
ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಮೇಲೆ ಜನರ ಆಸಕ್ತಿ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಈಗಾಗಲೇ Nexon EV, Curvv EV ಮತ್ತು Harrier EV ಮೂಲಕ ಯಶಸ್ಸು ಕಂಡಿರುವ ಟಾಟಾ ಮೋಟಾರ್ಸ್, ಈಗ ಮತ್ತೊಂದು ದೊಡ್ಡ ಹೆಜ್ಜೆ ಇಡಲು ಸಜ್ಜಾಗಿದೆ. ಕಂಪನಿಯ ಅತ್ಯಂತ ಪ್ರೀಮಿಯಂ ಎಲೆಕ್ಟ್ರಿಕ್ SUV ಟಾಟಾ ಅವಿನ್ಯಾ (Avinya) ಮೊದಲ ಬಾರಿಗೆ ಭಾರತೀಯ ರಸ್ತೆಗಳಲ್ಲಿ ಪರೀಕ್ಷೆ ನಡೆಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪರೀಕ್ಷೆ ವೇಳೆ ಕಾರಿನ ಮಾಡೆಲನ್ನು ಕಂಪನಿ ಎಲ್ಲೂ ರಿವೀಲ್ ಮಾಡಿಲ್ಲ. ಆದ್ರೆ ಅದರ ಗಾತ್ರ ಮತ್ತು ಆಕಾರ ಹಲವು ಮಾಹಿತಿಗಳನ್ನು ಬಹಿರಂಗಪಡಿಸಿವೆ. ಉದ್ದವಾದ ವೀಲ್ಬೇಸ್, ಚಿಕ್ಕ ಮುಂಭಾಗ ಮತ್ತು ಸ್ವಲ್ಪ ಇಳಿಜಾರಾದ ರೂಫ್ ವಿನ್ಯಾಸದಿಂದ ಈ SUV ತುಂಬಾ ಸ್ಟೈಲಿಶ್ ಹಾಗೂ ಸ್ಪೋರ್ಟಿ ಲುಕ್ ಹೊಂದಿರುವಂತೆ ಕಾಣುತ್ತಿದೆ.
Cheapest Cars: ಭಾರತದಲ್ಲಿ ಸಿಗುವ ಅತ್ಯಂತ ಕಡಿಮೆ ಬೆಲೆಯ Hatchback ಕಾರ್‌ಗಳು
ವಿನ್ಯಾಸದ ವಿಷಯಕ್ಕೆ ಬಂದರೆ, ಸಾಮಾನ್ಯ ಗ್ರಿಲ್ ಬದಲಿಗೆ ಎಲೆಕ್ಟ್ರಿಕ್ ವಾಹನಗಳಿಗೆ ಹೊಂದುವಂತೆ ಮುಚ್ಚಿದ ಗ್ರಿಲ್ ಇರಲಿದೆ ಎನ್ನಲಾಗುತ್ತಿದೆ. ಮುಂಭಾಗದಲ್ಲಿ ಸ್ಲಿಮ್ LED ಡೇ ಟೈಮ್ ರನ್ನಿಂಗ್ ಲೈಟ್ಸ್, ಲಂಬವಾದ LED ಲೈಟ್ಗಳು, ಫ್ಲಶ್ ಡೋರ್ ಹ್ಯಾಂಡಲ್ಗಳು, ದೊಡ್ಡ ಅಲಾಯ್ ವೀಲ್ಗಳು ಹಾಗೂ ಹಿಂಭಾಗದಲ್ಲಿ ಆಕರ್ಷಕ ಟೈಲ್ಲೈಟ್ಗಳು ಇದರ ಲುಕ್ಗೆ ಮತ್ತಷ್ಟು ಮೆರುಗು ನೀಡಲಿವೆ.
ಒಳಭಾಗವೂ ಅತ್ಯಾಧುನಿಕವಾಗಿರಲಿದೆ. ದೊಡ್ಡ ಡಿಜಿಟಲ್ ಸ್ಕ್ರೀನ್, ಆರಾಮದಾಯಕ ಲೌಂಜ್ ಶೈಲಿಯ ಸೀಟುಗಳು, ಉತ್ತಮ ಗುಣಮಟ್ಟದ ವಸ್ತುಗಳು ಹಾಗೂ ಹಲವು ಸ್ಮಾರ್ಟ್ ಕನೆಕ್ಟೆಡ್ ಫೀಚರ್ಗಳನ್ನು ಒಳಗೊಂಡಿರುವ ಸಾಧ್ಯತೆ ಇದೆ. ಪ್ರಯಾಣಿಕರಿಗೆ ಐಷಾರಾಮಿ ಅನುಭವ ನೀಡುವುದು ಕಂಪನಿಯ ಪ್ರಮುಖ ಗುರಿಯಾಗಿದೆ.
ಬೆಂಗಳೂರಲ್ಲಿ 25 ಲಕ್ಷದ ಗಡಿ ದಾಟಿದ ಖಾಸಗಿ ಕಾರುಗಳು; ವಿಶ್ವದ 2ನೇ ಅತಿ ದೊಡ್ಡ ಸಂಚಾರ ದಟ್ಟಣೆ ನಗರದ ಕಹಿ ವಾಸ್ತವಳು!
ಬ್ಯಾಟರಿಯ ವಿಷಯಕ್ಕೆ ಬಂದರೆ, ಟಾಟಾ ಇನ್ನೂ ಅಧಿಕೃತ ಈ ಬಗ್ಗೆ ಮಾಹಿತಿ ನೀಡಿಲ್ಲ. ವರದಿಗಳ ಪ್ರಕಾರ 70kWh ರಿಂದ 80kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಇದ್ರಲ್ಲಿ ನೀಡುವ ಸಾಧ್ಯತೆ ಇದೆ. ಪೂರ್ಣ ಚಾರ್ಜ್ನಲ್ಲಿ ಸುಮಾರು 700 ಕಿಲೋಮೀಟರ್ವರೆಗೆ ಓಡುವ ಸಾಮರ್ಥ್ಯ ಕಾರ್ ಗಿದೆ ಎನ್ನಲಾಗ್ತಿದೆ. ಹೈ-ಸ್ಪೀಡ್ DC ಫಾಸ್ಟ್ ಚಾರ್ಜಿಂಗ್ ಸೌಲಭ್ಯವೂ ದೊರೆಯುವ ಸಾಧ್ಯತೆ ಇದೆ.
ಕಾರು ಪ್ರೇಮಿಗಳು ಈ ಕಾರಿಗೆ 2027ರವರೆಗೆಕಾಯ್ಬೇಕು. ಈ ಕಾರನ್ನು ಮುಂದಿನ ವರ್ಷ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಟಾಟಾ ಅವಿನ್ಯಾ, ಕಂಪನಿಯ ಅತ್ಯಂತ ಪ್ರೀಮಿಯಂ ಮತ್ತು ತಂತ್ರಜ್ಞಾನಾಧಾರಿತ ಎಲೆಕ್ಟ್ರಿಕ್ SUV ಆಗುವ ಸಾಧ್ಯತೆ ಇದೆ.