ಜುಲೈನಲ್ಲಿ ಶೇ.51ರಷ್ಟು ಮಾರಾಟ ಪ್ರಗತಿ ದಾಖಲಿಸಿದ ಟಾಟಾ ಮೋಟಾರ್ಸ್

By Suvarna News  |  First Published Aug 2, 2022, 10:37 AM IST

ಟಾಟಾ ಮೋಟಾರ್ಸ್ (Tata Motors) ದೇಶೀಯ ಮಾರಾಟ 2022ರ ಜುಲೈ ತಿಂಗಳಲ್ಲಿ ಶೇ.51ರಷ್ಟು ಏರಿಕೆಯಾಗಿದೆ. ಕಳೆದ ವರ್ಷದ 54,119 ವಾಹನಗಳಿಗೆ ಹೋಲಿಸಿದರೆ ಈ ವರ್ಷದ ಕಳೆದ ತಿಂಗಳಲ್ಲಿ ಒಟ್ಟು 81,790 ವಾಹನಗಳು ಮಾರಾಟವಾಗಿವೆ.


ಟಾಟಾ ಮೋಟಾರ್ಸ್ (Tata Motors) ದೇಶೀಯ ಮಾರಾಟ 2022ರ ಜುಲೈ ತಿಂಗಳಲ್ಲಿ ಶೇ.51ರಷ್ಟು ಏರಿಕೆಯಾಗಿದೆ. ಕಳೆದ ವರ್ಷದ 54,119 ವಾಹನಗಳಿಗೆ ಹೋಲಿಸಿದರೆ ಈ ವರ್ಷದ ಕಳೆದ ತಿಂಗಳಲ್ಲಿ ಒಟ್ಟು 81,790 ವಾಹನಗಳು ಮಾರಾಟವಾಗಿವೆ. ಪ್ರಯಾಣಿಕ ಐಸ್ (ICE) ಮತ್ತು ಇವಿಗಳು (EV) ಮತ್ತು ವಾಣಿಜ್ಯ ವಾಹನಗಳ ಎಲ್ಲಾ ವಿಭಾಗಗಳಲ್ಲಿ ಮಾರಾಟದಲ್ಲಿ ಬೆಳವಣಿಗೆ ಕಂಡಿದೆ.ವರ್ಷದಿಂದ ವರ್ಷದ ಬೆಳವಣಿಗೆ ಜೊತೆಗೆ, ತಿಂಗಳ ಮಾರಾಟ ಪ್ರಮಾಣದಲ್ಲಿ ಕೂಢ ಶೇ.5.11ರಷ್ಟು ಏರಿಕೆಯಾಗಿದೆ. ಜೂನ್ 2022 ರಲ್ಲಿ ಮಾರಾಟವಾದ 45,197 ವಾಹನಗಳು ಮಾರಾಟವಾಗಿವೆ. ಟಾಟಾ ಮೋಟರ್ನ ಒಟ್ಟು ದೇಶೀಯ ಮಾರಾಟ ಕೂಡ 78,978 ವಾಹನಗಳ ಮಾರಾಟದೊಂದಿಗೆ ಶೇ.52ರಷ್ಟು ಏರಿಕೆಯಾಗಿದೆ. ಜುಲೈ 2021 ರಲ್ಲಿ ಮಾರಾಟವಾದ 51,981 ವಾಹನಗಳಿಗಿಂತ 2022ರ ಜುಲೈ 26,997 ವಾಹನಗಳು ಮಾರಾಟವಾಗಿವೆ. ಈ ದೇಶೀಯ ಮಾರಾಟ ವಿಭಾಗದಲ್ಲಿ ಕೂಡ ಕಂಪನಿಯ ಪ್ರಯಾಣಿಕ ವಾಹನ ವಿಭಾಗ ಶೇ.57ರಷ್ಟು ಏರಿಕೆಯಾಗಿದೆ. ಐಸ್ ವಾಹನಗಳ ವಿಭಾಗದಲ್ಲಿ ಕೂಡ ಟಾಟಾ ಮೋಟಾರ್ಸ್ ಶೇ.47ರಷ್ಟು ಪ್ರಗತಿ ದಾಖಲಿಸಿದೆ. ಪ್ರಸ್ತುತ ನೆಕ್ಸನ್ (Nexon) ಮತ್ತು ಟಿಗೋರ್ಗೆ (Tigor) ಹೆಚ್ಚಿರುವ ಬೇಡಿಕೆ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ಪಿವಿ (Electric PV) ವಾಹನಗಳು 4,022 ಗಳಷ್ಟು ಮಾರಾಟವಾಗಿದೆ. ಜುಲೈ 2021 ರಲ್ಲಿ ಮಾರಾಟವಾದ 604 ವಾಹನಗಳಿಗೆ ಹೋಲಿಸಿದರೆ ಇದು ಶೇ. 566 ರಷ್ಟು ಹೆಚ್ಚಾಗಿದೆ.

