ನಾಲ್ಕೇ ತಿಂಗಳಲ್ಲಿ ದಾಖಲೆ ಬರೆದ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು!

By Suvarna News  |  First Published May 6, 2023, 4:35 PM IST

ಭಾರತದಲ್ಲಿ ಲಭ್ಯವಿರುವು ಕೈಗೆಟುಕುವ ದರದ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು ಇದೀಗ ಮತ್ತೊಂದು ದಾಖಲೆ ಬರೆದಿದೆ. ಟಿಯಾಗೋ ಕೇವಲ ನಾಲ್ಕು ತಿಂಗಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದೆ.


ಬೆಂಗಳೂರು(ಮೇ.06): ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಅಗ್ರಸ್ಥಾನದಲ್ಲಿದೆ. ಮಾರುಕಟ್ಟೆಯಲ್ಲಿ  ಗರಿಷ್ಠ ಪಾಲನ್ನು ಟಾಟಾ ಹೊಂದಿದೆ. ಟಾಟಾ ಮೋಟಾರ್ಸ್ ಬ್ರ್ಯಾಂಡ್‌ನ ಟಿಯಾಗೋ, ನೆಕ್ಸಾನ್, ನೆಕ್ಸಾನ್ ಮ್ಯಾಕ್ಸ್, ಟಿಗೋರ್ ಎಲೆಕ್ಟ್ರಿಕ್ ಕಾರುಗಳು ಭಾರಿ ಸಂಚಲನ ಸೃಷ್ಟಿಸಿದೆ.  ಇತ್ತೀಚೆಗೆ ಬಿಡುಗಡೆಯಾಗ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು ಇದೀಗ ನಾಲ್ಕೇ ತಿಂಗಳಲ್ಲಿ ದಾಖಲೆ ಬರೆದಿದೆ. ನಾಲ್ಕು ತಿಂಗಳಲ್ಲಿ 10,000 ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು ಡೆಲಿವರಿ ಮಾಡಲಾಗಿದೆ. ಬುಕಿಂಗ್ ಆರಂಭಗೊಂಡ 24 ಗಂಟೆಯಲ್ಲಿ 10,000 ಬುಕಿಂಗ್ ಕಂಡಿದ್ದ ಟಿಯಾಗೋ, ಡಿಸೆಂಬರ್ 2022ರ ಅಂತ್ಯಕ್ಕೆ 20 ಸಾವಿರ ಬುಕಿಂಗ್ ಕಂಡಿತ್ತು. ಈ ಮೂಲಕ ಅತೀವೇಗವಾಗಿ ಗರಿಷ್ಠ ಬುಕಿಂಗ್‌ ದಾಖಲೆಯನ್ನ ಟಿಯಾಗೋ ಇವಿ ಹೊಂದಿದೆ.  

Tiago.ev ಮಾಲೀಕರು ತಮ್ಮ ಕಾರಿನಲ್ಲಿ ದೀರ್ಘ, ಇಂಟರ್‌ಸಿಟಿ ಟ್ರಿಪ್‌ಗಳನ್ನು ಕೈಗೊಂಡಿದ್ದಾರೆ.  1200 ಕ್ಕೂ ಹೆಚ್ಚು Tiago.ev ಗಳಲ್ಲಿ ಪ್ರತಿಯೊಂದೂ 3000 ಕಿಮೀಗಳಷ್ಟು ದೂರ ಓಡಿವೆ, ಅವುಗಳಲ್ಲಿ 600+ ಕಾರುಗಳು ಭಾರತೀಯ ರಸ್ತೆಗಳಲ್ಲಿ ಪ್ರತಿಯೊಂದೂ 4000+ ಕಿಮೀಗಳ ಗಡಿಯನ್ನು ದಾಟಿವೆ – ಇದು ಉತ್ಪನ್ನದ ಶ್ರೇಷ್ಠತೆಯ ಅತ್ಯುತ್ತಮ ಪುರಾವೆಯಾಗಿದೆ.ಜೊತೆಗೆ ಡಿಸಿ ವೇಗದ ಚಾರ್ಜಿಂಗ್ ಲಭ್ಯತೆಯು, 30 ನಿಮಿಷಗಳಲ್ಲಿ 110 ಕಿ.ಮೀ. ದೂರದ ಪ್ರಯಾಣವನ್ನು ಹೆಚ್ಚಿಸುವುದರಿಂದ ದೂರದ ಪ್ರಯಾಣಗಳು ಹೆಚ್ಚು ಅನುಕೂಲಕರವಾಗಿರುತ್ತವೆ. ಇದಲ್ಲದೆ, ಮಾಲೀಕತ್ವದ ಕನಿಷ್ಠ ವೆಚ್ಚವು ಸಂಪೂರ್ಣ ಪ್ಯಾಕೇಜ್‌ಗೆ ಹೆಚ್ಚುವರಿ ಲಾಭವಾಗಿ ಕಾರ್ಯನಿರ್ವಹಿಸುತ್ತದೆ. ಸುಮಾರು 90% ರಷ್ಟು ಚಾರ್ಜಿಂಗ್ ಅನ್ನು ಮನೆಯಲ್ಲಿಯೇ ಮಾಡಿರುವುದರಿಂದಿಗೆ,  ICE ಕಾರುಗಳ ಚಾಲನೆಯ ವೆಚ್ಚಕ್ಕೆ ಹೋಲಿಸಿದರೆ,  ಎಲ್ಲಾ ಗ್ರಾಹಕರು ಸೇರಿ ಈಗಾಗಲೇ INR 7 ಕೋಟಿ ರೂ.ಗಳಿಗೂ ಹೆಚ್ಚು ಉಳಿತಾಯ ಮಾಡಿದ್ದಾರೆ.

