Mini Electric ಭಾರತದಲ್ಲಿ ದಶಕದ ಸಂಭ್ರಮ, ಮೊದಲ ಆಲ್ ಎಲೆಕ್ಟ್ರಿಕ್ ಮಿನಿ ಕಾರ್ ಬಿಡುಗಡೆ!

By Suvarna News  |  First Published Feb 25, 2022, 4:29 PM IST
  • MINI 3-ಡೋರ್ ಕೂಪರ್ SE- ಪಲ್ಸೇಟಿಂಗ್ ಪರ್ಫಾರ್ಮೆನ್ಸ್, ಐಕಾನಿಕ್ ಡಿಸೈನ್
  • ಮಾರ್ಚ್ 2022ರಿಂದ ಪ್ರಿ-ಲಾಂಚ್ ಬುಕಿಂಗ್‍ ಆರಂಭ
  • 30ಕ್ಕೂ ಹೆಚ್ಚು ನಗರಗಳಲ್ಲಿ BMWಗ್ರೂಪ್ ಡೀಲರ್ ನೆಟ್‍ವರ್ಕ್‍ನ ಚಾರ್ಜಿಂಗ್

ಬೆಂಗಳೂರು(ಫೆ.25):  ಮೊದಲ ಆಲ್-ಎಲೆಕ್ಟ್ರಿಕ್ MINI 3- ಡೋರ್ ಕೂಪರ್ SE ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ನೂತನ MINI 3-ಡೋರ್ ಕೂಪರ್ SE ಆಲ್-ಎಲೆಕ್ಟ್ರಿಕ್ ಬೆಲೆ 47,20,000 ರೂಪಾಯಿ(ಎಕ್ಸ್ ಶೋ ರೂಂ). ಕಂಪ್ಲೀಟ್ಲಿ ಬಿಲ್ಟ್-ಅಪ್ ಯೂನಿಟ್(CBU) ಆಗಿ ಲಭ್ಯವಿರುವ ಎಲ್ಲ ಯೂನಿಟ್‍ಗಳು ಕಿ42021 ಪ್ರಿ-ಲಾಂಚ್ ಬುಕಿಂಗ್ ಅವಧಿಯಲ್ಲಿ ಮಾರಾಟಗೊಂಡಿವೆ.  ಹೊಚ್ಚಹೊಸ MINI ಎಲೆಕ್ಟ್ರಿಕ್(Mini Electric Car) ಹಿಂದೆಂದಿಗಿಂತಲೂ ಅತ್ಯಾಕರ್ಷಕವಾಗಿದೆ. MINI ಎಲೆಕ್ಟ್ರಿಕ್ ಎರಡೂ ವಿಶ್ವಗಳ ಶ್ರೇಷ್ಠತೆಗಳನ್ನು ಹೊಂದಿದ್ದು ಐಕಾನಿಕ್ MINI ಯ ಗುಣಲಕ್ಷಣವನ್ನು ನೀಡುವುದಲ್ಲದೆ ಎಲೆಕ್ಟ್ರಿಕ್‍ಗೆ ಎಲ್ಲ ಅನುಕೂಲಗಳನ್ನೂ ಹೊಂದಿದೆ. ಶೂನ್ಯ ಎಮಿಷನ್ಸ್ ಹೊರಹೊಮ್ಮಿಸುವ ಇದು ಸಸ್ಟೇನಬಲ್ ಡ್ರೈವಿಂಗ್, ಥ್ರಿಲ್ಲಿಂಗ್ ಡ್ರೈವಿಂಗ್ ಪರ್ಫಾರ್ಮೆನ್ಸ್ ಮತ್ತು ಐಕಾನಿಕ್ MINI ಡಿಸೈನ್ ಹೊಂದಿದೆ. MINI ಎಲೆಕ್ಟ್ರಿಕ್ ನಗರ ಜೀವನವನ್ನು ಮರು ಆವಿಷ್ಕರಿಸಿದೆ.  ಈ ಕಾರು ಮೊಬಿಲಿಟಿಯ ಬದಲಾಗುತ್ತಿರುವ ಮುಖವಾಗಿದೆ ಮತ್ತು ನಗರದ ಸ್ಥಳದ ಸೃಜನಶೀಲ ಬಳಕೆಯ MINI’s ಸಂಪ್ರದಾಯವನ್ನು ಭವಿಷ್ಯದತ್ತ ತನ್ನ ಕಣ್ಣು ಇರಿಸಿ ಮುಂದುವರಿಸಿದೆ. 

