ಆಲ್‌-ನ್ಯೂ ಮಾರುತಿ ಸುಜುಕಿ ಬ್ರೀಝಾ ಬಿಡುಗಡೆ: ಬೆಲೆ 7.99 ಲಕ್ಷ ರೂ.ಗಳಿಂದ ಆರಂಭ

By Suvarna News  |  First Published Jul 1, 2022, 1:41 PM IST

ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ (Maruti Suzuki) ಭಾರತದಲ್ಲಿ ಆಲ್‌-ನ್ಯೂ ಬ್ರೀಝಾ (All-new Brezza) ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.


ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ (Maruti Suzuki) ಭಾರತದಲ್ಲಿ ಆಲ್‌-ನ್ಯೂ ಬ್ರೀಝಾ (All-new Brezza) ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. 7.99 ಲಕ್ಷ ಶೋರೂಂ ಬೆಲೆಯೊಂದಿಗೆ ಆರಂಭವಾಗುವ ಮಾರುತಿ ಸುಜುಕಿಯು ಆಲ್‌-ನ್ಯೂ ಸಬ್-4m ಕಾಂಪ್ಯಾಕ್ಟ್ SUV ಕಳೆದ  8 ದಿನಗಳಲ್ಲಿ 45,000 ಕ್ಕೂ ಹೆಚ್ಚು ಬುಕ್ಕಿಂಗ್ಗಳನ್ನು ಪಡೆದುಕೊಂಡಿದೆ.
ಜನರು 11,000 ರೂ.ಗಳ ಪಾವತಿಯೊಂದಿಗೆ ಬುಕಿಂಗ್ ಮಾಡಬಹುದಾಗಿದೆ. ಹಿಂದಿನ ವಿಟಾರಾ ಬ್ರೀಝಾ ಇದು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. 2022 ಮಾರುತಿ ಸುಜುಕಿ ಬ್ರೆಝಾ ಹೊಸ ಪ್ಲಾಟ್ಫಾರ್ಮ್ ಅನ್ನು ಆಧರಿಸಿದೆ ಮತ್ತು ಹೊಸ ಪೆಟ್ರೋಲ್ ಎಂಜಿನ್, ಟ್ರಾನ್ಸ್ಮಿಷನ್ ಮತ್ತು ವೈಶಿಷ್ಟ್ಯಗಳನ್ನು ಸಹ ಹೊಂದಿದೆ.

ಹೊಸ 2022 ಬ್ರೀಝಾ ಸಂಪೂರ್ಣವಾಗಿ ಬದಲಾಗಿದ್ದು, ಹೊಸದಾಗಿ ಕಾಣುತ್ತದೆ. ಇದರ  ಮುಂಭಾಗದ ತುದಿಯು ಹೊಸ ವಿನ್ಯಾಸ ಪಡೆದಿದ್ದು, ಮೊದಲಿಗಿಂತ ಹೆಚ್ಚು ಸುಂದರವಾಗಿದೆ. ಇದರ  ಗ್ರಿಲ್ ಹೊಸ ಎಲ್ಇಡಿ (LED) ಸ್ಲೀಕ್ ಹೆಡ್ಲ್ಯಾಂಪ್ಗಳನ್ನು ಹೊಂದಿದ್ದು, ಹೊಸ ಡ್ಯುಯಲ್-ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್ಗಳು ಕಾರಿಗೆ ವಿಶಿಷ್ಟ ಗುರುತು ನೀಡಿದೆ. ಬಂಪರ್ ವಿನ್ಯಾಸ ಕೂಡ ಹೊಸದಾಗಿದ್ದು, ಹೆಚ್ಚು ದೃಢವಾಗಿದೆ. ಮಾರುತಿ ಸುಜುಕಿ ತನ್ನ ಹೊಸ ಫೇಸ್‌ಲಿಫ್ಟ್‌ ಮಾದರಿಯಲ್ಲಿ ಹೊಸ ಸಿಲ್ವರ್ ಫಾಕ್ಸ್ ಸ್ಕಿಡ್ ಪ್ಲೇಟ್ ಮತ್ತು ಹೊಸ ಫಾಗ್ಲ್ಯಾಂಪ್ಗಳನ್ನು ಕೂಡ ಸೇರಿಸಿದೆ.
ಆಲ್‌-ನ್ಯೂ 2022 ಮಾರುತಿ ಸುಜುಕಿ ಬ್ರೀಝಾದ ಹಿಂಭಾಗವು ಮೊದಲಿಗಿಂತ ಹೆಚ್ಚು ತೀಕ್ಷ್ಣವಾಗಿದೆ. ಹಿಂದಿನ ಭಾಗದಲ್ಲಿ ಬ್ರೀಝಾ ಎಂಬ ಬ್ರ್ಯಾಂಡ್‌ (Brand) ಹೆಸರಿನ, ಮುಂಭಾಗಕ್ಕಿಂತ ಹೆಚ್ಚು ಆಕರ್ಷಕವಾಗಿದೆ.

