ಶೀಘ್ರದಲ್ಲೇ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರು ಬಿಡುಗಡೆ, ಇದು ಅತಿ ಕಡಿಮೆ ಬೆಲೆಯ SUV ಇವಿ!

By Suvarna NewsFirst Published May 14, 2023, 4:56 PM IST
Highlights

ಭಾರತದಲ್ಲಿ ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರುಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.ಇತ್ತೀಚೆಗೆ ಅತೀ ಕಡಿಮೆ ಬೆಲೆ ಟಾಟಾ ಟಿಯಾಗೋ ಇವಿ ಕಾರು ಬಿಡುಗಡೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಎಂಜಿ ಮೋಟಾರ್ಸ್ ಅತೀ ಕಡಿಮೆ ಬೆಲೆಯ  ಕೊಮೆಟ್ ಕಾರು ಲಾಂಚ್ ಮಾಡಿದೆ. ಇದೀಗ ಟಾಟಾ ಮೋಟಾರ್ಸ್ ಟಾಟಾ ಪಂಚ್ ಕಾರನ್ನು ಎಲೆಕ್ಟ್ರಿಕ್ ಕಾರಾಗಿ ಬಿಡುಗಡೆ ಮಾಡುತ್ತಿದೆ. ಇದು ಭಾರತದ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ SUV ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ನವದೆಹಲಿ(ಮೇ.14): ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆ ಅತೀ ಹೆಚ್ಚಿನ ಪೈಪೋಟಿ ಎದುರಿಸುತ್ತಿದೆ. ಈಗಾಗಲೇ ಟಾಟಾ ಮೋಟಾರ್ಸ್ ಅತ್ಯುತ್ತಮ ಹಾಗೂ ಕೈಗೆಟುಕುವ ದರದ ಕಾರು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯ ಬಹುಪಾಲು ಆಕ್ರಮಿಸಿಕೊಂಡಿದೆ. ಟಾಟಾಗೆ ಸೆಡ್ಡು ಹೊಡೆಯಲು ಇತರ ಹಲುವ ಕಂಪನಿಗಳು ಪ್ರಯತ್ನ ನಡೆಸುತ್ತಿದೆ. ಇತ್ತೀಗೆ ಎಂಜಿ ಮೋಟಾರ್ಸ್ ಕೊಮೆಟ್ ಕಾರು ಬಿಡುಗಡೆ ಮಾಡಿ ಸಂಚಲನ ಸೃಷ್ಟಿಸಿದೆ. ಇದೀಗ ಟಾಟಾ ಮೋಟಾರ್ಸ್ ಟಾಟಾ ಪಂಚ್ ಕಾರನ್ನು ಎಲೆಕ್ಟ್ರಿಕ್ ಕಾರಾಗಿ ಬಿಡುಗಡೆ ಮಾಡುತ್ತಿದೆ. ಇದು ಭಾರತದ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಟಾಟಾ ಪಂಚ್ ಇವಿ ಕಾರು 300 ರಿಂದ 350 ಕಿ.ಮೀ ಮೈಲೇಜ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಬಳಕೆ ಮಾಡುವ ಸಾಧ್ಯತೆ ಇದೆ. ಚಾರ್ಜಿಂಗ್ ಸಮಯ ಸರಿಸುಮಾರು 50 ನಿಮಿಷದಲ್ಲಿ ಶೇಕಡಾ 80 ರಷ್ಟು ಚಾರ್ಜ್ ಆಗಲಿದೆ. ಇನ್ನು ಅತ್ಯಾಧುನಿಕ ತಂತ್ರಜ್ಞಾನ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿ ಇರಲಿದೆ. ಟಾಟಾ ಪಂಚ್ ಇವಿ ಕಾರಿನ ಟೆಸ್ಟಿಂಗ್ ಕಾರ್ಯಗಳು ನಡೆಯುತ್ತಿದೆ. ಹೀಗಾಗಿ ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇದೆ.

ಭಾರತದ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಎಂಜಿ ಕೊಮೆಟ್ ಬಿಡುಗಡೆ, 230 ಕಿ.ಮೀ ಮೈಲೇಜ್!

ಇತ್ತೀಚೆಗೆ ಟಾಟಾ ಮೋಟಾರ್ಸ್ ಟಿಯಾಗೋ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿತ್ತು. ಟಾಟಾ ಟಿಯಾಗೋ  ಎಲೆಕ್ಟ್ರಿಕ್ ಕಾರು ಅತಿ ಕಡಿಮೆ ಸಮಯದಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ಇಷ್ಟೇ ಅಲ್ಲ ಹಲವು ದಾಖಲೆ ಬರೆದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 315 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಇದರ ಪರಿಷ್ಕೃತ ದರ 8.69 ಲಕ್ಷ ರೂಪಾಯಿಯಿಂದ ಆರಂಭಗೊಂಡು, ಗರಿಷ್ಠ 11.99 ಲಕ್ಷ ರೂಪಾಯಿವರಿಗಿದೆ(ಎಕ್ಸ್ ಶೋ ರೂಂ). ಟಾಟಾ ಟಿಯಾಗೋ ಇವಿ ಬಿಡುಗಡೆ ಸಂದರ್ಭದಲ್ಲಿ 8.49 ಲಕ್ಷ ರೂಪಾಯಿ ಆರಂಭಿಕ ಬೆಲೆಯಲ್ಲಿ ಕಾರು ಬಿಡುಗಡೆ ಮಾಡಲಾಗಿತ್ತು. ಇದು ಭಾರತದ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿತ್ತು. 

ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು ಬಿಡುಗಡೆಯಾದ ನಾಲ್ಕು ತಿಂಗಳಲ್ಲಿ 20,000 ಬುಕಿಂಗ್ ಮೂಲಕ ದಾಖಲೆ ಬರೆದಿತ್ತು. ಬಿಡುಗಡೆಯಾದ 24 ಗಂಟೆಯಲ್ಲಿ 10 ಸಾವಿರ ಬುಕಿಂಗ್ ಕಂಡಿತ್ತು. ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಅತ್ಯುತ್ತಮ ಕಾರಾಗಿರುವ ಕಾರಣ ದೇಶದಲ್ಲಿ ಟಿಯಾಗೋ ಜನಪ್ರೀಯತೆ ಪಡೆದುಕೊಂಡಿದೆ. ಇದಕ್ಕೆ ಪ್ರತಿಯಾಗಿ ಎಂಜಿ ಮೋಟಾರ್ಸ್ ಇತ್ತೀಚೆಗೆ ಎಂಜಿ ಕಾಮೆಟ್ ಅನ್ನೋ ಸಣ್ಣ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿತ್ತು.

ನಾಲ್ಕೇ ತಿಂಗಳಲ್ಲಿ ದಾಖಲೆ ಬರೆದ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು!

ಎಂಜಿ ಮೋಟಾರ್ಸ್ ಬಿಡುಗಡೆ ಮಾಡಿದ ಎಂಜಿ ಕೊಮೆಟ್ ಎಲೆಕ್ಟ್ರಿಕ್ ಕಾರಿನ ಬೆಲೆ 7.89 ಲಕ್ಷ ರೂಪಾಯಿಯಿಂದ(ಎಕ್ಸ್ ಶೋರೂಂ) ಆರಂಭಗೊಳ್ಳುತ್ತಿದೆ. ಸದ್ಯ ಭಾರತದಲ್ಲಿ ಲಭ್ಯವಿರುವ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಅನ್ನೋ ಹೆಗ್ಗಳಿಕೆಗೆ ಕೊಮೆಟ್ ಪಾತ್ರವಾಗಿದೆ. ಕೊಮೆಟ್ ಒಂದು ಬಾರಿ ಚಾರ್ಜ್ ಮಾಡಿದರೆ, 230 ಕಿಲೋಮೀಟರ್ ಮೈಲೇಜ್ ರೇಂಜ್ ಹೊಂದಿದೆ. ಇನ್ನು ಮೇ.15 ರಿಂದ ಕೊಮೆಟ್ ಬುಕಿಂಗ್ ಆರಂಭಗೊಳ್ಳುತ್ತಿದೆ. 

ಎಂಜಿ ಮೋಟಾರ್ಸ್ ಭಾರತದಲ್ಲಿ ಈಗಾಗಲೇ ಎಂಜಿ ZS ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿ ಯಶಸ್ಸು ಕಂಡಿದೆ. 22 ಲಕ್ಷ ರೂಪಾಯಿಗೂ ಅಧಿಕ ಬೆಲೆಯ ಎಂಜಿ ZS ಎಲೆಕ್ಟ್ರಿಕ್ ಕಾರು ಅತ್ಯಾಧುನಿಕ ತಂತ್ರಜ್ಞಾನಹೊಂದಿದೆ. ಇದಕ್ಕೆ ಪ್ರತಿಯಾಗಿ ಟಾಟಾ ಮೋಟಾರ್ಸ್ ಟಾಟಾ ನೆಕ್ಸಾನ್ ಮ್ಯಾಕ್ಸ್ ಇವಿ ಬಿಡುಗಡೆ ಮಾಡಿದೆ. 20 ಲಕ್ಷ ರೂಪಾಯಿ ಒಳಗಿನ ಈ ಕಾರು ಭಾರತದಲ್ಲಿ ಭಾರಿ ಮಾರಾಟ ಕಂಡಿದೆ. ಟಾಟಾ ಮೋಟಾರ್ಸ್ ಈಗಾಗಲೇ ಟಾಟಾ ನೆಕ್ಸಾನ್ ಇವಿ, ನೆಕ್ಸಾನ್ ಮ್ಯಾಕ್ಸ್ ಇವಿ, ಟಿಗೋರ್ ಇವಿ, ಟಿಯಾಗೋ ಇವಿ ಬಿಡುಗಡೆ ಮಾಡಿ ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆ ಆಕ್ರಮಿಸಿಕೊಂಡಿದೆ. ಇದೀಗ ಟಾಟಾ ಪಂಚ್ ಇವಿ ಬಿಡುಗಡೆಗೆ ಸಜ್ಜಾಗಿದೆ.

click me!