Upcoming Cars ಸಫಾರಿ ಡಾರ್ಕ್, ಟಿಯಾಗೋ CNG, ಮುಂದಿನ ವಾರ ಎರಡು ಟಾಟಾ ಕಾರು ಬಿಡುಗಡೆ!

By Suvarna News  |  First Published Jan 16, 2022, 4:11 PM IST
  • ಜನಪ್ರಿಯ ಟಾಟಾ ಸಫಾರಿ ಡಾರ್ಕ್ ಎಡಿಶನ್ ಬಿಡುಗಡೆ
  • ಟಾಟಾದ ಮೊದಲ CNG ಕಾರು ಮುಂದಿನ ವಾರ ಲಾಂಚ್
  • ಹಲವು ವಿಶೇಷತೆ ಹಾಗೂ ಭಾರಿ ಸಂಚಲನ ಮೂಡಿಸಿರುವ ಕಾರು

ನವದೆಹಲಿ(ಜ.16): ಟಾಟಾ ಮೋಟಾರ್ಸ್(Tata Motors) ಹೊಸ ವರ್ಷದಲ್ಲಿ ಹೊಸ ಹೊಸ ಕಾರು(Car) ಬಿಡುಗಡೆ ಮಾಡುತ್ತಿದೆ. ಇದೀಗ ಜನವರಿ 3ನೇ ವಾರದಲ್ಲಿ ಟಾಟಾ ಎರಡು ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಈ ಎರಡು ಕಾರು ಹಲವು ವಿಶೇಷತೆಗಳನ್ನೊಳಗೊಂಡಿದೆ. ಕಾರಣ ಐಕಾನಿಕ್ ಸಫಾರಿ ಕಾರನ್ನು ಡಾರ್ಕ್ ಎಡಿಶನ್ ಮೂಲಕ ಟಾಟಾ ಬಿಡುಗಡೆ ಮಾಡುತ್ತಿದೆ. ಇದರ ಜೊತೆಗೆ ಟಾಟಾ ಮೋಟಾರ್ಸ್ ಇದೇ ಮೊದಲ ಬಾರಿಗೆ  CNG ಕಾರು ಬಿಡುಗಡೆ ಮಾಡುತ್ತಿದೆ.

ಮುಂದಿನ ವಾರದಲ್ಲಿ ಟಾಟಾ ಮೋಟಾರ್ಸ್ ಸಫಾರಿ ಡಾರ್ಕ್ ಎಡಿಶನ್(Tata Safari Dark Edition ಜೊತೆಗೆ ಟಾಟಾ ಟಿಯಾಗೋ  CNG ಕಾರು(Tata Tiago CNG) ಮಾರುಕಟ್ಟೆ ಪ್ರವೇಶಿಸುತ್ತಿದೆ. ನೂತನ ಕಾರಿನ ವಿಶೇಷತೆ ಹಾಗೂ ಇತರ ಮಾಹಿತಿ ಇಲ್ಲಿದೆ.

