ಕಾರು ಖರೀದಿ ಪ್ಲಾನ್‌ನಲ್ಲಿ ಇರೋರಿಗೆ ಶಾಕ್ ಕೊಟ್ಟ ಟಾಟಾ ಮೋಟರ್ಸ್‌, ಪ್ಯಾಸೆಂಜರ್ ಕಾರುಗಳ ಬೆಲೆಯೂ ಏರಿಕೆ

Published : Sep 21, 2026, 08:53 PM IST
Tata Motors

ಸಾರಾಂಶ

ಟಾಟಾ ಮೋಟಾರ್ಸ್ ಸೇರಿದಂತೆ ಪ್ರಮುಖ ಆಟೋಮೊಬೈಲ್ ಕಂಪನಿಗಳು ಕಾರುಗಳ ಬೆಲೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿವೆ. ಮುಂದೆ ಬರುವ ಹಬ್ಬದ ಸಂದರ್ಭದಲ್ಲಿ ಕಾರು ಖರೀದಿಸಬೇಕು ಅಂದುಕೊಂಡವರಿಗೆ ದೊಡ್ಡ ಆಘಾತವಾಗಿದೆ. ಮುಂದಿನ ದಿನಗಳಲ್ಲಿ ಕಾರುಗಳ ಬೆಲೆ ಇನ್ನೂ ಹೆಚ್ಚಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಬೆಲೆ ಏರಿಕೆಯ ಬಿಸಿ ಆಟೋಮೊಬೈಲ್ ಮಾರುಕಟ್ಟೆ ಮೇಲೂ ತಟ್ಟಿದೆ. ಕೇವಲ ವಾಣಿಜ್ಯ ವಾಹನಗಳಷ್ಟೇ ಅಲ್ಲದೆ ಪ್ಯಾಸೆಂಜರ್ ಕಾರುಗಳ ಬೆಲೆಯಲ್ಲೂ ಭಾರೀ ಏರಿಕೆ ಕಂಡಿದೆ.

ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್, ಪ್ರಯಾಣಿಕ ವಾಹನಗಳ ಬೆಲೆಯಲ್ಲಿ ಶೇಕಡಾ 1.5 ರಷ್ಟು ಹೆಚ್ಚಳ ಮಾಡಿದೆ. ಇದಕ್ಕೂ ಮೊದಲು ಇಂಧನ ಚಾಲಿತ (ICE) ವಾಹನಗಳ ಬೆಲೆಯಲ್ಲಿ ಏರಿಕೆ ಮಾಡಿ ಗ್ರಾಹಕರಿಗೆ ಶಾಕ್ ನೀಡಿತ್ತು.

ಬೆಲೆ ಏರಿಕೆಗೆ ಕಾರಣ?

ವಾಹನ ತಯಾರಿಕಾ ಕಂಪನಿಗಳು ಬೆಲೆ ಏರಿಕೆಯ ಹೊಡೆತಕ್ಕೆ ಸಿಲುಕಿದ್ದಾರೆ. ಉತ್ಪಾದನಾ ವೆಚ್ಚಗಳು ನಿರಂತರವಾಗಿ ಹೆಚ್ಚುತ್ತಿವೆ. Global Supply Chain ಉಂಟಾಗಿರುವ ಏರಿಳಿತವನ್ನು ಸರಿದೂಗಿಸಲು ವಾಹನಗಳ ಬೆಲೆಯನ್ನು ಆಗಾಗ ಪರಿಷ್ಕರಿಸುತ್ತಿರುತ್ತವೆ. ಟಾಟಾ ಮೋಟಾರ್ಸ್ ಮಾತ್ರವಲ್ಲದೆ.. ಇಡೀ ಭಾರತೀಯ ಆಟೋಮೊಬೈಲ್ ಉದ್ಯಮವೇ ಕಚ್ಚಾ ವಸ್ತುಗಳ ಬೆಲೆ ಏರಿಕೆ ಮತ್ತು ಸಾರಿಗೆ ವೆಚ್ಚದ ಹೊರೆಯಿಂದ ಕಂಗಾಲಾಗಿದೆ ಎಂದು ವರದಿಯಾಗಿದೆ.

ದೇಶದ ಪ್ರಮುಖ ಬ್ರಾಂಡ್‌ಗಳಾದ ಮಾರುತಿ ಸುಜುಕಿ, ಹ್ಯುಂಡೈ ಮೋಟಾರ್ ಇಂಡಿಯಾ, ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್‍‌ಗಳು ತಮ್ಮ ಪ್ರಮುಖ ವಾಹನಗಳ ಬೆಲೆಯನ್ನು ಹೆಚ್ಚಿಸಿವೆ. ಇನ್ನು, ಐಷಾರಾಮಿ ಕಾರು ತಯಾರಕರಾದ ಬಿಎಂಡಬ್ಲ್ಯು (BMW), ಮರ್ಸಿಡಿಸ್-ಬೆಂಜ್ (Mercedes-Benz) ಮತ್ತು ಆಡಿ (Audi) ಕೂಡ ತಮ್ಮ ವಾಹನಗಳ ದರವನ್ನು ಹೆಚ್ಚಿಸಿ ಶಾಕ್ ನೀಡಿವೆ..

