ಹಬ್ಬಕ್ಕೆ ಟಾಟಾ ಹ್ಯಾರಿಯರ್ ಸ್ಪೆಷಲ್ ಎಡಿಷನ್ ಕ್ಯಾಮೋ ಬಿಡುಗಡೆ, 16.50 ಲಕ್ಷ ರೂ.ನಿಂದ ಆರಂಭ

By Suvarna NewsFirst Published Nov 7, 2020, 5:14 PM IST
Highlights

ಭಾರತೀಯರ ಗ್ರಾಹಕರ ಅಚ್ಚುಮೆಚ್ಚಿನ ಬ್ರ್ಯಾಂಡ್ ಟಾಟಾ ಇದೀಗ ಮತ್ತೊಂದು ಸ್ಪೆಷಲ್ ಎಡಿಷನ್ ಎಸ್‌ಯುವಿ ಬಿಡುಗಡೆ ಮಾಡಿದ್ದು, ಹಬ್ಬದ ಸಂದರ್ಭದಲ್ಲಿ ಗ್ರಾಕರನ್ನು ಸೆಳೆಯಲು ಮುಂದಾಗಿದೆ. ಟಾಟಾ ಹ್ಯಾರಿಯರ್ ಎಸ್‌ಯುವಿ ನೋಡಲು ಸೇನಾ ವಾಹನದಂತೆ ಕಾಣುತ್ತದೆ.
 

ಇತ್ತೀಚಿನ ದಿನಗಳಲ್ಲಿ ಭಾರತೀಯ ಕಾರು ಗ್ರಾಹಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವ ಟಾಟಾ ಕಂಪನಿ, ಇದೀಗ ಟಾಟಾ ಹ್ಯಾರಿಯರ್ ಕ್ಯಾಮೋ(ಸಿಎಎಂಒ) ಸ್ಪೆಷಲ್ ಎಡಿಷನ್ ಎಸ್‌ಯುವಿ ಮೂಲಕ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಶುಕ್ರವಾರ ಈ ಸ್ಪೆಷಲ್ ಎಡಿಷನ್ ಕಾರು ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ.

ಭಾರತದಲ್ಲಿ ಹಬ್ಬದ ವೇಳೆ ಕಾರು ಖರೀದಿ ಪ್ರಕ್ರಿಯೆ ಹೆಚ್ಚು. ಈ ಹಿನ್ನೆಲೆಯಲ್ಲಿ ಕಂಪನಿ ದೀಪಾವಳಿ ಹಬ್ಬದ ಹೊತ್ತಿಗೆ ಈ ಹೊಸ ಸ್ಪೆಷಲ್ ಎಡಿಷನ್ ಕಾರನ್ನು ಲಾಂಚ್ ಮಾಡಿದ್ದು, 16.50 ಲಕ್ಷ ರೂಪಾಯಿ(ದೆಹಲಿಯ ಎಕ್ಸ್ ಶೋರೂಮ್ ) ಬೆಲೆಯನ್ನು ನಿಗದಿಪಡಿಸಲಾಗಿದೆ. ಟಾಪ್ ಎಂಡ್ ಮಾಡೆಲ್ ನಿಮಗೆ 20.3 ಲಕ್ಷ ರೂಪಾಯಿವರೆಗೂ ಸಿಗುತ್ತದೆ. ಗ್ರೀನ್ ಬಾಡಿ ಕಲರ್ ಹೊಂದಿರುವ ಕಾರು ನೋಡಲು ಆಕರ್ಷಕವಾಗಿದ್ದು, ಅನೇಕ ಅತ್ಯಾಧುನಿಕ ಫೀಚರ್‌ಗಳಿಂದಲೂ ಗಮನಸೆಳೆಯುತ್ತಿದೆ. 

