Auto PLI Scheme ಪ್ರೋತ್ಸಾಹ ಧನಕ್ಕೆ ಟಾಟಾ, ಮಹೀಂದ್ರಾ, ಹ್ಯುಂಡೈ ಆಯ್ಕೆ: ಮಾರುತಿ ಪಟ್ಟಿಯಿಂದ ಹೊರಗೆ!

By Suvarna News  |  First Published Feb 13, 2022, 4:25 PM IST

*ಪಿಎಲ್‌ಐ ಯೋಜನೆಯಡಿ 115 ಕಂಪನಿಗಳ ಪಟ್ಟಿ ಬಿಡುಗಡೆ
*ಟಾಟಾ, ಮಹೀಂದ್ರಾ, ಹ್ಯುಂಡೈ, ಕಿಯಾ ಕಾರುಗಳಿಗೆ ಸ್ಥಾನ
*ತಾಂತ್ರಿಕ ಲೋಪದಿಂದ ಮಾರುತಿ ಸುಜುಕಿ ಹೊರಗೆ


Auto Desk: ಶುದ್ಧ ಇಂಧನ ವಾಹನಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರ, ಇತ್ತೀಚೆಗೆ ಘೋಷಿಸಲಾದ ಉತ್ಪಾದನೆಗೆ ಸಂಬಂಧಿಸಿದ ಪ್ರೋತ್ಸಾಹಧನ-ಪಿಎಲ್ಐ) (Production Linked Incentive- PLI) ಯೋಜನೆಗೆ ಅರ್ಹರಾಗಿರುವ ಭಾರತ ಮೂಲದ 20 ಕಾರು ತಯಾರಕರ ಪಟ್ಟಿಯನ್ನು ಅಂತಿಮಗೊಳಿಸಿದೆ. ಈ ಯೋಜನೆಯಡಿ 115 ಆಟೋಮೋಟಿವ್ (Automotive) ಕಂಪನಿಗಳ ಭಾಗವಾಗಿರುವ ಟಾಟಾ ಮೋಟಾರ್ಸ್, ಮಹೀಂದ್ರಾ ಮತ್ತು ಮಹೀಂದ್ರಾ, ಹ್ಯುಂಡೈ ಮತ್ತು ಕಿಯಾ ಮುಂತಾದ ಕಾರು ತಯಾರಕರು ಅರ್ಜಿ ಸಲ್ಲಿಸಿದ್ದವು.

ಇದರಲ್ಲಿ ಟಾಟಾ ಮೋಟಾರ್ಸ್, ಮಹೀಂದ್ರಾ, ಹ್ಯುಂಡೈ ಮತ್ತು ಕಿಯಾ ಕಂಪನಿಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆಯಾದರೂ, ದೇಶದ ಪ್ರಮುಖ ಕಾರು ಉತ್ಪಾದಕ ಕಂಪನಿ ಮಾರುತಿ ಮಾತ್ರ ಇದರಲ್ಲಿ ವಿಫಲವಾಗಿದೆ. ಮಾರುತಿ ಸುಜುಕಿ ಸಲ್ಲಿಸಿರುವ ಅರ್ಜಿಯಲ್ಲಿ ತಾಂತ್ರಿಕ ದೋಷಗಳಿರುವುದರಿಂದ, ವರದಿಗಳ ಪ್ರಕಾರ, ಕಂಪನಿ ತನ್ನ ಮೂಲ ಕಂಪನಿಯಾದ ಸುಜುಕಿ ಮೋಟಾರ್ ಪರವಾಗಿ ಅರ್ಜಿಗಳನ್ನು ಹಿಂತೆಗೆದುಕೊಂಡಿದ್ದು ಅರ್ಜಿಯ ಮಾನದಂಡಗಳನ್ನು ಪೂರೈಸಲು ವಿಫಲವಾಗಿದೆ.̈

Tap to resize

Latest Videos

ಇದನ್ನೂ ಓದಿ: Upcoming Car 400 ಕಿ.ಮೀ ಮೈಲೇಜ್, 15 ಲಕ್ಷ ರೂ, ಮಹೀಂದ್ರ XUV300 ಎಲೆಕ್ಟ್ರಿಕ್ ಕಾರು ಬಿಡುಗಡೆ ದಿನಾಂಕ ಬಹಿರಂಗ!

ಆಯ್ಕೆಯಾದ 20 ಕಾರು ತಯಾರಕರ ಪೈಕಿ ಓಲಾ ಎಲೆಕ್ಟ್ರಿಕ್, ಟಿವಿಎಸ್, ಹೀರೋ ಮೊಟೊಕಾರ್ಪ್, ಬಜಾಜ್ ಆಟೋ, ಪಿಯಾಜಿಯೊ ಸೇರಿದಂತೆ ದ್ವಿಚಕ್ರ ವಾಹನ ತಯಾರಕರು ಪ್ರೋತ್ಸಾಹಧನಕ್ಕೆ ಆಯ್ಕೆಯಾಗಿದ್ದಾರೆ. ಓಲಾ ಎಲೆಕ್ಟ್ರಿಕ್ ಅನ್ನು ಹೊಸ ವಾಹನೇತರ ವರ್ಗದ ಅಡಿಯಲ್ಲಿ ಆಯ್ಕೆ ಮಾಡಲಾಗಿದೆ.

