ಬೆಂಗಳೂರು(ಫೆ.25: ಭಾರತದ ರಾಷ್ಟ್ರೀಯ ಉದ್ಯಾನಗಳಲ್ಲಿನ ಪ್ರಾಣಿಗಳ ಸಂರಕ್ಷಣೆ, ಪರಿಸರ ಸಮತೋಲ ಕಾಪಾಡಲು ಟಾಟಾ ಮೋಟಾರ್ಸ್ ಮಹತ್ವದ ಹೆಜ್ಜೆ ಇಟ್ಟಿದೆ. ವಿಶೇಷವಾಗಿ ವಿನ್ಯಾಸಗೊಳಿಸಲಾದ ಕಾಜಿರಂಗ ಸ್ಪೆಷಲ್ ಎಡಿಶನ್ SUV ಕಾರನ್ನು ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿದೆ. ಭಾರತದ ಪ್ರಪ್ರಥಮ ಹಾಗೂ ಅತಿಸುರಕ್ಷಿತ ಸಬ್ ಕಾಂಪ್ಯಾಕ್ಟ್ ಎಸ್‍ಯುವಿ-ಪಂಚ್, ಭಾರತದ ಪ್ರಪ್ರಥಮ GNCAP 5 ಸ್ಟಾರ್ ರೇಟಿಂಗ್ ಪಡೆದ ಕಾರ್-ನೆಕ್ಸಾನ್, ಲ್ಯಾಂಡ್ ರೋವರ್ ಡಿಎನ್‍ಎ ಇರುವ ಸಂಸ್ಥೆಯ ಪ್ರೀಮಿಯಮ್ ಎಸ್‍ಯುವಿ-ಹ್ಯಾರಿಯರ್ ಹಾಗೂ ಅದರ ಪ್ರಧಾನ 7 ಸೀಟರ್ ಎಸ್‍ಯುವಿ-ಸಫಾರಿಯನ್ನು ಒಳಗೊಂಡಿರುತ್ತದೆ. ಇಂದು ಬುಕಿಂಗ್‍ಗಳು ಆರಂಭಗೊಂಡು, ಕಾಜಿರಂಗಾ ಆವೃತ್ತಿಯು, ಎಲ್ಲಾ ಟಾಟಾ ಮೋಟರ್ಸ್ ಅಧಿಕೃತ ಡೀಲರ್‍ಶಿಪ್‍ಗಳಾದ್ಯಂತ ಇರುವ ಕೇವಲ ತಮ್ಮ ತಮ್ಮ ಟಾಪ್ ಟ್ರಿಮ್‍ಗಳಲ್ಲಿ ಮಾತ್ರ ಲಭ್ಯವಿರುತ್ತವೆ.
ಇತ್ತೀಚೆಗೆ ಟಾಟಾ ಮೋಟರ್ಸ್, ಪಂಚ್ ಕಾಜಿರಂಗಾ ಆವೃತ್ತಿಯನ್ನು ಐಪಿಎಲ್ ಅಭಿಮಾನಿಗಳಿಗೆ ಏಲಂ ಮಾಡುವ ತನ್ನ ಯೋಜನೆಯನ್ನೂ ಘೋಷಿಸಿದ್ದು, ಬಿಡ್‍ನಿಂದ ಬರುವ ಪೂರ್ತಿ ಹಣವನ್ನು ಕಾಜಿರಂಗಾ ವನ್ಯಜೀವಿ ಸಂರಕ್ಷಣೆಗೆ ದೇಣಿಗೆ ನೀಡಲು ನಿರ್ಧರಿಸಿದೆ.
ಟಾಟಾ ಕಾಜಿರಂಗಾ ಕಾರಿನ ಆರಂಭಿಕ ಬೆಲೆ(ಎಕ್ಸ್ ಶೋರೂಮ್ )
ಪಂಚ್ : 8,58,900 ರೂಪಾಯಿ
ನೆಕ್ಸಾನ್(ಪೆಟ್ರೋಲ್): 11,78,900 ರೂಪಾಯಿ
ನೆಕ್ಸಾನ್(ಡೀಸಲ್): 13,08,900 ರೂಪಾಯಿ
ಹ್ಯಾರಿಯರ್: 20,40,900 ರೂಪಾಯಿ
ಸಫಾರಿ(7 ಸೀಟರ್): 20,99,900 ರೂಪಾಯಿ
IPL Auction 2022: ಟಾಟಾ ಪಂಚ್ ಕಾಝಿರಂಗ ಎಸ್‌ಯುವಿ ಹರಾಜು!
