹೈಯರ್ ವೇರಿಯೆಂಟ್ ಕಾರಿನಲ್ಲಿ 6 ಸ್ಪೀಡ್ ಮಾನ್ಯುಯೆಲ್ ವೇರಿಯೆಂಟ್ ಹಾಗೂ 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆ ನೀಡಲಿದೆ. ಇನ್ನು ಡೀಸೆಲ್ ವೇರಿಯೆಂಟ್ 4X4 ಡ್ರೈವ್ ನೀಡಲಿದೆ. ಇನ್ನು ನೂತನ ಮಹೀಂದ್ರ ಸ್ಕಾರ್ಫಿಯೋ 4 ಲೋವರ್ ಮಾಡೆಲ್ ಹಾಗೂ 4 ಹೈಯರ್ ಮಾಡೆಲ್ ಕಾರು ಪರಿಚಯಿಸಲಿದೆ.