ಲಾಸ್ ವೆಗಾಸ್(ಜ.07): ಆಟೋಮೊಬೈಲ್ ಕ್ಷೇತ್ರದಲ್ಲಿ(Automobile) ಪ್ರತಿ ದಿನ ಬದಲಾವಣೆಗಳಾಗುತ್ತವೆ. ಹೀಗಾಗಿ ಹೊಸ ಕಾರುಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುತ್ತದೆ. ಇದೀಗ ಹೊಸ ಆವಿಷ್ಕಾರವೊಂದು ಜಗತ್ತನ್ನೇ ಅಚ್ಚರಿಗೊಳಿಸಿದೆ. ಬಟನ್ ಒತ್ತಿದರೆ ಸಾಕು ಕಾರು ತನ್ನ ಬಣ್ಣ(colour changing) ಬದಲಿಸಲಿದೆ. ಈ ಹೊಸ ತಂತ್ರಜ್ಞಾನದ(Futuristic technology) ಕಾರನ್ನು BMW ಅನಾವರಣ ಮಾಡಿದೆ.
ಲಾಸ್ ವೆಗಾಸ್‌ನಲ್ಲಿ ನಡೆಯುತ್ತಿರುವ ಕನ್ಸೂಮರ್ ಎಲೆಕ್ಟ್ರಾನಿಕ್ ಶೋ(CES)ನಲ್ಲಿ BMW iX ಕಾರು ಅನಾವರಣ ಮಾಡಲಾಗಿದೆ. ಇದು ಎಲೆಕ್ಟ್ರಿಕ್(Electric Car) ಕಾರಾಗಿದೆ. ಸದ್ಯ ಈ ಕಾರು ಬಿಳಿ ಬಣ್ಣದಿಂದ ಕಪ್ಪು ಹಾಗೂ ಕಪ್ಪು ಬಣ್ಣದಿಂದ ಬಿಳಿ ಬಣ್ಣಕ್ಕೆ ತಿರುಗಲಿದೆ. ಬಟನ್ ಒತ್ತಿದರೆ ಕಾರು ಬಣ್ಣ ಬದಲಿಸುವ ತಂತ್ರಜ್ಞಾನ ಅಳವಡಿಸಲಾಗಿದೆ. ಈ ಕಾರು ಕೇವಲ ಬಣ್ಣ ಬದಲಿಸುವ ತಂತ್ರಜ್ಞಾನಕ್ಕೆ ಮಾತ್ರ ಹೆಸರುವಾಸಿಯಾಗಿಲ್ಲ. ಈ ಕಾರಿನಲ್ಲಿ ಹಲವು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಫೀಚರ್ಸ್ ಅಳವಡಿಸಲಾಗಿದೆ.
BMW i4, iX ಸೋಲ್ಡ್ ಔಟ್: 2022ರ ಆಗಸ್ಟ್ನಲ್ಲಿ ಬಿಡುಗಡೆ ನಿರೀಕ್ಷೆ!
ಇದು ವಿಶ್ವದ ಮೊದಲ ಬಣ್ಣ ಬದಲಿಸುವ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಖರೀದಿಸುವ ಗ್ರಾಹಕ ತನಗಿಷ್ಟದ ಎರಡು ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ತಂತ್ರಜ್ಞಾನದ ಮೂಲಕ ಕಾರಿಗೆ ಎರಡು ಬಣ್ಣಗಳನ್ನು ಸೆಟ್ ಮಾಡಲಾಗುತ್ತದೆ. ಸದ್ಯ BMW ಗ್ರಾಹಕರಿಗೆ ಕೇವಲ ಎರಡು ಬಣ್ಣದ ಆಯ್ಕೆ ಅಥವಾ ಅದಕ್ಕಿಂತ ಹೆಚ್ಚು ಬಣ್ಣದ ಆಯ್ಕೆ ನೀಡಲಿದೆಯಾ ಅನ್ನೋ ಮಾಹಿತಿ ಲಭ್ಯವಿಲ್ಲ. ಸದ್ಯ ಅನಾವರಣಗೊಂಡಿರುವ ಕಾರು ಎರಡು ಬಣ್ಣಗಳಿಗೆ ಬದಲಾಗಲಿದೆ.
ಆದರೆ ಬಣ್ಣ ಬದಲಿಸುವ ಕಾರು ಈ ಹಿಂದೆಯೂ ಹಲವು ಬಾರಿ ಚರ್ಚೆಗಳಾಗಿವೆ. ಈ ವೇಳೆ ಪ್ರಮುಖವಾಗಿ ಎದ್ದಿರುವ ಪ್ರಶ್ನೆ ಭದ್ರತೆ. ಪೊಲೀಸರಿಗೆ ಕಾರು ಪತ್ತೆ ಹಚ್ಚಲು ಕಷ್ಟವಾಗಲಿದೆ. ಇದರ ಜೊತೆಗೆ ಹಲುವ ಭದ್ರತೆ ಸಮಸ್ಯೆಗಳು ಉದ್ಭವವಾಗಲಿದೆ ಅನ್ನೋದು ಪ್ರಮುಖ ಚರ್ಚೆಯಾಗಿತ್ತು. ಆದರೆ ಈ ಎಲ್ಲಾ ಚರ್ಚೆಗಳ ನಡುವೆ ಇದೀಗ ಎರಡು ಬಣ್ಣಗಳಿಗೆ ಸೀಮಿತವಾಗಿ ಬಣ್ಣ ಬದಲಿಸುವ ಕಾರು ಅನಾವರಣಗೊಂಡಿದೆ.