Latest Videos

undefined

 

ಕೈಗೆಟುಕವ ದರ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿನ ಹೊಸ ಬೆಲೆ ಪ್ರಕಟ, ಇಲ್ಲಿದೆ ಸಂಪೂರ್ಣ ಪಟ್ಟಿ!

ಈ ರೋಮಾಂಚಕಾರಿ, ಆಧುನಿಕ, Ziptron ತಂತ್ರಜ್ಞಾನವನ್ನು  ಆಧರಿಸಿದ Tiago.ev, 5 ಪ್ರಮುಖ ಸ್ತಂಭಗಳಾದ - ಕಾರ್ಯಕ್ಷಮತೆ, ತಂತ್ರಜ್ಞಾನ, ವಿಶ್ವಾಸಾರ್ಹತೆ, ಚಾರ್ಜಿಂಗ್ ಮತ್ತು ಆರಾಮ ಗಳ ಮೇಲೆ ಬಲವಾಗಿ ನಿಂತಿದೆ. ಇದು, ಮಲ್ಟಿ-ಮೋಡ್ ರಿಜೆನ್‌ನೊಂದಿಗೆ ಅತ್ಯುತ್ತಮವಾಗಿ ಕಸ್ಟಮೈಸ್ ಮಾಡಿದ ಡ್ರೈವಿಂಗ್ ಅನುಭವ ನೀಡಲಿದೆ. ಡಿಜಿಟಲ್ ಡ್ರೈವ್ ಮತ್ತು ಎರಡು ಡ್ರೈವ್ ಮೋಡ್‌ಗಳಾದ - ಸಿಟಿ ಮತ್ತು ಸ್ಪೋರ್ಟ್ ಗಳನ್ನು ನೀಡುತ್ತದೆ. Tiago.ev, ಉತ್ಕೃಷ್ಟ ಹಾಗೂ ಅನುಕೂಲಕರ ಗುಣಲಕ್ಷಣಗಳಾದ ಸಂಪೂರ್ಣ ಸ್ವಯಂಚಾಲಿತ ನಿಯಂತ್ರಣಗಳು ಹೊಂದಿದೆ. ಜೊತೆಗೆ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಕ್ರೂಯಿಸ್ ಕಂಟ್ರೋಲ್,ಆಟೋ ಫೋಲ್ಡ್ ನೊಂದಿಗಿನ  ಎಲೆಕ್ಟ್ರಿಕ್ ORVM ಗಳು , ಆಟೋ ಹೆಡ್ ಲ್ಯಾಂಪ್ ಮತ್ತು ಮಳೆ ಗ್ರಹಿಸುವ ವೈಪರ್ ಗಳು – ಈ ಗುಣಲಕ್ಷಣಗಳು ಬಹುತೇಕ ಉನ್ನತ ವರ್ಗದ ಗ್ರಾಹಕರಿಗೆ ಮೀಸಲಿಡಲಾಗಿದೆ. 

315 ಕಿ.ಮೀ ಮೈಲೇಜ್, 21,000 ರೂಗೆ ಬುಕ್ ಮಾಡಿ ದೇಶದ ಕಡಿಮೆ ಬೆಲೆಯ ಟಾಟಾ ಟಿಯಾಗೋ ಇವಿ!

