Tata CNG cars ಕೈಗೆಟುಕುವ ದರ, ಕಡಿಮೆ ನಿರ್ವಹಣ ವೆಚ್ಚದ ಟಾಟಾ ಟಿಗೋರ್ ಟಿಯಾಗೋ CNG ಕಾರು ಬಿಡುಗಡೆ ದಿನಾಂಕ ಬಹಿರಂಗ!

By Suvarna NewsFirst Published Jan 7, 2022, 3:51 PM IST
Highlights
  • ಟಾಟಾದ ಮೊದಲ CNG ಕಾರು ಬಿಡುಗಡೆ ರೆಡಿ
  • ಜನವರಿ 19ಕ್ಕೆ ಟಿಗೋರ್, ಟಿಯಾಗೋ CNG ಕಾರು ಬಿಡುಗಡೆ
  • ಕಾರಿನ ಬೆಲೆ, ನಿರ್ವಹಣಾ ವೆಚ್ಚ ಸೇರಿದಂತೆ ಇತರ ಮಾಹಿತಿ ಇಲ್ಲಿದೆ

ಮುಂಬೈ(ಜ.07): ಮಾರುತಿ ಸುಜುಕಿ, ಹ್ಯುಂಡೈ ಇಂಡಿಯಾ CNG ಕಾರಿಗೆ ಪ್ರತಿಸ್ಪರ್ಧಿಯಾಗಿ ಇದೀಗ ಟಾಟಾ ಮೋಟಾರ್ಸ್(Tata Motors) ಎರಡು CNG ಕಾರು ಬಿಡುಗಡೆ ಮಾಡುತ್ತಿದೆ. ಟಾಟಾ ಟಿಯಾಗೋ CNG ಹಾಗೂ ಟಾಟಾ ಟಿಗೋರ್ CNG ಕಾರು ಇದೇ ಜನವರಿ 19 ರಂದು ಬಿಡುಗಡೆಯಾಗುತ್ತಿದೆ. ಕಾರಿನ ಬುಕಿಂಗ್(Booking) ಈಗಾಗಲೇ ಆರಂಭಗೊಂಡಿದೆ. ಇದು ಟಾಟಾ ಮೋಟಾರ್ಸ್‌ನ ಮೊದಲ CNG ಕಾರಾಗಿದೆ.

ಟಾಟಾ ಟಿಯಾಗೋ(Tata tiago) ಈಗಾಗಲೇ ಡೀಲರ್‌ಶಿಪ್ ಬಳಿ ತಲುಪಿದೆ. ಆದರೆ ಜನವರಿ 19 ರಂದು ಟಿಗೋರ್(Tata Tigor) ಹಾಗೂ ಟಿಯಾಗೋ CNG ಕಾರು ಬಿಡುಗಡೆಯಾಗಲಿದೆ. ಪೆಟ್ರೋಲ್ ಹಾಗೂ ಡೀಸೆಲ್(Petrol Diesel Price) ಬೆಲೆ ದುಬಾರಿಯಾಗಿದೆ. ಪೆಟ್ರೋಲ್ ಸರಾಸರಿ 100 ರೂಪಾಯಿಗಳಾಗಿದ್ದರೆ, ಡೀಸೆಲ್ 95 ರೂಪಾಯಿ ಆಗಿದೆ. ಹೀಗಾಗಿ ಇಂಧನ ವಾಹನ ನಿರ್ವಹಣೆ ಕೂಡ ದುಬಾರಿಯಾಗಿದೆ. ಇತ್ತ ಜನರು ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಆದರೆ ಎಲೆಕ್ಟ್ರಿಕ್ ವಾಹನಗಳ(Electric Vehicles) ಬೆಲೆ ದುಬಾರಿಯಾಗಿದೆ. ಆದರೆ CNG ವಾಹನ  ಎಲೆಕ್ಟ್ರಿಕ್ ವಾಹನದಂತೆ ದುಬಾರಿಯಲ್ಲ. ಜೊತೆಗೆ ನಿರ್ವಹಣಾ ವೆಚ್ಚ ಕೂಡ ಕಡಿಮೆಯಾಗಿದೆ. ಹೀಗಾಗಿ ಭಾರಿ ಬೇಡಿಕೆ ಕಾರಣ ಇದೀಗ ಟಾಟಾ ಮೋಟಾರ್ಸ್ ಎರುಡು CNG ಕಾರುಗಳನ್ನು ಬಿಡುಗಡೆ ಮಾಡುತ್ತಿದೆ.

