ವಾಹನ ಕಲರ್ ಡಿಮ್ ಆಗದಂತೆ, ವಾಹನದ ಮೇಲೆ ಕಲೆಗಳು, ಸ್ಕ್ರಾಚ್‌ಗಳು ಆಗದಂತೆ ನೋಡಿಕೊಳ್ಳುವ ಹೊಸ ತಂತ್ರಜ್ಞಾನದ ಸೆರಾಮಿಕ್ ಕೋಟಿಂಗ್ ಟಾಟಾ ಮೋಟಾರ್ಸ್ ಪರಿಚಯಿಸಿದೆ. ದೇಶದಲ್ಲಿ ಪ್ರಪ್ರಥಮ ಇನ್-ಹೌಸ್ ಸೆರಾಮಿಕ್ ಕೋಟಿಂಗ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಬೆಂಗಳೂರು(ಎಪ್ರಿಲ್ 1): ಭಾರತದ ಮುಂಚೂಣಿ ಆಟೋ ಬ್ರ್ಯಾಂಡ್ ಆದ ಟಾಟಾ ಮೋಟರ್ಸ್, ಹೊಚ್ಚ ಹೊಸ ಸಫಾರಿಯೊಂದಿಗೆ ಸೆರಾಮಿಕ್ ಕೋಟಿಂಗ್‍ನ ಸೇವೆ ಘೋಷಿಸಿದೆ. ಟಾಟಾ ಕಾರುಗಳ ನೋಟವನ್ನು ಪುನಶ್ಚೇತನಗೊಳಿಸುವುದಕ್ಕಾಗಿ ಇದೊಂದು ಅತ್ಯಾಧುನಿಕ ಹೈಡ್ರೋಫಿಲಿಕ್ ಫಾರ್ಮುಲೇಶನ್ ತಂತ್ರಜ್ಞಾನವಾಗಿದೆ. 28,500 ರೂಪಾಯಿಯಲ್ಲಿ (ಜಿಎಸ್‍ಟಿ ಒಳಗೊಂಡಂತೆ) ಲಭ್ಯವಿರುವ ಈ ಸೇವೆಯನ್ನು ಎಲ್ಲಾ ಟಾಟಾ ಮೋಟರ್ಸ್ ಅಧಿಕೃತ ಡೀಲರ್‍ಶಿಪ್‍ಗಳಲ್ಲಿ ಒದಗಿಸಲಾಗುತ್ತದೆ.
IPL 2021 ಟೂರ್ನಿಗೆ ಅಧಿಕೃತ ಪಾಲುದಾರರಾದ ಟಾಟಾ ಸಫಾರಿ!.
undefined
ಏರೋಸ್ಪೇಸ್ ಉದ್ಯಮ ಹಾಗು ಹೈಪರ್ ಕಾರು ಉತ್ಪಾದಕ ಸಂಸ್ಥೆಗಳಿಂದ ಬಳಸಲ್ಪಡುವ ಸೆರಾಮಿಕ್ ಕೋಟಿಂಗ್ ರೂಪವು ವಾಹನದ ನೋಟವನ್ನು ತಕ್ಷಣವೇ ಪುನಶ್ಚೇತನಗೊಳಿಸುವುದಕ್ಕಾಗಿ ಪೈಂಟ್ ಕೆಲಸದೊಂದಿಗೆ ಗಟ್ಟಿಯಾದ ಫಿನಿಶ್‍ಅನ್ನು ಮಿಶ್ರಣಮಾಡುತ್ತದೆ. ಈಗಿರುವ ಸಾಂಪ್ರದಾಯಿಕ ವಿಧಾನಗಳಿಗೆ ಹೋಲಿಸಿದರೆ, ಈ ಕೋಟಿಂಗ್ ಹೆಚ್ಚು ಕಾಲ ಬಾಳಿಕೆ ಬಂದು ವಾಹನಕ್ಕೆ ಅಂಟಿಕೊಂಡ ಕಸ ಮತ್ತು ಕೆಸರನ್ನು ತೊಲಗಿಸುವುದರ ಜೊತೆಗೆ, ಸಂಚಾರ ಮಾಲಿನ್ಯ, ಆಮ್ಲಮಳೆ, ಕರಗುವ ವಸ್ತುಗಳು, ಪ್ರಾಣಿ ವಸ್ತುಗಳು ಹಾಗು ಇನ್ನೂ ಅನೇಕ ಅಂಶಗಳಿಂದ ವಾಹನವನ್ನು ರಕ್ಷಿಸುತ್ತದೆ. ಕೋಟಿಂಗ್‍ನ ಪ್ರಬಲವಾದ ಹರಳಿನಂತಹ ಪದರವು ವಾಹನದ ಮೇಲೆ ಬೀಳುವ ಯುವಿ ಕಿರಣಗಳ ಮೂಲಕ ಏರ್ಪಡುವ ಕಂದಾಗುವಿಕೆಯನ್ನು ಕಡಿಮೆ ಮಾಡುತ್ತದೆ. ಇದರ ಸ್ವಶುಚಿಗೊಳಿಸಿಕೊಳ್ಳುವ ಗುಣಗಳಿಂದಾಗಿ ಇದನ್ನು ನಿರ್ವಹಣೆ ಮಾಡುವುದು ಸುಲಭ ಮಾತ್ರವಲ್ಲದೆ, ಆಕ್ಸಿಡೇಶನ್ ಮತ್ತು ಕೊರೋಶನ್‍ಅನ್ನು ತಡೆಗಟ್ಟುವ ಮೂಲಕ ಗಾಜು, ಪೈಂಟ್, ರಿಮ್/ಚಕ್ರಗಳು, ವಿನೈಲ್ ಪ್ಲಾಸ್ಟಿಕ್ ಮತ್ತು ಲೆದರ್‍ನಂತಹ ಕಾರಿನ ವಸ್ತುಗಳಿಗೆ 360-ಡಿಗ್ರಿ ರಕ್ಷಣೆ ಒದಗಿಸುತ್ತದೆ. ಹೆಚ್ಚುವರಿಯಾಗಿ, “ನ್ಯೂ ಫಾರ್‍ಎವರ್” ವಾಗ್ದಾನಕ್ಕೆ ಅನುಗುಣವಾಗಿ, ಟಾಟಾ ಮೋಟರ್ಸ್, ಈ ವಿಶಿಷ್ಟ ಸೇವೆಯನ್ನು ಇತರ ಎಲ್ಲಾ ಟಾಟಾ ಪ್ಯಾಸೆಂಜರ್ ವಾಹನಗಳಿಗೂ ವಿಸ್ತರಿಸಲಿದ್ದು, ಇದರ ಬೆಲೆಯು, ಅವುಗಳ ವರ್ಗಕ್ಕೆ ತಕ್ಕಂತೆ ವ್ಯತ್ಯಯವಾಗುತ್ತದೆ.
ಆಕರ್ಷಕ ಬೆಲೆಯಲ್ಲಿ ಐಕಾನಿಕ್ ಟಾಟಾ ಸಫಾರಿ ಕಾರು ಬಿಡುಗಡೆ!...
ಹೊಸ ಉತ್ಪನ್ನಗಳನ್ನು ಪರಿಚಯಿಸುವುದರ ಜೊತೆಗೆ ನಾವು ಸೆರಾಮಿಕ್ ಕೋಟಿಂಗ್‍ನಂತಹ ಉದ್ಯಮದಲ್ಲೇ ಮೊಟ್ಟಮೊದಲನೆಯದಾದ ಸೇವೆಯನ್ನು ಪರಿಚಯಿಸುವುದರ ಮೇಲೆ ಗಮನ ಕೇಂದ್ರೀಕರಿಸುತ್ತಿದ್ದೇವೆ. ಬೆಳೆಯುತ್ತಿರುವ ಗ್ರಾಹಕ ಬೇಡಿಕೆಗಳನ್ನು ಪೂರೈಸುವುದಕ್ಕಾಗಿ ಹೊಸ ಕಾರುಗಳು ಹಾಗು ಯುವಿಗಳ ಬಿಡುಗಡೆಯೊಂದಿಗೆ ಗ್ರಾಹಕರು ಈಗ ಈ ನವಯುಗದ ಉತ್ಪನ್ನಗಳನ್ನು ಅಲಂಕರಿಸುವ ವರ್ಗದಲ್ಲೇ ಅತ್ಯುತ್ತಮವಾದ ಮಾರಾಟಾನಂತರದ ಸೇವೆಗಳನ್ನೂ ನಿರೀಕ್ಷಿಸುತ್ತಿದ್ದಾರೆ. ಇದಕ್ಕೆ ಅನುಗುಣವಾಗಿ, ಭಾರತದಲ್ಲೇ ಉದ್ಯಮ ಮೊಟ್ಟಮೊದಲನೆಯದಾದ ಈ ಇನ್‍ಹೌಸ್ ಸೇವೆಯನ್ನು ಪರಿಚಯಿಸಲು ನಾವು 3ಎಮ್, ವ್ಯುಎರ್ತ್, ಬರ್ಧಲ್, ಮತ್ತು ಶಿಕಂಡ್ ಸ್ಟೇನ್ಲಿ ಬಿಜಿ ಮತ್ತು ಎಸ್‍ಕೆ ಕಾರ್ ಕೇರ್‍ನಂತಹ ಕಾರ್ ಕೇರ್ ತಂತ್ರಜ್ಞಾನಗಳ ವಿಶ್ವದರ್ಜೆ ಸಂಸ್ಥೆಗಳೊಂದಿಗೆ ಸಹಯೋಗ ಏರ್ಪಡಿಸಿಕೊಂಡಿದ್ದೇವೆ. ಇತರ ಸೇವೆಗಳೊಂದಿಗೆ ಈ ಮೌಲ್ಯ ವರ್ಧಿತ ಸೇವೆಯು ಅತ್ಯುಚ್ಛ ವಾಹನ ರಕ್ಷಣೆ ಒದಗಿಸುತ್ತದೆ ಎಂಬುದರ ಬಗ್ಗೆ ನಾವು ಧನಾತ್ಮಕ ಆಶಯ ಹೊಂದಿದ್ದು, ನಮ್ಮ ಗ್ರಾಹಕರಿಗೆ ವರ್ಗದಲ್ಲೇ ಅತ್ಯುತ್ತಮವಾದ ಮಾರಾಟಾನಂತರದ ಸೇವೆಯನ್ನು ಒದಗಿಸುವುದನ್ನು ಮುಂದುವರಿಸುತ್ತೇವೆ ಎಂದು ಟಾಟಾ ಮೋಟರ್ಸ್ ಪ್ಯಾಸೆಂಜರ್ ವಾಹನಗಳ ವ್ಯಾಪಾರ ಘಟಕದ ದೇಶೀಯ ಮುಖ್ಯಸ್ಥರಾದ ಡಿಂಪಲ್ ಮೆಹ್ತಾ ಹೇಳಿದರು.
ಪ್ರಬಲವಾಗಿ ನಿರ್ಮಾಣ ಮಾಡಲಾಗಿರುವ ಗುಣಮಟ್ಟದೊಡನೆ ಪ್ರಬಲವಾದ ಉತ್ಪನ್ನ ನಂಬಿಕೆಯೂ ಬರುತ್ತದೆ. ಇದನ್ನು ಒತ್ತಿಹೇಳುವುದಕ್ಕಾಗಿ ಟಾಟಾ ಮೋಟರ್ಸ್ ಎಲ್ಲಾ ಹೊಚ್ಚಹೊಸ ಸಫಾರಿಗಳಿಗೆ ಹೆಚ್ಚುವರಿಯಾದ ಮೌಲ್ಯವರ್ಧಿತ ಸೇವೆಗಳನ್ನು ವಿಸ್ತರಿಸಿ ಇಡೀ ಉತ್ಪನ್ನ ಕೊಡುಗೆಯನ್ನು ನಿರಾಕರಿಸಲಾಗದಂತೆ ಮಾಡುತ್ತಿದೆ.
ಪೆಂಟಾಕೇರ್ ವಿಸ್ತರಿತ ವಾರಂಟಿ: ಸಫಾರಿಗಾಗಿ ನಾವು 5 ವರ್ಷಗಳು ಹಾಗು ಅನಿಯಮಿತ ಕಿಲೋಮೀಟರುಗಳ ಪೆಂಟಾಕೇರ್ ವಿಸ್ತರಿತ ವಾರಂಟಿಯನ್ನು ಪ್ರಾರಂಭಿಸಿದ್ದೇವೆ. ಈ ವಿಸ್ತರಿತ ವಾರಂಟಿಯು 3 ಆಯ್ಕೆಗಳನ್ನು ಹೊಂದಿರುತ್ತದೆ- 2+1 ವರ್ಷಗಳು/1.15 ಲಕ್ಷ ಕಿಲೋಮೀಟರುಗಳು(ಯಾವುದು ಮೊದಲು ಬರುತ್ತದೋ ಅದು), 2+2 ವರ್ಷಗಳು/1.30 ಲಕ್ಷ ಕಿಲೋಮೀಟರುಗಳು(ಯಾವುದು ಮೊದಲು ಬರುತ್ತದೋ ಅದು) ಮತ್ತು 2+3 ವರ್ಷಗಳ (ಪೆಂಟಾಕೇರ್)/ಅನಿಯಮಿತ ಕಿಲೋಮೀಟರುಗಳ ವಾರಂಟಿ. ಈ ವಾರಂಟಿ ಪ್ಯಾಕೇಜ್, ಇಂಜಿನ್ ಮತ್ತು ಇಂಜಿನ್ ನಿರ್ವಹಣಾ ಸಿಸ್ಟಮ್, ಏರ್ ಕಂಡೀಷನಿಂಗ್ ಸಿಸ್ಟಮ್, ಟ್ರಾನ್ಸ್‍ಮಿಶನ್ ಸಿಸ್ಟಮ್ ಮತ್ತು ಗೇರ್ ಬಾಕ್ಸ್, ಫ್ಯುಯೆಲ್ ಸಿಸ್ಟಮ್,ನಂಥ ಎಲ್ಲಾ ಮುಖ್ಯ ಬಿಡಿಭಾಗಗಳ ಮುಖ್ಯ ನಿರ್ವಹಣಾ ಸೇವೆಗಳನ್ನು ಒಳಗೊಂಡಿರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ 50,000 ಕಿಲೋಮೀಟರ್‍ಗಳವರೆಗೆ, ಕ್ಲಚ್ ಮತ್ತು ಸಸ್ಪೆನ್ಶನ್‍ನ ಯಾವುದೇ ರೀತಿಯ ಕಾರ್ಯವೈಫಲ್ಯಕ್ಕೆ ಸಂಬಂಧಿಸಿದ ಬ್ರೇಕ್‍ಡೌನ್ ಕೂಡ ಈ ವಿಸ್ತರಿತ ವಾರಂಟಿಯಲ್ಲಿ ಪೂರೈಕೆಯಾಗುತ್ತದೆ.