ಹಬ್ಬದ ಟೈಂನಲ್ಲೂ ಹೊಸ ಕಾರಿಗಿಂತ ಹಳೆಯ ಕಾರಿಗೆ ಫುಲ್ ಡಿಮ್ಯಾಂಡ್

ಹ್ಯಾರಿಯರ್ ಕ್ಯಾಮೊ ಸ್ಪೆಷಲ್ ಎಡಿಷನ್ ಕಾರು ಅದರ ಹಸಿರು ಬಣ್ಣದಲ್ಲಿ ಆಕರ್ಷಕವಾಗಿದ್ದು, ಆರ್ 17 ಬ್ಲಾಕ್‌ಸ್ಟೋನ್ ಮಿಶ್ರಲೋಹಗಳು ಮತ್ತು ಕ್ಯಾಮೊ ಬ್ಯಾಡ್ಜ್‌ಗಳು ಕಾರಿನ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹ್ಯಾರಿಯರ್‌ ಸ್ಪೆಷಲ್ ಎಡಿಷನ್‌ನ ಬ್ಲಾಕ್‌ಸ್ಟೋನ್ ಮ್ಯಾಟ್ರಿಕ್ಸ್ ಡ್ಯಾಶ್‌ಬೋರ್ಡ್, ಪ್ರೀಮಿಯಂ ಬೆನೆಕೆ- ಕಾಲಿಕೊ ಬ್ಲಾಕ್‌ಸ್ಟೋನ್ ಚರ್ಮದ ಸೀಟುಗಳನ್ನು ಕಾಂಟ್ರಾಸ್ಟ್ ಕ್ಯಾಮೊ ಹಸಿರು ಹೊಲಿಗೆ ಮತ್ತು ಗನ್‌ಮೆಟಲ್ ಬೂದು ಬಣ್ಣದಲ್ಲಿದಲ್ಲಿದ್ದು, ಹ್ಯಾರಿಯರ್ ಸ್ಪೆಷಲ್ ಎಡಿಷನ್ ಕಾರಿನ ಒಳಾಂಗಣವನ್ನು ಅಂದವನ್ನು ಇಮ್ಮಡಿಗೊಳಿಸಿವೆ. ನಿಮಗೆ ಅದ್ಭುತವಾದ ಅನುಭವನ್ನು ಇವು ನೀಡುತ್ತವೆ.

ಈ ಸ್ಪೆಷಲ್ ಎಡಿಷನ್ ಕಾರಿನ ಇನ್ನೊಂದು ವಿಶೇಷ ಏನೆಂದರೆ, ಕಂಪನಿಯ ಬಹಳಷ್ಟು ಅಸ್ಸೆಸರಿಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ನಿಮಗೆ ಸ್ಪೆಷಲ್ ಕ್ಯಾಮೋ ಗ್ರಾಫಿಕ್ಸ್, ರೂಫ್ ರೈಲ್ಸ್, ಸೈಡ್ ಸ್ಟೆಪ್ಸ್, ಫ್ರಂಟ್ ಪಾರ್ಕಿಂಗ್ ಸೆನ್ಸರ್‌ಗಳಿವೆ. ಜೊತೆಗೆ, ಕ್ಯಾಬಿನ್‌ನಲ್ಲಿ ಸೀಟು ಆರ್ಗನೈಸರ್ ಹೊಂದಿದ್ದು, ಸನ್ಸೇಡ್, 3ಡಿ ಪ್ರೇರಿತ ಮ್ಯಾಟ್ಸ್, 3ಡಿ ಟ್ರಂಕ್ ಮ್ಯಾಟ್ಸ್, ಆಂಟಿ ಸ್ಕಿಡ್ ಡ್ಯಾಸ್ ಮ್ಯಾಟ್ಸ್  ಇತ್ಯಾದಿ ಅಸ್ಸೆಸರಿಗಳು ದೊರೆಯುತ್ತವೆ. ಅಂದರೆ, ನಿಮಗೆ ಬೇಕಿದ್ದರೆ ಪಡೆದುಕೊಳ್ಳಬಹುದಾಗಿದೆ. ಈ ಎಲ್ಲ ಅಸ್ಸೆಸರಿಗಳು ಎರಡು ಪ್ಯಾಕೇಜ್‌ನಲ್ಲಿ ದೊರೆಯುತ್ತವೆ. ಕ್ಯಾಮೋ ಸ್ಟೀಲ್ತ್ ಹಾಗೂ ಸ್ಟೀಲ್ಥ್ ಪ್ಲಸ್ ಆಯ್ಕೆಗಳಲ್ಲಿ ಲಭ್ಯ. ಈ ಅಸ್ಸೆಸರಿಗಳನ್ನು ಆಯ್ಕೆಗಳನ್ನು ಪಡಯಬೇಕಿದ್ದರೆ 26 ಸಾವಿರ ರೂಪಾಯಿ ಮೇಲ್ಪಟ್ಟು ಹಣವನ್ನು ನೀಡಬೇಕಾಗುತ್ತದೆ. 