 ಜುಲೈ 2022 ರಲ್ಲಿ, ಟಾಟಾ ಮೋಟಾರ್ಸ್,  ಸಾಫ್ಟ್ವೇರ್ ಅಪ್ಡೇಟ್ ಮಾಡಿರುವ ನೆಕ್ಸಾನ್ ಪ್ರೈಮ್ (Nexon Prime) ಅನ್ನು ಪರಿಚಯಿಸಿತ್ತು. ಇದು ಮಾರುಕಟ್ಟೆಯಲ್ಲಿ ದಾಖಲೆಯ ಮಾರಾಟ ನಿರ್ಮಿಸಿದೆ. ಇದು ಪಿವಿ (PV) ವಿಭಾಗದ ದೇಶೀಯ ಮಾರಾಟದ ಅತ್ಯಧಿಕ ಮಾಸಿಕ ಮಾರಾಟದ ಬೆಳವಣಿಗೆಯಾಗಿದ್ದು, ಶೇ. 57 ರಷ್ಟು ಪ್ರಗತಿ ದಾಖಲಿಸಿದೆ. ಟಾಟಾ ಸಿಎನ್ಜಿ (Tata CNG) ಕಾರುಗಳ ಮಾರಾಟವು ಜುಲೈ 2022 ರಲ್ಲಿ 5,293 ವಾಹನಗಳಷ್ಟು ಏರಿಕೆಯಾಗಿದೆ. 

ಕಾರು ಮಾರಾಟದಲ್ಲಿ ಹೊಸ ದಾಖಲೆ ಬರೆದೆ ಟಾಟಾ ಮೋಟಾರ್ಸ್

ಎಸ್ಯುವಿ ವಾಹನಗಳು ಈಗ ಆಟೊಮೊಬೈಲ್ ಮಾರುಕಟ್ಟೆಯ ಬಹುಪಾಲು ಮಾರಾಟವನ್ನು ಆಕ್ರಮಿಸಿಕೊಂಡಿವೆ. ಟಾಟಾ ಎಸ್ಯುವಿ ಮಾರಾಟವು ಒಟ್ಟು ಮಾರಾಟದ ಶೇ. 64 ರಷ್ಟಿದೆ. ಇದು ಜುಲೈ 2021 ಕ್ಕೆ ಹೋಲಿಸಿದರೆ ಶೇ.105 ರಷ್ಟು ಹೆಚ್ಚಾಗಿದೆ. ಟಾಟಾ ಮೋಟಾರ್ಸ್, 2021ರ ಅಕ್ಟೋಬರ್ 18ರಂದು ಟಾಟಾ ಪಂಚ್ ಅನ್ನು ಬಿಡುಗಡೆ ಮಾಡಿತು ಮತ್ತು ಇದು ಜುಲೈ 2022 ರಲ್ಲಿ 11,007 ವಾಹನಗಳ ಅತ್ಯಧಿಕ ಮಾರಾಟ ದಾಖಲಿಸಿದೆ. 

ಇನ್ನೊಂದೆಡೆ ಕಂಪನಿಯ ವಾಣಿಜ್ಯ ವಾಹನದ ದೇಶೀಯ ಮಾರಾಟ ಕೂಡ ವರ್ಷದಿಂದ ವರ್ಷಕ್ಕೆ ಶೇ. 44ರಷ್ಟು ಹೆಚ್ಚಾಗಿದೆ. ಜುಲೈ 2022 ರಲ್ಲಿ ಒಟ್ಟು 31,473 ವಾಹನಗಳು ಮಾರಾಟವಾಗಿದ್ದವು. ಜುಲೈ 2021 ರಲ್ಲಿ ಇದು 21,796 ರಷ್ಟಿತ್ತು. ಪ್ಯಾಸೆಂಜರ್ ಕ್ಯಾರಿಯರ್ ಮಾರಾಟವು ಜುಲೈ 2021 ರಲ್ಲಿ ಮಾರಾಟವಾದ 825 ಯೂನಿಟ್ಗಳಿಗೆ ಹೋಲಿಸಿದರೆ, ಈ ವರ್ಷ ಶೇ. 319 ರಷ್ಟು ಏರಿಕೆಯಾಗಿದೆ. ಎಸ್ಸಿವಿ ಕಾರ್ಗೋ ಮತ್ತು ಪಿಕ್-ಅಪ್ ವಿಭಾಗದಲ್ಲಿ ಕೂಡ ಕಂಪನಿ ಶೇ.22ರಷ್ಟು ವಾರ್ಷಿಕ ಬೆಳವಣಿಗೆ ದಾಖಲಿಸಿದೆ. ವಾಣಿಜ್ಯ ವಾಹನ ರಫ್ತುಗಳು ಜುಲೈ 2021 ರಲ್ಲಿ ರವಾನೆಯಾದ 2,052 ವಾಹನಗಳಿಂದ ಕಳೆದ ತಿಂಗಳಲ್ಲಿ 2,681 ವಾಹನಗಳಿಗೆ ವರ್ಷಕ್ಕೆ ಶೇ.31ರಷ್ಟು ಬೆಳೆದಿದೆ. ಜುಲೈ 2021 ರಲ್ಲಿ ಮಾರಾಟವಾದ 23,848 ವಾಹನಗಳಿಂದ ಈ ಸಿವಿ ವಿಭಾಗದಲ್ಲಿ ಒಟ್ಟು ಮಾರಾಟವನ್ನು 34,154 ವಾಹನಗಳಷ್ಟು ಹೆಚ್ಚಾಗಿದೆ. ಇದು ಶೇ.43ರಷ್ಟು ಬೆಳವಣಿಗೆಯಾಗಿದೆ.

ಇವಿಯಲ್ಲಿ ಟಾಟಾ ಮೋಟಾರ್ಸ್ ಹೊಸ ದಾಖಲೆ
 

click me!