ಮೌಲ್ಯ ಆರೈಕೆ (ವ್ಯಾಲ್ಯೂ ಕೇರ್)ನಿರ್ವಹಣಾ ಯೋಜನೆ- ವಾರ್ಷಿಕ ನಿರ್ವಹಣಾ ಒಪ್ಪಂದ(ಎಎಮ್‍ಸಿ): ಟಾಟಾ ಮೋಟರ್ಸ್, ವಾಹನದ ಕಾರ್ಯಾಚರಣೆಯ ಸಮಯದಲ್ಲಿ, ಲೂಬ್ರಿಕೇಂಟ್‍ಗಳ ದರಹೆಚ್ಚಳಿಕೆ ಮತ್ತು ದರ ಏರಿಳಿತದ ವಿರುದ್ಧದ ರಕ್ಷಣೆಯ ಮೂಲಕ ಅನಿರೀಕ್ಷಿತ ರಿಪೇರಿ ವೆಚ್ಚಗಳ ವಿರುದ್ಧವೂ ರಕ್ಷಣೆ ಒದಗಿಸುವುದರ ಜೊತೆಗೆ ಗಣನೀಯ ಉಳಿತಾಯವನ್ನೂ ಖಾತರಿಪಡಿಸುವಂತಹ ಭಾರತದಾದ್ಯಂತದ ನಿರ್ವಹಣಾ ಸೇವೆಯ ಯೋಜನೆಯಾದ ವ್ಯಾಲ್ಯೂ ಕೇರ್(ಮೌಲ್ಯ ಆರೈಕೆ)ಯೋಜನೆಯನ್ನು ಪ್ರಾರಂಭಿಸಿದೆ. ಗ್ರಾಹಕರು ಈ ಮೂರು ಯೋಜನೆಗಳ ಪೈಕಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು- ವ್ಯಾಲ್ಯೂ ಕೇರ್ ಗೋಲ್ಡ್, ವ್ಯಾಲ್ಯೂ ಕೇರ್ ಪ್ರಾಮಿಸ್ ಟು ಪೆÇ್ರಟೆಕ್ಟ್ ಮತ್ತು ವ್ಯಾಲ್ಯೂ ಕೇರ್ ಸಿಲ್ವರ್. ಈ ಯೋಜನೆಗಳ ನಡುವೆ, ಗ್ರಾಹಕರು, ವಾಹನದ ಬಿಡಿಭಾಗಗಳಿಗೆ ಅನಿರೀಕ್ಷಿತ ವೇರ್ ಅಂಡ್ ಟೇರ್ ರಿಪೇರಿಗಳು, ಆಯಿಲ್ ಮರುಬದಲಾವಣೆ, ಉಪಯುಕ್ತ ಬಿಡಿಭಾಗಗಳು, ಸರ್ವಿಸ್ ಬಿಡಿಭಾಗಗಳು ಮತ್ತು ನಿಗದಿತ ಹಾಗು ಶಿಫಾರಸು ಮಾಡಿದ ಸಮಯದಲ್ಲಿ ನಿಮ್ಮ ವಾಹನಗಳ ನಿಯಮಿತ ಸರ್ವಿಸಿಂಗ್‍ನಂತಹ ವೈವಿಧ್ಯಮಯ ಸೇವೆಗಳನ್ನೂ ಪಡೆದುಕೊಳ್ಳಬಹುದು.