ಎಸ್‍ಯುವಿಗಳೆಡೆಗಿನ ಮಾರ್ಪಾಡು ಜಾಗತಿಕ ಪ್ರವೃತ್ತಿಯಾಗಿದ್ದು, ಭಾರತಕ್ಕೂ ಅದು ಅನ್ವಯಿಸುತ್ತದೆ. ನಮ್ಮ ಅಭಿಮಾನಿಗಳಿಂದ ಅಪಾರ ಮೆಚ್ಚುಗೆಗೆ ಒಳಗಾಗಿರುವ ನಮ್ಮ ‘ನ್ಯೂ ಫಾರೆವರ್ ಶ್ರೇಣಿಯ’ ಎಸ್‍ಯುವಿಗಳೊಂದಿಗೆ ನಾವೂ ಕೂಡ ಈ ಪ್ರವೃತ್ತಿಯ ಮೇಲೇ ಚಲಿಸುತ್ತಿದ್ದೇವೆ. ಪ್ರಸ್ತುತದ ಉದ್ಯಮ ಪರಿಸ್ಥಿತಿ ಹಾಗೂ ಮಾರುಕಟ್ಟೆ ಸ್ಥಳದಲ್ಲಿ ಲಭ್ಯವಿರುವ ಅಪಾರ ಆಯ್ಕೆಗಳ ಮಧ್ಯದಲ್ಲಿ ನಾವು #1 ಎಸ್‍ಯುವಿ ಬ್ರ್ಯಾಂಡ್ ಆಗಿ ಹೊರಹೊಮ್ಮಿರುವುದಕ್ಕೆ ಸಂತೋಷಿಸುತ್ತೇವೆ ಮತ್ತು ಈ ಬ್ರ್ಯಾಂಡ್ ಮೇಲೆ ವಿಶ್ವಾಸವಿರಿಸಿದ್ದಕ್ಕಾಗಿ ನಾವು ನಮ್ಮ ಗ್ರಾಹಕರಿಗೆ ಧನ್ಯವಾದ ಅರ್ಪಿಸಬಯಸುತ್ತೇವೆ. ಈ ಯಶೋಗಾಥೆಯನ್ನು ಇನ್ನಷ್ಟು ಮುಂದಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನವಾಗಿ, ನಮ್ಮ ದೇಶವು ಒದಗಿಸುತ್ತಿರುವ ಸಮೃದ್ಧ ಜೀವವೈವಿಧ್ಯತೆಯಿಂದ ಪ್ರೇರಿತಗೊಂಡು, ‘ಪಳಗಿಸಲಾಗದ ಕಾಜಿರಂಗಾ ಎಸ್‍ಯುವಿಗಳ ಆವೃತ್ತಿಯನ್ನು’ ಪರಿಚಯಿಸುವುದಕ್ಕೆ ನಮಗೆ ಅತ್ಯಂತ ಹರ್ಷವಾಗುತ್ತಿದೆ. ಕಾಜಿರಂಗಾದ ಚಿಹ್ನೆಯಾಗಿರುವ, ಮತ್ತು ವಿಶ್ವವ್ಯಾಪಿಯಾಗಿ ತನ್ನ ಚುರುಕುತನ ಮತ್ತು ಶಕ್ತಿಗೆ ಹೆಸರುವಾಸಿಯಾಗಿರುವ ಮಹಾನ್ ಭಾರತದ ಒಚಿಟಿ ಕೊಂಬಿನ ಘೇಂಡಾಮೃಗದ ಚಿಹ್ನೆಯಾಗಿರುವ ಈ ಶ್ರೇಣಿಯು ನಮ್ಮ ನಿಜವಾದ ಎಸ್‍ಯುವಿಗಳ “ಎಲ್ಲಿಗಾದರೂ ಹೋಗಿ”ಡಿಎನ್‍ಎಅನ್ನು ಪುನರುಚ್ಚರಿಸುತ್ತದೆ. ಮೇಲಿನದಕ್ಕೆ ಸೇರ್ಪಡೆಯಾಗಿ, ಮತ್ತು ನ್ಯೂ ಫಾರೆವರ್ ಬ್ರ್ಯಾಂಡ್ ವಾಗ್ದಾನಕ್ಕೆ ಅನುಗುಣವಾಗಿ, ನಾವು ನಮ್ಮ ಗ್ರಾಹಕರಿಗಾಗಿ ನಮ್ಮ ಎಸ್‍ಯುವಿ ಪೋರ್ಟ್ ಪೋಲಿಯೊವನ್ನು ವೈವಿಧ್ಯಮಯಗೊಳಿಸುತ್ತಿದ್ದು ಈ ಪರಿಚಯವು, ಎಸ್‍ಯುವಿ ವರ್ಗದಲ್ಲಿ ನಾಯಕರಾಗಿ ನಮ್ಮ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಲಿದೆ ಎಂದು ಆಶಿಸುತ್ತೇವೆ ಎಂದು ಟಾಟಾ ಮೋಟರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿ ವಿಭಾಗದ ಉಪಾಧ್ಯಕ್ಷ ರಾಜನ್ ಅಂಬ ಹೇಳಿದ್ದಾರೆ.