ವಾಹನ ಖರೀದಿಸಿದ್ರೆ ರೋಡ್ ಟ್ಯಾಕ್ಸ್, ನೋಂದಣಿ ಶುಲ್ಕ ಕಟ್ಟೋದು ಬೇಡ!

ಈ ಹ್ಯಾರಿಯರ್ ಕ್ಯಾಮೋ ಸ್ಪೆಷಲ್ ಎಡಿಷನ್ ನಿಮಗೆ ಆಟೋಮ್ಯಾಟಿಕ್ ಟ್ರಾನ್ಸಿಮಿಷನ್ ಮತ್ತು ವಿಥ್ ಗಿಯರ್ ಕೂಡ ದೊರೆಯುತ್ತದೆ. ಆಟೋಮ್ಯಾಟಿಕ್ ಟ್ರಾನ್ಸಿಮಿಷನ್ ನಿಮಗೆ ಎಕ್ಸ್‌ಝಡ್ ನಂತರದಲ್ಲಿ ದೊರೆಯುತ್ತದೆ. ಹಾಗೆಯೇ ಮ್ಯಾನುಯಲ್ ಟ್ರಾನ್ಸಿಮಿಷನ್ ಎಕ್ಸ್‌ಟಿ ವೆರಿಯಂಟ್ಸ್‌ನಿಂದ ಆರಂಭವಾಗುತ್ತದೆ. 

ಟಾಟಾ ಹ್ಯಾರಿಯರ್ ಕ್ಯಾಮೋ ಎಡಿಷನ್ ಮ್ಯಾನುಯಲ್ ಬೆಲೆ ಹೀಗಿದೆ (ಎಕ್ಸ್ ಶೋರೂಮ್, ದೆಹಲಿ)

ಟಾಟಾ ಹ್ಯಾರಿಯರ್ ಎಕ್ಸ್‌ಟಿ ಕ್ಯಾಮೋ: 16.5 ಲಕ್ಷ ರೂ.
ಟಾಟಾ ಹ್ಯಾರಿಯರ್ ಎಕ್ಸ್‌ಟಿ ಪ್ಲಸ್ ಕ್ಯಾಮೋ: 17.3 ಲಕ್ಷ ರೂ.
ಟಾಟಾ ಹ್ಯಾರಿಯರ್ ಎಕ್ಸ್‌ಝಡ್ ಕ್ಯಾಮೋ: 17.85 ಲಕ್ಷ ರೂ.
ಟಾಟಾ ಹ್ಯಾರಿಯರ್ ಎಕ್ಸ್‌ಝಡ್ ಪ್ಲಸ್ ಕ್ಯಾಮೋ: 19.10 ಲಕ್ಷ ರೂ.

ಟಾಟಾ ಹ್ಯಾರಿಯರ್ ಕ್ಯಾಮೋ ಆಟೋಮ್ಯಾಟಿಕ್ ಮಾದರಿ ಬೆಲೆ ಹೀಗಿದೆ:
ಟಾಟಾ ಹ್ಯಾರಿಯರ್ ಎಕ್ಸ್‌ಝಡ್ಎ ಕ್ಯಾಮೋ: 19.15 ಲಕ್ಷ ರೂ.
ಟಾಟಾ ಹ್ಯಾರಿಯರ್ ಎಕ್ಸ್‌ಝಡ್ ಪ್ಲಸ್ ಕ್ಯಾಮೋ: 20.3 ಲಕ್ಷ ರೂ.

ಬಿಡುಗಡೆಯಾದ ತಿಂಗಳಲ್ಲೇ ಥಾರ್‌ಗೆ 20000 ಬುಕ್ಕಿಂಗ್!
 

click me!