MINI3-ಡೋರ್ ಕೂಪರ್SE ವೇಗ ಮತ್ತು ತಡೆರಹಿತ ಚಾರ್ಜಿಂಗ್ ನೀಡುತ್ತದೆ. 
-    50 kW DC ಚಾರ್ಜರ್ –36ನಿಮಿಷಗಳಲ್ಲಿ80%
-    11 kW AC ಚಾರ್ಜರ್ –3ಗಂಟೆ 12ನಿಮಿಷಗಳಲ್ಲಿ 80%
-    2.3 kW AC ಚಾರ್ಜರ್–9 ಗಂಟೆ 43ನಿಮಿಷಗಳಲ್ಲಿ 80%

Tap to resize

Latest Videos

10 ವರ್ಷಗಳಲ್ಲಿ ದೇಶಕ್ಕೆ MINIಇಂಡಿಯಾ ಮೊದಲ ಆಲ್-ಎಲೆಕ್ಟ್ರಿಕ್ ಕಾರ್ ಅನ್ನು ಕಾಂಪ್ಯಾಕ್ಟ್ ಪ್ರೀಮಿಯಂ ಸೆಗ್ಮೆಂಟ್‍ಗೆ ತರಲು ಹೆಮ್ಮೆ ಪಡುತ್ತದೆ. ನಮ್ಮ `ಡಿಜಿಟಲ್ ಫಸ್ರ್ಟ್’ ಕಾರ್ಯತಂತ್ರಕ್ಕೆ ಪೂರಕವಾಗಿ ಇದು MINI ಆನ್‍ಲೈನ್ ಶಾಪ್‍ನಲ್ಲಿ ಬುಕಿಂಗ್‍ಗೆ ವಿಶೇಷವಾಗಿ ಲಭ್ಯವಿರುವ ಮೊದಲ ಸೀರೀಸ್ ಮಾಡೆಲ್ ಆಗಿದೆ ಮತ್ತು ಪ್ರಿ-ಲಾಂಚ್ ಬುಕಿಂಗ್ ಹಂತದಲ್ಲೇ ಸಂಪೂರ್ಣವಾಗಿ ಮಾರಾಟವಾಗಿದೆ. MINI 3-ಡೋರ್ ಕೂಪರ್ SE, MINI's ಆವಿಷ್ಕಾರಕ ಸ್ಫೂರ್ತಿ ಮತ್ತು ಐಕಾನಿಕ್ ಡಿಸೈನ್ ಅನ್ನು ಇನ್ಸ್‍ಟಂಟ್ ಟಾರ್ಕ್, ಶೂನ್ಯ ಎಮಿಷನ್ಸ್ ಮತ್ತು ಕಡಿಮೆ ಗುರುತ್ವಾಕರ್ಷಣೆಯ ಕೇಂದ್ರದೊಂದಿಗೆ ಸಂಯೋಜಿಸಿದ್ದು ಇದರ ಲೆಜೆಂಡರಿ ಗೋ-ಕಾರ್ಟ್ ಫೀಲಿಂಗ್ ಹೆಚ್ಚಿಸುತ್ತದೆ. ಇದು ಭವಿಷ್ಯದ MINI ಗೆ ಇ-ಬ್ರಾಂಡ್(ಎ-ಲೆಕ್ಟ್ರಿಕ್ ಇ-ಕಾಮರ್ಸ್ ಎ-ಕ್ಸ್‍ಪೀರಿಯೆನ್ಸ್) ಆಗಿ ದಾರಿ ನಿರ್ಮಿಸಿದೆ. MINI 3-ಡೋರ್ ಕೂಪರ್ SE ಕ್ರಿಯೇಟಿವ್ ಕ್ಲಾಸ್ ಅನ್ನು ಈ ಮೌನಕ್ರಾಂತಿಗೆ ಸೇರಿಕೊಳ್ಳಲು ಸ್ಫೂರ್ತಿ ತುಂಬುವಲ್ಲಿ ಗಮನಾರ್ಹ ಪಾತ್ರ ವಹಿಸುತ್ತದೆ ಎಂದು BMW ಗ್ರೂಪ್ ಇಂಡಿಯಾ ಅಧ್ಯಕ್ಷ ವಿಕ್ರಮ್ ಪವಾಹ್ ಹೇಳಿದ್ದಾರೆ. 