Tata Offers ಟಾಟಾ ಮೋಟಾರ್ಸ್ ಆಯ್ದ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್, ಖರೀದಿ ಮತ್ತಷ್ಟು ಸುಲಭ!
ಕಾಜಿರಂಗಾ ಶ್ರೇಣಿಯ ವಿಶೇಷತೆ:
ಈ ಹೊಸ ಶ್ರೇಣಿಯ ಪರಿಚಯವು, ಕಾರುಗಳ ಒಟ್ಟಾರೆ ವಿನ್ಯಾಸವನ್ನು ವರ್ಧಿಸಲು ಅನೇಕ ಆಸಕ್ತಿಪೂರ್ಣ ಸೇರ್ಪಡೆಗಳನ್ನು ಒಳಗೊಂಡಿದೆ. ಎಲ್ಲಾ ಮಾಡಲ್‍ಗಳೂ, ಪಿಯಾನೋ ಬ್ಲ್ಯಾಕ್ ಫಿನಿಶ್ ಇರುವ ಡ್ಯುಯಲ್ ರೂಫ್‍ನೊಂದಿಗೆ ಗ್ರಾಸ್‍ಲ್ಯಾಂಡ್ ಬೀಜ್ ಎಕ್ಸ್ಟೀರಿಯರ್ ಬಾಡಿ ಕಲರ್‍ನಲ್ಲಿ ಬರುತ್ತವೆ. ಒಳಾಂಗಣಗಳಲ್ಲಿ ಇರುವ ಅನೇಕ ಅರ್ತಿ ಬೀಜ್ ವರ್ಣಗಳ ಅಳವಡಿಕೆಗಳ ಜೊತೆಗೆ, ಅರ್ತಿ ಬೀಜ್ ಲೆದರೆಟ್ ಮೆತ್ತೆಗಳು(ಅಪ್‍ಹೊಲ್ಸ್ಟ್ರಿ) ಮತ್ತು ಟ್ರಾಪಿಕಲ್ ಮರದ ಡ್ಯಾಶ್‍ಬೋರ್ಡ್ ಈ ಕಾರುಗಳನ್ನು ಇನ್ನೂ ಹೆಚ್ಚು ಥೀಮ್ಯಾಟಿಕ್ ಮಾಡಿ, ವಿಶೇಷ ಭಾವದೊಂದಿಗೆ ಒಳಾಂಗಣಗಳನ್ನು ವರ್ಧಿಸುತ್ತದೆ. ಇದರ ಜೊತೆಗೆ, ಮುಂಬದಿಯ ಹೆಡ್‍ರೆಸ್ಟ್‍ಗಳ ಮೇಲಿರುವ, ಪರಸ್ಪರ ಮುಖ ಮಾಡಿ ನಿಂತಿರುವ ಎರಡು ಘೇಂಡಾಮೃಗಗಳ ಅಚ್ಚೊತ್ತಿದ ಅಂಚಿನ ಮುಂಡಭಾಗಗಳು(ಸಫಾರಿಯಲ್ಲಿ ಕೂಡ 2ನೆ ಸಾಲಿನಲ್ಲಿ) ಮತ್ತು ಫ್ರಂಟ್ ಫೆಂಡರ್‍ನ ಮೇಲಿರುವ ಹೊಸ ಸ್ಯಾಟಿನ್ ಕಪ್ಪು ಘೇಂಡಾಮೃಗದ ಮ್ಯಾಸ್ಕಾಟ್‍ನ ಸೇರ್ಪಡೆಯು, ಟಾಟಾ ಮೋಟರ್ಸ್‍ನ ನಿಜವಾದ ಎಸ್‍ಯುವಿಗಳ “ಎಲ್ಲಾದರೂ ಹೋಗಿ”ಮನೋಭಾವವನ್ನು ಒತ್ತಿ ಹೇಳುವ ಸಮಯದಲ್ಲೇ ಮ್ಯಾಸ್ಕಾಟ್‍ನ ದೃಢ ಕಾಠಿಣ್ಯತೆಯೊಂದಿಗೂ ಪ್ರತಿಧ್ವನಿಸುತ್ತದೆ.
