Car Production Plant ಫೋರ್ಡ್ ಘಟಕ ಖರೀದಿಗೆ ಮುಂದಾದಾ ಟಾಟಾ ಮೋಟಾರ್ಸ್, ವಿದೇಶಿ ಕಂಪನಿಗಳಿಂದ ಪೈಪೋಟಿ!

By Suvarna News  |  First Published Dec 31, 2021, 5:33 PM IST
  • ಭಾರತದಲ್ಲಿ ಕಾರು ಉತ್ಪಾದನೆ ಸ್ಥಗಿಸಿರುವ ಫೋರ್ಡ್, ಮುಚ್ಚಿದ ಘಟಕ
  • ತಮಿಳುನಾಡಿನಲ್ಲಿರುವ ಫೋರ್ಡ್ ಪ್ಲಾಂಟ್ ಖರೀದಿಗೆ ಮುಂದಾದಾ ಟಾಟಾ
  • ಟಾಟಾ ಮೋಟಾರ್ಸ್‌ಗೆ ವಿದೇಶಿ ಆಟೋ ಕಂಪನಿಗಳಿಂದ ಪೈಪೋಟಿ
     

ಚೆನ್ನೈ(ಡಿ.31):  ಭಾರತದಲ್ಲಿ ಫೋರ್ಡ್ ಫಿಗೋ, ಫೋರ್ಡ್ ಇಕೋಸ್ಪೋರ್ಟ್, ಫೋರ್ಡ್ ಎಂಡೆವರ್,, ಫೋರ್ಡ್ ಆಸ್ಪೈರ್ ಸೇರಿದಂತೆ ಅತ್ಯುತ್ತಮ ಕಾರುಗಳ ಮೂಲಕ  ಕಾರು ಮಾರುಕಟ್ಟೆಯಲ್ಲಿ ಫೋರ್ಡ್(Ford India) ತನ್ನದೇ ಆದ ಚಾಪು ಮೂಡಿಸಿತ್ತು. ಕೊರೋನಾ ಹೊಡೆತ, ಇತರ ಆಟೋಮೊಬೈಲ್(Automobile) ಕಂಪನಿಗಳ ಪೈಪೋಟಿ ಸೇರಿದಂತೆ ಹಲವು ಕಾರಣಗಳಿಂದ ಫೋರ್ಡ್ ನಷ್ಟ ತಾಳಲಾರದೆ ಸೆಪ್ಟೆಂಬರ್ ತಿಂಗಳಲ್ಲಿ ಫೋರ್ಡ್ ಭಾರತದಲ್ಲಿ ಉತ್ಪಾದನೆ ಸ್ಥಗಿತಗೊಳಿಸಿದೆ. ಚೆನ್ನೈನಲ್ಲಿರುವ ಫೋರ್ಡ್ ಕಾರು ಉತ್ಪಾದನಾ ಘಟಕ ಮುಚ್ಚಲ್ಪಟ್ಟಿದೆ. ಇದೀಗ ಈ ಘಚಕ ಖರೀದಿಗೆ ಟಾಟಾ ಮೋಟಾರ್ಸ್ ಮಂದಾಗಿದೆ.

ಫೋರ್ಡ್ ಭಾರತದಲ್ಲಿ ಉತ್ಪಾದನೆ(Production) ಸ್ಥಗಿತಗೊಳಿಸಿದ ಬೆನ್ನಲ್ಲೇ ತನ್ನ ಘಟಕ(Production Plant) ಮಾರಾಟ ಮಾಡಲು ಮುಂದಾಗಿತ್ತು. ಭಾರತ, ವಿದೇಶದ ಕೆಲ ಕಂಪನಿಗಳು ಫೋರ್ಡ್ ಜೊತೆ ಮಾತುಕತೆ ನಡೆಸಿತ್ತು. ಆದರೆ ಯಾವುದೂ ಅಂತಿಮ ಹಂತ ತಲುಪಿರಲಿಲ್ಲ. ಇದೀಗ ಫೋರ್ಡ್ ಉತ್ಪಾದನೆ ಸ್ಥಗಿತಗೊಳಿಸಿ ಕೆಲ ತಿಂಗಳು ಉರುಳಿಸಿದೆ. ಇತ್ತ ಉದ್ಯಮ ವಿಸ್ತರಿಸಿರುವ ಟಾಟಾ ಮೋಟಾರ್ಸ್(Tata Motors) ತಮಿಳುನಾಡಿನ ಫೋರ್ಡ್ ಇಂಡಿಯಾ ಕಾರು ಉತ್ಪಾದನಾ ಘಟಕ ಖರೀದಿಗೆ ಮುಂದಾಗಿದೆ. ಇದಕ್ಕಾಗಿ ತಮಿಳುನಾಡು ಸರ್ಕಾರದ ಜೊತೆ ಮಾತುಕತೆ ನಡೆಸಿದೆ. ಇಷ್ಟೇ ಅಲ್ಲ ಫೋರ್ಡ್ ಘಟಕಕ್ಕೆ ತೆರಳಿ ಪರಿಶೀಲನೆ ನಡೆಸಿದೆ.

