ಚೀನಾ(ಜ.11): ಆ್ಯಪಲ್, ಶಿಯೋಮಿ ಸೇರಿದಂತೆ ಕೆಲ ಸ್ಮಾರ್ಟ್‌ಫೋನ್ ಕಂಪನಿಗಳು ಇದೀಗ ಎಲೆಕ್ಟ್ರಿಕ್ ಕಾರು ಉತ್ಪಾದನೆಯಲ್ಲಿ ತೊಡಗಿದೆ. ಆದರೆ ಹುವೈ(Huawei) ಅತ್ಯಾಧುನಿಕ ಹಾಗೂ ಅತೀ ಆಕರ್ಷಕ ಲಕ್ಸುರಿ ಎಲೆಕ್ಟ್ರಿಕ್ ಕಾರು(Luxury Electric car) ಗ್ರಾಹಕರ ಕೈತಲುಪಲು ಸಜ್ಜಾಗಿದೆ. ಹೌದು ಹುವೈ AITO M5 ಎಲೆಕ್ಟ್ರಿಕ್ ಕಾರಿನ ಎರಡನೇ ಬುಕಿಂಗ್ ಆರಂಭಗೊಂಡಿದೆ. ಫೆಬ್ರವರಿ ತಿಂಗಳ 20ರಿಂದ ಬುಕ್ ಮಾಡಿದ ಗ್ರಾಹಕರಿಗೆ ಕಾರು ಡೆಲಿವರಿ(Car Delivery) ಆರಂಭಗೊಳ್ಳಲಿದೆ ಎಂದು ಹುವೈ ಹೇಳಿದೆ.
ಡಿಸೆಂಬರ್ 23 ರಂದು ಚೀನಾದ ಹುವೈ ಸ್ಮಾರ್ಟ್‌ಫೋನ್(Smartphone) ಹಾಗೂ ಟೆಲಿಕಾಂ ಉತ್ಪನ್ನಗಳ ಕಂಪನಿ ಹಲವು ವಿಶೇಷತೆಗಳ AITO M5 ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. ಇದು ನೇರವಾಗಿ ಟೆಸ್ಲಾ ವೈ(Tesla Y model) ಮಾಡೆಲ್ ಹಾಗೂ ಪೊರ್ಶೆ ಮಕಾನ್(Porsche Macan) ಕಾರಿಗೆ ಪ್ರತಿಸ್ಪರ್ಧಿಯಾಗಿದೆ. ಹೀಗಾಗಿಯೇ ಇದು ಲಕ್ಸುರಿ ಎಲೆಕ್ಟ್ರಿಕ್ ಕಾರು. ಆದರೆ ಇತರ ಎಲ್ಲಾ ಎಲೆಕ್ಟ್ರಿಕ್ ಕಾರಗಳಿಗಿಂತ ಹುವೈ AITO M5 ಕಾರಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.
undefined
Solar Powered Car 1,000 ಕಿ.ಮೀ ಮೈಲೇಜ್, ಸೋಲಾರ್ ಚಾಲಿತ ಮರ್ಸಿಡಿಸ್ ಬೆಂಜ್ ವಿಶನ್ EQXX ಕಾರು ಅನಾವರಣ!
ಚೀನಾದಲ್ಲಿ ಬಿಡುಗಡೆಯಾಗಿರುವ ಈ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 1,200 ಕಿಲೋಮೀಟರ್ ಮೈಲೇಜ್ ರೇಂಜ್(Mileage Range) ನೀಡಲಿದೆ. ಚೀನಾದಲ್ಲಿ ಇದರ ಬೆಲೆ ಸರಿಸುಮಾರು 33,07,887 ರೂಪಾಯಿ. ಚೀನಾ ಸರ್ಕಾರದ ಎಲೆಕ್ಟ್ರಿಕ್ ಸಬ್ಸಿಡಿ ಒಳಗೊಂಡರೆ ಈ ಕಾರು 29.45 ಲಕ್ಷ ರೂಪಾಯಿಗೆ ಲಭ್ಯವಾಗಲಿದೆ. ಇದರ ಪ್ರತಿಸ್ಪರ್ಧಿಗಳಾದ ಟೆಸ್ಲಾ ವೈ ಮಾಡೆಲ್ ಹಾಗೂ ಪೊರ್ಶೆ ಮಕಾನ್ ಕಾರಿನ ಬೆಲೆ 1 ಕೋಟಿ ರೂಪಾಯಿಗೂ ಅಧಿಕವಾಗಿದೆ. ಹೀಗಾಗಿ ಈ ಲಕ್ಸುರಿ ಕಾರು ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.
