315 ಕಿ.ಮೀ ಮೈಲೇಜ್, 21,000 ರೂಗೆ ಬುಕ್ ಮಾಡಿ ದೇಶದ ಕಡಿಮೆ ಬೆಲೆಯ ಟಾಟಾ ಟಿಯಾಗೋ ಇವಿ!

By Suvarna NewsFirst Published Oct 10, 2022, 5:37 PM IST
Highlights

ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು ದೇಶದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಕಾರಣ ಇದು ಭಾರತದಲ್ಲಿ ಲಭ್ಯವಿರುವ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರಿಗಿದೆ. ಇಂದಿನಿಂದ ಬುಕಿಂಗ್ ಆರಂಭಗೊಂಡಿದ್ದು, 21 ಸಾವಿರ ರೂಗೆ ಕಾರು ಬುಕ್ ಮಾಡಿಕೊಳ್ಳಬಹುದು.
 

ಬೆಂಗಳೂರು(ಅ.10):  ಟಾಟಾ ಮೋಟರ್ಸ್ ಇತ್ತೀಚೆಗೆ ಬಿಡುಗಡೆ ಮಾಡಿದ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿನ ಬುಕಿಂಗ್ ಇಂದಿನಿಂದ(ಅ.10) ಆರಂಭಗೊಂಡಿದೆ. ದೇಶದ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಅನ್ನೋ ಹೆಗ್ಗಳಿಕೆಗೆ ಟಿಯಾಗೋ ಇವಿ ಪಾತ್ರವಾಗಿದೆ. ಟಿಗೋರ್ ಇವಿ ಬೆಲೆ  8.49 ಲಕ್ಷ ರೂಪಾಯಿಂದ(ಎಕ್ಸ್‌ಶೋ ರೂಂ)) ಆರಂಭಗೊಳ್ಳುತ್ತಿದೆ.  ವಿಶೇಷ ದರದಲ್ಲಿ ಮೊದಲ 10,000  ಗ್ರಾಹಕರಿಗೆ ಪರಿಚಯಿಸಲಾಗುತ್ತಿದ್ದು, ಇವರುಗಳ ಪೈಕಿ, 2000 ನೆಕ್ಸಾನ್ ಇವಿ ಮತ್ತು ಟೈಗೋರ್ ಇವಿ ವಾಹನಗಳ ಪ್ರಸ್ತುತದ ಮಾಲೀಕರಿಗೆ ಮೀಸಲಿಡಲಾಗುತ್ತದೆ. 
 
•            Tiago.ev ಗೆ ಬುಕಿಂಗ್ಸ್ ಅಕ್ಟೋಬರ್ 10ರಿಂದ ಆರಂಭಗೊಂಡಿದೆ
•            ಯಾವುದೇ ಅಧಿಕೃತ ಟಾಟಾ ಮೋಟರ್ಸ್ ಡೀಲರ್‍ಶಿಪ್‍ನಲ್ಲಿ ಅಥವಾ ಅಧಿಕೃತ ವೆಬ್‌ಸೈಟ್ ಮೂಲಕ ರೂ. 21,000 ಮೊತ್ತವನ್ನು ಪಾವತಿಸುವ ಮೂಲಕ ಬುಕಿಂಗ್ ಮಾಡಿಕೊಳ್ಳಬಹುದು.
•            Tiago.ev,  ಅಕ್ಟೋಬರ್ 2022ರಲ್ಲಿ ಎಲ್ಲಾ ಪ್ರಮುಖ ನಗರಗಳ ಮುಂಚೂಣಿ ಮಾಲ್‍ಗಳಾದ್ಯಂತ ಪ್ರದರ್ಶನಗೊಳ್ಳುತ್ತದೆ.
•            ಡಿಸಂಬರ್ 2022ರ ನಂತರದಿಂದ ಗ್ರಾಹಕ ಟೆಸ್ಟ್ ಡ್ರೈವ್‍ಗಳು ಲಭ್ಯವಾಗಲಿವೆ.
•            Tiago.evದ ಡೆಲಿವರಿಗಳು ಜನವರಿ 2023ರಿಂದ ಆರಂಭಗೊಳ್ಳುತ್ತದೆ.
•            ಆಯ್ಕೆ ಮಾಡಿಕೊಂಡ ವೈವಿಧ್ಯ ಹಾಗೂ ಬಣ್ಣದ ಜೊತೆಗೆ ಮಾಡಲಾದ ಸಮಯ ಮತ್ತು ದಿನಾಂಕದ ಆಧಾರದ ಮೇಲೆ ವಾಹನದ ಡೆಲಿವರಿಯ ದಿನಾಂಕ ನಿಗದಿಯಗುತ್ತದೆ.
•            ಡೆಲಿವರಿಯ ಸಮಯದಲ್ಲಿ ಗ್ರಾಹಕರ ನಿರೀಕ್ಷೆಗಳನ್ನು ಪೂರೈಸುವ ಸಲುವಾಗಿ ಗ್ರಾಹಕ ಅಭಿಪ್ರಾಯ ಮಾಹಿತಿಯ ಆಧಾರದ 24kWh ಬ್ಯಾಟರಿ ಪ್ಯಾಕ್ ವೈವಿಧ್ಯದ ಉತ್ಪಾದನೆಯನ್ನು ಆದ್ಯತೆಗೊಳಿಸಲಾಗಿದೆ.

