ಅ.10 ರಿಂದ ದೇಶದ ಅತೀ ಕಡಿಮೆ ಬೆಲೆಯ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು ಬುಕಿಂಗ್ ಆರಂಭ!

By Suvarna News  |  First Published Oct 7, 2022, 8:04 PM IST

ಟಾಟಾ ಮೋಟಾರ್ಸ್ ಇತ್ತೀಚಿಗೆ ಬಿಡುಗಡೆ ಮಾಡಿದ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿನ ಬುಕಿಂಗ್ ದಿನಾಂಕ ಬಹಿರಂಗಗೊಂಡಿದೆ. 21,000 ರೂಪಾಯಿ ನೀಡಿ ನೂತನ ಕಾರು ಬುಕ್ ಮಾಡಿಕೊಳ್ಳಬಹುದು. ಇದು ದೇಶದ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.


ಮುಂಬೈ(ಅ.07): ಟಾಟಾ ಮೋಟಾರ್ಸ್ ಈಗಾಗಲೇ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಟಿಯಾಗೋ ದೇಶದ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ ಹೊಚ್ಚ ಹೊಸ ಟಿಯಾಗೋ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಿದೆ. ಇದೀಗ ಅಕ್ಟೋಬರ್ 10 ರಿಂದ ಟಿಯಾಗೋ ಎಲೆಕ್ಟ್ರಿಕ್ ಕಾರಿನ ಬುಕಿಂಗ್ ಆರಂಭಗೊಳ್ಳುತ್ತಿದೆ. ಮಧ್ಯಾಹ್ನ 112 ಗಂಟೆಯಿಂದ ಬುಕಿಂಗ್ ತೆರೆದುಕೊಳ್ಳಲಿದೆ. ಟಾಟಾ ಡೀಲರ್‌ಶಿಪ್ ಅಥವಾ ವೆಬ್‌ಸೈಟ್ ಮೂಲಕ ಕಾರು ಬುಕ್ ಮಾಡಬಹುದು.  ನೂತನ ಕಾರನ್ನು 21,000 ರೂಪಾಯಿ ನೀಡಿ ಬುಕ್ ಮಾಡಿಕೊಳ್ಳಬಹುದು. ಗ್ರಾಹಕರಿಗೆ ಡಿಸೆಂಬರ್ ತಿಂಗಳಲ್ಲಿ ಕಾರು ಟೆಸ್ಟ್ ಡ್ರೈವ್‌ಗೆ ಲಭ್ಯವಿದೆ. ಇಷ್ಟೇ ಅಲ್ಲ ಬುಕ್ ಮಾಡಿದ ಗ್ರಾಹಕರಿಗೆ 2023ರ ಜನವರಿಯಿಂದ ಕಾರು ಡೆಲಿವರಿಯಾಗಲಿದೆ. 

ಎಲೆಕ್ಟ್ರಿಕ್ ಕಾರಿನಲ್ಲಿ ಟಾಟಾ ಮೋಟಾರ್ಸ್ ಅಗ್ರಸ್ಥಾನದಲ್ಲಿದೆ. ಟಾಟಾ ನೆಕ್ಸಾನ್, ಟಿಗೋರ್ ಸೇರಿದಂತೆ ಪ್ರಮುಖ ಕಾರುಗಳನ್ನು ಬಿಡುಗಡೆ ಮಾಡಿ ಭಾರತದ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ಕಳೆದ ತಿಂಗಳ ಅಂತ್ಯದಲ್ಲಿ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿತು.  8.49 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು ಲಭ್ಯವಿದೆ. ಇದು ದೇಶದ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. 

Tap to resize

Latest Videos

undefined

ಅತೀ ಕಡಿಮೆ ಬೆಲೆಗೆ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು, ಹೊಸ ಇತಿಹಾಸ ರಚಿಸಿದ ಟಾಟಾ ಮೋಟಾರ್ಸ್!

