ಕಾರು ಪ್ರಿಯರಿಗೆ ಶಾಕಿಂಗ್ ನ್ಯೂಸ್‌: ಇಂದಿನಿಂದ ಮಾರುತಿ ಸುಜುಕಿಯ ಎಲ್ಲ ಮಾಡೆಲ್‌ ಕಾರುಗಳ ಬೆಲೆ ಹೆಚ್ಚಳ..!

By BK Ashwin  |  First Published Jan 16, 2023, 12:40 PM IST

ಏಪ್ರಿಲ್ 2022 ರಲ್ಲಿ ಸಹ ಬೆಲೆಯನ್ನು ಹೆಚ್ಚಿಸಿದ್ದ ಮಾರುತಿ ಸುಜುಕಿ ಕಾರು ಕಂಪನಿ ಈಗ ಮತ್ತೊಮ್ಮೆ ಬೆಲೆ ಹೆಚ್ಚಿಸುತ್ತಿದೆ. ಈ ಹಿನ್ನೆಲೆ ಇದೇ ಆರ್ಥಿಕ ವರ್ಷದಲ್ಲಿ ಕಾರು ತಯಾರಕ ಕಂಪನಿ ಕೈಗೊಳ್ಳುತ್ತಿರುವ ಎರಡನೇ ಬೆಲೆ ಏರಿಕೆಯಾಗಿದೆ.


ನೀವು ಶೀಘ್ರದಲ್ಲೇ ಮಾರುತಿ ಸುಜುಕಿ ಕಾರು ಖರೀದಿಸೋಕೆ ಪ್ಲ್ಯಾನ್‌ ಮಾಡ್ತಿದ್ದೀರಾ..? ಹಾಗಾದ್ರೆ, ನಿಮಗಿಲ್ಲಿದೆ ಶಾಕಿಂಗ್ ನ್ಯೂಸ.. ಏಕೆಂದರೆ, ಮಾರುತಿ ಸುಜುಕಿ ಕಾರುಗಳ ಬೆಲೆ ಹೆಚ್ಚಳವಾಗುತ್ತಿದೆ ಎಂಬುದನ್ನು ನೀವು ತಿಳಿದುಕೊಳ್ಳಲೇಬೇಕು. ಹೌದು, ಮಾರುತಿ ಸುಜುಕಿ ಇಂಡಿಯಾ ಸೋಮವಾರ ತನ್ನ ಎಲ್ಲ ಮಾಡೆಲ್‌ಗಳ ಕಾರುಗಳ ಬೆಲೆಯನ್ನು ಸುಮಾರು 1.1 ಪ್ರತಿಶತದಷ್ಟು ಹೆಚ್ಚಿಸಿರುವುದಾಗಿ ಮಾಹಿತಿ ನೀಡಿದೆ. ಬೆಲೆ ಏರಿಕೆಯ ಒತ್ತಡದ ಕಾರಣದಿಂದಾಗಿ ಭಾರತದ ಅಗ್ರ ಕಾರು ತಯಾರಕ ಮಾರುತಿ ಸುಜುಕಿ ತನ್ನ ಮಾಡೆಲ್‌ ಕಾರುಗಳ ಬೆಲೆಯನ್ನು ಹೆಚ್ಚಿಸಿದ್ದು, ಇದು ಇಂದಿನಿಂದಲೇ ಅಂದರೆ ಜನವರಿ 16, 2023 ರಿಂದಲೇ ಜಾರಿಗೆ ಬರುತ್ತಿದೆ. ಏಪ್ರಿಲ್ 2022 ರಲ್ಲಿ ಸಹ ಬೆಲೆಯನ್ನು ಹೆಚ್ಚಿಸಿದ್ದ ಮಾರುತಿ ಸುಜುಕಿ ಕಾರು ಕಂಪನಿ ಈಗ ಮತ್ತೊಮ್ಮೆ ಬೆಲೆ ಹೆಚ್ಚಿಸುತ್ತಿದೆ. ಈ ಹಿನ್ನೆಲೆ ಇದೇ ಆರ್ಥಿಕ ವರ್ಷದಲ್ಲಿ ಕಾರು ತಯಾರಕ ಕಂಪನಿ ಕೈಗೊಳ್ಳುತ್ತಿರುವ ಎರಡನೇ ಬೆಲೆ ಏರಿಕೆಯಾಗಿದೆ.

ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳ (Input Cost) ಪರಿಣಾಮವನ್ನು ಸರಿದೂಗಿಸಲು ತನ್ನ ವಾಹನಗಳ ಬೆಲೆಗಳನ್ನು ಹೆಚ್ಚಿಸುವುದಾಗಿ ಕಂಪನಿಯು (Company) ಕಳೆದ ವರ್ಷ ಡಿಸೆಂಬರ್‌ನಲ್ಲೇ ಹೇಳಿತ್ತು. ಅದರಂತೆ ಇಂದಿನಿಂದ ತನ್ನ ಎಲ್ಲ ಮಾಡೆಲ್‌ಗಳ (Models) ಬೆಲೆ ಹೆಚ್ಚಿಸಿದೆ. ಅಲ್ಲದೆ, ಏಪ್ರಿಲ್ 2023 ರಿಂದ ಪ್ರಾರಂಭವಾಗುವ ಕಟ್ಟುನಿಟ್ಟಾದ ಎಮಿಷನ್‌ ಮಾನದಂಡಗಳಿಗೆ (Emission Norms) ಅನುಗುಣವಾಗಿ ಮಾಡೆಲ್‌ಗಳ ಶ್ರೇಣಿಯನ್ನು ನವೀಕರಿಸಲು ನಿಬಂಧನೆಗಳನ್ನು ಮಾಡಿದೆ.

Latest Videos

undefined

ಇದನ್ನು ಓದಿ: 550 ಕಿ.ಮೀ ಮೈಲೇಜ್, ಗೇಮ್‌ಚೇಂಜರ್ ಮಾರುತಿ ಸುಜುಕಿ eVX ಎಲೆಕ್ಟ್ರಿಕ್ ಕಾರು ಅನಾವರಣ!

 "ಮಾಡೆಲ್‌ಗಳಾದ್ಯಂತ ಅಂದಾಜು ಸರಾಸರಿ ಹೆಚ್ಚಳವು ಸುಮಾರು 1.1 ಪ್ರತಿಶತದಷ್ಟಿದೆ. ಈ ಸೂಚಕ ಅಂಕಿಅಂಶವನ್ನು ದೆಹಲಿಯಲ್ಲಿನ ಮಾಡೆಲ್‌ಗಳ ಎಕ್ಸ್-ಶೋರೂಂ ಬೆಲೆಗಳನ್ನು ಬಳಸಿಕೊಂಡು ಲೆಕ್ಕಹಾಕಲಾಗಿದೆ ಮತ್ತು ಜನವರಿ 16, 2023 ರಿಂದ ಇದು ಜಾರಿಗೆ ಬರಲಿದೆ" ಎಂದು ಮಾರುತಿ ಸುಜುಕಿ ಇಂಡಿಯಾ (Maruti Suzuki India) ತನ್ನ ನಿಯಂತ್ರಕ ಫೈಲಿಂಗ್‌ನಲ್ಲಿ ಮಾಹಿತಿ ನೀಡಿದೆ.

