ಮಹೀಂದ್ರ ಚೇರ್ಮೆನ್ ಆನಂದ್ ಮಹೀಂದ್ರಗೆ ಹೊಚ್ಚ ಹೊಸ ಸ್ಕಾರ್ಪಿಯೋN ವಿತರಣೆ ಮಾಡಲಾಗಿದೆ. ಇದರ ಜೊತೆಗೆ ಆನಂದ್ ಮಹೀಂದ್ರ ವಿಶೇಷ ಮನವಿಯನ್ನೂ ಮಾಡಿದ್ದಾರೆ. ತಾವು ಸ್ವೀಕರಿಸಿದ ಸ್ಕಾರ್ಪಿಯೋNಗೆ ಹೊಸ ಹೆಸರು ಸೂಚಿಸಲು ಮನವಿ ಮಾಡಿದ್ದಾರೆ. ಈಗಾಗಲೇ ಹಲವರು ವಿಚಿತ್ರ ಹೆಸರುಗಳನ್ನು ನೀಡಿದ್ದಾರೆ.
ಮುಂಬೈ(ಅ.07): ಮಹೀಂದ್ರ ಚೇರ್ಮೆನ್ ಆನಂದ್ ಮಹೀಂದ್ರ ತಮ್ಮ ಕಂಪನಿಯ ಹೊಸ ಹೊಸ ಕಾರುಗಳನ್ನು ಪಡೆಯುತ್ತಾರೆ. ತಮ್ಮ ಕಾರು ಗ್ಯಾರೇಜ್‌ನಲ್ಲಿ ಬಹುತೇಕ ಎಲ್ಲಾ ಮಹೀಂದ್ರ ಕಾರುಗಳಿವೆ. ಇದೀಗ ಹೊಚ್ಚ ಹೊಸ ಸ್ಕಾರ್ಪಿಯೋN ಕಾರು ಡೆಲಿವರಿ ಪಡೆದಿದ್ದಾರೆ. ಕೆಂಪು ಬಣ್ಣದ ಸ್ಕಾರ್ಪಿಯೋN ಕಾರು ಪಡೆದಿದ್ದಾರೆ. ಇತ್ತ ಆನಂದ್ ಮಹೀಂದ್ರ ಫಾರ್ಮಲ್ ಡ್ರೆಸ್‌ನಲ್ಲಿ ಗಾಗಲ್ಸ್ ಹಾಕಿ ಕಾರು ಸ್ವೀಕರಿಸಿದ್ದಾರೆ. ಆನಂದ್ ಮಹೀಂದ್ರ ಡ್ರೆಸ್ಸಿಂಗ್ ಕೂಡ ಚರ್ಚೆಯಾಗುತ್ತಿದೆ. ಆನಂದ್ ಮಹೀಂದ್ರ ಡ್ರೆಸ್ಸಿಂಗ್ಸ್ ಹಾಗೂ ಹಾವಭಾವಕ್ಕೆ ಹಲವರು ಪ್ರತಿಕ್ರಿಯಿಸಿದ್ದಾರೆ. ಒಂದೇ ನೋಟಕ್ಕೆ ನೀವು ಕಾರು ವಿತರಣೆ ಮಾಡುವ ರೀತಿ ಕಾಣುತ್ತಿದ್ದೀರಿ ಎಂದು ಪ್ರತಿಕ್ರಿಯಿಸಿದ್ದಾರೆ.
ಆನಂದ್ ಮಹೀಂದ್ರ ಹಾವಭಾವ, ಡ್ರೆಸ್ ಕುರಿತ ಕಮೆಂಟ್ ಹೆಚ್ಚಾಗುತ್ತಿದ್ದಂತೆ ಆನಂದ್ ಮಹೀಂದ್ರ ಸ್ವಾರಸ್ಯಕರವಾಗಿ ಪ್ರತಿಕ್ರಿಯಿಸಿದ್ದಾರೆ. ಆ ದಿನ ಇವತ್ತಲ್ಲ. ಇಂದು ನಾನು ಸ್ವಾರ್ಥಿಯಾಗಿದ್ದೇನೆ. ಹೊಚ್ಚ ಹೊಸ ಸ್ಕಾರ್ಪಿಯೋN ಕಾರು ಸ್ವೀಕರಿಸಿ ಡ್ರೈವ್ ಮಾಡಲು ಉತ್ಸುಕನಾಗಿದ್ದೇನೆ ಎಂದು ಆನಂದ್ ಮಹೀಂದ್ರ ಹೇಳಿದ್ದರು.
undefined
Anand Mahindra: ಇವರೇ ಬೆಸ್ಟ್ ಬೊಲೆರೋ ಡ್ರೈವರ್; ಆನೆಗೂ ಹೆದರದ ಇವರನ್ನು ಕ್ಯಾಪ್ಟನ್ ಕೂಲ್ ಎಂದ ಉದ್ಯಮಿ
ಕೆಂಪು ಬಣ್ಣದ ಸ್ಕಾರ್ಪಿಯೋN ಕಾರು ಸ್ವೀಕರಸಿದಬಳಿ ಸಂತಸ ಹಂಚಿಕೊಂಡ ಆನಂದ್ ಮಹೀಂದ್ರ, ಇಂದು ಅತೀ ಮಹತ್ವದ ದಿನ. ಹೊಸ ಸ್ಕಾರ್ಪಿಯೋN ಸ್ವೀಕರಿಸಿದ್ದೇನೆ. ಇದಕ್ಕೊಂದು ಚಂದದ ಹೆಸರಿನ ಅಗತ್ಯವಿದೆ. ನಿಮ್ಮ ಸಲಹೆಗಳಿಗೆ ಸ್ವಾಗತ ಎಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ.