ಬೊಯಿಂಗ್ 777 ವಿಮಾನ ಎಳೆದೊಯ್ದ ಮಿನಿ ಕೂಪರ್ ಕಾರು!

MINI 3-ಡೋರ್ ಕೂಪರ್ SE ಸ್ಮಾರ್ಟ್ ವಾಲ್‍ಬಾಕ್ಸ್ ಚಾರ್ಜರ್‍ನೊಂದಿಗೆ ಬಂದಿದ್ದು ಫಿಕ್ಸ್‍ಡ್ ಚಾರ್ಜಿಂಗ್ ಕೇಬಲ್ ಮತ್ತು ಒನ್-ಟೈಮ್ ಇನ್ಸ್‍ಟಾಲೇಷನ್ ಒಳಗೊಂಡಿದೆ. 

MINI ಎಲೆಕ್ಟ್ರಿಕ್ ಮಾಲೀಕತ್ವದ ಅನುಭವ ತಡೆರಹಿತವಾಗಿದ್ದು ಇದು ಸ್ಟಾಂಡರ್ಡ್ ಎರಡು ವರ್ಷ ವಾರೆಂಟಿಯನ್ನು ಅನಿಯಮಿತ ಕಿಲೋಮೀಟರ್ಸ್‍ಗೆ ನೀಡುತ್ತದೆ. ಹೈ ವೋಲ್ಟೇಜ್ ಬ್ಯಾಟರಿ 8 ವರ್ಷಗಳವರೆಗೆ ಅಥವಾ 100,000 ಕಿಲೋಮೀಟರ್ಸ್ ವಾರೆಂಟಿ ಹೊಂದಿರುತ್ತದೆ. ರಿಪೇರ್ ಇನ್‍ಕ್ಲೂಸಿವ್ ಅನ್ನು ಮೂರನೇ ವರ್ಷದ ಮಾಲೀಕತ್ವದಿಂದ ಗರಿಷ್ಠ ಐದನೇ ವರ್ಷದವರೆಗೆ ಯಾವುದೇ ಮೈಲೇಜ್ ಮಿತಿಗಳಿಲ್ಲದೆ ವಿಸ್ತರಿಸಬಹುದು. 5 ವರ್ಷಗಳು 24x7ರಸ್ತೆ ಬದಿಯ ಸಹಾಯವು ಪೋರ್ಟಬಲ್ ರಸ್ತೆಬದಿ ಚಾರ್ಜಿಂಗ್‍ನಂತಹ ಸೌಲಭ್ಯಗಳೊಂದಿಗೆ ಚಲಿಸುತ್ತಿರುವಾಗ ಸಂಪೂರ್ಣ ಮನಸ್ಸಿನ ಶಾಂತಿಯನ್ನು ಒದಗಿಸುತ್ತದೆ. BMW ಗ್ರೂಪ್ ಅತ್ಯುತ್ತಮ ಚಾರ್ಜಿಂಗ್ ಮೂಲಸೌಕರ್ಯವನ್ನು ಫಾಸ್ಟ್ ಚಾರ್ಜರ್ಸ್‍ನೊಂದಿಗೆ ಪ್ರೀಮಿಯಂ ಸೆಗ್ಮೆಂಟ್‍ನಲ್ಲಿ BMW ಗ್ರೂಪ್ ಡೀಲರ್ ನೆಟ್‍ವರ್ಕ್‍ನಲ್ಲಿ ಭಾರತದಾದ್ಯಂತ 30ಕ್ಕೂ ಹೆಚ್ಚು ನಗರಗಳಲ್ಲಿ ಒದಗಿಸುತ್ತಿದೆ. MINI ಎಲೆಕ್ಟ್ರಿಕ್ ಅನ್ನು ದೇಶಾದ್ಯಂತ 32 BMW ಗ್ರೂಪ್ ಟಚ್ ಪಾಯಿಂಟ್‍ಗಳಲ್ಲಿ ಸರ್ವೀಸ್ ಮಾಡಬಹುದಾಗಿದೆ. 