ಬಹುವಿಧದಲ್ಲಿ ಸಂಪರ್ಕಿತ ಗುಣಲಕ್ಷಣಗಳನ್ನು ಹೊಂದಿರುವ Tiago.ev , ತನ್ನ ಎಲ್ಲಾ ಟ್ರಿಮ್ ಗಳ ಮೇಲೆ ಟೆಲಿಮ್ಯಾಟಿಕ್ಸ್ ಒದಗಿಸುತ್ತಿರುವುದು ಈ ವರ್ಗದಲ್ಲಿ ಪ್ರಪ್ರಥಮವಾದ ಕೊಡುಗೆಯಾಗಿದೆ. ತಾಪಮಾನ ಸೆಟ್ ಮಾಡುವ ರಿಮೋಟ್ , AC ON/OFF ರಿಮೋಟ್ ಜಿಯೋ ಫೆನ್ಸಿಂಗ್, ಮತ್ತು ಕಾರ್ ಚಲಿಸುವ ಸ್ಥಳದ ಟ್ರ್ಯಾಕಿಂಗ್, ಸ್ಮಾರ್ಟ್ ವಾಚ್ ಸಂಪರ್ಕತೆ, ರಿಮೋಟ್ ವಾಹನ ಸ್ವಾಸ್ಥ್ಯ ಪತ್ತೆ ಹಚ್ಚುವಿಕೆ, ನೈಜ್ಯ ವೇಳೆ ಚಾರ್ಜ್ ಸ್ಥಿತಿಗತಿ, ವಾಹನ ಚಲಿಸುವ ಶಲಿಯ ವಿಶ್ಲೇಷಣೆ, ಒಳಗೊಂಡಂತೆ ಕಾರ್ ನ 45 ಗುಣಲಕ್ಷಣಗಳು ಅಂತರ್ ಸಂಪರ್ಕ ಹೊಂದಿವೆ. ಮೇಲಿನವುಗಳಲ್ಲದೆ,ಆಂಡ್ರಾಯ್ಡ್ ಆಟೊ ಮತ್ತು ಆಪಲ್ ಕಾರ್ ಪ್ಲೇ ಸಂಪರ್ಕತೆ ಯೊಂದಿಗಿನ  8-ಸ್ಪೀಕರ್ ಹರ್ಮನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ನ ಆನಂದವನ್ನೂ ಗ್ರಾಹಕರು ಅನುಭವಿಸಬಹುದು. Tiago.ev, IP67 ರೇಟೆಡ್ ಬ್ಯಾಟರಿ ಪ್ಯಾಕ್‌ಗಳ (ನೀರು ಮತ್ತು ಧೂಳು ನಿರೋಧಕ) ವಿವಿಧ ಸಂಯೋಜನೆಗಳಲ್ಲಿ ಮತ್ತು 24 kWh ಬ್ಯಾಟರಿ ಪ್ಯಾಕ್ ಸೇರಿದಂತೆ ಚಾರ್ಜಿಂಗ್ ಆಯ್ಕೆಗಳಲ್ಲಿ ಲಭ್ಯವಿದ್ದು, ದೀರ್ಘವಾದ ದೈನಂದಿನ ಚಾಲನಾ ಅಗತ್ಯಗಳಿಗಾಗಿ 315 ಕಿಮೀ ಪರಿಷ್ಕೃತ ಇಂಡಿಯನ್ ಡ್ರೈವಿಂಗ್ ಸೈಕಲ್ (MIDC) ಶ್ರೇಣಿಯನ್ನು ಕೊಡುತ್ತದೆ ಮತ್ತು ಸಣ್ಣ ಹಾಗೂ ಆಗಾಗಿನ ಪ್ರಯಾಣಕ್ಕಾಗಿ, 19.2kWh ಬ್ಯಾಟರಿ ಪ್ಯಾಕ್ ಅಂದಾಜು 257 ಕಿಮೀ MIDC ಶ್ರೇಣಿಯನ್ನು ನೀಡುತ್ತದೆ. ಎಲ್ಲಾ ಒತ್ತಡವನ್ನು ನಿವಾರಿಸಲು, ಲಿಕ್ವಿಡ್ ಕೂಲ್ಡ್ ಬ್ಯಾಟರಿ ಮತ್ತು ಮೋಟಾರ್ ಸಹ 8 ವರ್ಷಗಳು ಅಥವಾ 160,000 ಕಿಮೀ ವಾರಂಟಿಯೊಂದಿಗೆ ಬರುತ್ತದೆ.

click me!