Big day for me; received my ScorpioN…. Need a good name for it…Recommendations welcome! pic.twitter.com/YI730Eo9uh
— anand mahindra (@anandmahindra)
ಆನಂದ್ ಮಹೀಂದ್ರ ಟ್ವೀಟ್ ಬೆನ್ನಲ್ಲೇ ಹಲವು ಹೊಸ ಹೊಸ ಹಾಗೂ ವಿಚಿತ್ರ ಹೆಸರುಗಳನ್ನು ಸೂಚಿಸಿದ್ದಾರೆ. ಸ್ಕಾರ್ಪಿಯನ್ ಅಂದರೆ ಹಿಂದಿಯಲ್ಲಿ ಬಿಚ್ಚು ಎಂದರ್ಥ. ಬಾಬಿ ಡಿಯೋಲ್ ಅಭಿಯನದ ಬಿಚ್ಚು ಬಾಲಿವುಡ್ ಚಿತ್ರ 2000ನೇ ಇಸವಿಯಲ್ಲಿ ತೆರೆಗೆ ಬಂದಿದೆ. ಹೀಗಾಗಿ ಬಾಬಿ ಬಿಚ್ಚು ಹೆಸರಿಡಿ ಎಂದು ಕೆಲವರು ಸೂಚಿಸಿದ್ದಾರೆ. ಇನ್ನು ಕೆಲವರು ಪುಷ್ಪಾ ಎಂದು ಹೆಸರು ಸೂಚಿಸಿದ್ದಾರೆ.
ಸೃಜನಶೀಲತೆಯನ್ನು ಸದಾ ಪ್ರೋತ್ಸಾಹಿಸುವ ಉದ್ಯಮಿ ಆನಂದ ಮಹೀಂದ್ರಾ, ಇತ್ತೀಚೆಗೆ ಸರಕು ಸಾಗಾಣಿಕಾ ಕಂಟೇನರ್‌ನಲ್ಲಿ ಇಡೀ ಮದುವೆ ಮನೆಯನ್ನೇ ವಿನ್ಯಾಸಗೊಳಿಸಿರುವ ವಿಶಿಷ್ಟವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಈ ‘ಮೊಬೈಲ್ ಮದುವೆ ಮನೆ’ ಇಂಟರ್ನೆಟ್‌ನಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಸ್ವದೇಶಿ ಎಲೆಕ್ಟ್ರಿಕ್ ಜೀಪ್ ನಿರ್ಮಿಸಿದ ಯುವಕ: ಸಂಪರ್ಕಿಸಲು ಆನಂದ್ ಮಹೀಂದ್ರಾ ಸೂಚನೆ
40 ಅಡಿ ಉದ್ದದ ಈ ಸಾಗಾಣಿಕಾ ಕಂಟೇನರ್‌ನಲ್ಲಿ ಮಡಚಬಹುದಾದ ಭಾಗಗಳಿವೆ. ಈ ಭಾಗಗಳನ್ನು ಬಿಚ್ಚಿ ಜೋಡಿಸಿದರೆ 1200 ಚದರ್ ಅಡಿಯ ವಿಸ್ತಾರದ ‘ಮದುವೆ ಮನೆ’ ಸಿದ್ಧವಾಗುತ್ತದೆ. ಬೇಕಾದಲ್ಲಿ ಕೊಂಡೊಯ್ಯಬಹುದಾದ ಈ ಮೊಬೈಲ್ ಮದುವೆ ಮನೆ, ಸುಮಾರು 200 ಕುರ್ಚಿಗಳ ಸಾಮರ್ಥ್ಯವನ್ನು ಹೊಂದಿದೆ. ಮಡಚಬಹುದಾದ ವಿನ್ಯಾಸವುಳ್ಳ ಇದರಲ್ಲಿ 2 ಎ.ಸಿ. ಕೂಡಾ ಜೋಡಿಸಲಾಗಿದೆ. ವಧು-ವರರಿಗೆ ಮದುವೆಗೆ ತಯಾರಾಗಲು ಪ್ರತ್ಯೇಕ ಕೋಣೆಗಳಿವೆ. ಮದುವೆ ಅಥವಾ ಸಮಾರಂಭಕ್ಕೆ ಕಲ್ಯಾಣ ಮಂಟಪ ಸಿಗದವರು ಇದನ್ನು ಬಳಸಿ ಸಮಾರಂಭ ಮಾಡಿಕೊಳ್ಳಬಹುದಾಗಿದೆ.ಈ ವಿಡಿಯೋ ಹಂಚಿಕೊಂಡ ಆನಂದ ಮಹೀಂದ್ರಾ ‘ಇದನ್ನು ವಿನ್ಯಾಸಗೊಳಿಸಿದವರನ್ನು ನಾನು ಭೇಟಿಯಾಗಲು ಬಯಸುತ್ತೇನೆ. ಈ ಮೊಬೈಲ್ ಮದುವೆ ಮನೆಯನ್ನು ದೂರದ ಪ್ರದೇಶಗಳಿಗೆ ಸುಲಭವಾಗಿ ಕೊಂಡೊಯ್ಯಬಹುದಾಗಿದೆ. ಅಲ್ಲದೇ ಇದು ಅಧಿಕ ಜನದಟ್ಟಣೆಯಿರುವ ಭಾರತದಂತಹ ದೇಶಗಳಲ್ಲಿ ಶಾಶ್ವತ ಜಾಗವನ್ನು ಆಕ್ರಮಿಸುವುದಿಲ್ಲ. ಹೀಗಾಗಿ ಪರಿಸರ ಸ್ನೇಹಿಯೂ ಆಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.