ಮಾರುಕಟ್ಟೆಯಲ್ಲಿ ಹೊಸ ಕಾರು ಬಾರು; ನಿಮ್ಮ ಆಯ್ಕೆ ಯಾವುದು?

ಆಲ್-ಎಲೆಕ್ಟ್ರಿಕ್ MINI 3-ಡೋರ್ ಕೂಪರ್ SE
MINI ಜಾಗತಿಕವಾಗಿ 2030ರ ನಂತರ ಪೂರ್ಣ ಎಲೆಕ್ಟ್ರಿಕ್ ಬ್ರಾಂಡ್ ಆಗಲಿದೆ. ಭವಿಷ್ಯದ `ಎಲೆಕ್ಟ್ರಿಕ್ ಇ-ಕಾಮರ್ಸ್ ಎಕ್ಸ್‍ಪೀರಿಯೆನ್ಸ್’ ಬ್ರಾಂಡ್ ಆಗಿ MINI 3-ಡೋರ್ ಕೂಪರ್ SE MINIಯ ಭವಿಷ್ಯಕ್ಕೆ ದಾರಿ ನಿರ್ಮಿಸುತ್ತಿದೆ. ಆಲ್-ಎಲೆಕ್ಟ್ರಿಕ್ MINI 3-ಡೋರ್ ಕೂಪರ್ SE ಎಲೆಕ್ಟ್ರಿಕ್ ಮೊಬಿಲಿಟಿಯನ್ನು ಹಾಲ್‍ಮಾರ್ಕ್ ಬ್ರಾಂಡ್ MINI ಗುಣಲಕ್ಷಣಗಳೊಂದಿಗೆ ನಗರದ ಸೆಟ್ಟಿಂಗ್‍ನಲ್ಲಿ ಸಂಯೋಜಿಸಲಾಗಿದೆ. ಡೈಮೆನ್ಷನ್ಸ್, ಡಿಸೈನ್, ಸ್ಥಳ ಮತ್ತು ಇಂಟೀರಿಯರ್ ಆಂಬಿಯೆನ್ಸ್ ಸಾಂಪ್ರದಾಯಿಕವಾಗಿ ಸನ್ನದ್ಧ MINI 3-ಡೋರ್‍ಹ್ಯಾಚ್ ಆಧರಿಸಿವೆ. 

