ಟಾಟಾ ಮೋಟಾರ್ಸ್ ಕಾರುಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಜುಲೈ ತಿಂಗಳ ಮಾರಾಟಲ್ಲಿ ದಾಖಲೆ ಬರೆದಿದೆ. ಟಾಟಾದ ಎಂಟ್ರಿ ಲೆವೆಲ್ ಸೆಗ್ಮೆಂಟ್ ಟಿಯಾಗೋ NRG ಮೊದಲ ವರ್ಷದ ವಾರ್ಷಿಕೋತ್ಸವ ಪರಿಣಾಮ XT ವೇರಿಯೆಂಟ್ ಬಿಡುಗಡೆ ಮಾಡಿದೆ.
ಬೆಂಗಳೂರು(ಆ.03) ನ್ಯೂ ಫಾರೆವರ್ ಸಿದ್ಧಾಂತಕ್ಕೆ ಅನುಗುಣವಾಗಿ ಮತ್ತು ಟಿಯಾಗೊ NRGನ 1ನೆ ವಾರ್ಷಿಕೋತ್ಸವವನ್ನು ಟಾಟಾ ಆಚರಿಸುತ್ತಿದೆ. ನೂತನ ಟಿಯಾಗೊ NRG ಬೆಲೆ 6.42 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಟಿಯಾಗೊ NRG, ತನ್ನ ಗ್ರಾಹಕರಿಂದ ಅದ್ಭುತ ಪ್ರತಿಕ್ರಿಯ ಪಡೆದುಕೊಂಡಿದೆ. ಟಿಯಾಗೊ ಪೆಟ್ರೋಲ್ ವೈವಿಧ್ಯದ ಮಾರಾಟದ 15%ಗೆ ಕೊಡುಗೆ ಸಲ್ಲಿಸುತ್ತಿರುವ ಟಿಯಾಗೋ ತನ್ನ ಎಸ್‍ಯುವಿಯಂತಹ ವಿನ್ಯಾಸ, ತನ್ನ ವರ್ಗದಲ್ಲಿ ಅತ್ಯುತ್ತಮ ಸುರಕ್ಷತೆ ರೇಟಿಂಗ್(GNCAP) 4 ಸ್ಟಾರ್ ಪಡೆದಿದೆ. ಈ ಹೊಸ ವೈವಿಧ್ಯದ ಸೇರ್ಪಡೆಯೊಂದಿಗೆ ಟಿಯಾಗೊ ಎನ್‍ಆರ್ ಜಿ ಈಗ ಎರಡು ಟ್ರಿಮ್‍ಗಳಲ್ಲಿ, ಅಂದರೆ, ಟಿಯಾಗೊ XT NRG ಮತ್ತು ಟಿಯಾಗೊ XZ NRG ವೈವಿಧ್ಯಗಳಲ್ಲಿ ಲಭ್ಯವಾಗಲಿದೆ.
ಹೊಸ ಟಿಯಾಗೊ NRG XT ವೈವಿಧ್ಯವು ಹೊಸ 14” ಹೈಪರ್ ಸ್ಟೈಲ್ ವ್ಹೀಲ್‍ಗಳು, ಹರ್ಮನ್ ಎಮ್‍ಟಿದಿಂದ(HarmanTM) 3.5” ಇನ್ಫೋಟೇನ್ಮೆಂಟ್ ಸಿಸ್ಟಮ್, ಸ್ಟೀರಿಂಗ್ ಮೇಲೆ ಅನುಷ್ಠಾನಗೊಳಿಸಲಾಗಿರುವ ನಿಯಂತ್ರಕಗಳು, ಎತ್ತರ ಸರಿಪಡಿಸಿಕೊಳ್ಳಬಹುದಾದ ಡ್ರೈವರ್ ಸೀಟ್, ಮುಂಬದಿ ಮಂಜು ದೀಪಗಳು, ಹಾಗೂ ಇನ್ನೂ ಅನೇಕ ಅಂಶಗಳಲ್ಲದೆ, 181 ಮಿ.ಮೀ ಹೈ ಗ್ರೌಂಡ್ ಕ್ಲಿಯರೆನ್ಸ್, ಒರಟಾದ ಕ್ಲ್ಯಾಡಿಂಗ್ಸ್, ರೂಫ್ ರೇಲ್ಸ್ ಮತ್ತು ಇದ್ದಿಲುಕಪ್ಪು ಒಳಾಂಗಣಗಳಿರುವ ಇನ್ಫಿನಿಟಿ ಬ್ಲ್ಯಾಕ್ ರೂಫ್ ಮುಂತಾದ ಎನ್‍ಆರ್ ಜಿ ವಿನ್ಯಾಸ ಅಂಶಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗಿದೆ.
ಕಾರು ಮಾರಾಟದಲ್ಲಿ ಹೊಸ ದಾಖಲೆ ಬರೆದ ಟಾಟಾ, ಜುಲೈ ತಿಂಗಳಲ್ಲಿ 81,790 ವಾಹನ ಸೇಲ್!
