ಮಾರುತಿ, ಮಹೀಂದ್ರ ಲೆಕ್ಕಾಚಾರ ಉಲ್ಟಾ, ಕಾರು ಮಾರಾಟದಲ್ಲಿ ಹಲವರ ಹಿಂದಿಕ್ಕಿ ಟಾಟಾ ದಾಖಲೆ

Published : Aug 02, 2026, 04:56 PM IST
tata punch facelift

ಸಾರಾಂಶ

ಭಾರತದಲ್ಲಿ ಟಾಟಾ ಕಾರುಗಳು ಹೊಸ ದಾಖಲೆ ಬರೆದಿದೆ. ಪ್ಯಾಸೆಂಜರ್ ಕಾರು, ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಹಲವರ ಹಿಂದಿಕ್ಕಿ ಹೊಸ ಇತಿಹಾಸ ನಿರ್ಮಿಸಿದೆ. ಮಾರಾಟದಲ್ಲಿ ಟಾಟಾ ಬರೆದ ದಾಖಲೆ ಏನು?

ನವದೆಹಲಿ (ಆ.02) ಭಾರತದ ಕಾರು ಮಾರುಕಟ್ಟೆಯಲ್ಲಿ ಪ್ರತಿ ತಿಂಗಳು ಪೈಪೋಟಿ ತೀವ್ರಗೊಳ್ಳುತ್ತಲೇ ಇದೆ. ಒಂದೆಡೆ ಮಾರುಕಟ್ಟೆಯಲ್ಲಿರುವ ಕಾರುಗಳ ಮಾರಾಟ, ಮತ್ತೊಂದೆಡೆ ಹೊಸ ಹೊಸ ಬ್ರ್ಯಾಂಡ್ ಕಂಪನಿಗಳ ಕಾರುಗಳ ಸೇರ್ಪಡೆಗಳಿಂದ ಪೈಪೋಟಿ ಹೆಚ್ಚು. ಇದೀಗ ಹಲವು ಬ್ರ್ಯಾಂಡ್ ಕಾರುಗಳ ನಡುವೆ ಟಾಟಾ ಮೋಟಾರ್ಸ್ ಹೊಸ ದಾಖಲೆ ಬರೆದಿದೆ. ಟಾಟಾ ಮೋಟಾರ್ಸ್ ಪ್ಯಾಸೆಂಜರ್ ಕಾರು ಮಾರಾಟದಲ್ಲಿ ಶೇಕಡಾ 58ರಷ್ಟು ಏರಿಕೆ ಕಂಡರೆ, ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಶೇಕಡಾ 59ರಷ್ಟು ಪ್ರಗತಿ ಸಾಧಿಸಿದೆ. ಈ ಮೂಲಕ ಮಾರುತಿ ಸುಜುಕಿ, ಮಹೀಂದ್ರ, ಎಂಜಿ ಮೋಟಾರ್ಸ್ ಸೇರಿದಂತೆ ಹಲವು ಕಂಪನಿಗಳ ಲೆಕ್ಕಾಚಾರ ಉಲ್ಟಾ ಮಾಡಿದೆ.

ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಟಾಟಾ ದಾಖಲೆ

ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯನ್ನು ಟಾಟಾ ಮೋಟಾರ್ಸ್ ಆಕ್ರಮಿಸಿಕೊಂಡಿದೆ. ಜುಲೈ 2026ರಲ್ಲಿ ಟಾಟಾದ 15,000ಕ್ಕೂ ಹೆಚ್ಚು ಇವಿ ಕಾರುಗಳು ಮಾರಾಟವಾಗಿದೆ. ಜುಲೈ 2025ಕ್ಕೆ ಹೋಲಿಸಿದರೆ ಬರೋಬ್ಬರಿ ಶೇಕಡಾ 114ರಷ್ಟು ಪ್ರಗತಿ ಸಾಧಿಸಿದೆ. ಒಂದೇ ತಿಂಗಳಲ್ಲಿ 15 ಸಾವಿರಕ್ಕೂ ಅಧಿಕ ಇವಿ ಮಾರಾಟ ಮಾಡುವ ಮೂಲಕ ಜನರು ಟಾಟಾ ಇವಿ ಮೇಲೆ ಒಲವು ತೋರುತ್ತಿದ್ದಾರೆ ಅನ್ನೋದು ಖಚಿತವಾಗಿದೆ. ಈಗಾಗಲೇ ಮಹೀಂದ್ರ, ಮಾರುತಿ ಸುಜುಕಿ, ಎಂಜಿ ಮೋಟಾರ್ಸ್ ಸೇರಿದಂತೆ ಹಲವು ಆಟೋಮೊಬೈಲ್ ಕಂಪನಿಗಳು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಿದೆ. ಆದರೆ ಟಾಟಾ ನಂ.1 ಆಯ್ಕೆಯಾಗಿ ಹೊರಹೊಮ್ಮಿದೆ.

