ಇವಿ ವಲಯದಲ್ಲಿ ಅತಿ ಹೆಚ್ಚು ಮಾಸಿಕ ಮಾರಾಟ ದಾಖಲಿಸಿದ ಟಾಟಾ ಮೋಟರ್ಸ್

By Suvarna News  |  First Published Jul 2, 2022, 1:11 PM IST

ಟಾಟಾ ಮೋಟಾರ್ಸ್‌ (Tata Motors) ಜೂನ್‌ ತಿಂಗಳ ಎಲೆಕ್ಟ್ರಿಕ್‌ ವಾಹನಗಳ ವಲಯದಲ್ಲಿ ಉತ್ತಮ ಪ್ರದರ್ಶನ ತೋರಿದೆ. ಈ ಮೂಲಕ ಎಲೆಕ್ಟ್ರಿಕ್‌ ವಾಹನ ಮಾರಾಟದಲ್ಲಿ ಅತಿ ಹೆಚ್ಚು ಲಾಭ ಮಾಡಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. 


ಟಾಟಾ ಮೋಟಾರ್ಸ್ (Tata Motors) ಜೂನ್ ತಿಂಗಳ ಎಲೆಕ್ಟ್ರಿಕ್ ವಾಹನಗಳ ವಲಯದಲ್ಲಿ  ಉತ್ತಮ ಪ್ರದರ್ಶನ ತೋರಿದೆ. ನೆಕ್ಸಾನ್ ಇವಿ (Nexon EV), ಟಿಗೊರ್ ಇವಿ (Tigor EV) ಮತ್ತು ಇತ್ತೀಚೆಗೆ ಬಿಡುಗಡೆಯಾದ ನೆಕ್ಸಾನ್ ಇವಿ ಮ್ಯಾಕ್ಸ್  (Nexon EV max) ಎಂಬ ಮೂರು ಶುದ್ಧ ಎಲೆಕ್ಟ್ರಿಕ್ ವಾಹನಗಳನ್ನು ಒಳಗೊಂಡಿರುವ ಈ ವಿಭಾಗದ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಜೂನ್ 2022 ರಲ್ಲಿ 3,507 ರಷ್ಟಿದೆ. ಇದು  ಜೂನ್ 2021 ರಲ್ಲಿ ಮಾರಾಟವಾದ 658 ವಾಹನಗಳಿಗಿಂತ ಶೇ.433ರಷ್ಟು ಹೆಚ್ಚಾಗಿದೆ.

ಸದ್ಯ ಟಾಟಾ ಮೋಟಾರ್ಸ್ ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿಯೊಂದಿಗೆ ಎಲೆಕ್ಟ್ರಿಕ್ ವಾಹನಗಳ ವಲಯದಲ್ಲಿ ಬಹುದೊಡ್ಡ ಪಾಲು ಹೊಂದಿದೆ. ಈ ಕಾರು ತಯಾರಕರು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದ್ದಾರೆ. ನೆಕ್ಸಾನ್ ಇವಿ ಮಾರುಕಟ್ಟೆಗೆ ಬಿಡುಗಡೆಯಾದಾಗಿನಿಂದ ಎಲೆಕ್ಟ್ರಿಕ್ ಕಾರು ಮೇಲುಗೈ ಸಾಧಿಸಿದೆ. ಇದರ ಯಶಸ್ಸಿನಿಂದ ಪ್ರೇರಣೆ ಪಡೆದ ಟಾಟಾ ಮೋಟಾರ್ಸ್, ಈಗ ಅದರ ಹೊಸ ವೇರಿಯಂಟ್ಗಳನ್ನು ಬಿಡುಗಡೆಗೊಳಿಸಿದೆ. ಇದು ದೊಡ್ಡ ಬ್ಯಾಟರಿ ಪ್ಯಾಕ್ ಮತ್ತು ಹೆಚ್ಚಿನ ರೇಂಜ್ ಅನ್ನು ಒಳಗೊಂಡಿದೆ.ಇದು ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Latest Videos

undefined

ಎಲೆಕ್ಟ್ರಿಕ್ ಕಾರುಗಳ ಪ್ರದರ್ಶನದ ಬಗ್ಗೆ ಮಾತನಾಡಿರುವ ಟಾಟಾ ಮೋಟಾರ್ಸ್ ಪ್ರಯಾಣಿಕ ವಾಹನಗಳ ವಲಯದ ನಿರ್ವಹಣಾ ನಿರ್ದೇಶಕ ಶೈಲೇಶ್ ಚಂದ್ರಾ, “ವಿವಿ ವಾಹನಗಳ ಮಾರಾಟ 2023ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿದೆ. 2022ರ ಮೇ ತಿಂಗಳಲ್ಲಿ ಬಿಡುಗಡೆಯಾದ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಕೂಡ ಭಾರಿ ಬೇಡಿಕೆ ಪಡೆದುಕೊಂಡಿದೆ” ಎಂದಿದ್ದಾರೆ.

ಇದನ್ನೂ ಓದಿ: ಕೈಯಲ್ಲಿ ದುಡ್ಡಿದ್ರು Mahindra XUV 700 ಖರೀದಿ ಮಾಡೋಕಾಗಲ್ಲ: ಯಾಕೆ?