ಟಿಯಾಗೊ ಎನ್‍ಆರ್ ಜಿಯನ್ನು ನಾವು ಪರಿಚಯಿಸಿದಾಗಿನಿಂದಲೂ ಅದು ನಮ್ಮ ಗ್ರಾಹಕರ ಕಲ್ಪನೆಗಳನ್ನು ಹಿಡಿದಿಟ್ಟು ಸಾಧಕರು ಮತ್ತು ಜೀವನವನ್ನು ಸಂಪೂರ್ಣ ಅನುಭವಿಸಬೇಕೆನ್ನುವವರಿಗೆ ಕಠಿಣ ಟೆರೇನ್ ಕಾರ್ಯಕ್ಷಮತೆ ಒದಗಿಸುವ ಅತ್ಯಂತ ನೆಚ್ಚಿನ ಹ್ಯಾಚ್‍ಬ್ಯಾಕ್ ಆಗಿದೆ. ಈ ಹಬ್ಬದ ಋತುವಿನಲ್ಲಿ ಪ್ರಾರಂಭಿಸಿ, ಟಿಯಾಗೊ XT NRGCಅನ್ನು ನಮ್ಮ ಗ್ರಾಹಕರಿಗೆ ಪರಿಚಯಿಸುತ್ತಿರುವುದಕ್ಕೆ ನಮಗೆ ಬಹಳ ಹರ್ಷವಾಗುತ್ತಿದೆ. ಆಕರ್ಷಕ ಬೆಲೆಯಿರುವ ಈ ವೈವಿಧ್ಯವು ಉತ್ತಮ ಪ್ಯಾಕೇಜ್ ಹೊಂದಿದ್ದು ಚಾಲಕ ಅನುಭವವನ್ನು ವರ್ಧಿಸುತ್ತದೆ. ಅಂಶಸಮೃದ್ಧವಾಗಿರುವ ಈ XT ವೈವಿಧ್ಯದ ಸೇರ್ಪಡೆಯು ಎನ್‍ಆರ್ ಜಿಯನ್ನು ಮತ್ತು ಒಟ್ಟಾರೆ ಟಿಯಾಗೊ ಪೋರ್ಟ್ ಪೋಲಿಯೊವನ್ನು ಇನ್ನಷ್ಟು ಬಲಪಡಿಸಿ ಅವುಗಳ ಮಾರಾಟ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ಟಾಟಾ ಮೋಟರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಉಪಾಧ್ಯಕ್ಷ ರಾಜನ್ ಅಂಬ ಹೇಳಿದ್ದಾರೆ.
ಟಾಟಾ ಅಲ್ಟ್ರೋಜ್ ಇವಿ, ಹ್ಯುಂಡೈ IONIQ ಸೇರಿ 7 ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ಕಾರು ಶೀಘ್ರದಲ್ಲೇ ಲಾಂಚ್!
ಈ ಆಚರಣೆಗೆ ಸೇರ್ಪಡೆಯಾಗಿ, ಟಾಟಾ ಮೋಟರ್ಸ್ ತನ್ನ ಪ್ರಸ್ತುತದ ಟಿಯಾಗೊ XT ವೈವಿಧ್ಯವನ್ನು ನವೀಕರಿಸಿದ್ದು ಇದನ್ನು ಇನ್ನಷ್ಟು ಕೌತುಕಮಯವಾದ ಆಯ್ಕೆಯನ್ನಾಗಿ ಮಾಡಿದೆ. ಇವು, 14” ಹೈಪರ್ ಸ್ಟೈಲ್ ವ್ಹೀಲ್‍ಗಳು, ಸರಿಪಡಿಸಿಕೊಳ್ಳಬಹುದಾದ ಡ್ರೈವರ್ ಸೀಟ್, ಹಿಂದಿನ ಪಾರ್ಸಲ್ ಶೆಲ್ಫ್ ಮತ್ತು ಇತರ ಅಂಶಗಳನ್ನು ಒಳಗೊಂಡಿವೆ. ಈ ಅಂಶಗಳನ್ನು ಟಿಯಾಗೊ XT, XTA ಮತ್ತು iCNG ಒಳಗೊಂಡಂತೆ, ಎಲ್ಲಾ XT ಶ್ರೇಣಿಯಾದ್ಯಂತ ಲಬ್ಯಗೊಳಿಸಲಾಗುತ್ತದೆ. ಟಿಯಾಗೊ XT ಪೆಟ್ರೋಲ್ ವೈವಿಧ್ಯಕ್ಕಾಗಿ ಸಂಸ್ಥೆಯು ಐಚ್ಛಿಕ ರಿದಮ್ ಪ್ಯಾಕ್ ಸೇರಿಸಿದ್ದು ಇದು 7” ಟಚ್‍ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಮ್, ಹಿಂಬದಿ ಕ್ಯಾಮರಾ ಮತ್ತು 4 ಟ್ವೀಟರ್ ಗಳನ್ನು ಹೊಂದಿದೆ. ಹೊಸ ಟಿಯಾಗೊ XT ಟ್ರಿಮ್‍ನಲ್ಲಿ ಹೆಚ್ಚುವರಿ ರೂ. INR 30,000 ಪಾವತಿಸುವ ಮೂಲಕ ರಿದಮ್ ಪ್ಯಾಕ್ ಪಡೆದುಕೊಳ್ಳಬಹುದು. ಮೇಲಾಗಿ, ಹೊಸ XT ಟ್ರಿಮ್, ಪ್ರಸ್ತುತ ಇರುವ ಒಪಾಲ್ ವ್ಹೈಟ್, ಡೇಟೋನಾ ಗ್ರೇ, ಅರಿಝೋನಾ ಬ್ಲೂ, ಮತ್ತು ಫ್ಲೇಮ್ ರೆಡ್ ವರ್ಣ ಆಯ್ಕೆಗಳ ಜೊತೆಗೆ ಮಿಡ್‍ನೈಟ್ ಪ್ಲಾಟಿನಮ್‍ನ ಪರಿಚಯವನ್ನು ಒಳಗೊಂಡಿದೆ.