Tata Electric Car sales ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಟಾಟಾಗೆ ಮೊದಲ ಸ್ಥಾನ, ಶೇ.439 ಏರಿಕೆ ಮೂಲಕ ದಾಖಲೆ!

ಟಾಟಾ ಟಿಯಾಗೋ CNG ಕಾರು 12 ಕೆಜಿ CNG ಸಿಲಿಂಡರ್ ಹೊಂದಿದೆ. ಇದರಲ್ಲಿ 8 ರಿಂದ 9 ಕೆಜಿ CNG ಸಾಮರ್ಥ್ಯವಿದೆ. ಟಿಗೋರ್ ಬೂಟ್ ಸ್ಪೇಸ್ ಹೆಚ್ಚಿರುವ ಕಾರಣ ಟಿಗೋರ್ ಕಾರಿನಲ್ಲಿ 14 ಕೆಜಿ CNG ಸಿಲಿಂಡರ್ ಅಳವಡಿಸಲಾಗಿದೆ. ಇದರಲ್ಲಿ 10 ರಿಂದ 12 ಕೆಜಿ CNG ಸಾಮರ್ಥ್ಯ ಹೊಂದಿದೆ.  ಟಿಯಾಗೋ ಕಾರು 1 ಕೆಜಿ CNGಗೆ 28 ರಿಂದ 29 ಕಿಲೋಮೀಟರ್ ಮೈಲೇಜ್ ನೀಡಲಿದೆ. ಟಿಗೋರ್ ಕಾರು 1 ಕೆಜಿ CNGಗೆ 25 ಕಿಲೋಮೀಟರ್ ಮೈಲೇಜ್ ನೀಡಲಿದೆ.  ಇನ್ನು ಒಂದು ಕೆಜಿ CNG ಬೆಲೆ ಸರಿಸುಮಾರು 65 ರೂಪಾಯಿ. 

Upcoming Car ಹೊಸ ವರ್ಷದಲ್ಲಿ ಟಾಟಾದಿಂದ ಮತ್ತೊಂದು ಕೊಡುಗೆ, ಅಲ್ಟ್ರೋಜ್ ಆಟೋಮ್ಯಾಟಿಕ್ ಕಾರು ಲಾಂಚ್!

1 ಲೀಟರ್ ಪೆಟ್ರೋಲ್ ಬೆಲೆ ಸರಿಸುಮಾರು 100 ರೂಪಾಯಿ, ಇನ್ನು ಪೆಟ್ರೋಲ್ ಕಾರಿನ ಗರಿಷ್ಠ ಮೈಲೇಜ್ 20 ರಿಂದ 23 ಕಿಲೋಮೀಟರ್. ಇನ್ನು ಡೀಸೆಲ್ ಬೆಲೆ 95 ರೂಪಾಯಿ, ಗರಿಷ್ಠ ಮೈಲೇಜ್ 20 ರಿಂದ 25 ಕಿಲೋಮೀಟರ್. ಇದೇ ಕಾರಣಕ್ಕೆ CNG ಕಾರುಗಳು ನಿರ್ವಹಣಾ ವೆಚ್ಚ ಕಡಿಮೆಯಾಗಿದೆ. ಇತ್ತ ಟಾಟಾ ಮೋಟಾರ್ಸ್ ಶೀಘ್ರದಲ್ಲೇ ತನ್ನ ಕಾರುಗಳನ್ನು CNG ರೂಪದಲ್ಲೂ ಬಿಡುಗಡೆ ಮಾಡಲು ಮುಂದಾಗಿದೆ.

