
ಮುಂಬೈ (ಸೆ.21): ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಯುವಜನತೆಯ ನೆಚ್ಚಿನ ಬ್ರ್ಯಾಂಡ್ ಆಗಿ ಹಾಗೂ ಆಫ್-ರೋಡಿಂಗ್ (Off-Roading) ಸಾಮರ್ಥ್ಯಕ್ಕೆ ಹೆಸರಾಗಿರುವ 'ಮಹೀಂದ್ರಾ ಥಾರ್' (Mahindra Thar) ಅಭಿಮಾನಿಗಳಿಗೆ ಕಂಪನಿಯು ಭಾರಿ ಸಿಹಿ ಸುದ್ದಿ ನೀಡಿದೆ. ಕಂಪನಿಯು ತನ್ನ 'ಥಾರ್ 3-ಡೋರ್ ಫೇಸ್‌ಲಿಫ್ಟ್' (Thar 3-Door Facelift) ಆವೃತ್ತಿಯ ಅಧಿಕೃತ ಟೀಸರ್ ಅನ್ನು ಬಿಡುಗಡೆ ಮಾಡಿದ್ದು, ನೂತನ ಮಾಡೆಲ್‌ನ ಬಾಹ್ಯ ವಿನ್ಯಾಸ ಹಾಗೂ ಕೆಬಿನ್‌ನಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲು ಸಜ್ಜಾಗಿದೆ. ಮಹೀಂದ್ರಾ ಥಾರ್ ಕಾರು ತನ್ನ ರಗಡ್ ಹಾಗೂ ಶಕ್ತಿಶಾಲಿ ಲುಕ್‌ನಿಂದ ಸದಾ ಸುದ್ದಿಯಲ್ಲಿರುತ್ತದೆ. ಇದೀಗ ಬಿಡುಗಡೆಯಾಗಿರುವ ಟೀಸರ್ ಆಟೋಮೊಬೈಲ್ ಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿದ್ದು, ಅತ್ಯಾಧುನಿಕ ಫೀಚರ್‌ಗಳೊಂದಿಗೆ ಈ ನೂತನ ಎಸ್‌ಯುವಿ ನಾಳೆ ಮಾರುಕಟ್ಟೆಗೆ ಅಪ್ಪಳಿಸಲಿದೆ.
ಕಂಪನಿಯು ಹಂಚಿಕೊಂಡಿರುವ ಟೀಸರ್‌ನಲ್ಲಿ ಹೊಸ ಮಹೀಂದ್ರಾ ಥಾರ್‌ನ ಮುಂಭಾಗದ ಪ್ರಮುಖ ಭಾಗಗಳನ್ನು ಪ್ರದರ್ಶಿಸಲಾಗಿದೆ. ಪ್ರಮುಖವಾಗಿ ನೂತನ ವಿನ್ಯಾಸದ 'ಫ್ರಂಟ್ ಗ್ರಿಲ್' (Front Grille) ನೀಡಲಾಗಿದ್ದು, ಕಾರಿನ ಓವರ್‌ಆಲ್ ಲುಕ್ ಅನ್ನು ಮತ್ತಷ್ಟು ಆಕರ್ಷಕಗೊಳಿಸಲಾಗಿದೆ. ಇದರೊಂದಿಗೆ ನವೀಕರಿಸಿದ ಫ್ರಂಟ್ ಫ್ಯಾಸಿಯಾ (Front Fascia) ಮತ್ತು ನೂತನ ವಿನ್ಯಾಸದ 'ಅಲಾಯ್ ವೀಲ್ಸ್‌ಗಳು' (Alloy Wheels) ಕಾರಿನಲ್ಲಿ ಇರಲಿವೆ ಎಂಬ ಸುಳಿವು ಸಿಕ್ಕಿದೆ.