BMW M8 ಕೂಪ್ ಭಾರತದಲ್ಲಿರುವ ಮೋಸ್ಟ್ ಪವರ್‌ಫುಲ್ ಕಾರು; 3.3 ಸೆಕೆಂಡ್‌ನಲ್ಲಿ 100 ಕಿ.ಮೀ ವೇಗ!
ಕಾರಿನ ಹೊರಭಾಗದ ಬಣ್ಣ ಮಾತ್ರವಲ್ಲ, ಒಳಾಂಗಣದ ಬಣ್ಣವೂ ಬದಲಿಸುವ ಆಯ್ಕೆಗಳಿವೆ. ಇದರಿಂದ ಸೂರ್ಯನ ಶಾಖ ತಡೆಯಬಲ್ಲ ಬಣ್ಣಕ್ಕೆ ಇಂಟಿರೀಯರ್ ಬಣ್ಣ ಬದಲಿಸಬಹುದು. ಹೀಗೆ ಮಾಡುವುದರಿಂದ ಎಸಿ, ಕಾರಿನೊಳಗೆ ತಣ್ಣಗಿನ ವಾತಾವರಣಕ್ಕೆ ನೆರವಾಗಲಿದೆ. ಇನ್ನು ಚಳಿಗಾಲದಲ್ಲಿ ಬೆಚ್ಚಿನ ವಾತಾವರಣಕ್ಕೆ ಅನುಗುಣವಾದ ಬಣ್ಣಕ್ಕೆ ತಿರುಗಿಸಬಹುದು. ರಾತ್ರಿ ವೇಳೆ ಹೆಚ್ಚಿನ ಬೆಳಕಿನ ಅವಶ್ಯಕೆ ಇರುವುದರಿಂದ ಕಾರಿನ ಇಂಟಿರಿಯರ್ ಬಣ್ಣವನ್ನು ಬಿಳಿ ಅಥಾವ ಇನ್ಯಾವ ಬಣ್ಣಕ್ಕೆ ಬದಲಾಯಿಸಬಹುದು.
Expression like you've never seen before 🧘♀️ Change your car's colour to fit your mood with the BMW iX Flow featuring E Ink. pic.twitter.com/dSoqbBqJzt
— BMW (@BMW)ಸದ್ಯ ಕಾನ್ಸೆಪ್ಟ್ ಕಾರು ಅನಾವರಣ ಮಾಡಲಾಗಿದೆ. ಇದರ ಉತ್ಪಾದನೆ, ಬಿಡುಗಡೆ ಕುರಿತು ಸದ್ಯಕ್ಕೆ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಆದರೆ ವಿಶ್ವದ ಮೊದಲ ಬಣ್ಣ ಬದಲಿಸುವ ಕಾರನ್ನು ಅನಾವರಣ ಮಾಡಿದ್ದೇವೆ. ಶೀಘ್ರದಲ್ಲೇ ಈ ಕಾರಿನ ಉತ್ಪಾದನೆ ಆರಂಭಗೊಳ್ಳಲಿದೆ. ಇದರ ಜೊತೆಗೆ ಎಲೆಕ್ಟ್ರಿಕ್ ಕಾರು ಆಗಿರುವುದರಿಂದ ಹೆಚ್ಚಿನ ಬ್ಯಾಟರಿ ಕಾರಿನ ಪ್ರಯಾಣಕ್ಕೆ ಮೀಸಲಿಡಬೇಕಾಗುತ್ತದೆ. ಈ ಕುರಿತು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದೇವೆ. ಹೀಗಾಗಿ ಉತ್ಪಾದನೆಯಲ್ಲಿ ಯಾವುದೇ ಹೆಚ್ಚಿನ ಬದಲಾವಣೆಗಳಿಲ್ಲದೆ ಬಿಡುಗಡೆಯಾಗಲಿದೆ ಎಂದು ಬಣ್ಣ ಬದಲಿಸುವ BMW iX ಕಾರಿನ ಪ್ರಾಜೆಕ್ಟ್ ಹೆಡ್ ಸ್ಟೆಲ್ಲಾ ಕ್ಲಾರ್ಕ್ ಹೇಳಿದ್ದಾರೆ.
ಕಾರಿನ ಬಣ್ಣ ಬದಲಿಸಲು BMW ಕಂಪನಿ E ಇಂಕ್ ಹಾಗೂ E ರೀಡರ್ ನೆರವಿನಿಂದ ಎಲೆಕ್ಟ್ರಾನಿಕ್ ಪೇಪರ್ ಟೆಕ್ನಾಲಜಿ ಬಳಸಲಾಗಿದೆ. ಮತ್ತೊಂದು ವಿಶೇಷ ಅಂದರೆ ಈ ಕಾರಿನ ಬಣ್ಣ ಎಷ್ಟು ವರ್ಷವಾದರೂ ಫೇಡ್ ಆಗುವುದಿಲ್ಲ. ಕಾರು ಅದೆಷ್ಟೇ ಹಳೆಯದಾದರೂ ಹೊಚ್ಟ ಹೊಸ ಕಾರಿನಂತೆ ಕಂಗೊಳಿಸಲಿದೆ. ಅತ್ಯಾಧುನಿಕ ತಂತ್ರಜ್ಞಾನದ ಈ ಕಾರು ಮಾರುಕಟ್ಟೆ ಪ್ರವೇಶಿಸಲು ಕೆಲ ವರ್ಷಗಳೇ ಹಿಡಿಯಬಹುದು.