2027ಕ್ಕೆ ದೇಶದಲ್ಲಿ ಡೀಸೆಲ್‌ ಕಾರು, ಜೀಪು ಬ್ಯಾನ್‌? ಎಲೆಕ್ಟ್ರಿಕ್‌, ಅನಿಲ ಆಧರಿತ ವಾಹನ ಬಳಕೆಗೆ ಶಿಫಾರಸು

Published : May 09, 2023, 07:56 AM ISTUpdated : May 09, 2023, 08:00 AM IST
2027ಕ್ಕೆ ದೇಶದಲ್ಲಿ ಡೀಸೆಲ್‌ ಕಾರು, ಜೀಪು ಬ್ಯಾನ್‌? ಎಲೆಕ್ಟ್ರಿಕ್‌, ಅನಿಲ ಆಧರಿತ ವಾಹನ ಬಳಕೆಗೆ ಶಿಫಾರಸು

ಸಾರಾಂಶ

ಅತ್ಯಂತ ಹೆಚ್ಚು ಹಸಿರು ಮನೆ ಅನಿಲ ಬಿಡುಗಡೆ ಮಾಡುವ ದೇಶಗಳ ಪೈಕಿ ಒಂದಾದ ಭಾರತ 2070ರ ವೇಳೆಗೆ ತನ್ನ ಇಂಧನ ಬಳಕೆಯನ್ನು ಸಂಪೂರ್ಣವಾಗಿ ನವೀಕರಿಸಬಹುದಾದ ಇಂಧನಗಳಿಗೆ ಪರಿವರ್ತಿಸುವ ಮೂಲಕ, ಶೂನ್ಯ ಇಂಗಾಲ ಬಿಡುಗಡೆ ತಲುಪುವ ಗುರಿ ಹಾಕಿಕೊಂಡಿದೆ

ನವದೆಹಲಿ (ಮೇ 9, 2023): ‘2027ರ ವೇಳೆಗೆ ದೇಶದ 10 ಲಕ್ಷ ಜನಸಂಖ್ಯೆಗಿಂತ ಹೆಚ್ಚಿನ ಬೃಹತ್‌ ಮತ್ತು ಹೆಚ್ಚು ಮಾಲಿನ್ಯಕಾರಕ ನಗರಗಳಲ್ಲಿ ಡೀಸೆಲ್‌ ಚಾಲಿತ ನಾಲ್ಕು ಚಕ್ರಗಳ ವಾಹನ ಬಳಕೆಯನ್ನು ನಿಷೇಧಿಸಬೇಕು. ಕೇವಲ ಎಲೆಕ್ಟ್ರಿಕ್‌ ಮತ್ತು ಅನಿಲ ಇಂಧನ ಆಧರಿತ ವಾಹನಗಳ ಬಳಕೆಗೆ ಅನುಮತಿ ನೀಡಬೇಕು’ ಎಂದು ಉನ್ನತ ಮಟ್ಟದ ಸಮಿತಿಯೊಂದು ಪೆಟ್ರೋಲಿಯಂ ಸಚಿವಾಲಯಕ್ಕೆ ಶಿಫಾರಸು ಮಾಡಿದೆ. ಇಂಧನ ಇಲಾಖೆಯ ಮಾರ್ಜಿ ಕಾರ್ಯದರ್ಶಿ ತರುಣ್‌ ಕಪೂರ್‌ ನೇತೃತ್ವದ ‘ಇಂಧನ ಪರಿವರ್ತನೆ ಸಲಹಾ ಸಮಿತಿ’ಯು ಪೆಟ್ರೋಲಿಯಂ ಸಚಿವಾಲಯಕ್ಕೆ ವಿವಿಧ ಹಂತಗಳಲ್ಲಿ ಹೇಗೆ ಡೀಸೆಲ್‌ ಮತ್ತು ಪೆಟ್ರೋಲ್‌ ಬಳಕೆಯನ್ನು ಕಡಿಮೆ ಮಾಡಬಹುದು ಎಂಬುದರ ಕುರಿತು ವಿಸ್ತೃತ ವರದಿಯನ್ನು ಸಲ್ಲಿಕೆ ಮಾಡಿದ್ದು, ಅದರಲ್ಲಿ ಈ ಅಂಶಗಳಿವೆ.

