Cheapest Cars: ಭಾರತದಲ್ಲಿ ಸಿಗುವ ಅತ್ಯಂತ ಕಡಿಮೆ ಬೆಲೆಯ Hatchback ಕಾರ್‌ಗಳು

Published : Jul 21, 2026, 10:50 AM IST
tata tiago

ಸಾರಾಂಶ

ಸೆಪ್ಟೆಂಬರ್ ಜಿಎಸ್‌ಟಿ ಕಡಿತದ ನಂತರ, ಬಜೆಟ್ ಸ್ನೇಹಿ ಹ್ಯಾಚ್‌ಬ್ಯಾಕ್ ಕಾರುಗಳ ಬೇಡಿಕೆ ಹೆಚ್ಚಾಗಿದೆ. ಈ ಲೇಖನವು ಮಾರುತಿ ಆಲ್ಟೊ ಕೆ10, ಟಾಟಾ ಟಿಯಾಗೊ, ಮತ್ತು ರೆನಾಲ್ಟ್ ಕ್ವಿಡ್ ಸೇರಿದಂತೆ 5 ಅತ್ಯುತ್ತಮ ಕಾರುಗಳ ಬೆಲೆ, ಮೈಲೇಜ್ ಮತ್ತು ವೈಶಿಷ್ಟ್ಯಗಳನ್ನು ವಿವರಿಸುತ್ತದೆ.

ಸೆಪ್ಟೆಂಬರ್‌ ತಿಂಗಳಲ್ಲಿನ ಜಿಎಸ್‌ಟಿ ಕಡಿತದ ಬಳಿಕ ವಾಹನಗಳ ಬೆಲೆಗಳು ಇಳಿಕೆಯಾಗಿವೆ. ಬೆಲೆ ಇಳಿಕೆಯಿಂದಾಗಿ ಜನರು ಹೊಸ ಕಾರು ಖರೀದಿಯತ್ತ ಮುಖ ಮಾಡಿದ್ದರು. ನೀವು ಹೊಸ ಕಾರ್ ಅದರಲ್ಲಿಯೂ ಹ್ಯಾಚ್‌ಬ್ಯಾಕ್‌ ನೋಡುತ್ತಿದ್ರೆ ಈ ಲೇಖನ ನಿಮಗೆ ಉಪಯುಕ್ತವಾಗಿದೆ. ಈ ಹ್ಯಾಚ್‌ಬ್ಯಾಕ್ ಕಾರ್‌ಗಳು ಮೈಲೇಜ್ ಸೇರಿದಂತೆ ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದೆ. ನೀವು ಕೂಡ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಬಜೆಟ್ ಕಾರು ಖರೀದಿಸಲು ನಿರ್ಧರಿಸಿದ್ದರೆ, ಈ 5 ಕಾರುಗಳು ನಿಮಗೆ ಉತ್ತಮ ಆಯ್ಕೆಯಾಗಿರಬಹುದು.

ಮಾರುತಿ ಸುಜುಕಿ ಆಲ್ಟೊ ಕೆ10

ಅಲ್ಟೋ ಭಾರತೀಯರ ನೆಚ್ಚಿನ ಕಾರ್‌ಗಳಲ್ಲಿ ಒಂದಾಗಿದೆ. ಅಲ್ಟೋ K10 ಸೆಗ್ಮೆಂಟ್ ಕಡಿಮೆ ಬೆಲೆಯ ಕಾರ್‌ಗಳಲ್ಲಿ ಒಂದಾಗಿದೆ. ಎಕ್ಸ್ ಶೋರೂಂ ಬೆಲೆ 3.99 ರೂಪಾಯಿ ಆಗಿದೆ. 1.0-ಲೀಟರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಈ ಕಾರು ಸುಮಾರು 24.39 ಕಿಮೀ/ಲೀ ಮೈಲೇಜ್ ನೀಡುತ್ತದೆ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಬಜೆಟ್‌ನಲ್ಲಿ SUV ತರಹದ ಅನುಭವದ ಕಾರ್ ಹುಡುಕುತ್ತಿದ್ರೆ ಮಾರುತಿಯ S-ಪ್ರೆಸ್ಸೊ ನಿಮಗೆ ಒಳ್ಳೆಯ ಆಯ್ಕೆಯಾಗಬಹುದು. ₹4.26 ಲಕ್ಷ ಬೆಲೆಯ ಮಾರುತಿ ಸುಜುಕಿ ಎಸ್-ಪ್ರೆಸ್ಸೊ 24 ಕಿಮೀ ಮೈಲೇಜ್ ನೀಡುತ್ತದೆ.

