ನವದೆಹಲಿ(ಜ.11): ಟಾಟಾ ಮೋಟಾರ್ಸ್(Tata Motors) ಕಳೆದ ವರ್ಷ ಟಾಟಾ ಪಂಚ್ ಹೊಸ ಕಾರು ಸೇರಿದಂತೆ ಅಪ್‌ಡೇಟೆಡ್ ಕಾರುಗಳನ್ನು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಇದೀಗ ಹೊಸ ವರ್ಷದಲ್ಲಿ 6 SUV ಕಾರುಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇದರಲ್ಲಿ ಒಂದು ಹೊಸ SUV ಕಾರು ಹಾಗೂ ಎರಡು ಒಂದು SUV ಕಾರು ಸೇರಿದೆ. ಹ್ಯಾರಿಯರ್, ಸಫಾರಿ ಸೇರಿದಂತೆ ಇತರ ಕೆಲ ಟಾಟಾ ಕಾರು(Tata SUV car) ಅಪ್‌ಡೇಟೆಡ್ ವರ್ಶನ್ ಕೂಡ ಸೇರಿವೆ.
ಟಾಟಾ ಸಿಯೆರಾ ಇವಿ
ಟಾಟಾ ಈಗಾಗಲೇ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಹಾಗೂ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಇದರ ಬೆನ್ನಲ್ಲೆ ನೆಕ್ಸಾನ್ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. 500 ಕಿ.ಮೀ ಮೈಲೇಜ್ ಸಾಮರ್ಥ್ಯದ ಟಾಟಾ ಅಲ್ಟ್ರೋಜ್ ಕಾರು 10 ರಿಂದ 12 ಲಕ್ಷ ರೂಪಾಯಿ ಒಳಗಿರಲಿದೆ ಎಂದು ಟಾಟಾ ಹೇಳಿದೆ. ಇದರ ಬೆನ್ನಲ್ಲೇ ಟಾಟಾ ತನ್ನ ಐಕಾನಿಕ್ ವಾಹನವಾಗಿರುವ ಟಾಟಾ ಸಿಯೆರಾ ಕಾರನ್ನು ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಟಾಟಾ ಸಿಯೆರಾ ಅತ್ಯಂತ ಆಕರ್ಷಕ ಕಾರಾಗಿದ್ದು, ಗರಿಷ್ಠ ಮೈಲೇಜ್ ಸಾಮರ್ಥ್ಯ ಹಾಗೂ ಕೈಗೆಟುಕುವ ದರದಲ್ಲಿ ಬಿಡುಗಡೆ ಮಾಡಲು ಟಾಟಾ ಮುಂದಾಗಿದೆ.
undefined
Tata Car Offers ಟಾಟಾ ಕಾರು ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್, ಜನವರಿ ತಿಂಗಳ ಆಫರ್ ಘೋಷಣೆ!
ಟಾಟಾ ಮೋಟಾರ್ಸ್ ಕಳೆದ ವರ್ಷ ಟಾಟಾ ಪಂಚ್ ಮೈಕ್ರೋ ಎಸ್‌ಯುವಿ ಕಾರನ್ನು ಬಿಡುಗಡೆ ಮಾಡಿದೆ. ಸಣ್ಣ ಕಾರುಗಳ ಪೈಕಿ ಟಾಟಾ ಪಂಚ್ ಭಾರಿ ಯಶಸ್ಸು ಸಾಧಿಸಿದೆ. 5 ಸ್ಟಾರ್ ರೇಟಿಂಗ್ ಪಡೆದಿದೆ. 1.2 ಲೀಟರ್ ಹೊಂದಿರುವ ಟಾಟಾ ಪಂಚ್ ಕಾರನ್ನು ಈ ವರ್ಷ ಟರ್ಬೋ ಪೆಟ್ರೋಲ್ ಎಂಜಿನ್ ರೂಪದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ.
ಟಾಟಾ ಮೋಟಾರ್ಸ್ ಭಾರತದ ಮಾರುಕಟ್ಟೆಗೆ ಮತ್ತೊಂದು ಸಬ್‌ಕಾಂಪಾಕ್ಟ್ SUV ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಟಾಟಾ ನೆಕ್ಸಾನ್ ಕಾರು, ಮಾರುತಿ ಬ್ರೆಜಾ, ಹ್ಯುಂಡೈ ವೆನ್ಯೂ ಸೇರಿದಂತೆ ಸಬ್ ಕಾಂಪಾಕ್ಟ್ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ. ಈ ವರ್ಷ ಹೊಸದಾಗಿ ಬಿಡುಗಡೆ ಮಾಡಲಿರುವ ನೂತನ SUV ಕಾರು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆ ಮಾಡುತ್ತಿದೆ. ಈ ಮೂಲಕ ಭಾರತದ SUV ಮಾರುಕಟ್ಟೆಯನ್ನು ಸಂಪೂರ್ಣವಾಗಿ ಆಕ್ರಮಿಸಿಕೊಳ್ಳಲು ಟಾಟಾ ಮುಂದಾಗಿದೆ.