ಮುಂದಿನ ದಿನಗಳಲ್ಲಿ ಕಚ್ಚಾ ವಸ್ತುಗಳ ಬೆಲೆ ಇದೇ ರೀತಿ ಹೆಚ್ಚುತ್ತ ಹೋದರೆ ಸಾಮಾನ್ಯ ಜನರು ವಾಹನಗಳ ಖರೀದಿ ಕೇವಲ ಕನಸಾಗಿಯೇ ಉಳಿಯಲಿದೆ. ಹಬ್ಬಗಳ ಸಂದರ್ಭದಲ್ಲಿ ಕಾರುಗಳನ್ನ ಖರೀದಿಸಬೇಕು ಅಂದುಕೊಂಡವರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ ಎಂದು ಆಟೋಮೊಬೈಲ್ ತಜ್ಞರು ಎಚ್ಚರಿಸಿದ್ದಾರೆ.

ವಾಹನಗಳ ಬೆಲೆ ಏರಿಕೆಗೆ ಕಾಣಗಳು'

ವಾಹನಗಳ ಬೆಲೆ ಹೆಚ್ಚಳಕ್ಕೆ ಕೇವಲ ಲೋಹಗಳ ಬೆಲೆ ಮಾತ್ರ ಕಾರಣವಲ್ಲ. ಸರ್ಕಾರದ ಹೊಸ ನಿಯಮಾವಳಿಗಳೂ ಪ್ರಮುಖ ಪಾತ್ರ ವಹಿಸಿವೆ. ಕಾರುಗಳಲ್ಲಿ ಕನಿಷ್ಠ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ , ಭಾರತ್ NCAP ಕ್ರ್ಯಾಶ್ ಟೆಸ್ಟ್ ಸುರಕ್ಷತಾ ಫೀಚರ್‌ಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ. ವಾಹನಗಳ ಹೊಗೆಯನ್ನು ನಿಯಂತ್ರಿಸಲು ಕಾರುಗಳಲ್ಲಿ ಅತ್ಯಾಧುನಿಕ ಸೆನ್ಸರ್‌ಗಳು ಅಳವಡಿಸಲಾಗುತ್ತಿದೆ. ಇದರಿಂದ ಎಂಜಿನ್‌ಗಳ ವೆಚ್ಚವೂ ಹೆಚ್ಚಾಗಿದೆ.

ಹೈಟೆಕ್ ಉಪಕರಣಗಳ ಆಮದು ವೆಚ್ಚ ದುಬಾರಿಯಾಗಿದೆ. ಕಾರಿನ ಎಕ್ಸ್-ಶೋರೂಮ್ ಬೆಲೆ ಶೇ. 1.5 ರಿಂದ 2 ರಷ್ಟು ಹೆಚ್ಚಾದರೂ, ಗ್ರಾಹಕರು ಕಟ್ಟಬೇಕಾದ ಆನ್-ರೋಡ್ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತದೆ. ರಸ್ತೆ ತೆರಿಗೆಯನ್ನು ವಾಹನದ ಮೂಲ ಬೆಲೆಯ ಮೇಲೆ ಲೆಕ್ಕ ಹಾಕಲಾಗುತ್ತದೆ. ಹೀಗಾಗಿ ಕಾರಿನ ಬೆಲೆ ಹೆಚ್ಚಾದಂತೆ ನೀವು ಪಾವತಿಸುವ ತೆರಿಗೆಯೂ ಹೆಚ್ಚುತ್ತದೆ. ಹಾಗೆಯೇ ಇನ್ಶೂರೆನ್ಸ್ (ವಿಮೆ) ಪ್ರೀಮಿಯಂ, ಬ್ಯಾಂಕ್ ಇಎಂಐ (EMI) ಕೂಡ ಹೊರೆಯಾಗಲಿದೆ.

ಅಷ್ಟೇ ಅಲ್ಲ, ಸಾಮಾನ್ಯರು ಸುಲಭವಾಗಿ ಖರೀದಿಸುತ್ತಿದ್ದ ಆಲ್ಟೊ, ವ್ಯಾಗನ್-ಆರ್‌ನಂತಹ ಸಣ್ಣ ಕಾರುಗಳ ಬೆಲೆಯೂ 6 ರಿಂದ 8 ಲಕ್ಷ ರೂ. ಮುಟ್ಟಿದೆ. ಹೀಗಾಗಿ ಎಂಟ್ರಿ-ಲೆವೆಲ್ ಕಾರುಗಳ ಮಾರಾಟದಲ್ಲಿ ಭಾರೀ ಕುಸಿತ ಕಂಡುಬಂದಿದೆ. ಹೊಸ ಕಾರುಗಳ ಬೆಲೆ ಗಗನಕ್ಕೇರುತ್ತಿರುವುದರಿಂದ ಜನರು ಉತ್ತಮ ಕಂಡಿಷನ್‌ನಲ್ಲಿರುವ ಸೆಕೆಂಡ್ ಹ್ಯಾಂಡ್ ಕಾರುಗಳತ್ತ ಮುಖ ಮಾಡುತ್ತಿದ್ದಾರೆ.

PREV
Read more Articles on
click me!

Recommended Stories

ಥಾರ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌, Mahindra Thar Facelift ಟೀಸರ್‌ ರಿಲೀಸ್‌, ನಾಳೆ ಕಾರ್‌ ಅಧಿಕೃತ ಲಾಂಚ್‌
Baleno ಅಥವಾ Altroz: 6 ಲಕ್ಷ ರೂಪಾಯಿಗೆ ಯಾವ ಕಾರು ನಿಮ್ಮ ಮನೆಗೆ ಬೆಸ್ಟ್‌? ಇಲ್ಲಿದೆ ಡೀಟೇಲ್ಸ್‌