ಅತೀ ಕಡಿಮೆ ಬೆಲೆಗೆ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು, ಹೊಸ ಇತಿಹಾಸ ರಚಿಸಿದ ಟಾಟಾ ಮೋಟಾರ್ಸ್!

Tiago.ev, ಮೋಜಿನ ವಿದ್ಯುತ್ ಟ್ರೆಂಡ್‍ಸೆಟ್ಟರ್ ಮತ್ತು ವರ್ಗದಲ್ಲೇ ಪ್ರಪ್ರಥಮ ಡಿಸ್ರಪ್ಟರ್ ಆಗಿದ್ದು, ಪ್ರೀಮಿಯಮ್, ಸುರಕ್ಷತೆ ಮತ್ತು ತಂತ್ರಜ್ಞಾನ ಅಂಶಗಳು, ಪರಿಸರ-ಸ್ನೇಹಿ ಹೆಜ್ಜೆಗುರುತು, ಚೈತನ್ಯಶೀಲ ಕಾರ್ಯಕ್ಷಮಯನ್ನು ಒದಗಿಸುವುದರಿಂದ, ಕಡಿಮೆ ಮಾಲೀಕತ್ವ  ವೆಚ್ಚದ ವರ್ಧಿತ ಪ್ರಯೋಜನದ ಜೊತೆಗೆ ಇನ್ನೂ ಹೆಚ್ಚು ಇಷ್ಟಪಡುವಂತಿದೆ. ಹೆಚ್ಚಾಗಿ ಪ್ರೀಮಿಯಮ್ ಕಾರುಗಳಲ್ಲಿ ಮಾತ್ರ ಒದಗಿಸಲಾಗುವ ವರ್ಗದಲ್ಲೇ ಅತ್ಯುತ್ತಮವಾದ ಸಂಪರ್ಕಗೊಂಡ ಅಂಶಗಳನ್ನು ಒದಗಿಸುವ, ತನ್ನ ವರ್ಗದಲ್ಲೇ ಪ್ರಪ್ರಥಮ ಕಾರಾಗಿದೆ. Tiago.ev ನಮ್ಮ ಗ್ರಾಹಕರಿಂದ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿದೆ. ಬಹುತೇಕ ವಿಚಾರಣೆಗಳು 24kWh ಬ್ಯಾಟರಿ ಪ್ಯಾಕ್ ವೈವಿಧ್ಯಕ್ಕಾಗಿ ಇದ್ದುದರಿಂದ, ಗ್ರಾಹಕರ ಅವಶ್ಯಕತೆಗಳನ್ನು ಪೂರೈಸಲು ನಾವು ಅದರ ಉತ್ಪಾದನೆಯನ್ನು ಆದ್ಯತೆಗೊಳಿಸಿದ್ದೇವೆ ಎಂದು  ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ  ಮುಖ್ಯಸ್ಥರಾದ ವಿವೇಕ್ ಶ್ರೀವತ್ಸ ಹೇಳಿದ್ದಾರೆ.