ಭಾರತದ ಗುರಿ ಏನು?:
ಅತ್ಯಂತ ಹೆಚ್ಚು ಹಸಿರು ಮನೆ ಅನಿಲ ಬಿಡುಗಡೆ ಮಾಡುವ ದೇಶಗಳ ಪೈಕಿ ಒಂದಾದ ಭಾರತ 2070ರ ವೇಳೆಗೆ ತನ್ನ ಇಂಧನ ಬಳಕೆಯನ್ನು ಸಂಪೂರ್ಣವಾಗಿ ನವೀಕರಿಸಬಹುದಾದ ಇಂಧನಗಳಿಗೆ ಪರಿವರ್ತಿಸುವ ಮೂಲಕ, ಶೂನ್ಯ ಇಂಗಾಲ ಬಿಡುಗಡೆ ತಲುಪುವ ಗುರಿ ಹಾಕಿಕೊಂಡಿದೆ. ಆದರೆ ಸದ್ಯ ದೇಶದಲ್ಲಿ ಬಳಕೆಯಾಗುತ್ತಿರುವ ಸಂಸ್ಕೃರಿತ ಇಂಧನದ ಪೈಕಿ ಶೇ.20ರಷ್ಟು ಡೀಸೆಲ್‌ನ ಪಾಲಿದೆ. ಇದರಲ್ಲಿ ಶೇ.80ರಷ್ಟು ಪಾಲು ಸಾರಿಗೆ ವಲಯಕ್ಕೆ ಸೇರಿದೆ. ಹೀಗಾಗಿ ಈ ವಲಯದಲ್ಲಿನ ಬಳಕೆ ಕಡಿತವು ಒಟ್ಟಾರೆ ಪರಿಸರ ಮಾಲಿನ್ಯ ಕಡಿಮೆ ಮಾಡುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ.

ಇದನ್ನು ಓದಿ: ಈ ಊರಲ್ಲಿ ಇನ್ಮುಂದೆ ಸಂಪೂರ್ಣ ಎಲೆಕ್ಟ್ರಿಕ್‌ ವಾಹನಗಳ ಕಾರುಬಾರು; ಪೆಟ್ರೋಲ್‌ ವೆಹಿಕಲ್ಸ್ ನೋಂದಣಿ ನಿಷೇಧ

ವರದಿಯಲ್ಲಿ ಏನಿದೆ?:

  • 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಮತ್ತು ಹೆಚ್ಚು ಮಾಲಿನ್ಯ ಹೊಂದಿದ ನಗರಗಳಲ್ಲಿ 2027ರ ವೇಳೆಗೆ ಡೀಸೆಲ್‌ ಚಾಲಿತ ನಾಲ್ಕು ಚಕ್ರಗಳ ವಾಹನ ಬಳಕೆ ನಿಷೇಧಿಸಬೇಕು.
  • 2024ರ ಬಳಿಕ ಯಾವುದೇ ಹೊಸ ಡೀಸೆಲ್‌ ಚಾಲಿತ ಬಸ್‌ಗಳನ್ನು ಖರೀದಿಸಿ ಬಳಕೆ ಮಾಡಬಾರದು. 2030ರ ವೇಳೆಗೆ ಎಲೆಕ್ಟ್ರಿಕ್‌ ಹೊರತುಪಡಿಸಿದ ಇತರೆ ಯಾವುದೇ ಇಂಧನ ಬಳಸಿದ ಬಸ್‌ಗಳನ್ನು ನಗರ ಸಾರಿಗೆ ವ್ಯವಸ್ಥೆಗೆ ಸೇರ್ಪಡೆ ಮಾಡಬಾರದು.
  • 2024ರ ಬಳಿಕ ಕೇವಲ ಎಲೆಕ್ಟ್ರಿಕ್‌ ‘ಸಿಟಿ ಡೆಲಿವರಿ ವಾಹನ’ಗಳ ನೋಂದಣಿ ಮಾಡಬೇಕು. ಸರಕು ಸಾಗಣೆಗೆ ರೈಲ್ವೆ ಸೇವೆ ಮತ್ತು ಗ್ಯಾಸ್‌ ಚಾಲಿತ ಟ್ರಕ್‌ಗಳ ಸೇವೆಯನ್ನು ಹೆಚ್ಚಾಗಿ ಬಳಸಬೇಕು.
  • ದೂರ ಪ್ರಯಾಣದ ಬಸ್‌ಗಳಿಗೆ ಎಲೆಕ್ಟ್ರಿಕ್‌ ಬಳಸಬೇಕು.
  • ಮುಂಬರುವ ದಿನಗಳಲ್ಲಿ ಅನಿಲಕ್ಕೆ ಬೇಡಿಕೆ ಹೆಚ್ಚುವ ಕಾರಣ, ಕನಿಷ್ಠ 2 ತಿಂಗಳ ಬೇಡಿಕೆ ಪೂರೈಸುವಷ್ಟು ಪ್ರಮಾಣದ ಅನಿಲವನ್ನು ಸಂಗ್ರಹಿಸುವ ಭೂಗತ ಅನಿಲ ಸಂಗ್ರಹಾಗಾರ ಸ್ಥಾಪಿಸಬೇಕು.
  • ಎಲೆಕ್ಟ್ರಿಕ್‌ ವಾಹನಗಳ ಬಳಕೆ ಉತ್ತೇಜಿಸಲು ಫೇಮ್‌ ಯೋಜನೆಯಡಿ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಇನ್ನಷ್ಟು ಅವಧಿಗೆ ವಿಸ್ತರಿಸಬೇಕು.

ಇದನ್ನೂ ಓದಿ: ಸಗಣಿ ಗ್ಯಾಸ್‌ ಬಳಸಿ ಓಡಬಲ್ಲ ಕಾರು ನಿರ್ಮಾಣಕ್ಕೆ ಮಾರು​ತಿ ರೆಡಿ..!

PREV
Read more Articles on
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