ಟಾಟಾ ಪಂಚ್ ಕಾಜಿರಂಗಾ ಆವೃತ್ತಿ
ಭಾರತದ ಪ್ರಪ್ರಥಮ ಹಾಗೂ ಅತಿಸುರಕ್ಷಿತ ಸಬ್ ಕಾಂಪ್ಯಾಕ್ಟ್ ಎಸ್‍ಯುವಿ ಆದ ಟಾಟಾ ಪಂಚ್, ಹೊಚ್ಚ ಹೊಸ ಅರ್ತಿ ಬೀಜ್ ಲೆದರೆಟ್ ಮೆತ್ತೆಗಳು, ಪಿಯಾನೋ ಕಪ್ಪು ಬಾಗಿಲ ಟ್ರಿಮ್‍ಗಳು, ಅರ್ತಿ ಬೀಜ್ ಟ್ರೈ-ಆ್ಯರೋ ಫಿನಿಶ್ ಡ್ಯಾಶ್‍ಬೋರ್ಡ್ ಮಿಡ್ ಪ್ಯಾಡ್,ಗ್ರಾನೈಟ್ ಕಪ್ಪು ರೂಫ್ ರೈಲ್ಸ್, ಪಿಯಾನೋ ಕಪ್ಪು ಹ್ಯುಮಾನಿಟಿ ಲೈನ್ ಮುಂಬದಿ ಗ್ರಿಲ್ ಮತ್ತು ಗಾಢಕಪ್ಪು 16” ಅಲಾಯ್ ವ್ಹೀಲ್‍ಗಳ ಆಸಕ್ತಿಪೂರ್ಣ ಸೇರ್ಪಡೆಗಳನ್ನು ಹೊಂದಿದೆ. ಈ ಕಾಜಿರಂಗಾ ಆವೃತ್ತಿಯು, ಅಗ್ರ ವ್ಯಕ್ತಿತ್ವದಲ್ಲಿ ಲಭ್ಯವಿರುತ್ತದೆ-ಕ್ರಿಯೇಟಿವ್ ಎಮ್‍ಟಿ, ಕ್ರಿಯೇಟಿವ್ ಎಮ್‍ಟಿ – iRA, ಕ್ರಿಯೇಟಿವ್ ಎಎಮ್‍ಟಿ, ಮತ್ತು ಕ್ರಿಯೇಟಿವ್ ಎಎಮ್‍ಟಿ- iRA.
ಟಾಟಾ ನೆಕ್ಸಾನ್ ಕಾಜಿರಂಗಾ ಆವೃತ್ತಿ
ತನ್ನ ಹೊಚ್ಚ ಹೊಸ ಅವತಾರದಲ್ಲಿ ನೆಕ್ಸಾನ್, ಚಾಲಕ ಹಾಗೂ ಸಹಚಾಲಕರಿಗಾಗಿ ಹೆಚ್ಚು ಗಾಳಿಯಾಡುವ ಆಸನಗಳ ಸೇರ್ಪಡೆಯನ್ನು ಹೊಂದಿದೆ. ಏರ್‍ಪ್ಯೂರಿಫೈಯರ್‍ನ ಉಚಿತ ಸೇರ್ಪಡೆಯು ಅದರ ಕ್ಯಾಬಿನ್‍ಗಳು ಹೆಚ್ಚು ಆರಾಮದಾಯಕ ಹಾಗೂ ಸುರಕ್ಷಿತವಾಗಿರುವ ಭಾವ ಒದಗಿಸುತ್ತದೆ. ಚಾಲಕರಿಗೆ ಹೆಚ್ಚಿನ ಆರಾಮ ಒದಗಿಸಲು, ಈ ಆವೃತ್ತಿಯಲ್ಲಿ ಹೊಸ ಎಲೆಕ್ಟ್ರೋ-ಕ್ರೊಮಾಟಿಕ್ IRVM ಪರಿಚಯಿಸಲಾಗಿದೆ. ಹೆಚ್ಚುವರಿಯಾಗಿ, ನೆಕ್ಸಾನ್ ಕಾಜಿರಂಗಾ, ಡ್ಯುಯಲ್ ಟೋನ್ ಅರ್v ಬೀಜ್ ಲೆದರೆಟ್ ಮೆತ್ತೆಗಳು, ಪಿಯಾನೋ ಕಪ್ಪು