Tap to resize

Latest Videos

undefined

ಭಾರತಕ್ಕೆ ಗುಡ್ ಬೈ; ನಷ್ಟ ತಾಳಲಾರದೆ ಕಾರು ಉತ್ಪಾದನೆ ಸ್ಥಗಿತಗೊಳಿಸಿದ ಫೋರ್ಡ್

ಸದ್ಯ ತಮಿಳುನಾಡಿನಲ್ಲಿರುವ ಫೋರ್ಡ್ ಕಾರು ಉತ್ಪಾದನಾ, ಹಾಗೂ ಎಂಜಿನ್ ಉತ್ಪಾದನಾ ಘಚಕ ಕಾರ್ಯನಿರ್ವಹಿಸುತ್ತಿದೆ. 2020ರ ಆರಂಭಿಕ ದಿನಗಳಲ್ಲಿ ಫೋರ್ಡ್ ಘಟಕ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ಸದ್ಯ ಬುಕಿಂಗ್ ಕಾರುಗಳ ಉತ್ಪಾದನೆ ಕೂಡ ಅಂತ್ಯಗೊಳಿಸಿದೆ. ಟಾಟಾ ಮೋಟಾರ್ಸ್ ಹಿರಿಯ ಅಧಿಕಾರಿಗಳು ತಮಿಳುನಾಡು ಕೈಗಾರಿಕೆ ಸಚಿವ ತಂಗಮ್ ತೆನಾರಸು ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. 

ಫೋರ್ಡ್ ಕಾರು ಉತ್ಪಾದನಾ ಘಟಕ ಮಾರಾಟದ ಕುರಿತು ತಂಗಮ್ ತೆನಾರಸು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಟಾಟಾ ಮೋಟಾರ್ಸ್ ಫೋರ್ಡ್ ಘಟಕ ಖರೀದಿಗೆ ಮುಂದಾಗಿದೆ. ಆದರೆ ಅಂತಿಮ ಮಾತುಕತೆ ನಡೆದಿಲ್ಲ. ಟಾಟಾ ಜೊತೆಗೆ ಇತರ ವಿದೇಶಿ ಆಟೋಮೊಬೈಲ್ ಕಂಪನಿಗಳು ಘಟಕ ಖರೀದಿಗೆ ಆಸಕ್ತಿ ತೋರಿದೆ ಎಂದು ಸಚಿವರು ಹೇಳಿದ್ದಾರೆ.

ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ ವಾಹನ ನಿರ್ವಹಣೆಗೆ 7 ಟಿಪ್ಸ್!

ಫೋರ್ಡ್ ಇಂಡಿಯಾ ತನ್ನ ಗುಜರಾತ್‌ನಲ್ಲಿರುವ ಘಟಕವನ್ನು 2021ರ ಅಂತ್ಯದಲ್ಲಿ ಸ್ಥಗಿತಗೊಳಿಸಿದೆ. ಇದೀಗ ತಮಿಳುನಾಡಿನಲ್ಲಿರುವ ಘಟಕ 2022ರಲ್ಲಿ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ ಎಂದು ಫೋರ್ಡ್ ಇಂಡಿಯಾ ಹೇಳಿದೆ. ಗುಜರಾತ್ ಹಾಗೂ ತಮಿಳುನಾಡಿನಲ್ಲಿರುವ ಎರಡು ಘಟಕದಿಂದ ವರ್ಷಕ್ಕೆ ಒಟ್ಟು 4,40,000 ಕಾರುಗಳು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಸುಸಜ್ಜಿತವಾದ ಘಟಕವಿದ್ದರೂ ಫೋರ್ಡ್ ಕೇವಲ ಶೇಕಡಾ 25 ರಷ್ಟು ಮಾತ್ರ ಬಳಕೆ ಮಾಡಿಕೊಳ್ಳುತ್ತಿತ್ತು. ಇತ್ತ ಮಾರಾಟದಲ್ಲೂ ಕುಸಿತ ಕಾರಣ ಫೋರ್ಡ್ ತೀವ್ರ ನಷ್ಟಕ್ಕೆ ಒಳಗಾಗಿತ್ತು.

ಫೋರ್ಡ್ ಉತ್ಪಾದನಾ ಘಚಕದ 4,000 ಉದ್ಯೋಗಿಗಳು ಅತಂತ್ರ
ಗುಜರಾತ್ ಹಾಗೂ ತಮಿಳುನಾಡು ಘಟಕ ಸ್ಥಗಿತಗೊಂಡಿರುವ ಕಾರಣ ಬರೋಬ್ಬರಿ 4,000 ಉದ್ಯೋಗಿಗಳು ಅತಂತ್ರರಾಗಿದ್ದಾರೆ.  ಕೊರೋನಾ ಹೊಡೆತದ ಸಂದರ್ಭದಲ್ಲೇ ಫೋರ್ಡ್ ಈ ನಿರ್ಧಾರ ಉದ್ಯೋಗಿಗಳನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

ಭಾರತದಲ್ಲಿ 4 ದಶಗಳಿಂದ ಪೋರ್ಡ್ ವ್ಯವಾಹರ
ಭಾರತದಲ್ಲಿ ಫೋರ್ಡ್ ವ್ಯವಹಾರ ಆರಂಭಿಸ ಸರಿಸುಮಾರು 4 ದಶಕಗಳು ಉರುಳುತ್ತಿದೆ. 1984ರಲ್ಲಿ ಫೋರ್ಡ್ ಭಾರತದಲ್ಲಿ ವಹಿವಾಟು ಆರಂಭಿಸಿತ್ತು. ಅತ್ಯುತ್ತಮ ಗುಣಮಟ್ಟದ ಕಾರುಗಳ ಮೂಲಕ ಅಮೆರಿಕ ಮೂಲದ ಫೋರ್ಡ್ ಭಾರತದಲ್ಲಿ ಹೊಸ ನಿಧಾನಗತಿಯಲ್ಲಿ ಯಶಸ್ಸು ಕಾಣತೊಡಗಿತ್ತು. ಆದರೆ ಅಷ್ಟೇ ವೇಗದಲ್ಲಿ ಕುಸಿತ ಕಾಣಲಾರಂಭಿಸಿತು.

click me!