Safety Car 120ರ ವೇಗದಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು 4 ಪಲ್ಟಿಯಾದ ಟಾಟಾ ಪಂಚ್, ಐವರು ಪ್ರಯಾಣಿಕರು ಸೇಫ್!
ಟಾಟಾ ನೆಕ್ಸಾನ್ ಇವಿ
ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿರುವ ಅತ್ಯಂತ ಯಶಸ್ವಿ ಕಾರು ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು, ಈ ವರ್ಷ ಹೊಸ ಮೈಲೇಜ್ ರೇಂಜ್‌ನೊಂದಿಗೆ ಬಿಡುಗಡೆಯಾಗಲಿದೆ. ಟಾಟಾ ನೆಕ್ಸಾನ್ ಇವಿ ಸದ್ಯ 312 ಕಿಮೀ ಮೈಲೇಜ್ ರೇಂಜ್ ಹೊಂದಿದೆ. ಆದರೆ ನೂತನ ನೆಕ್ಸಾನ್ ಎಲೆಕ್ಟ್ರಿಕ್ ಕಾರು 400 ರಿಂದ 500 ಕಿಲೋಮೀಟರ್ ಮೈಲೇಜ್ ರೇಂಜ್ ಸಾಮರ್ಥ್ಯ ಇರಲಿದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ. ಈ ಮೂಲಕ ಭವಿಷ್ಯದ ಎಲೆಕ್ಟ್ರಿಕ್ ಕಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಅಗ್ರಸ್ಥಾನ ಉಳಿಸಿಕೊಳ್ಳಲು ಸಜ್ಜಾಗಿದೆ.
ಟಾಟಾ ಹ್ಯಾರಿಯರ್ ಪೆಟ್ರೋಲ್
ಟಾಟಾ ಹ್ಯಾರಿಯರ್ SUV ಕಾರು ಭಾರತದಲ್ಲಿ ಅತೀ ಜನಪ್ರಿಯ ಕಾರಾಗಿದೆ. ಸದ್ಯ ಹ್ಯಾರಿಯರ್ ಡೀಸೆಲ್ ಎಂಜಿನ್‌ನಲ್ಲಿ ಮಾತ್ರ ಲಭ್ಯವಿದೆ. ಈಗಾಗಲೇ ಟಾಟಾ ಹ್ಯಾರಿಯರ್ ಪೆಟ್ರೋಲ್ ಕಾರು ಹಲವು ರೋಡ್ ಟೆಸ್ಟ್ ಯಶಸ್ವಿಯಾಗಿ ಮುಗಿಸಿದೆ. ನೂತನ ಪೆಟ್ರೋಲ್ ವರ್ಶನ ಕಾರು 1.5 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿರುವ ಸಾಧ್ಯತೆ ಇದೆ. 160 bhp ಪವರ್ ಸಾಮರ್ಥ್ಯದ ಹ್ಯಾರಿಯರ್ ಪೆಟ್ರೋಲ್ ವರ್ಶನ್ ಕಾರನ್ನು ಟಾಟಾ ಈ ವರ್ಷ ಮೊದಲಾರ್ಧದಲ್ಲಿ ಬಿಡುಗಡೆ ಮಾಡಲಿದೆ.
ಟಾಟಾ ಸಫಾರಿ ಪೆಟ್ರೋಲ್
ಟಾಟಾ ಸಫಾರಿ ಕಾರು 7 ಸೀಟರ್ ಕಾರಾಗಿದೆ. ಟಾಟಾ ತನ್ನ ಹಳೆ ಐಕಾನಿಕ ಸಫಾರಿ ಕಾರನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡಿದೆ. ಹೆಚ್ಚು ಕಡಿಮೆ ಹ್ಯಾರಿಯರ್ ಕಾರನ್ನೇ ಹೋಲುವ ನೂತನ ಸಫಾರಿ ಸದ್ಯ ಡೀಸೆಲ್ ಎಂಜಿನ್‌ನಲ್ಲಿ ಮಾತ್ರ ಲಭ್ಯವಿದೆ. ಸಫಾರಿ ಪೆಟ್ರೋಲ್ ಕಾರಿನಲ್ಲೂ 1.5 ಲೀಟರ್ ಟರ್ಬೋ ಪೆಟ್ರೋಲ್ ಕಾರನ್ನು ಬಿಡುಗಡೆ ಮಾಡಲಿದೆ.