ಹೊಸ ರೂಪ, ಹೊಸ ವಿನ್ಯಾಸ, ಆ.18ಕ್ಕೆ ಕೈಗೆಟುಕುವ ದರದಲ್ಲಿ ಹೊಚ್ಚ ಹೊಸ ಮಾರುತಿ ಅಲ್ಟೋ ಲಾಂಚ್!

By Suvarna News  |  First Published Aug 2, 2022, 9:54 AM IST

ಮಾರುತಿ ಸುಜುಕಿಯ ಅತ್ಯಧಿಕ ಮಾರಾಟವಾಗಿರುವ ಕಾರು ಅಲ್ಟೋ ಇದೀಗ ಹೊಸ ರೂಪದಲ್ಲಿ ಬಿಡುಗಡೆಯಾಗುತ್ತಿದೆ. ಮಾರುತಿ ಸುಜುಕಿ ನೂತನ ಅಲ್ಟೋ ಕಾರನ್ನು ಆಗಸ್ಟ್ 18ಕ್ಕೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಕಾರಿನ ಕುರಿತ ಹೆಚ್ಚಿನ ವಿವರ ಇಲ್ಲಿವೆ.


ನವದೆಹಲಿ(ಆ.02): ಮಾರುತಿ ಸುಜುಕಿಯ ಬಹುಬೇಡಿಕೆ ಹಾಗೂ ಅತ್ಯದಿಕ ಮಾರಾಟಗೊಂಡಿರುವ ಅಲ್ಟೋ ಕಾರು ಇದೀಗ ಹೊಸ ರೂಪ ಹಾಗೂ ಹೊಸ ವಿನ್ಯಾಸದಲ್ಲಿ ಬಿಡುಗಡೆಯಾಗುತ್ತಿದೆ. ನೂತನ ಅಲ್ಟೋ ಕಾರು ಮುಂಭಾಗದ ಶೈಲಿ ಬಲೆನೋ ಕಾರಿನಂತೆ ಗೋಚರಿಸುತ್ತಿದೆ.  ಆಗಸ್ಟ್ 18ಕ್ಕೆ ನೂತನ ಮಾರುತಿ ಸುಜುಕಿ ಅಲ್ಟೋ ಕಾರು ಬಿಡುಗಡೆಯಾಗುತ್ತಿದೆ. ನೂತನ ಅಲ್ಟೋ ಕಾರಿನ ಮೈಲೇಜ್ ಹೆಚ್ಚಿಸಲಾಗಿದೆ. ಹೊಸ ಫೀಚರ್ಸ್ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಕಾರು ಇದಾಗಿದ್ದು, ಹೊಸ ದಾಖಲೆ ಬರೆಯುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ.  ನೂತನ ಅಲ್ಟೋ ಕಾರು 6 ವೇರಿಯೆಂಟ್‌ನಲ್ಲಿ ಬಿಡುಗಡೆಯಾಗುತ್ತಿದೆ. ಹೊಸ ಕಾರಿನ ಬೆಲೆ ಕುರಿತು ಇನ್ನಷ್ಟೇ ಬಹಿರಂಗವಾಗಬೇಕಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಅಲ್ಟೋ ಕಾರಿನ ಬೆಲೆ 3.39 ಲಕ್ಷ ರೂಪಾಯಿ(ಎಕ್ಸ್  ಶೋ ರೂಂ). ಟಾಪ್ ವೇರಿಯೆಂಟ್ ಕಾರಿನ ಬೆಲೆ 4.82 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 

ನೂತನ ಮಾರುತಿ ಅಲ್ಟೋ ಕಾರು LXi, LXi (O), VXi, VXi (O), VXi+, ಹಾಗೂ VXi+ (O)ವೇರಿಯೆಂಟ್‌ನಲ್ಲಿ ಲಭ್ಯವಿದೆ. 1.0 ಲೀಟರ್ ಎಂಜಿನ್ ಹೊಂದಿರುವ ಅಲ್ಟೋ K10C ಪೆಟ್ರೋಲ್ ಎಂಜಿನ್ ಹೊಂದಿದೆ. ಇನ್ನು 5 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ AGS( ಆಟೋಮ್ಯಾಟಿಕ್) ಟ್ರಾನ್ಸ್‌ಮಿಶನ್ ಲಭ್ಯವಿದೆ. 