Tap to resize

Latest Videos

undefined

ಟಾಟಾ ಟಿಯಾಗೋ  CNG 
ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ದುಬಾರಿಯಾಗುತ್ತಿದ್ದಂತೆ ಜನರು ಎಲೆಕ್ಟ್ರಿಕ್ ಹಾಗೂ  CNG  ಕಾರಿನತ್ತ ವಾಲುತ್ತಿದ್ದಾರೆ. ಸದ್ಯ ಎಲೆಕ್ಟ್ರಿಕ್ ಕಾರುಗಳು ಕೊಂಚ ದುಬಾರಿಯಾಗಿರುವ ಕಾರಣ ಮುಂದಿರುವ ಏಕೈಕ ಆಯ್ಕೆ  CNG ಕಾರು. ಸದ್ಯ ಮಾರುತಿ, ಹ್ಯುಂಡೈ ಕಂಪನಿಗಳು ಭಾರತದಲ್ಲಿ  CNG ಕಾರುಗಳನ್ನು ಬಿಡುಗಡೆ ಮಾಡಿದೆ. ಇದೀಗ ಟಾಟಾ ಇದೇ ಮೊದಲ ಬಾರಿಗೆ  CNG ಕಾರು ಬಿಡುಗಡೆ ಮಾಡುತ್ತಿದೆ. ಟಾಟಾ ಟಿಯೋಗೋ  CNG ಕಾರು ಕೈಗೆಟುಕುವ ದರದ  CNG ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಜನವರಿ 19 ರಂದು ಟಾಟಾ ಟಿಯಾಗೋ  CNG ಕಾರು ಬಿಡುಗಡೆಯಾಗಲಿದೆ. ಟಾಟಾ ಟಿಯಾಗೋ ಕಾರಿನ ಬೆಲೆ 6 ರಿಂದ 6.5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಟಿಯಾಗೋ  CNG ಕಾರು 12 ಕೆಜಿ  CNG ಸಿಲಿಂಡರ್ ಹೊಂದಿದೆ. ಈ ಸಿಲಿಂಡರ್ 8 ರಿಂದ 9 ಕೆಜಿ CNG ಸಾಮರ್ಥ್ಯ ಹೊಂದಿದೆ.  1.2 ಲೀಟರ್ ನ್ಯಾಚ್ಯುರಲ್ ಆಸ್ಪೈರ್ ಪೆಟ್ರೋಲ್ ಎಂಜಿನ್ ಹೊಂದಿರುವ  ಟಿಯಾಗೋ  CNG ಕಾರು, 85bhp ಪವರ್ ಹಾಗೂ 113Nm  ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಟಿಯಾಗೋ  CNG ಕಾರಿನ ಬೆನ್ನಲ್ಲೇ ಟಿಗೋರ್ CNG ಕಾರು ಬಿಡುಗಡೆಯಾಗಲಿದೆ.

ಸಫಾರಿ ಡಾರ್ಕ್ ಎಡಿಶನ್:
ಟಾಟಾ ಸಫಾರಿ ಕಾರು ಕಳೆದ ವರ್ಷ ದೇಶದಲ್ಲಿ ಭಾರಿ ಸಂಚಲನ ಮೂಡಿಸಿದೆ. 7 ಸೀಟರ್ ಕಾರು ಇದಾಗಿದ್ದು, 5 ಸ್ಟಾರ್ ಸುರಕ್ಷತೆಯನ್ನು ಪಡೆದಿದೆ. ಇದೀಗ ಟಾಟಾ ಸಫಾರಿ ಡಾರ್ಕ್ ಎಡಿಶನ್ ಬಿಡುಗಡೆ ಮಾಡುತ್ತಿದೆ. ನೂತನ ಕಾರಿನಲ್ಲಿ ಕೆಲ ಹೆಚ್ಚುವರಿ ಫೀಚರ್ಸ್ ಸೇರಿಸಲಾಗಿದೆ. ಜನವರಿ 17 ರಂದು ಟಾಟಾ ಸಫಾರಿ ಡಾರ್ಕ್ ಎಡಿಶನ್ ಕಾರು ಬಿಡುಗಡೆಯಾಗುತ್ತಿದೆ.

ಟಾಟಾ ಹ್ಯಾರಿಯರ್ ಬಿಡುಗಡೆಯಾದ ಬಳಿಕ ಟಾಟಾ ಇದೇ ರೀತಿ ಡಾರ್ಕ್ ಎಡಿಶನ್ ಕಾರು ಬಿಡುಗಡೆ ಮಾಡುತ್ತಿದೆ. ಇದೀಗ ಸಫಾರಿ ಸರದಿ. ಕಾರಿನ ಹೊರ ಹಾಗೂ ಒಳಭಾಗದಲ್ಲಿ ಕೆಲ ಬದಾಲಾವಣೆಗಳನ್ನು ಕಾಣಲಿದೆ. ಸಫಾರಿ ಡಾರ್ಕ್ ಎಡಿಶನ್ ಕಾರು 2.0 ಲೀಟರ್ ಡೀಸೆಲೆ್ ಎಂಜಿನ್ ಹೊಂದಿದೆ. 168bhp ಪವರ್ ಹಾಗೂ 350Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆ ಹೊಂದಿದೆ.
 

click me!