ಇತ್ತೀಚೆಗೆ ಬಿಡುಗಡೆಯಾದ 'ಥಾರ್ ರಾಕ್ಸ್' (Thar Roxx) ಕಾರಿನ ಹಲವು ವಿನ್ಯಾಸದ ಝಲಕ್‌ಗಳು ಈ ನೂತನ ಥಾರ್ ಫೇಸ್‌ಲಿಫ್ಟ್‌ನಲ್ಲಿ ಕಾಣ ಸಿಗುವ ಸಾಧ್ಯತೆಯಿದೆ. ವಿವಿಧ ಕಡೆಗಳಲ್ಲಿ ಪತ್ತೆಯಾದ 'ಸ್ಪೈ ಶಾಟ್ಸ್' ಮತ್ತು ಅಧಿಕೃತ ಟೀಸರ್ ಪ್ರಕಾರ, ನೂತನ ಫ್ರಂಟ್ ಗ್ರಿಲ್, ಪ್ರೊಜೆಕ್ಟರ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು (Projector LED Headlamps) ಹಾಗೂ 'C' ಆಕಾರದ ಎಲ್ಇಡಿ ಡಿಆರ್‌ಎಲ್‌ಗಳನ್ನು (C-Shape LED DRLs) ನೀಡಲಾಗುತ್ತಿದೆ. ಕಾರಿನ ಹಿಂಭಾಗದಲ್ಲಿ 'ಟೇಲ್ ಲ್ಯಾಂಪ್' ಹಾಗೂ 'ಬಂಪರ್'ನಲ್ಲೂ ಸೂಕ್ತ ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ.
ಬಾಹ್ಯ ವಿನ್ಯಾಸ ಮಾತ್ರವಲ್ಲದೆ ಕಾರಿನ ಒಳಾಂಗಣ ಅಂದರೆ 'ಕ್ಯಾಬಿನ್' ಸೌಕರ್ಯದಲ್ಲೂ ಗ್ರಾಹಕರಿಗೆ ದೊಡ್ಡ ಮಟ್ಟದ ಅಪ್‌ಗ್ರೇಡ್ ಸಿಗಲಿದೆ.
ಇವೇ ಮೊದಲಾದ ಪ್ರೀಮಿಯಂ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಫೀಚರ್‌ಗಳನ್ನು ಹೊಸ ಥಾರ್ ಫೇಸ್‌ಲಿಫ್ಟ್ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.
ನೂತನ ಫೇಸ್‌ಲಿಫ್ಟ್ ಕಾರಿನ ವಿನ್ಯಾಸ ಮತ್ತು ಫೀಚರ್‌ಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆಯಾದರೂ, ಪ್ರಸ್ತುತ ಚಾಲ್ತಿಯಲ್ಲಿರುವ ಎಂಜಿನ್ ಆಯ್ಕೆಗಳನ್ನೇ ಮುಂದುವರಿಸಲು ಮಹೀಂದ್ರಾ ಸಂಸ್ಥೆ ತೀರ್ಮಾನಿಸಿದೆ. ಈ ಕಾರಿನಲ್ಲಿ:
2026ರ ಮಹೀಂದ್ರಾ ಥಾರ್ ಫೇಸ್‌ಲಿಫ್ಟ್ ಆವೃತ್ತಿಯು 2026ರ ಸೆಪ್ಟೆಂಬರ್ 22 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಯ ನಂತರವೇ ಕಾರಿನ ಅಧಿಕೃತ ಫೀಚರ್‌ಗಳು, ವಿವಿಧ ವೇರಿಯೆಂಟ್‌ಗಳು ಮತ್ತು ಬೆಲೆಯ ವಿವರಗಳು ಸ್ಪಷ್ಟವಾಗಲಿವೆ. ಅತ್ಯಾಧುನಿಕ ಫೀಚರ್‌ಗಳು ಹಾಗೂ ನವೀಕೃತ ವಿನ್ಯಾಸವನ್ನು ಹೊಂದಿರುವುದರಿಂದ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಥಾರ್ ಆವೃತ್ತಿಗಿಂತ ನೂತನ ಫೇಸ್‌ಲಿಫ್ಟ್ ಕಾರಿನ ಬೆಲೆ ಸಲ್ಪ ಮಟ್ಟಿಗೆ ಹೆಚ್ಚಿರಲಿದೆ ಎಂದು ಅಂದಾಜಿಸಲಾಗಿದೆ.