“ಮೇಲಾಗಿ, ನಮ್ಮ ಇವಿಗಳನ್ನು ಇನ್ನಷ್ಟು ಕೈಗೆಟುಕುವಂತೆ ಮಾಡುವ ಸಲುವಾಗಿ ಈ ಪರಿಚಯದೊಂದಿಗೆ ನಾವು 80 ಹೊಸ ನಗರಗಳಿಗೆ ಪ್ರವೇಶಿಸುವ ಮೂಲಕ ನಮ್ಮ ಕಾರ್ಯಜಾವಲನ್ನು 165ಕ್ಕಿಂತ ಹೆಚ್ಚಿನ ನಗರಗಳಿಗೆ ವಿಸ್ತರಿಸಿದ್ದೇವೆ. ಈ ಹಬ್ಬದ ಋತುವಿನಲ್ಲಿ ಇದು ಗ್ರಾಹಕರಿಗೆ ನಿಜವಾಗಿಯೂ ಕೌತುಕಮಯವಾದ ಹೊಸ ಆಯ್ಕೆಯಾಗಿದೆ.”ಎಂದು ಹೇಳಿದರು.

ಹೈವೋಲ್ಟೇಜ್ ಅತ್ಯಾಧುನಿಕ ಝಿಪ್ಟ್ರಾನ್ ತಂತ್ರಜ್ಞಾನದ ಮೇಲೆ ಆಧಾರಿತವಾದ Tiago.ev, 5 ಪ್ರಮುಖ ಆಧಾರಸ್ತಂಭಗಳ ಮೇಲೆ ನಿಂತಿದೆ-ಕಾರ್ಯಕ್ಷಮತೆ, ತಂತ್ರಜ್ಞಾನ, ವಿಶ್ವಸನೀಯತೆ, ಚಾರ್ಜಿಂಗ್ ಮತ್ತು ಆರಾಮ. ಇದು ಡಿಜಿಟಲ್ ಡ್ರೈವ್ ಒದಗಿಸುತ್ತದೆ, ಮಲ್ಟಿ-ಮೋಡ್ ರೀಜೆನ್ ಹಾಗೂ ಸಿಟಿ ಮತ್ತು ಸ್ಪೋರ್ಟ್ ಎಂಬ ಎರಡು ಡ್ರೈವ್ ಮಾದರಿಗಳೊಂದಿಗೆ ಅಂತಿಮವಾದ ವೈಯಕ್ತೀಕೃತ ಚಾಲನಾ ಅನುಭವ ಒದಗಿಸುತ್ತದೆ. 24kWh ಬ್ಯಾಟರಿ ಪ್ಯಾಕ್ ಒಳಗೊಂಡಂತೆ, IP67 ಶ್ರೇಯಾಂಕದ ಬ್ಯಾಟರಿ ಪ್ಯಾಕ್‍ಗಳ(ಜಲ ಮತ್ತು ಧೂಳು ನಿರೋಧಕ) ಬಹುಸಂಯೋಜನೆ ಮತ್ತು ಚಾರ್ಜಿಂಗ್ ಆಯ್ಕೆಗಳಲ್ಲಿ ಈ ಕಾರ್ ಲೈನ್‍ಅನ್ನು ಒದಗಿಸಲಾಗುತ್ತಿದ್ದು ಇದು, ದಿನನಿತ್ಯ ದೂರದ ಚಾಲನಾ ಅಗತ್ಯಗಳಿಗಾಗಿ 315 ಕಿ.ಮೀ ರೇಂಜ್ ಮತ್ತು ಚಿಕ್ಕ ಹಾಗೂ ಪುನರಾವರ್ತಿತ ಟ್ರಿಪ್‍ಗಳಿಗಾಗಿ  19.2kWh ಬ್ಯಾಟರಿ ಪ್ಯಾಕ್ ಇರುವ ಮಾಡಿಫೈಡ್ ಇಂಡಿಯನ್ ಡ್ರೈವಿಂಗ್ ಸೈಕಲ್(ಎಮ್‍ಐಡಿಸಿ) ಒದಗಿಸುವ ಮೂಲಕ ಅಂದಾಜು 250 ಕಿ.ಮೀ.ಗಳ ಶ್ರೇಣಿಯ ಎಮ್‍ಐಡಿಸಿ ನೀಡುತ್ತದೆ.

•  ತೊಂದರೆಯಿಲ್ಲದ ಎಲ್ಲಾದರೂ-ಯಾವುದೇ ಸಮಯದಲ್ಲಾದರೂ-ಚಾರ್ಜಿಂಗ್‍ಗಾಗಿ 15A ಪ್ಲಗ್ ಪಾಯಿಂಟ್
• ಸಾಮಾನ್ಯವಾದ 3.3kW AC  ಚಾರ್ಜರ್
• ಕೇವಲ 30 ನಿಮಿಷಗಳ ಚಾರ್ಜಿಂಗ್‍ನಲ್ಲಿ 35 ಕಿ.ಮೀ ರೇಂಜ್ ಸೇರಿಸಲ್ಪಡುವ 7.2kW AC  ಹೋಂ ಫಾಸ್ಟ್ ಚಾರ್ಜರ್ ಇದು 3 ಘಂಟೆ 36 ನಿಮಿಷಗಳಲ್ಲಿವಾಹನದ ಸಂಪೂರ್ಣ ಚಾರ್ಜಿಂಗ್‍ಗೆ(10%ನಿಂದ 100%ವರೆಗೆ) ನೆರವಾಗುತ್ತದೆ.
• ಕೇವಲ 30 ನಿಮಿಷಗಳ ಚಾರ್ಜಿಂಗ್‍ನಲ್ಲಿ ಹೆಚ್ಚುವರಿ 110 ಕಿ.ಮೀ ಸೇರಿಸಲ್ಪಡುವ ಡಿಸಿ ಫಾಸ್ಟ್ ಚಾರ್ಜಿಂಗ್ ಮತ್ತು 57 ನಿಮಿಷಗಳಲ್ಲಿ 10%ನಿಂದ 80%ವರೆಗೆ ಚಾರ್ಜ್ ಆಗುತ್ತದೆ.

ಟಾಟಾ ಟಿಯಾಗೊ NRG ವಾರ್ಷಿಕೋತ್ಸವ, ಹೊಚ್ಚ ಹೊಸ XT ಕಾರು ಬಿಡುಗಡೆ!

Tiago.ev, ವರ್ಗ ಮೊದಲು ಟೆಲಿಮ್ಯಾಟಿಕ್ಸ್ ಅಂಶಗಳೊಂದಿಗೆ ಸಜ್ಜಾಗಿದ್ದು ಎಲ್ಲಾ ಟ್ರಿಮ್‍ಗಳಲ್ಲೂ ಇದು ಸಾಮಾನ್ಯ ಅಳವಡಿಕೆಯಾಗಿದೆ. ಇದರ ಜೊತೆಗೆ ಇದು 45 ಸಂಪರ್ಕಗೊಂಡ ಕಾರ್ ಅಂಶಗಳನ್ನೂ ಕೂಡ ಹೊಂದಿದ್ದು ಪ್ರೀಮಿಯಮ್ ಒಳಾಂಗಣಗಳೊಂದಿಗೆ ಬರುತ್ತದೆ. ಇದರ ವೈಭವೋಪೇತ ನೋಟ ಮತ್ತು ಭಾವ, ಲೆದರೆಟ್ ಸೀಟ್‍ಗಳು, ಕಾಂಟ್ರಾಸ್ಟ್ ರೂಫ್, ಸಂಪೂರ್ಣವಾಗಿ ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಪ್ರೊಜೆಕ್ಟರ್ ಆಟೋ ಹೆಡ್‍ಲ್ಯಾಂಪ್‍ಗಳು, ಮಳೆಸೂಕ್ಷ್ಮತೆ ಇರುವ ವೈಪರ್ ಗಳು, ಮತ್ತು ಕ್ರೂಸ್ ಕಂಟ್ರೋಲ್ ಮುಂತಾದ ವರ್ಧಿತ ಅಂಶಗಳಿಂದ ತುಂಬಿದೆ. GNCAP 4 ನಕ್ಷತ್ರ ಶ್ರೇಯಾಂಕಿತ ಟಿಯಾಗೋದ ಮೇಲೆ ಆಧಾರಿತವಾದ Tiago.ev, , ರಸ್ತೆಯ ಮೇಲಿರುವ ಅತ್ಯಂತ ಸುರಕ್ಷಿತ ಎಲೆಕ್ಟ್ರಿಕ್ ಹ್ಯಾಚ್ ಆಗಿದ್ದು ಐದು ವರ್ಣ ವೈವಿಧ್ಯಗಳಿಂದ ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದು- ಟೀಲ್ ಬ್ಲೂ, ಡೇಟೋನಾ ಗ್ರೇ, ಪ್ರಿಸ್ಟೀನ್ ವೈಟ್, ಮಿಡ್‍ನೈಟ್ ಪ್ಲಮ್, ಮತ್ತು ಟ್ರಾಪಿಕಲ್ ಮಿಸ್ಟ್.
 

click me!