ಟಾಟಾ ಮೋಟಾರ್ಸ್ 2022ರ ಜೂನ್ ತಿಂಗಳಲ್ಲಿ ಒಟ್ಟು 45,197 ಪ್ರಯಾಣಿಕ ವಾಹನಗಳು ಮಾರಾಟವಾಗಿದೆ. ಇದರಿಂದ ತಿಂಗಳಿಂದ ತಿಂಗಳಿಗೆ ವಾಹನದ ಮಾರಾಟ ಶೇ.4.28ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಈ ತಿಂಗಳಲ್ಲಿ ಮಾರಾಟವಾದ 24,110 ವಾಹನಗಳಿಗಿಂತ ಇದು ಶೇ. 87.46 ರಷ್ಟು ಹೆಚ್ಚಾಗಿದೆ. ಇದು ಟಾಟಾ ಮೋಟಾರ್ಸ್ನ ಪ್ರಯಾಣಿಕ ವಾಹನಗಳ ವಲಯದಲ್ಲಿ ಇದುವರೆಗೆ ದಾಖಲಾಗಿರುವ ಅತ್ಯಧಿಕ ವಾಹನಗಳ ಮಾರಾಟವಾಗಿದೆ.

ಆದರೂ, ಭಾರತೀಯ ಕಾರು ಉದ್ಯಮದಲ್ಲಿ 2 ನೇ ಸ್ಥಾನ ಗಳಿಸಲು ಟಾಟಾ ಸಫಲವಾಗಿಲ್ಲ. ಕಳೆದ ಮೇ ತಿಂಗಳಲ್ಲಿ ಎರಡನೇ ಸ್ಥಾನವನ್ನು ಕಳೆದುಕೊಂಡಿದ್ದು, ಹ್ಯುಂಡೈ ಜೂನ್ ತಿಂಗಳಲ್ಲಿ 49 ಸಾವಿರ ಕಾರುಗಳ ಮಾರಾಟ ಮಾಡುವ ಮೂಲಕ ಮತ್ತೆ ತನ್ನ ಸ್ಥಾನವನ್ನು ಮರಳಿ ಪಡೆದುಕೊಂಡಿದೆ. ಟಾಟಾ ಮೋಟಾರ್ಸ್ ಕೇವಲ 41,690 ವಾಹನಗಳನ್ನು ಮಾರಾಟ ಮಾಡಿದೆ. ಆದರೆ, ಇದು 2021ರ ಜೂನ್ ತಿಂಗಳಲ್ಲಿ ಮಾರಾಟವಾದ ಶೇ.78ರಷ್ಟು ಹೆಚ್ಚಳವಾಗಿದೆ. 

ಕಂಪನಿಯು ಹೊಸ ಟಾಟಾ ಸಫಾರಿ ಹಾಗೂ ಟಾಟಾ ಹ್ಯಾರಿಯರ್ ಪೆಟ್ರೋಲ್ ಮಾದರಿಯ ಬಿಡುಗಡೆ ಮಾಡಲು ಸಜ್ಜಾಗಿದೆ. ಇದು ಇತ್ತೀಚೆಗೆ ಬಿಡುಗಡೆಯಾದ ಮಹೀಂದ್ರಾ XUV7000 ಮತ್ತು ಸ್ಕಾರ್ಪಿಯೋ N ಗೆ ಸ್ಪರ್ಧೆ ನೀಡುತ್ತದೆ.

ಇದನ್ನೂ ಓದಿ: 50 ಸಾವಿರ ಇವಿ ತ್ರಿಚಕ್ರ ವಾಹನಗಳ ಮಾರಾಟದ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ

ಜೂನ್ ತಿಂಗಳಲ್ಲಿ ಟಾಟಾ ಮೋಟಾರ್ಸ್ ನ ಒಟ್ಟು ದೇಶೀಯ ಮಾರಾಟ 79,606 ರಷ್ಟಿದೆ. ಇದು 2021ರ ಜೂನ್ ತಿಂಗಲ್ಲಿ 43,704 ವಾಹನಗಳಿಗಿಂತ ಶೇ. 82ರಷ್ಟು ಹೆಚ್ಚಾಗಿದೆ. ಇದು ತಿಂಗಳಿನಿಂದ ತಿಂಗಳ ಮಾರಾಟದಲ್ಲಿ ಶೇ.6ರಷ್ಟು ಏರಿಕೆ ದಾಖಲಿಸಿದೆ. ಇದರ ಜೊತೆಗೆ, ವರ್ಷದಿಂದ ವರ್ಷದ ಮಾರಾಟ ಶೇ.138ರಷ್ಟು ಹೆಚ್ಚಾಗಿದೆ. ಆದರೆ, 2022ರ ನಾಲ್ಕನೇ ತ್ರೈಮಾಸಿಕದಲ್ಲಿ ಮಾತ್ರ ಮಾರಾಟ ಶೇ.26ರಷ್ಟು ಕಡಿಮೆಯಾಗಿದೆ.  ಕಳೆದ ತಿಂಗಳಲ್ಲಿ ಪ್ಯಾಸೆಂಜರ್ ಕ್ಯಾರಿಯರ್ ಮಾರಾಟವು 3,868 ವಾಹನಗಳಷ್ಟಿದ್ದು, 2021ರ  ಜೂನ್ ನಲ್ಲಿ ಮಾರಾಟವಾದ 943 ವಾಹನಗಳಿಗಿಂತ ಶೇ.310ರಷ್ಟು ಹೆಚ್ಚಾಗಿದೆ. ಇದು 2022 ಮೇನಲ್ಲಿ ಮಾರಾಟವಾದ 3,632 ವಾಹನಗಳಿಂದ ಶೇ.6 ರಷ್ಟು ಬೆಳವಣಿಗೆಯಾಗಿದೆ. 

click me!