ಕಾರುಗಳ ಡಿಸೈನ್ ಆಧುನಿಕ ಈಸ್ಥೆಟಿಕ್ ಏರೋಡೈನಮಿಕ್ ಲೈನ್ಸ್ ಅನ್ನು ಕಣ್ಸೆಳೆಯುವ ಸಿಗ್ನೇಚರ್ ವಿವರಗಳೊಂದಿಗೆ ಸಂಯೋಜಿಸಿದೆ. ಡೈನಮಿಕ್ ಲೈನ್ಸ್ ಮತ್ತು ನಿಖರ, ಸ್ವಚ್ಛ ಸ್ಟೈಲ್ ವಿಸ್ತಾರ ಟ್ರ್ಯಾಕ್ ಮತ್ತು ಶಾರ್ಟ್ ಓವರ್‍ಹ್ಯಾಂಗ್ಸ್‍ನೊಂದಿಗೆ ಸಂಯೋಜಿಸಿದ್ದು MINI3-ಡೋರ್ ಕೂಪರ್ SEಗೆ ಅದರ ಬಿಗಿಯಾದ ಅಥ್ಲೆಟಿಕ್ ಉಪಸ್ಥಿತಿ ನೀಡುತ್ತದೆ. ಆಕರ್ಷಕ `ಎನರ್ಜೆಟಿಕ್ ಯೆಲ್ಲೋ’ ಅಕ್ಸೆಂಟ್ಸ್ ರಸ್ತೆಯ ಮೇಲೆ ಅದರ ವಿಶಿಷ್ಟ ಹೊರನೋಟ ಹೆಚ್ಚಿಸುತ್ತದೆ. ತೆಳುವಾದ ಆಕರ್ಷಕ ಮುಂಬದಿಯ ಗ್ರಿಲ್ ಅತ್ಯಂತ ಆಧುನಿಕ ನಿರೂಪಣೆ ನೀಡಿದ್ದು MINI ಇತಿಹಾಸ ಮತ್ತು ಭವಿಷ್ಯವನ್ನು ಮೈವೆತ್ತಿದೆ. ಆಲ್-ಎಲೆಕ್ಟ್ರಿಕ್ MINI ಸ್ಪಂದನಶೀಲ ನಗರ ಜೀವನಕ್ಕೆ ಪೂರಕವಾಗಿ ಮತ್ತು ನಿಮ್ಮ ಚಾಲನೆಯ ಅನುಭವ ಗರಿಷ್ಠಗೊಳಿಸಲು ವಿನ್ಯಾಸಗೊಳಿಸಲಾಗಿದೆ. 

ಅನನ್ಯ ಹೆಡ್‍ಲಯಟ್ಸ್ ಹೊಸ ಕಣ್ಸೆಳೆಯುವ ಸೈಡ್‍ಸ್ಕಟಲ್ಸ್ ಜೊತೆಯಲ್ಲಿದ್ದು ಐಇಆ ಇಂಡಿಕೇಟರ್ಸ್ ಮತ್ತು ಎನರ್ಜೆಟಿಕ್ ಯೆಲ್ಲೋ 'S'ಲೊಗೊ ಹೊಂದಿದೆ. ಮಿರರ್ ಕ್ಯಾಪ್ಸ್ ಎನರ್ಜೆಟಿಕ್ ಯೆಲ್ಲೋನಲ್ಲಿದ್ದು ಪಿಯಾನೊ ಬ್ಲಾಕ್ ಎಕ್ಸ್‍ಟೀರಿಯರ್‍ನ ಹೊಸ ಡಿಸೈನ್ ಎಲಿಮೆಂಟ್ಸ್ ಮತ್ತು ಹೆಚ್ಚು ವೈಯಕ್ತಿಕ ನೋಟ ನೀಡುತ್ತದೆ. ವಿಶೇಷವಾದ 17inch / 43.18 cm  ಎಲೆಕ್ಟ್ರಿಕ್ ಪವರ್ ಸ್ಪೋಕ್ ಅಲಾಯ್ ವ್ಹೀಲ್ಸ್ ಎನರ್ಜೆಟಿಕ್ ಯೆಲ್ಲೋದ ರೂಪರೇಖೆ ಹೊಂದಿದ್ದು ಆಲ್-ಎಲೆಕ್ಟ್ರಿಕ್ MINI's ತೆಳು ಡಿಸೈನ್ ಪೂರ್ಣಗೊಳಿಸುತ್ತದೆ. ಅಸಮವಾದ ಸ್ಪೋಕ್ಸ್ ಅವಗಳಿಗೆ ವಿಶಿಷ್ಟ ನೋಟ ನೀಡುತ್ತವೆ ಮತ್ತು ದಕ್ಷತೆ ಸುಧಾರಿಸಲು ಏರೊಡೈನಮಿಕಲಿ ಗರಿಷ್ಠಗೊಳಿಸಲಾಗಿದೆ. ಕಾರು ನಾಲ್ಕು ವಿಶಿಷ್ಟ ಎಕ್ಸ್‍ಟೀರಿಯರ್ ಬಣ್ಣಗಳು- ವೈಟ್ ಸಿಲ್ವರ್, ಮಿಡ್‍ನೈಟ್ ಬ್ಲಾಕ್, ಮೂನ್‍ವಾಕ್ ಗ್ರೇ ಮತ್ತು ಬ್ರಿಟಿಷ್ ರೇಸಿಂಗ್ ಗ್ರೀನ್. 