ಟಾಟಾ ಟಿಯಾಗೋ ಬೇಸ್ ಮಾಡೆಲ್ ಎಲೆಕ್ಟ್ರಿಕ್ ಕಾರಿನ ಬೆಲೆ 8.49 ಲಕ್ಷ ರೂಪಾಯಿ ಹಾಗೂ ಟಾಪ್ ಮಾಡೆಲ್ ಕಾರಿನ ಬೆಲೆ 11.79 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ನೂತನ ಕಾರು ಎರಡು ಬ್ಯಾಟರಿ ವೇರಿಯೆಂಟ್‌ನಲ್ಲಿ ಲಭ್ಯವಿದೆ. 24kWh  ಹಾಗೂ  19.2kWh  ಬ್ಯಾಟರಿ ಪ್ಯಾಕ್ ವೇರಿಯೆಂಟ್ ಲಭ್ಯವಿದೆ. 19.2kWh  ಬ್ಯಾಟರಿ ಪ್ಯಾಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 250 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು 24kWh ಬ್ಯಾಟರಿ ಪ್ಯಾಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 315 ಕಿಲೋಮೀಟರ್ ಮೈಲೇಜ್ ನೀಡಲಿದೆ. 

ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಕಡಿಮೆ ಬೆಲೆಗೆ ಗರಿಷ್ಠ ಮೈಲೇಜ್ ನೀಡಬಲ್ಲ ಕಾರು ಇದಾಗಿದೆ. ಇದರಿಂದ ಇದೀಗ ಗ್ರಾಹಕರು ಟಿಯಾಗೋ ಎಲೆಕ್ಟ್ರಿಕ್ ಕಾರು ಖರೀದಿಗೆ ಮುಂದಾಗಿದ್ದಾರೆ. ಇನ್ನು ಟಾಟಾ ಟಿಯಾಗೋ ಇಂಧನ ಕಾರು ಟಾಟಾ ಟಿಯಾಗೋ ಸಿಎನ್‌ಜಿ ಕಾರಿಗೂ ಭಾರಿ ಬೇಡಿಕೆ ಇದೆ.

ಟಾಟಾ ಟಿಯಾಗೊ NRG ವಾರ್ಷಿಕೋತ್ಸವ, ಹೊಚ್ಚ ಹೊಸ XT ಕಾರು ಬಿಡುಗಡೆ!

ಟಾಟಾ ಟಿಯಾಗೊ 4 ಲಕ್ಷ ಮಾರಾಟ
ಟಾಟಾ ಟಿಯಾಗೋ ಇದೀಗ 4 ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಸಂಪಾದಿಸಿದೆ.  ಇದರ ಹಿನ್ನಲೆಯಲ್ಲಿ ‘ಟಿಯಾಗೋ ಫಾರೆವರ್‌’ ಕ್ಯಾಂಪೇನ್‌ ಆರಂಭಿಸಿ ಯಶಸ್ವಿಯಾಗಿತ್ತು. ಟಿಯಾಗೊದ ಕಾರ್ಯವೈಖರಿ ಬಗ್ಗೆ ಈ ಕ್ಯಾಂಪೇನ್‌ನಲ್ಲಿ ಮಾಹಿತಿ ನೀಡಲಾಗುತ್ತದೆ. ಟಿಯಾಗೋ ಹಾಗೂ ಟಿಯಾಗೊ ಎನ್‌ಆರ್‌ಜಿ ಎಂಬ ಎರಡು ಮಾದರಿಯಲ್ಲಿ ಈ ಕಾರುಗಳಿದ್ದು, 1.2 ಲೀಟರ್‌ ಪೆಟ್ರೋಲ್‌ ಎಂಜಿನ್‌ ಹೊಂದಿವೆ. ಎಕ್ಸ್‌ ಶೋರೂಮ್‌ ದರ: 5,22,900 ರು. ನಿಂದ ಆರಂಭ.

click me!