Tap to resize

Latest Videos

 

ಆಲ್‌-ನ್ಯೂ ಮಾರುತಿ ಸುಜುಕಿ ಬ್ರೀಝಾ ಬಿಡುಗಡೆ: ಬೆಲೆ 7.99 ಲಕ್ಷ ರೂ.ಗಳಿಂದ ಆರಂಭ

ಜೂನ್ ತಿಂಗಳಲ್ಲಿ ಅಲ್ಟೋ ಜಾಹೀರಾತು ಶೂಟಿಂಗ್ ವೇಳೆ ನೂತನ ಅಲ್ಟೋ ಕಾರಿನ ಚಿತ್ರಗಳು ಬಹಿರಂಗಗೊಂಡಿತ್ತು. ಕಾರಿನ ಇಂಟಿರೀಯರ್ ಹೆಚ್ಚು ಆಕರ್ಷಕವಾಗಿದ್ದು, ಹೆಚ್ಚಿನ ಸ್ಥಳವಕಾಶ ನೀಡಲಾಗಿದೆ. ಇನ್ನು ಹೊರ ವಿನ್ಯಾಸದಲ್ಲಿ ಮತ್ತಷ್ಟು ಆಕರ್ಷಕ ಲುಕ್ ನೀಡಲಾಗಿದ್ದು, ಮತ್ತೊಂದು ದಾಖಲೆ ನಿರ್ಮಾಣವಾಗವು ಸಾಧ್ಯತೆ ಇದೆ. ಡ್ಯಾಶ್ ಬೋರ್ಡ್ ವಿನ್ಯಾಸ ಹೆಚ್ಚು ಕಡಿಮೆ ಎಸ್ ಪ್ರೆಸ್ಸೋ ಕಾರಿನಂತೆ ಹೋಲುತ್ತಿದೆ . ಇನ್ನುಳಿದಂತೆ ಬೂಟ್ ಸ್ಪೇಸ್, ರೆಡ್ ರೂಂ ಸೇರಿದಂತೆ ಹಿಂಬದಿ ಪ್ರಯಾಣಿಕರ ಆರಾಮದಾಯಕ ಪ್ರಯಾಣಕ್ಕೆ ಅನೂಕೂಲ ಮಾಡಿಕೊಡುವಂತೆ ವಿನ್ಯಾಸ ಮಾಡಲಾಗಿದೆ. 

ಕಳೆದ ಎರಡು ದಶಕಗಳಿಂದ  ಮಾರುತಿ ಅಲ್ಟೋ ಭಾರತದ ಕಾರು ಮಾರುಕಟ್ಟೆಯಲ್ಲಿ ಬಹು ಬೇಡಿಕೆಯ ಕಾರಾಗಿದೆ. ಭಾರತದಲ್ಲಿ ಬರೋಬ್ಬರಿ 40 ಲಕ್ಷಕ್ಕೂ ಹೆಚ್ಚು ಅಲ್ಟೋ ಕಾರುಗಳು ಮಾರಾಟಗೊಂಡಿದೆ.  ಮಾರುತಿ ಸುಜುಕಿ 2000ರಲ್ಲಿ ಅಲ್ಟೋ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. 2008ರಲ್ಲಿ ಕಾರಿನ ಮಾರಾಟ 10 ಲಕ್ಷ ಗಡಿ ದಾಟಿತ್ತು. ಬಳಿಕ 2012ರಲ್ಲಿ 20 ಲಕ್ಷ, 2016ರಲ್ಲಿ 30 ಲಕ್ಷ ಗಡಿ ದಾಟಿತ್ತು. ಅಲ್ಲದೆ ಕಳೆದ 16 ವರ್ಷಗಳಿಂದ ಅಲ್ಟೋ ಕಾರು ಮಾರಾಟದಲ್ಲಿ ನಂ.1 ಸ್ಥಾನ ಅಲಂಕರಿಸಿದೆ. ಇದೇ ವೇಳೆ ಶೇ.76ರಷ್ಟುಗ್ರಾಹಕರು ತಮ್ಮ ಮೊದಲನೇ ಕಾರಾಗಿ ಆಲ್ಟೋವನ್ನು ಆಯ್ಕೆ ಮಾಡಿಕೊಂಡಿದ್ದಾರೆ.  ಶೇ.84ರಷ್ಟುಗ್ರಾಹಕರ ಮೊದಲ ಆಯ್ಕೆ ಆಲ್ಟೋ ಎನಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯ ಜೊತೆಗೆ ಲ್ಯಾಟಿನ್‌ ಅಮೆರಿಕ, ಆಫ್ರಿಕಾ, ದಕ್ಷಿಣ ಏಷ್ಯಾ ಸೇರಿದಂತೆ 40ಕ್ಕೂ ಹಚ್ಚು ದೇಶಗಳಿಗೆ ಆಲ್ಟೋ ಕಾರನ್ನು ರಪ್ತು ಮಾಡಲಾಗಿದೆ ಎಂದು ಎಂಎಸ್‌ಐನ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್‌ ಶ್ರೀವಾತ್ಸವ ತಿಳಿಸಿದ್ದಾರೆ.

ದೇಶಕ್ಕೆ ಭಾರತ್ ಎನ್‌ಕ್ಯಾಪ್‌ನ ಅಗತ್ಯವಿಲ್ಲ; ಮಾರುತಿ ಸುಜುಕಿ ಅಧ್ಯಕ್ಷ

click me!