ಎಲೆಕ್ಟ್ರಿಕ್ ಕಾರಿನಲ್ಲಿ ಹೊಸ ದಾಖಲೆ ಬರೆದ ಟಾಟಾ, 2,000 ಎಕ್ಸ್‌ಪ್ರೆಸ್ ಟಿ ಆರ್ಡರ್ ಮಾಡಿದ ಪ್ರತಿಷ್ಠಿತ ಕಂಪನಿ!

By Suvarna News  |  First Published Oct 21, 2022, 4:07 PM IST

ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಇತ್ತೀಚೆಗೆ ಭಾರತದ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿ ಹೊಸ ಸಂಚಲನ ಮೂಡಿಸಿದೆ. ಇದೀಗ ಟಾಟಾ ಮೋಟಾರ್ಸ್ ದೆಹಲಿಯ ಪ್ರತಿಷ್ಠಿತ ರೈಡ್ ಪ್ಲಾಟ್‌ಫಾರ್ಮ್ ಬರೋಬ್ಬರಿ 2,000 ಟಾಟಾ ಎಕ್ಸ್‌ಪ್ರೆಸ್ ಟಿ ಇವಿ ಕಾರು ಆರ್ಡರ್ ಮಾಡಿದೆ 


ಮುಂಬೈ(ಅ.21): ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರು ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದೆ. ಕೈಗೆಟುಕುವ ದರದಲ್ಲಿ ಅತ್ಯುತ್ತಮ ಹಾಗೂ ಅತೀ ಸುರಕ್ಷತೆಯ ಎಲೆಕ್ಟ್ರಿಕ್ ಕಾರುಗಳನ್ನು ಟಾಟಾ ನೀಡುತ್ತಿದೆ. ಟಾಟಾ ಮೋಟಾರ್ಸ್‌ಗೆ ಇತರ ಕೆಲ ಎಲೆಕ್ಟ್ರಿಕ್ ಕಾರು ಕಂಪನಿಗಳು ಪೈಪೋಟಿ ನೀಡುತ್ತಿದೆ. ಆದರೆ 
ಟಾಟಾ ಎಲೆಕ್ಟ್ರಿಕ್ ಕ್ಷೇತ್ರದಲ್ಲಿ ಅಗ್ರಜನಾಗಿದೆ. 2021ರಲ್ಲಿ ಟ್ಯಾಕ್ಸಿ ಹಾಗೂ ಫ್ಲೀಟ್ ಪರಿಹಾರಕ್ಕಾಗಿ  ಟಾಟಾ ಮೋಟಾರ್ಸ್ ಟಾಟಾ ಟಿಗೋರ್ ಕಾರಿನ ಹೊಸ ವರ್ಶನ್ ಬಿಡುಗಡೆ ಮಾಡಿದೆ. ಟಾಟಾ ಎಕ್ಸ್‌ಪ್ರೆಸ್ ಟಿ ಇವಿ ಕಾರನ್ನು ಬಿಡುಗಡೆ ಮಾಡಿದೆ. ಈ ಕಾರು ಬಿಡುಗಡೆಯಾದ ಬೆನ್ನಲ್ಲೇ 2,000 ಕಾರುಗಳನ್ನು ದೆಹಲಿಯ ಕ್ಯಾಬ್ ಅಂಡ್ ಸರ್ವೀಸ್ ಕಂಪನಿ ಎವೆರಾ ಆರ್ಡರ್ ಮಾಡಿದೆ. ಈ ಮೂಲಕ ಅತೀ ಕಡಿಮೆ ಅವಧಿಯಲ್ಲಿ ಒಂದೇ ಕಂಪನಿಯಿಂದ ಗರಿಷ್ಠ ಆರ್ಡರ್ ಪಡೆದ ಖ್ಯಾತಿಗೂ ಟಾಟಾ ಪಾತ್ರವಾಗಿದೆ.

ಕಳೆದ ಎಪ್ರಿಲ್ ತಿಂಗಳಲ್ಲಿ ಟಾಟಾ ಮೋಟಾರ್ಸ್ ಎಕ್ಸ್‌ಪ್ರೆಸ್ ಟಿ ಕಾರಿಗೆ ಭಾರಿ ಬೇಡಿಕೆ ವ್ಯಕ್ತವಾಗಿತ್ತು. ಲಿಥಿಯಂ ಅರ್ಬನ್ ಟೆಕ್ನಾಲಜಿ ಕಂಪನಿಯಿಂದ 5,000 ಕಾರು ಆರ್ಡರ್ ಪಡೆದಿತ್ತು. ಇದಾಗ ಬಳಿಕ ಹಲವು ಕಂಪನಿಗಳು ಆರ್ಡರ್ ಪಡೆದಿತ್ತು. ಇದೀಗ ಸತತ ಒಂದರ ಮೇಲೊಂದರಂತೆ ಟಾಟಾ ಮೋಟಾರ್ಸ್ ಎಕ್ಸ್‌ಪ್ರೆಸ್ ಟಿ ಕಾರು ಆರ್ಡರ್ ಪಡೆಯುತ್ತಿದೆ. 