ವಾಣಿಜ್ಯ ವಾಹನ ಆಸನ ಮತ್ತು ಆಂತರಿಕ ಕಂಪನಿಯಾದ ಪಿನಾಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಕೂಡ ಈ ಪ್ರೋತ್ಸಾಹ ಧನಕ್ಕಾಗಿ ಆಯ್ಕೆ ಮಾಡಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮೊಬಿಲಿಟಿ ಅಧ್ಯಕ್ಷಮತ್ತು ಪಿನಾಕಲ್ ಇಂಡಸ್ಟ್ರೀಸ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಸುಧೀರ್ ಮೆಹ್ತಾ, "ಇದು ಸಂಪೂರ್ಣ ಸುಸ್ಥಿರ ಚಲನಶೀಲತೆಯ ಪರಿಸರ ವ್ಯವಸ್ಥೆಗೆ ಬದಲಾವಣೆಯ ಪರ್ವವಾಗಬಲ್ಲದು. ಆಟೋಮೊಬೈಲ್ ಕ್ಷೇತ್ರ ದೇಶದ ಒಟ್ಟಾರೆ ಜಿಡಿಪಿಗೆ ಗಮನಾರ್ಹ ಕೊಡುಗೆ ನೀಡುತ್ತದೆ. ಇದರಿಂದ ಆಮದು ಅವಲಂಬನೆ ಗಣನೀಯವಾಗಿ ಕಡಿಮೆ ಮಾಡುತ್ತದೆ” ಎಂಬ ವಿಶ್ವಾಸ ವ್ಯಕ್ತಪಡಿಸಿದರು. 

ಇದನ್ನೂ ಓದಿ: Upcoming Car ಜುಲೈನಲ್ಲಿ 3 ಮಹೀಂದ್ರ ಎಲೆಕ್ಟ್ರಿಕ್ SUV ಕಾರು ಬಿಡುಗಡೆ, ಭಾರಿ ಮೆಚ್ಚುಗೆಗಳಿಸಿದ ಟೀಸರ್!

ಕೇಂದ್ರ ಸರ್ಕಾರ 2021ರ ಪ್ಟೆಂಬರ್ 23 ರಂದು ಪಿಎಲ್ಐ ಯೋಜನೆಯನ್ನು ಅಧಿಸೂಚನೆ ಹೊರಡಿಸಿತ್ತು. ಬಜೆಟ್ನಲ್ಲಿ ಕೂಡ ಇದಕ್ಕೆ ಅನುಮೋದನೆ ನೀಡಲಾಗಿತ್ತು. ಈ ಯೋಜನೆಯು ಭಾರತದಲ್ಲಿ ಎಲೆಕ್ಟ್ರಿಕ್ ಮತ್ತು ಹೈಡ್ರೋಜನ್ ಇಂಧನ ಚಾಲಿತ ವಾಹನಗಳ ಉತ್ಪಾದನೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯಡಿ, 2022ರ ಏಪ್ರಿಲ್ ಇಂದ ಸತತ ಐದು ವರ್ಷಗಳವರೆಗೆ ಭಾರತದಲ್ಲಿ ತಯಾರಿಸಲಾದ ವಾಹನಗಳು ಮತ್ತು ಘಟಕಗಳು, ಸುಧಾರಿತ ಆಟೋಮೋಟಿವ್ ತಂತ್ರಜ್ಞಾನ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಲಾಗುವುದು.

ಭಾರತದಲ್ಲಿ ಆಟೋಮೊಬೈಲ್ ಮತ್ತು ಘಟಕಗಳ ಉದ್ಯಮಕ್ಕಾಗಿ ಕೇಂದ್ರದ ಪಿಎಲ್ಐ ಯೋಜನೆಯ ಭಾಗವಾಗಿರುವ ‘ಚಾಂಪಿಯನ್ ಒಇಎಂ (Champion OEM) ಪ್ರೋತ್ಸಾಹಕ ಯೋಜನೆ’ಗೆ 20 ಕಾರು ತಯಾರಕರನ್ನು ಆಯ್ಕೆ ಮಾಡಲಾಗಿದೆ. ಚಾಂಪಿಯನ್  ಒಇಎಂ ಯೋಜನೆಯು 'ಮಾರಾಟ ಮೌಲ್ಯ’ಕ್ಕೆ ಸಂಬಂಧಿಸಿದ ಯೋಜನೆಯಾಗಿದ್ದು, ಎಲ್ಲಾ ವಿಭಾಗಗಳ ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳು ಮತ್ತು ಹೈಡ್ರೋಜನ್ ಇಂಧನ ಸೆಲ್ ವಾಹನಗಳಿಗೆ ಅನ್ವಯಿಸುತ್ತದೆ.

ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅನುಮೋದಿತ ಅರ್ಜಿದಾರರಿಂದ  45,016 ಕೋಟಿಯ ರೂ. ಪ್ರಸ್ತಾವಿತ ಹೂಡಿಕೆ ಹರಿದುಬಂದಿದೆ ಎಂದು ಬೃಹತ್ ಕೈಗಾರಿಕೆಗಳ ಸಚಿವಾಲಯ ತಿಳಿಸಿದೆ. ಪಿಎಲ್ಐ ಯೋಜನೆಯು ಕಾರು ತಯಾರಕರಿಗೆ ಶೇ.18ರವರೆಗೆ ಪ್ರೋತ್ಸಾಹ ಧನ ನೀಡುತ್ತದೆ. ಈ ಯೋಜನೆಯು ಸಂಪೂರ್ಣವಾಗಿ ನಾಕ್ಡ್ ಡೌನ್ (CKD), ಸೆಮಿ-ನಾಕ್ಡ್ ಡೌನ್ (SKD) ಕಿಟ್ಗಳ ಜೊತೆಗೆ, ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು, ಪ್ರಯಾಣಿಕ ವಾಹನಗಳು, ವಾಣಿಜ್ಯ ವಾಹನಗಳು ಮತ್ತು ಟ್ರ್ಯಾಕ್ಟರ್ಗಳಿಗೂ ಅನ್ವಯಿಸುತ್ತದೆ. 

click me!