ಬಾಗಿಲ ಟ್ರಿಮ್‍ಗಳು, ಟ್ರಾಪಿಕಲ್ ಮರದ ಡ್ಯಾಶ್‍ಬೋರ್ಡ್ ಮಿಡ್ ಪ್ಯಾಡ್, ಗ್ರಾನೈಟ್ ಕಪ್ಪು ಬಾಡಿ ಕ್ಲ್ಯಾಡಿಂಗ್ಸ್ ಮತ್ತು ರೂಫ್ ರೈಲ್ಸ್, ಕಪ್ಪು ಹ್ಯುಮಾನಿಟಿ ಲೈನ್ ಮುಂಬದಿ ಗ್ರಿಲ್ ಮತ್ತು ಗಾಢಕಪ್ಪು 16” ಅಲಾಯ್ ವ್ಹೀಲ್‍ಗಳಿಂದ ಸಜ್ಜಾಗಿದೆ. ನೆಕ್ಸಾನ್ ಕಾಜಿರಂಗಾ ಆವೃತ್ತಿಯು ಎರಡು ಟ್ರಿಮ್‍ಗಳಲ್ಲಿ ಲಭ್ಯವಿರುತ್ತದೆ-ಪೆಟ್ರೋಲ್ ಮತ್ತು ಡೀಸಲ್ ಪವರ್‍ಟ್ರೇನ್ಸ್, ನೆಕ್ಸಾನ್ XZ+ (P) ಮತ್ತು ನೆಕ್ಸಾನ್ XZA+ (P)
ಟಾಟಾ ಹ್ಯಾರಿಯರ್ ಕಾಜಿರಂಗಾ ಆವೃತ್ತಿ
ಟಾಟಾ ಮೋಟರ್ಸ್‍ನ ಪ್ರೀಮಿಯಮ್ ಎಸ್‍ಯುವಿ ಆದ ಹ್ಯಾರಿಯರ್, ಚಾಲಕ ಹಾಗೂ ಸಹ-ಚಾಲಕರಿಗಾಗಿ ಗಾಳಿಯಾಡುವ ಆಸನಗಳ ಸೇರ್ಪಡೆಯೊಂದಿಗೆ ವರ್ಧಿತ ಸೌಂದರ್ಯ ಹೊಂದಿರುತ್ತದೆ. ಏರ್‍ಪ್ಯೂರಿಫೈಯರ್‍ನ ಉಚಿತ ಸೇರ್ಪಡೆಯು ಅದರ ಕ್ಯಾಬಿನ್‍ಗಳು ಹೆಚ್ಚು ಆರಾಮದಾಯಕ ಹಾಗೂ ಸುರಕ್ಷಿತವಾಗಿರುವ ಭಾವ ಒದಗಿಸುತ್ತದೆ. ಇದು, ಆ್ಯಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಓವರ್ ವೈಫೈದೊಂದಿಗೆ, ಅನೇಕ ಹೊಸ ಸಂಪರ್ಕಗೊಂಡ ಕಾರ್ ತಂತ್ರಜ್ಞಾನಗಳೊಂದಿಗೂ(iRA ಸಂಪರ್ಕಗೊಂಡ ಕಾರ್ ತಂತ್ರಜ್ಞಾನ, ರಿಮೋಟ್ ನಿಯಂತ್ರಣಗಳು, ಲೊಕೇಶನ್ ಆಧಾರಿತ ಸೇವೆಗಳು, ಓವರ್ ದಿ ಏರ್ ಅಪ್‍ಡೇಟ್ಸ್, ಲೈವ್ ವೆಹಿಕಲ್ ಡಯಾಗ್ನೊಸ್ಟಿಕ್ಸ್, ಮತ್ತು ಗೇಮೀಫಿಕೇಶನ್) ಬರುತ್ತದೆ. ಡ್ಯುಯಲ್ ಟೋನ್ ಅರ್ತಿ ಬೀಜ್ ಲೆದರೆಟ್ ಆಸನಗಳು ಮತ್ತು