ಟಾಟಾ CNG ಕಾರಿನ ಬೆಲೆ:
ಟಾಟಾ ಟಿಯಾಗೋ CNG ಕಾರಿನ ಆರಂಭಿಕ ಬೆಲೆ  6 ರಿಂದ 6.5 ಲಕ್ಷ ರೂಪಾಯಿ(ಎಕ್ಸ್  ಶೋ ರೂಂ) ಎಂದು ಅಂದಾಜಿಸಲಾಗಿದೆ. ಇನ್ನು ಟಿಗೋರ್ CNG ಕಾರಿನ ಆರಂಭಿಕ ಬೆಲೆ 7 ರಿಂದ 8 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ. ಪೆಟ್ರೋಲ್ ಅಥವಾ ಡೀಸೆಲ್ ಕಾರಿನ ಬೆಲೆಗಿಂತ ಸರಿಸುಮಾರು 1ಲಕ್ಷ ರೂಪಾಯಿ CNG ಕಾರಿಗೆ ಹೆಚ್ಚಾಗಿರಲಿದೆ. ಆದರೆ ಒಮ್ಮೆ ಖರೀದಿಸಿದ ಬಳಿಕ ನಿರ್ವಹಣಾ ವೆಚ್ಚ ಕಡಿಮೆಯಾಗಿದೆ. ಆರ್ಥಿಕ ಹೊರೆಯನ್ನು ಕಡಿಮೆ ಮಾಡಲಿದೆ.

Electric Cars ಹೊಸ ವರ್ಷಕ್ಕೆ ಟಾಟಾದಿಂದ ಗೂಡ್ ನ್ಯೂಸ್, 400+ ಮೈಲೇಜ್ ಟಾಟಾ ನೆಕ್ಸಾನ್ EV ಬಿಡುಗಡೆ ರೆಡಿ!

ಇಂಧನ ಕಾರು ಹಾಗೂ CNG ಕಾರಿನಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ. ಟಾಟಾ ಟಿಯಾಗೋ ಹಾಗೂ ಟಿಗೋರ್ ಕಾರಿನಲ್ಲಿ CNG ಸಿಲಿಂಡರ್ ಇರಿಸಲು ಬೂಟ್ ಸ್ಪೇಸ್‌ನಲ್ಲಿ ಕೆಲ ಬದಾಲಾವಣೆ ಮಾಡಲಾಗಿದೆ. ಇನ್ನು ಇನ್ಸ್ಟ್ರುಮೆಂಟ್ ಕ್ಲಸರ್‌ನಲ್ಲಿ ಸಿಲಿಂಡರ್ ಗೇಜ್ ತೋರಿಸಲಿದೆ. ಪೆಟ್ರೋಲ್ ಅಥವಾ ಡೀಸೆಲ್ ಎಷ್ಟಿದೆ ಅನ್ನೋದು ತೋರಿಸುವ ರೀತಿ ಇಲ್ಲಿ ಸಿಲಿಂಡರ್‌ನಲ್ಲಿನ CNG ಎಷ್ಟಿದೆ ಅನ್ನೋದನ್ನು ತೋರಿಸಲಿದೆ. 

CNG ಕಾರುಗಳ ಪವರ್ ಹೆಚ್ಚಿರಲ್ಲ, ಪಿಕ್ ಅಪ್ ಇರಲ್ಲ ಅನ್ನೋ ಮಾತು ಸಹಜವಾಗಿ ಕೇಳಿಬರುತ್ತದೆ. ಆದರೆ ಟಾಟಾ ಟಿಗೋರ್ ಹಾಗೂ ಟಿಯಾಗೋ CNG ಕಾರು ಪವರ್‌ನಲ್ಲೂ ಹೆಚ್ಚಿನ ಬದಾಲಾವಣೆ ಇಲ್ಲ. CNG ಕಾರಿನಲ್ಲೂ ಟಾಟಾ 1.2 ಲೀಟರ್ ನ್ಯಾಚ್ಯುರಲ್ ಆಸ್ಪೈರ್ಡ್ 3 ಸಿಲಿಂಡರ್ ಯುನಿಟ್ ಎಂಜಿನ್ ಬಳಸಲಾಗಿದೆ. 86 PS ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು 5 ಸ್ಪೀಡ್ ಮಾನ್ಯುಯೆಲ್ ಹಾಗೂ AMT ಟ್ರಾನ್ಸ್‌ಮಿಶನ್ ಆಯ್ಕೆ ಲಭ್ಯವಿದೆ. 

click me!