ಜುಲೈ 2026ರಲ್ಲಿ ಟಾಟಾದ 63,760 ಕಾರುಗಳು ಮಾರಾಟವಾಗಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ 39,521 ಟಾಟಾ ಕಾರುಗಳು ಮಾರಾಟವಾಗಿತ್ತು. ಒಂದೇ ತಿಂಗಳಲ್ಲಿ ಟಾಟಾ 60 ಸಾವಿರಕ್ಕೂ ಹೆಚ್ಚು ಪ್ಯಾಸೆಂಜರ್ ಕಾರುಗಳನ್ನು ಮಾರಾಟ ಮಾಡುವ ಮೂಲಕ ದಾಖಲೆ ಬರೆದಿದೆ. ಇದು ಒಂದು ತಿಂಗಳಲ್ಲಿ ಟಾಟಾದ ಗರಿಷ್ಠ ಮಾರಾಟ ಸಂಖ್ಯೆಯಾಗಿದೆ.ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಟಾಟಾ ಪ್ರಗತಿ ಸಾಧಿಸಿದೆ. ಜುಲೈ ತಿಂಗಳಲ್ಲಿ 1,149 ಕಾರುಗಳು ಮಾರಾಟವಾಗುವ ಮೂಲಕ ಶೇಕಡಾ 76ರಷ್ಟು ಪ್ರಗತಿ ಸಾಧಿಸಿದೆ.

ಟಾಟಾ ಪಂಚ್ ಕಾರಿಗೆ ಬಾರಿ ಬೇಡಿಕೆ

ಟಾಟಾ ಕಾರುಗಳ ಪೈಕಿ ಪಂಚ್ ಕಾರಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ.ಟಾಟಾದ ದಾಖಲೆ ಮಾರಾಟದಲ್ಲಿ ಪಂಚ್ ಅತೀ ಹೆಚ್ಚು ಮಾರಾಟವಾಗುವ ಮೂಲಕ ಮೊದಲ ಸ್ಥಾನದಲ್ಲಿದೆ. ವಿಶೇಷ ಅಂದರೆ ಟಾಟಾ ಪಂಚ್ ಇಂಧನ ಕಾರು ಹಾಗೂ ಟಾಟಾ ಪಂಚ್ ಎಲೆಕ್ಟ್ರಿಕ್ ಎರಡೂ ಕಾರುಗಳು ಮಾರಾಟದಲ್ಲಿ ಉತ್ತಮ ಪ್ರಗತಿ ಸಾಧಿಸಿದೆ.

ವಿಶೇಷವಾಗಿ ಟಾಟಾ ಎಲೆಕ್ಟ್ರಿಕ್ ಕಾರುಗಳಲ್ಲಿ ಹಲವು ಆಯ್ಕೆಗಳನ್ನು ನೀಡುತ್ತಿದೆ. ಕಡಿಮೆ ಬೆಲೆಯಿಂದ ಕಾರುಗಳು ಆರಂಭಗೊಳ್ಳುತ್ತಿದೆ. ಟಾಟಾದ ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ಕಾರಾದ ಟಾಟಾ ಟಿಯಾಗೋ ಇವಿ ಭಾರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಟಾಟಾ ಟಿಗೋರ್ ಇವಿ, ಟಾಟಾ ಸಿಯೆರಾ ಇವಿ, ಟಾಟಾ ಹ್ಯಾರಿಯರ್ ಇವಿ, ಟಾಟಾ ಪಂಚ್ ಇವಿ, ಟಾಟಾ ನೆಕ್ಸಾನ್ ಇವಿ, ಟಾಟಾ ಕರ್ವ್ ಇವಿ ಮೂಲಕ ಹಲವು ಆಯ್ಕೆಗಳ ಮೂಲಕ ಮಾರುಕಟ್ಟೆಯಲ್ಲಿದೆ. ಹೀಗಾಗಿ ಗ್ರಾಹಕರಿಗೆ ತಮ್ಮ ಬಜೆಟ್, ಆಸಕ್ತಿಗೆ ಅನುಗುಣವಾಗಿ ಕಾರು ಖರೀದಿಗೆ ನೆರವಾಗಿದೆ.

PREV
Read more Articles on
click me!

Recommended Stories

ಒಳ್ಳೆಯದು ಮಾಡಲು ಹೋಗಿ ಸಮಸ್ಯೆ ತನ್ಕೊಂಡಿದ್ರು; ಓಡಿ ಹೋಗಿ ಮದುವೆಯಾಗಿದ್ದ ಕನ್ನಡ ಯುಟ್ಯೂಬರ್ ಜೋಡಿ ಈಗ 23 ಲಕ್ಷದ ಕಾರ್ ಮಾಲೀಕರು
ಮಾರುತಿ ಬ್ರೆಜಾ ಫೇಸ್‌ಲಿಫ್ಟ್ ಬುಕಿಂಗ್ ಕ್ರಾಂತಿ, ಮಾರ್ಕೆಟ್‌ನ ಬ್ರೆಜಾಗಿಂತ 90,000 ರೂ ಕಡಿಮೆ ಬೆಲೆಯಲ್ಲಿ ಲಭ್ಯ