Tap to resize

Latest Videos

undefined

 

ಟಾಟಾ ಟಿಗೋರ್‌ ಇವಿಗೆ ಭಾರಿ ಬೇಡಿಕೆ: ಮೊದಲ ದಿನವೇ 10 ಸಾವಿರ ವಾಹನ ಬುಕ್

ಟಾಟಾ ಎಕ್ಸ್‌ಪ್ರೆಸ್ ಟಿ ಎಲೆಕ್ಟ್ರಿಕ್ ಕಾರು ಎರಡು ವೇರಿಯೆಂಟ್‌ನಲ್ಲಿ ಲಭ್ಯವಿದೆ. 21.5 kWh ಬ್ಯಾಟರಿ ಪ್ಯಾಕ್ ಹಾಗೂ 16.5 kWh ಬ್ಯಾಟರಿ ಪ್ಯಾಕ್ ಆಯ್ಕೆ ಲಭ್ಯವಿದೆ. 21.5 kWh ಬ್ಯಾಟರಿ ಪ್ಯಾಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 213 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ. ಇನ್ನು 16.5 kWh ಬ್ಯಾಟರಿ ಪ್ಯಾಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 165 ಕಿಲೋಮೀಟರ್ ಮೈಲೇಜ್ ನೀಡಲಿದೆ.  21.5 kWh ಬ್ಯಾಟರಿ ಕಾರು 0 ಯಿಂದ 80 ಶೇಕಡಾ ಚಾರ್ಜಿಂಗ್ ಸಮಯ 90 ನಿಮಿಷ, ಇನ್ನು 16.5 kWh ಬ್ಯಾಟರಿ ಪ್ಯಾಕ್ ಕಾರು ಚಾರ್ಜಿಂಗ್ ಸಮಯ 110 ನಿಮಿಷಗಳು.  ಇನ್ನು 15A ಪ್ಲಗ್ ಪಾಯಿಂಟ್‌ನಲ್ಲಿ ಚಾರ್ಜ್ ಮಾಡಲು ಚಾರ್ಜಿಂಗ್ ಪ್ಲಗ್ ಹಾಗೂ ಕೇಬಲ್ ನೀಡಲಾಗುತ್ತದೆ. 

ಕಾರು ಸುರಕ್ಷತಾ ಫೀಚರ್ಸ್ ಕೂಡ ಹೊಂದಿದೆ. ಎಬಿಎಸ್ ಬ್ರೇಕ್, ಎಲೆಕ್ಟ್ರಾನಿಕ್ ಬ್ರೇಕ್ ಪೋರ್ಸ್ ಡಿಸ್ಟ್ರಿಬ್ಯೂಶನ್(EBD) ಕ್ರಾಶ್ ಟೆಸ್ಟ್ ಸೇಫ್ಟಿ, ರಿವರ್ಸ್ ಕ್ಯಾಮಾರ, ಸೀಟ್ ಬೆಲ್ಟ್ ಅಲರಾಂ, ಸ್ಪೀಡ್ ಅಲರಾಂ ಸೇರಿದಂತೆ ಹಲವು ಸೇಫ್ಟಿ ಫೀಚರ್ಸ್ ಹೊಂದಿದೆ. ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಸೇರಿದಂತೆ ಅತ್ಯಾಧುನಿಕ ಫೀಚರ್ಸ್ ಹೊಂದಿದೆ. 

315 ಕಿ.ಮೀ ಮೈಲೇಜ್, 21,000 ರೂಗೆ ಬುಕ್ ಮಾಡಿ ದೇಶದ ಕಡಿಮೆ ಬೆಲೆಯ ಟಾಟಾ ಟಿಯಾಗೋ ಇವಿ!

ಟಾಟಾ ಮೋಟಾರ್ಸ್ ಈಗಾಗಲೇ ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. ಟಾಟಾ ನೆಕ್ಸಾನ್ ಇವಿ, ಟಾಟಾ ನೆಕ್ಸಾನ್ ಮ್ಯಾಕ್ಸ್ ಇವಿ, ಟಾಟಾ ಟಿಗೋರ್ ಇವಿ ಹಾಗೂ ಟಾಟಾ ಟಿಯಾಗೋ ಇವಿ ಕಾರುಗಳನ್ನು ಬಿಡುಗಡೆ ಮಾಡಿದೆ.

click me!