ಇಂಟೀರಿಯರ್ ಎಕ್ಸ್‍ಕ್ಲೂಸಿವ್ MINI ಎಲೆಕ್ಟ್ರಿಕ್ ಇಂಟೀರಿಯರ್ ಸರ್ಫೇಸ್‍ನೊಂದಿಗೆ ಬಂದಿದೆ ಮತ್ತು ಸ್ಪೋಟ್ರ್ಸ್ ಸೀಟ್ಸ್ ಬಟ್ಟೆ/ಲೆದರೆಟ್ಟೆ ಕಾಂಬಿನೇಷನ್ ಅಪ್‍ಹೋಲ್ಸ್‍ಟ್ರಿ ಬ್ಲಾಕ್ ಪರ್ಲ್/ಕಾರ್ಬನ್ ಬ್ಲಾಕ್‍ನೊಂದಿಗೆ ಬರುತ್ತದೆ. ಹೊಸ ಮಲ್ಟಿಫಂಕ್ಷನ್ ಸ್ಟೀರಿಂಗ್ ವ್ಹೀಲ್ ನಪ್ಪಾ ಲೆದರ್‍ನಲ್ಲಿದ್ದು ಹೆಚ್ಚು ಕಾರ್ಯಗಳನ್ನು ಕ್ರೋಢೀಕರಿಸುತ್ತದೆ ಆದರೆ ನಿಯಂತ್ರಣದ ಮೇಲ್ಮೈಗಳ ಸಂಖ್ಯೆ ಕಡಿಮೆ ಮಾಡುತ್ತದೆ. ಹೊಸ 5-inch/ 12.7 cm ಡಿಜಿಟಲ್ ಮಲ್ಟಿಫಂಕ್ಷನ್ ಇನ್ಸ್‍ಟ್ರುಮೆಂಟ್ ಡಿಸ್ಪ್ಲೇ ತೆಳುವಾದ ಕಪ್ಪು ಪ್ಯಾನೆಲ್ ಡಿಸೈನ್ ಪ್ರಮುಖ ಚಾಲನೆಯ ಮಾಹಿತಿ ನೀಡುತ್ತದೆ. ಇದು 8.8-Inch/22.35 cm ಹೈ-ರೆಸೊಲ್ಯೂಷನ್, ಫುಲ್-ಕಲರ್ ಟಚ್‍ಸ್ಕ್ರೀನ್‍ನೊಂದಿಗೆ ಅದ್ಭುತವಾಗಿ ಹೊಂದಿಕೊಂಡಿದೆ. ಇದರೊಂದಿಗೆ ಆಡಿಯೊ ಕಂಟ್ರೋಲ್ ಯೂನಿಟ್ ಮತ್ತು ಹಜಾóರ್ಡ್ ವಾರ್ನಿಂಗ್ ಲೈಟ್ಸ್ ಮತ್ತು ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್‍ನ ಫಂಕ್ಷನ್ ಬಟನ್‍ಗಳನ್ನು ಸಾಮರಸ್ಯದಿಂದ ವೃತ್ತಾಕಾರದ ಕಂಟ್ರೋಲ್ ಯೂನಿಟ್‍ಗೆ ಜೋಡಿಸಲಾಗಿದೆ. ಅಸಂಖ್ಯಾತ ಅತ್ಯುತ್ತಮವಾಗಿ ಜೋಡಿಸಿದ ಲೈಟಿಂಗ್ ಸ್ಟ್ರಿಪ್ಸ್ ಮತ್ತು ಸ್ಪಾಟ್ಸ್ ಆಂಬಿಯೆಂಟ್ ಲೈಟಿಂಗ್ ಸೃಷ್ಟಿಸುತ್ತದೆ ಅದು ಪ್ರತಿ ಚಾಲನೆಗೂ ಸರಿಯಾದ ಮೂಡ್ ನಿಗದಿಪಡಿಸುತ್ತದೆ. `ಎನರ್ಜೆಟಿಕ್ ಯೆಲ್ಲೋ’ದ ಆಕರ್ಷಕ ಅಕ್ಸೆಂಟ್ಸ್ ಸ್ಟಾರ್ಟ್/ಸ್ಟಾಪೇಜ್ ಸ್ವಿಚ್, ಗೇರ್ ಲಿವರ್ ಮತ್ತು ಡೋರ್ ಸಿಲ್ಸ್ ಮೇಲೆ ವಿಶಿಷ್ಟ ಬ್ಯಾಡ್ಜಿಂಗ್‍ಗೆ ವಿಸ್ತರಿಸಿದೆ. 