ಟೆಸ್ಲಾ, ಪೊರ್ಶೆ ಸೇರಿದಂತೆ ಇತರ ಎಲ್ಲಾ ಲಕ್ಸುರಿ ಎಲೆಕ್ಟ್ರಿಕ್ ಕಾರಿಗಿಂತ ಹೆಚ್ಚಿನ ಫೀಚರ್ಸ್ ಹಾಗೂ ಆರಾಮದಾಯಕ ಪ್ರಯಾಣ ಹುವೈ AITO M5 ಕಾರು ಒದಗಿಸಲಿದೆ. ಇದೇ ಕೈಗೆಟುಕುವ ಬೆಲೆ, ಮೈಲೇಜ್, ಫೀಚರ್ಸ್ ಕಾರಣದಿಂದ ಡಿಸೆಂಬರ್ 23 ರಂದು ಬಿಡುಗಡೆಯಾದ 93 ಗಂಟೆಗಳಲ್ಲಿ 6,500 ಬುಕಿಂಗ್ ಕಂಡಿತ್ತು. ಬಳಿಕ ಬುಕಿಂಗ್ ಕ್ಲೋಸ್ ಮಾಡಲಾಗಿತ್ತು. ಇದೀಗ ಮತ್ತೆ ಹುವೈ AITO M5 ಕಾರಿನ ಬುಕಿಂಗ್ ಆರಂಭಗೊಂಡಿದೆ.
Tata Electric Car sales ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಟಾಟಾಗೆ ಮೊದಲ ಸ್ಥಾನ, ಶೇ.439 ಏರಿಕೆ ಮೂಲಕ ದಾಖಲೆ!
ಹುವೈ ಸ್ಮಾರ್ಟ್‌ಫೋನ್ ಕಂಪನಿ ಹಾಗೂ ಚೀನಾದ ಸೀರೆಸ್(China Seres) ಬ್ರ್ಯಾಂಡ್ ಈ ಕಾರನ್ನು ಅಭಿವೃದ್ಧಿಪಡಿಸಿದೆ. ಇದು SUV ಎಲೆಕ್ಟ್ರಿಕ್ ಕಾರಾಗಿದೆ. ಮುಂಭಾಗದ ಗ್ರಿಲ್, LED ಹೈಡ್‌ಲ್ಯಾಂಪ್ಸ್ ಹಾಗೂ ವರ್ಟಿಕಲ್ LED DRL ಕಾರಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಗಾತ್ರದಲ್ಲೂ ಹುವೈ AITO M5 ಕಾರು ದೊಡ್ಡಗಾದಿದೆ. ಕಾರಣ 2.88 ಮೀಟರ್ ವ್ಹೀಲ್‌ಬೇಸ್, 4.77 ಮೀಟರ್ ಉದ್ದ ಹೊಂದಿದೆ. ಇನ್ನು ಟೈಲ್‌ಲ್ಯಾಂಪ್ ಸೇರಿದಂತೆ ಕಾರಿನ ವಿನ್ಯಾಸ ಆಕರ್ಷಕವಾಗಿದೆ.
Huawei Aito M5 ಸ್ಮಾರ್ಟ್‌ಫೋನ್ ಕಂಪನಿ ಹುವೈಯಿಂದ 1,200 ಕಿ.ಮೀ ಮೈಲೇಜ್ ನೀಡಬಲ್ಲ ಹೈಬ್ರಿಡ್ SUV ಕಾರು ಬಿಡುಗಡೆ!
ಕಾರಿನ ಇಂಟಿರಿಯರ್ ಕೂಡ ಅಷ್ಟೇ ಆಕರ್ಷಕವಾಗಿದೆ. 15.6 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹೊಂದಿದೆ. ಜೊತೆಗೆ ಹುವೈ ಹಾರ್ಮೊನಿ OS ಆಪರೇಟಿಂಗ್ ಸಿಸ್ಟಮ್ ಹೊಂದಿದೆ. L2 +ಲೆವಲ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಮಮ್, ಬ್ಲೂಟೂಥ್ ಕಾರ್ ಕೀ, 3ಡಿ ಫೇಸ್ ರಿಕಗ್ನೀಶನ್, ಆಟೋ ಲಾಗಿನ್ ಅಕೌಂಟ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ.
ಹುವೈ AITO M5 ಎಲೆಕ್ಟ್ರಿಕ್ ಕಾರು 204 hp ಪವರ್ ಹೊಂದಿದೆ. 40 kWh ಬ್ಯಾಟರಿ ಪ್ಯಾಕ್ ಬಳಸಲಾಗಿದೆ. 0-100 kmph ವೇಗವನ್ನು ಕೇವ 4.4 ಸೆಕೆಂಡ್‌ನಲ್ಲಿ ಪಡೆಯಲಿದೆ. ಇದೀಗ ಮುಂಚೂಣಿ ಎಲೆಕ್ಟ್ರಕ್ ಕಾರುಗಳಿಗೆ ಈ ಹುವೈ ಕಾರು ಪೈಪೋಟಿ ನೀಡಲಿದೆ.