ಕೇಂದ್ರದಿಂದ ತಾರಮತ್ಯ ಬೇಡ; ಟೆಸ್ಲಾ ಆಮದು ಸುಂಕ ಕಡಿತ ಮನವಿಗೆ ಟಾಟಾ ಮೋಟಾರ್ಸ್ ತಿರುಗೇಟು!

By Suvarna News  |  First Published Jul 27, 2021, 3:18 PM IST
  • ಆತ್ಮನಿರ್ಭರ ಭಾರತ ಅಡಿಯಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡಬೇಕು
  • ಭಾರತದಲ್ಲಿ ಟೆಸ್ಲಾ ಕಾರುಗಳು ಬಿಡುಗಡೆಗಾಗಿ ನಿಯಮದಲ್ಲಿ ಬದಲಾವಣೆ ಬೇಡ
  • ಎಲ್ಲರನ್ನೂ ಒಂಂದೇ ರೀತಿಯಾಗಿ ನೋಡಿ ಎಂದು ಸರ್ಕಾರಕ್ಕೆ ಟಾಟಾ ಮೋಟಾರ್ಸ್ ಆಗ್ರಹ
     

ನವದೆಹಲಿ(ಜು.27): ಭಾರತದಲ್ಲಿರುವ ಸ್ವದೇಶಿ ಹಾಗೂ ವಿದೇಶಿ ಎಲ್ಲಾ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿಗಳನ್ನು ಕೇಂದ್ರ ಸರ್ಕಾರ ಒಂದೇ ರೀತಿಯಾಗಿ ನೋಡಬೇಕು. ಇದರಲ್ಲಿ ತಾರತಮ್ಯ ಸಲ್ಲದು ಎಂದು ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಆಗ್ರಹಿಸಿದೆ. ದೇಶದಲ್ಲಿ ಅಮೆರಿಕ ಮೂಲಕ ಟೆಸ್ಲಾ ಕಾರುಗಳ ಬಿಡುಗಡೆಗೆ ತಯಾರಿ ನಡೆಯುತ್ತಿದೆ. ಇದರ ಬೆನ್ನಲ್ಲೇ ಟೆಸ್ಲಾ ಆಮದು ಸುಂಕ ಕಡಿತಗೊಳಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಬೆಳವಣಿಗೆ ಕುರಿತು ಟಾಟಾ ಅಸಮಾಧಾನ ವ್ಯಕ್ತಪಡಿಸಿದೆ.

500 ಕಿ.ಮೀ ಮೈಲೇಜ್, 10 ಲಕ್ಷ ರೂಪಾಯಿ; ಶೀಘ್ರದಲ್ಲೇ ಟಾಟಾ ಅಲ್ಟ್ರೋಜ್ EV ಬಿಡುಗಡೆ!

Latest Videos

FAME II ಎಲೆಕ್ಟ್ರಿಕ್ ವಾಹನ ಸಬ್ಸಿಡಿ ಯೋಜನೆಯಲ್ಲಿ ಭಾರತದ ಸ್ಥಳೀಯ ಎಲೆಕ್ಟ್ರಿಕ್ ವಾಹನಗಳ ತಯಾರಿಕೆ, ಮಾರಾಟಕ್ಕೆ ಉತ್ತೇಜನ ನೀಡಬೇಕು. ಇದು ನಿಜವಾದ ಆತ್ಮನಿರ್ಭರ ಭಾರತ. ಆದರೆ ಅಮೆರಿಕದ ಟೆಸ್ಲಾ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ಅಮದು ಸುಂಕ ಕಡಿತಗೊಳಿಸಲು ನಿರ್ಧಾರ ಸರಿಯಲ್ಲ ಎಂದು ಟಾಟಾ ಮೋಟಾರ್ಸ್ ಹೇಳಿದೆ.

ವಿದೇಶಿ ಕಾರು ಕಂಪನಿಗಳಿಗೆ ಆಮದು ಸಂಕು ಕಡಿತಗೊಳಿಸಿ, ಸ್ವದೇಶಿ ಕಂಪನಿಗಳಿಗೆ ಹೆಚ್ಚಿನ ಸುಂಕ ವಿಧಿಸುವುದು ಸರಿಯಲ್ಲ. ಇದರ ಬದಲು ಎಲ್ಲರನ್ನೂ ಒಂದೇ ರೀತಿಯಾ ನೋಡಿ. ಈಗಾಗಲೇ ಟಾಟಾ ಮೋಟಾರ್ಸ್ ಸ್ವದೇಶಿ ನಿರ್ಮಿತ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಿದೆ. ದೇಶದಲ್ಲಿ ಲಭ್ಯವಿರುವು ಅತ್ಯಂತ ಸುರಕ್ಷಿತ ಹಾಗೂ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಅನ್ನೋ ಹೆಗ್ಗಳಿಗೆ ಟಾಟಾ ಪಾತ್ರವಾಗಿದೆ. ಈ ಎಲ್ಲಾ ಅಂಶಗಳನ್ನು ಸರ್ಕಾರ ಪರಿಗಣಿಸಬೇಕು ಎಂದು ಟಾಟಾ ಮೋಟಾರ್ಸ್ ಸಿಎಫ್ಒ ಪಿ ಬಾಲಾಜಿ ಹೇಳಿದ್ದಾರೆ.