ರೆನಾಲ್ಟ್ ಕ್ಕಿಡ್

ರೆನಾಲ್ಟ್ ಕ್ಕಿಡ್ ತನ್ನ ಸ್ಪೋರ್ಟಿ ಲುಕ್ ಮತ್ತು ನ್ಯೂ ಡಿಸೈನ್‌ಗಾಗಿ ಯುವಜನರಲ್ಲಿ ಫೇಮಸ್ ಆಗಿದೆ. ರೆನಾಲ್ಟ್ ಕ್ಕಿಡ್ ಆರಂಭಿಕ ಬೆಲೆ ₹4.70 ಲಕ್ಷ (ಎಕ್ಸ್-ಶೋರೂಂ) ಆಗಿದೆ. ಈ ಕಾರ್ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಆಪಲ್ ಕಾರ್‌ಪ್ಲೇನಂತಹ ಅಪ್‌ಡೇಟೆಡ್‌ ಫೀಚರ್ಸ್ ಹೊಂದಿದೆ. ಬಜೆಟ್‌ನಲ್ಲಿ ಕಾರ್ ಹುಡುಕುತ್ತಿದ್ರೆ ನಿಮಗೆ ಇದು ಒಳ್ಳೆಯ ಕಾರ್ ಆಗಲಿದೆ.

ಟಾಟಾ ಟಿಯಾಗೊ

ಕೆಲವರು ವಿನ್ಯಾಸಕ್ಕಿಂತ ಸೇಫ್ಟಿ ಮತ್ತು ವ್ಯಾಲಿಡಿಟಿ ನೋಡುತ್ತಿದ್ರೆ ಟಾಟಾ ಟಿಯಾಗೊ ಬೆಸ್ಟ್ ಕಾರ್ ಆಗುತ್ತದೆ. ಗ್ಲೋಬಲ್ NCAP ಕ್ರ್ಯಾಶ್ ಪರೀಕ್ಷೆಯಲ್ಲಿ 4-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿದೆ. ₹5.65 ಲಕ್ಷದಿಂದ ಬೆಲೆಯ ಟಾಟಾ ಟಿಯಾಗೊ ಅತ್ಯುತ್ತಮ ಸವಾರಿ ಗುಣಮಟ್ಟ ಮತ್ತು ಶಕ್ತಿಯುತ 1.2-ಲೀಟರ್ ಎಂಜಿನ್ ಅನ್ನು ನೀಡುತ್ತದೆ.

ಇದನ್ನೂ ಓದಿ: ದೊಡ್ಡ ಕುಟುಂಬಕ್ಕೆ ಹೇಳಿ ಮಾಡಿಸಿದ 7 ಸೀಟರ್ SUV ಕಾರುಗಳು: ಆಗಸ್ಟ್‌ನಲ್ಲಿ ಮಹಿಂದ್ರಾ, ಎಂಜಿ ಮಾರುಕಟ್ಟೆಗೆ!

ಮಾರುತಿ ಸುಜುಕಿ ವ್ಯಾಗನ್ ಆರ್

ಭಾರತದ ಅತ್ಯಂತ ವಿಶ್ವಾಸಾರ್ಹ ಕಾರು, ವ್ಯಾಗನ್ಆರ್, ಪ್ರತಿ ಮಧ್ಯಮ ವರ್ಗದ ಕಾರುಗಳಲ್ಲಿ ಅಚ್ಚುಮೆಚ್ಚಿನದಾಗಿದೆ. ₹5.54 ಲಕ್ಷದಿಂದ ಪ್ರಾರಂಭವಾಗುವ ಈ ಕಾರ್ ಹೆಡ್‌ರೂಮ್, ವಿಶಾಲವಾದ ಕ್ಯಾಬಿನ್ ಸ್ಥಳ ಮತ್ತು ಶಕ್ತಿಶಾಲಿ CNG ಆಫ್ಷನ್ ನೀಡುತ್ತದೆ,

ಇದನ್ನೂ ಓದಿ: 'ಹೊಸ E20 ಕಾರು ನೀಡಿ, ಇಲ್ಲವೇ 21 ಲಕ್ಷ ವಾಪಾಸ್‌ ಮಾಡಿ..' ಗ್ರಾಹಕ ಕೋರ್ಟ್‌ ತೀರ್ಪಿಗೆ ಮಾರುತಿ ಸುಜುಕಿ ಕಂಗಾಲು!

PREV
Read more Articles on
click me!

Recommended Stories

ಬೆಂಗಳೂರಲ್ಲಿ 25 ಲಕ್ಷದ ಗಡಿ ದಾಟಿದ ಖಾಸಗಿ ಕಾರುಗಳು; ವಿಶ್ವದ 2ನೇ ಅತಿ ದೊಡ್ಡ ಸಂಚಾರ ದಟ್ಟಣೆ ನಗರದ ಕಹಿ ವಾಸ್ತವಳು!
ದೊಡ್ಡ ಕುಟುಂಬಕ್ಕೆ ಹೇಳಿ ಮಾಡಿಸಿದ 7 ಸೀಟರ್ SUV ಕಾರುಗಳು: ಆಗಸ್ಟ್‌ನಲ್ಲಿ ಮಹಿಂದ್ರಾ, ಎಂಜಿ ಮಾರುಕಟ್ಟೆಗೆ!