ಕಂಪನಿಯು ಆರಂಭಿಕ ಹಂತದ ಸಣ್ಣ ಕಾರು ಆಲ್ಟೋದಿಂದ ಪ್ರಾರಂಭಿಸಿ ಎಸ್‌ಯುವಿ ಗ್ರ್ಯಾಂಡ್ ವಿಟಾರಾವರೆಗಿನ ವಾಹನಗಳ ಶ್ರೇಣಿಯನ್ನು ಮಾರಾಟ ಮಾಡುತ್ತದೆ. ಇವುಗಳ ಬೆಲೆ ರೂ 3.39 ಲಕ್ಷ ದಿಂದ ರೂ 19.49 ಲಕ್ಷ (ಎಕ್ಸ್ ಶೋ ರೂಂ ದೆಹಲಿ) ದವರೆಗೆ ಇದೆ. ಭಾರತದಲ್ಲಿ ಸುಮಾರು 15 ಮಾಡೆಲ್‌ಗಳ ಕಾರುಗಳನ್ನು ಮಾರುತಿ ಸುಜುಕಿ ಸಂಸ್ಥೆ ಮಾರಾಟ ಮಾಡುತ್ತದೆ. SUV ವಿಭಾಗದಲ್ಲಿ 1 ಕಾರು, ಸೆಡಾನ್ ವಿಭಾಗದಲ್ಲಿ 1 ಕಾರು, ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ 8 ಕಾರುಗಳು, ಕಾಂಪ್ಯಾಕ್ಟ್ SUV ವಿಭಾಗದಲ್ಲಿ 1 ಕಾರು, ಕಾಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ 1 ಕಾರು, MUV ವಿಭಾಗದಲ್ಲಿ 2 ಕಾರುಗಳು, ಮಿನಿವ್ಯಾನ್‌ ವಿಭಾಗದಲ್ಲಿ 1 ಕಾರನ್ನು ಮಾರಾಟ ಮಾಡುತ್ತದೆ. ಶೀಘ್ರದಲ್ಲೇ ಫ್ರಾಂಕ್ಸ್, ಜಿಮ್ನಿ, ವ್ಯಾಗನ್ ಆರ್ ಫ್ಲೆಕ್ಸ್ ಫ್ಯೂಲ್ ಮತ್ತು ಇವಿಎಕ್ಸ್ ಎಂಬ ಮಾಡೆಲ್‌ಗಳನ್ನು ಮಾರುತಿ ಸುಜುಕಿ ಬಿಡುಗಡೆ ಮಾಡಲಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಹೊಸ ವರ್ಷದಲ್ಲಿ ವಾಹನ ಖರೀದಿಸಲು ಸಕಾಲ, 5 ರಿಂದ 10 ಲಕ್ಷ ರೂಗೆ ಲಭ್ಯವಿಗೆ ಉತ್ತಮ ಕಾರು!

ದೇಶದ ಅತಿದೊಡ್ಡ ಕಾರು ತಯಾರಕ, ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ದಕ್ಷಿಣ ಏಷ್ಯಾದಲ್ಲಿ ಸಹ ಅತಿ ದೊಡ್ಡ ಆಟೋಮೊಬೈಲ್‌ ಸಂಸ್ಥೆಗಳಲ್ಲೊಂದು. ಮಾರುತಿಯು 1983 ರಲ್ಲಿ ಭಾರತದಲ್ಲಿ ತನ್ನ ಮೊದಲ ಕಾರು ಮಾರುತಿ 800 ನೊಂದಿಗೆ ಉತ್ಪಾದನೆಯನ್ನು ಪ್ರಾರಂಭಿಸಿತು. ಕಂಪನಿಯು ದೇಶಾದ್ಯಂತ ವ್ಯಾಪಿಸಿದ್ದು, ಭಾರತದಲ್ಲಿ ಸಾರ್ವಜನಿಕವಾಗಿ ಪಟ್ಟಿ ಮಾಡಲಾದ ಕೆಲವೇ ಆಟೋಮೋಟಿವ್ ಕಂಪನಿಗಳಲ್ಲಿ ಒಂದಾಗಿದೆ. ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ಭಾರತೀಯ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ 50 ಪ್ರತಿಶತಕ್ಕಿಂತ ಹೆಚ್ಚಿನ ಮಾರುಕಟ್ಟೆ ಪಾಲನ್ನು ಹೊಂದಿರುವ ಅತಿದೊಡ್ಡ ಸಂಸ್ಥೆಯೂ ಆಗಿದೆ. 
 

ಇದನ್ನೂ ಓದಿ: ಜಾಗತಿಕ ಎನ್ಸಿಎಪಿ ಪರೀಕ್ಷೆಯಲ್ಲಿ ಕೇವಲ 1 ಸ್ವಾರ್ ರೇಟಿಂಗ್ ಪಡೆದ ಮಾರುತಿ ಸ್ವಿಫ್ಟ್, ಎಸ್-ಪ್ರೆಸ್ಸೋ, ಇಗ್ನಿಸ್

click me!