ರಾಜ್ಯದಲ್ಲಿ ಟೆಸ್ಲಾ ಕಾರು ಉತ್ಪಾದನೆ: ಸ್ವತಃ ಸಿಎಂ ಬಿಎಸ್‌ವೈ ಘೋಷಣೆ

ಟಾಟಾ ಮೋಟಾರ್ಸ್ ನೆಕ್ಸಾನ್ ಇವಿ ಹಾಗೂ ಟಿಗೋರ್ ಇವಿ ಕಾರುಗಳನ್ನು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಟಾಟಾ ಶೀಘ್ರದಲ್ಲೇ 10 ಎಲೆಕ್ಟ್ರಿಕ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಸರ್ಕಾರ ಸ್ಥಳೀಯ ಉತ್ಪನ್ನುಗಳನ್ನು ಮತ್ತಷ್ಟು ಉತ್ತೇಜಿಸಿದರೆ ಕಡಿಮೆ ಬೆಲೆಯಲ್ಲಿ ಕಾರುಗಳು ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ.

ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ತಯಾರಿಕ ಕಂಪನಿ ಟೆಸ್ಲಾ ಭಾರತದಲ್ಲಿ ಕಾರು ಬಿಡುಗಡೆಗೆ ಮುಂದಾಗಿದೆ. ಕಳೆದ 5 ವರ್ಷದಿಂದ ಪ್ರಯತ್ನಗಳು ನಡೆಯತ್ತಿದೆ. ಇತ್ತೀಚೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಟೆಸ್ಲಾ ಬಿಡುಗಡೆ ಖಚಿತಪಡಿಸಿದ್ದರು. ಆದರೆ ನಿಗದಿತ ಸಮಯದಲ್ಲಿ ಟೆಸ್ಲಾ ಭಾರತಕ್ಕೆ ಆಗಮಿಸಲಿಲ್ಲ. ಈ ಕುರಿತು ಟೆಸ್ಲಾ ಸಿಇಒ ಎಲನ್ ಮಸ್ಕ್ ಕಾರಣನ್ನು ಹೇಳಿದ್ದರು.

ಪ್ರತಿಷ್ಠಿತ ಟೆಸ್ಲಾ ಕಂಪನಿಯಲ್ಲಿ ಕೆಲಸಬೇಕಾ? ಭಾರತದಲ್ಲಿ ನೇಮಕಾತಿ ಆರಂಭ!

ಭಾರತ ಅತೀ ಹೆಚ್ಚು ಆಮದು ಸಂಕು ವಿಧಿಸುವ ದೇಶವಾಗಿದೆ. ಈ ಸಂಕ ಕಡಿತಗೊಳಿಸಲು ಭಾರತದ ಜೊತೆ ಮಾತುಕತೆ ನಡೆಯುತ್ತಿದೆ. ಹೀಗಾಗಿ ಕಾರು ಬಿಡುಗಡೆ ಕೊಂಚ ವಿಳಂಬವಾಗಲಿದೆ ಎಂದು ಮಸ್ಕ್ ಹೇಳಿದ್ದರು. ಟಾಟಾ ಸೇರಿದಂತೆ ಭಾರತದಲ್ಲಿ ಸ್ವದೇಶಿ ಕಂಪನಿಗಳು ಎಲೆಕ್ಟ್ರಿಕ್ ವಾಹನ ತಯಾರಿಸುತ್ತಿದೆ. ಆದರೆ ಹಲವು ಬಿಡಿ ಭಾಗಗಳನ್ನು ಸ್ವದೇಶಿ ಕಂಪನಿಗಳು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದೆ. ಈ ಬಿಡಿಭಾಗಕ್ಕೆ ಅತೀ ಹೆಚ್ಚು ಸುಂಕ ನೀಡಿ ತರಿಸಿಕೊಳ್ಳುತ್ತಿದೆ. ಹೀಗಾಗಿ ಸುಂಕ ಕಡಿತಗೊಳಿಸುವುದಾದರೆ ಎಲ್ಲರಿಗೂ ಕಡಿತಗೊಳಿಸಿ ಎಂದು ಟಾಟಾ ಮೋಟಾರ್ಸ್ ಆಗ್ರಹಿಸಿದೆ.

click me!