MINI ಎಲೆಕ್ಟ್ರಿಕ್ ಡ್ರೈವ್ ಲೆಜೆಂಡರಿ ಗೋ-ಕಾರ್ಟ್ ಫೀಲಿಂಗ್ ಅನ್ನು ಶೂನ್ಯ ಎಮಿಷನ್ಸ್ ಮತ್ತು ಇನ್ಸ್‍ಟಂಟ್ ಟಾರ್ಕ್‍ನೊಂದಿಗೆ ಸಂಪೂರ್ಣ ಹೊಸ ಮತ್ತು ಅದ್ಭುತ ಆಯಾಮಕ್ಕೆ ಕೊಂಡೊಯ್ಯುತ್ತದೆ. 184 hp/135 kW ಮತ್ತು ಗರಿಷ್ಠ ಟಾರ್ಕ್ 270 Nm ನಿಂದ ಎಲೆಕ್ಟ್ರಿಕ್ MINI ಕೇವಲ 7.3 ಸೆಕೆಂಡುಗಳಲ್ಲಿ 0-100 Km ಜಿಗಿಯುತ್ತದೆ. ಡೈನಮಿಕ್ ಆದರೆ ನಿಶ್ಯಬ್ದವಾಗಿರುವ ಆಲ್-ಎಲೆಕ್ಟ್ರಿಕ್ MINI ಸಂಪೂರ್ಣವಾಗಿ ಹೊಸ ಚಾಲನೆಯ ಅನುಭವ ನೀಡುತ್ತದೆ. ಇದು ಬ್ಯಾಟರಿ ಕೆಪ್ಯಾಸಿಟಿ 32.6 kWh ಮತ್ತು 270 km ಡ್ರೈವಿಂಗ್ ರೇಂಜ್ ಹೊಂದಿದೆ. 


ಮೊದಲ ಆಲ್-ಎಲೆಕ್ಟ್ರಿಕ್ MINI ಶ್ರೀಮಂತ ಫಿಕ್ಸ್‍ಡ್ ಪ್ರೊಫೈಲ್‍ನ ಪೂರ್ಣ ಲೋಡೆಡ್ ಫೀಚರ್‍ನೊಂದಿಗೆ ಬಂದಿದ್ದು MINI ವೈರ್ಡ್ ಪ್ಯಾಕೇಜ್ ನ್ಯಾವಿಗೇಷನ್ ಸಿಸ್ಟಂ, ವೈರ್‍ಲೆಸ್ ಚಾರ್ಜಿಂಗ್, ಎನ್ಹಾನ್ಸ್‍ಡ್ ಬ್ಲೂಟೂಥ್ ಮೊಬೈಲ್ ಸಿದ್ಧತೆ, ಮಲ್ಟಿಫಂಕ್ಷನಲ್ ಇನ್ಸ್‍ಟ್ರುಮೆಂಟ್ ಡಿಸ್ಪ್ಲೇ, ಆಪಲ್ ಕಾರ್‍ಪ್ಲೇಲ ಮತ್ತು ಹರ್ಮನ್ ಕಾರ್ಡನ್ Hi-Fi ಸ್ಪೀಕರ್ ಸಿಸ್ಟಂ ಒಳಗೊಂಡಿದೆ. 