ಮಾರುತಿ ಬ್ರೀಝಾ ಬೆಲೆ ಘೋಷಣೆ

ಹೊಸ ಕ್ಯಾಬಿನ್ ಮತ್ತು ವೈಶಿಷ್ಟ್ಯಗಳು
ಆಲ್‌ ನ್ಯೂ ಮಾರುತಿ ಸುಜುಕಿ ಬ್ರೀಝಾ ಹೊಸ ಕ್ಯಾಬಿನ್ ಮತ್ತು ಎಲ್ಲಾ ಹೊಸ ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಹೊಸ ಡ್ಯಾಶ್ಬೋರ್ಡ್ ಲೇಔಟ್ ಹಾಗೂ ಹೊಸ ವಿನ್ಯಾಸಗಳು, ಇದರ ಹೊಸ 9.0-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್‌ಗಳು ಮತ್ತು ಎಸಿ ವೆಂಟ್‌ಗಳು ಇದರ ಆಕರ್ಷಣೆಯಾಗಿದೆ. ಸ್ಟೀರಿಂಗ್ ಚಕ್ರವು ಫ್ಲಾಟ್-ಬಾಟಮ್ ಮತ್ತು ವಿವಿಧ ನಿಯಂತ್ರಣಗಳನ್ನು ಹೊಂದಿರುವ ಈ  ಕಾರಿನ ವೈಶಿಷ್ಟ್ಯಗಳ ಪಟ್ಟಿಯು ಮೊದಲಿಗಿಂತ ಹೆಚ್ಚು ಉದ್ದವಾಗಿದೆ. ಹೊಸ ಬ್ರೀಜಾ ಎಲೆಕ್ಟ್ರಿಕ್ ಸನ್ರೂಫ್ (Electric Sun Roog) ಇದರ ಹೆಚ್ಚುವರಿ ಸೇರ್ಪಡೆಯಾಗಿದೆ. ಇದು ಬ್ರ್ಯಾಂಡ್‌ನಿಂದ ಸನ್‌ರೂಫ್‌ ಪಡೆದ ಮೊದಲ ಕಾರಾಗಿದೆ. ಅಲ್ಲದೆ, ಮಾರುತಿ ಸುಜುಕಿ 5.5-ಇಂಚಿನ ಹೆಡ್-ಅಪ್ ಡಿಸ್ಪ್ಲೇ (HUD), ವೈರ್ಲೆಸ್ ಫೋನ್ ಚಾರ್ಜಿಂಗ್ ಮತ್ತು ಹೊಸ 360-ಡಿಗ್ರಿ ಕ್ಯಾಮೆರಾ ವೀಕ್ಷಣೆ ವ್ಯವಸ್ಥೆಯನ್ನು ಸೇರಿಸಿದೆ.
ಇನ್ಫೋಟೈನ್ಮೆಂಟ್ ಪರದೆಯು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಸಂಪರ್ಕ ಆಯ್ಕೆಗಳನ್ನು ಸಹ ಪಡೆಯುತ್ತದೆ. ಸ್ಮಾರ್ಟ್ಫೋನ್ನಿಂದ ಕಾರಿನಲ್ಲಿ ಬಹು ಕಾರ್ಯಗಳನ್ನು ನಿಯಂತ್ರಿಸಲು ಅನುಮತಿಸುವ ರಿಮೋಟ್ ಸ್ಮಾರ್ಟ್ ಸಿಸ್ಟಮ್‌ಗಳನ್ನು (Remote Smart System) ಒಳಗೊಂಡಂತೆ ಸಂಪರ್ಕ ವೈಶಿಷ್ಟ್ಯಗಳಿವೆ.

ಏಪ್ರಿಲ್‌ನಲ್ಲಿ ಮಾರುತಿ ಮಾರಾಟ ಕುಸಿತ ಕುಂಠಿತ

ಇದು ಆರು ವೇರಿಯಂಟ್‌ಗಳು (Variants) ಮತ್ತು ಎರಡು ಟ್ರಾನ್ಸ್‌ಮಿಷನ್‌ (Transmission) ಆಯ್ಕೆಗಳೊಂದಿಗೆ ಬರುತ್ತವೆ. ಇದರ ಟಾಪ್‌ ವೇರಿಯಂಟ್ ಬೆಲೆ 13.96 ಲಕ್ಷ ರೂ.ಗಳಷ್ಟಿದೆ. ಇದು ಝೆಎಕ್ಸ್‌ಐ ಪ್ಲಸ್‌ ಡ್ಯುಯಲ್ ಟೋನ್‌ ವೇರಿಯಂಟ್‌ ಆಗಿದೆ. ಜೊತೆಗೆ ಇದು ಆರು ಬಣ್ಣಗಳಲ್ಲಿ ಬರಲಿದ್ದು, ಇದರಲ್ಲಿ ಮೂರು ಡ್ಯುಯಲ್‌-ಟೋನ್‌ ಕಲರ್‌ ಮತ್ತು ಮೂರು ಏಕ-ಟೋನ್‌ನ ಬಣ್ಣಗಳಲ್ಲಿ ಬರಲಿವೆ.

ಈ ಹಿಂದೆ 2016ರಲ್ಲಿ ಮಾರುತಿ ಸುಜುಕಿ ಬ್ರೀಝಾ ಅನ್ನು ಮೊದಲು ಬಿಡುಗಡೆಗೊಳಿಸಲಾಗಿತ್ತು. ನಂತರ ಅದನ್ನು 2019ರಲ್ಲಿ ಅಪ್‌ಡೇಟ್‌ ಮಾಡಲಾಗಿತ್ತು. ಇದು ಸಬ್‌ ಎಸ್‌ಯುವಿ ಕಾಂಪ್ಯಾಕ್ಟ್‌ ವಿಭಾಗದಲ್ಲಿ ಅತ್ಯುತ್ತಮ ಬೇಡಿಕೆ ಹೊಂದಿರುವ ಎಸ್‌ಯುವಿಯಾಗಿದೆ.

Tap to resize

Latest Videos

click me!