ಬಾಗಿಲ ಟ್ರಿಮ್‍ಗಳು, ಟ್ರಾಪಿಕಲ್ ಮರದ ಡ್ಯಾಶ್‍ಬೋರ್ಡ್ ಮಿಡ್ ಪ್ಯಾಡ್, ಗ್ರಾನೈಟ್ ಕಪ್ಪು ಬಾಡಿ ಕ್ಲ್ಯಾಡಿಂಗ್ಸ್, ಪಿಯಾನೋ ಕಪ್ಪು ಅಳವಡಿಕೆಗಳಿರುವ ಗ್ರಾನೈಟ್ ಕಪ್ಪು ಮುಂಬದಿ ಗ್ರಿಲ್ ಮತ್ತು ಗಾಢಕಪ್ಪು 16” ಅಲಾಯ್ ವ್ಹೀಲ್ಸ್‍ನೊಂದಿಗೆ ಕಾಜಿರಂಗಾ ಶ್ರೇಣಿಯಲ್ಲಿರುವ ಹ್ಯಾರಿಯರ್, ಎರಡು ಟ್ರಿಮ್‍ಗಳಲ್ಲಿ ಲಭ್ಯವಿರುತ್ತದೆ-ಹ್ಯಾರಿಯರ್ XZ ಮತ್ತು ಹ್ಯಾರಿಯರ್ XZA+
ಟಾಟಾ ಸಫಾರಿ ಕಾಜಿರಂಗಾ ಆವೃತ್ತಿ
ಟಾಟಾ ಮೋಟರ್ಸ್‍ನ ಪ್ರಧಾನ ಎಸ್‍ಯುವಿ ಆದ ಸಫಾರಿ, ತನ್ನ ವರ್ಗದಲ್ಲೇ ಅತಿ ಗುಣವಿಶೇಷ ಸಮೃದ್ಧತೆಯಿರುವ ವಾಹನವಾಗಿದೆ. 1ನೆ ಮತ್ತು 2ನೆ ಸಾಲುಗಳಲ್ಲಿ ಗಾಳಿಯಾಡುವ ಆಸನಗಳು, ವೈರ್‍ಲೆಸ್ ಚಾರ್ಜರ್, ಆ್ಯಪಲ್ ಕಾರ್ ಪ್ಲೇ/ಆಂಡ್ರಾಯ್ಡ್ ಆಟೋ ಓವರ್ ವೈಫೈ, ಏರ್‍ಪ್ಯೂರಿಫೈಯರ್, iRA ಮುಂತಾದ ತನ್ನ ಅಗ್ರ ಟ್ರಿಮ್‍ನಲ್ಲಿರುವ ಅಂಶಗಳ ಜೊತೆಗೆ ಸಫಾರಿ ಕಾಜಿರಂಗಾ ಈಗ ಡ್ಯುಯಲ್ ಟೋನ್ ಅರ್ತಿ ಬೀಜ್ ಲೆದರೆಟ್ ಆಸನಗಳು ಮತ್ತು ಬಾಗಿಲ ಟ್ರಿಮ್‍ಗಳು, ಟ್ರಾಪಿಕಲ್ ಮರದ ಡ್ಯಾಶ್‍ಬೋರ್ಡ್ ಮಿಡ್ ಪ್ಯಾಡ್, ಗ್ರಾನೈಟ್ ಕಪ್ಪು ಬಾಡಿ ಕ್ಲ್ಯಾಡಿಂಗ್ಸ್, ಪಿಯಾನೋ ಕಪ್ಪು ಅಳವಡಿಕೆಗಳಿರುವ ಗ್ರಾನೈಟ್ ಕಪ್ಪು ಮುಂಬದಿ ಗ್ರಿಲ್ ಮತ್ತು ಗಾಢಕಪ್ಪು 18” ಅಲಾಯ್ ವ್ಹೀಲ್ಸ್ ಹೊಂದಿರುತ್ತದೆ. ಸಫಾರಿಯ ಈ ಆವೃತ್ತಿಯು 4 ಟ್ರಿಮ್‍ಗಳಲ್ಲಿ ಲಭ್ಯವಿರುತ್ತದೆ- XZ+ 7S, XZA+ 7S, XZ+ 6S, XZA+ 6S.