MINI ಡ್ರೈವಿಂಗ್ ಮೋಡ್ಸ್ ವೈಯಕ್ತಿಕಗೊಳಿಸಿದ ವಾಹನದ ಸೆಟಪ್ ಸನ್ನದ್ಧಗೊಳಿಸಿದ್ದು ರೈಡ್ ಕಂಫರ್ಟ್, ಉನ್ನತೀಕರಿಸಿದ ಕ್ರೀಡಾತನ ಮತ್ತು ಚಾಲಕನ ಆದ್ಯತೆಗೆ ಅನುಗುಣವಾಗಿ ದಕ್ಷತೆ ಒಳಗೊಂಡಿದೆ. ಸ್ಟಾಂಡರ್ಡ್ MID ಮೋಡ್‍ನೊಂದಿಗೆ SPORT ಮತ್ತು GREEN ಮೋಡ್ ಆಯ್ಕೆ ಕೂಡಾ ಇದೆ. ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್‍ನಲ್ಲಿ ಕ್ರೂಸ್ ಕಂಟ್ರೋಲ್, ಪಾರ್ಕ್ ಡಿಸ್ಟೆನ್ಸ್ ಕಂಟ್ರೋಲ್, ರಿಯರ್ ವ್ಯೂ ಕ್ಯಾಮರಾ ಮತ್ತು ಟೈರ್ ಪ್ರೆಷರ್ ಮಾನಿಟರ್ ಒಳಗೊಂಡಿದೆ. 

ಆಲ್-ಎಲೆಕ್ಟ್ರಿಕ್ MINI ಕಟಿಂಗ್-ಎಡ್ಜ್ ಸೇಫ್ಟಿ ಟೆಕ್ನಾಲಜಿ ಹೊಂದಿದೆ. ಸ್ಟಾಂಡರ್ಡ್ ಸೇಫ್ಟಿ ಎಕ್ವಿಪ್‍ಮೆಂಟ್‍ನಲ್ಲಿ ಫ್ರಂಟ್ ಪ್ಯಾಸೆಂಜರ್ ಏರ್‍ಬ್ಯಾಗ್ಸ್, ಬ್ರೇಕ್ ಅಸಿಸ್ಟ್, 3-ಪಾಯಿಂಟ್ ಸೀಟ್ ಬೆಲ್ಟ್ಸ್, ಡೈನಮಿಕ್ ಸ್ಟೆಬಿಲಿಟಿ ಕಂಟ್ರೋಲ್, ಕ್ರಾಶ್ ಸೆನ್ಸರ್, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್, ರನ್-ಫ್ಲಾಟ್ ಟೈರ್ಸ್ ಮತ್ತು ರಿಯರ್-ವ್ಯೂ ಕ್ಯಾಮರಾ ಒಳಗೊಂಡಿದೆ. ಸ್ಟಾಂಡರ್ಡ್ MINIMALISM ಟೆಕ್ನಾಲಜಿಯಲ್ಲಿ ಆಟೊ ಸ್ಟಾರ್ಟ್/ಸ್ಟಾಪ್ ಫಂಕ್ಷನ್, ಬ್ರೇಕ್ ಎನರ್ಜಿ ರಿಕ್ಯುಪರೇಷನ್, ಆಕ್ಟಿವ್ ಕೂಲಿಂಗ್ ಏರ್ ಡಕ್ಟ್ಸ್ ಮತ್ತು ಎಲೆಕ್ಟ್ರೊಮೆಕ್ಯಾನಿಕಲ್ ಪವರ್ ಸ್ಟೀರಿಂಗ್. 
 

click me!