ದಿನಕ್ಕೆ 200ರಿಂದ 250 ಮಹೀಂದ್ರಾ ಥಾರ್‌ ಬುಕ್ಕಿಂಗ್!

By Suvarna News  |  First Published Feb 6, 2021, 2:16 PM IST

ಮಹೀಂದ್ರಾ ಕಂಪನಿಯ ಥಾರ್ ವಾಹನ ಪ್ರಿಯರಲ್ಲಿ  ಭಾರೀ ಕ್ರೇಜ್ ಸೃಷ್ಟಿಸಿದೆ. ವೇಟಿಂಗ್ ಪಿರಿಯಡ್ ಸಿಕ್ಕಾಪಟ್ಟೆ ಇದ್ದರೂ ಥಾರ್‌ಗೆ ಬುಕ್ಕಿಂಗ್ ಮಾತ್ರ ಕಮ್ಮಿಯಾಗುತ್ತಿಲ್ಲ. ದಿನಕ್ಕೆ ಸರಾಸರಿ 200ರಿಂದ 250ರವರೆಗೂ ಬುಕ್ಕಿಂಗ್ ಆಗುತ್ತಿದೆ ಎಂದು ಕಂಪನಿಯೇ ಹೇಳಿದೆ. ಕ್ರ್ಯಾಶ್ ಸೇಫ್ಟಿಯಲ್ಲಿ 4 ಸ್ಟಾರ್ ಪಡೆದಿರುವ ಈ ಥಾರ್ ದೊಡ್ಡ ಸಕ್ಸಸ್ ಕಾಣುತ್ತಿದೆ.


ಮಹಿಂದ್ರಾ ಕಂಪನಿ ಥಾರ್ ಸೃಷ್ಟಿಸಿರುವ ಕ್ರೇಝ್ ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಹೊಸ ಪೀಳಿಗೆಯ ಎಸ್‌ಯುವಿ ಹಲವು ವೈಶಿಷ್ಟ್ಯಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಲೇ ಇದೆ. 2020ರ ಗಾಂಧಿ ಜಯಂತಿಯಂದು ಅಂದರೆ ಅಕ್ಟೋಬರ್ 2ರಂದು ಮಾರುಕಟ್ಟೆಗೆ ಬಿಡುಗಡೆಯಾ ಥಾರ್ ಎಸ್‌ಯುವಿ ಬುಕ್ಕಿಂಗ್‌ ಮುಗಿಲು ಮುಟ್ಟಿದೆ. ಈ ವರೆಗೆ 39,000 ಥಾರ್‌ ಬುಕ್ಕಿಂಗ್ ಆಗಿದೆ. 2021ರ ಜನವರಿಯ ತಿಂಗಳೊಂದರಲ್ಲೇ ಮಹೀಂದ್ರಾ ಥಾರ್ 6000 ಹೊಸ ಬುಕ್ಕಿಂಗ್ ಕಂಡಿದೆ. ಅಂದರೆ, ದಿನಕ್ಕೆ ಸರಾಸರಿ 200ರಿಂದ 250 ಬಕ್ಕಿಂಗ್‌ಗಳನ್ನು ಥಾರ್ ಎಸ್‌ಯುವಿ ಪಡೆದುಕೊಳ್ಳುತ್ತಿದೆ. ಭಾರತದಲ್ಲಿ ಥಾರ್ ಎಸ್‌ಯುವಿ ಭಾರೀ ಸಕ್ಸೆಸ್ ಕಂಡಿದೆ.

ರೆನೋ ಕೈಗರ್‌ ಕಾರು; ವಿಶೇಷತೆಗಳೇ ಜೋರು!

Latest Videos

undefined

ಥಾರ್ ಪಡೆದುಕೊಳ್ಳುತ್ತಿರುವ ಜನಪ್ರಿಯತೆ ಮತ್ತು ಹೆಚ್ಚುತ್ತಿರುವ ಬೇಡಿಕೆಯ ಬಗ್ಗೆ ಸ್ವತಃ ಮಹೀಂದ್ರಾ ಕಂಪನಿಯೇ 2021 ಸಾಲಿನ ಮೂರನೇ ತ್ರೈಮಾಸಿಕ ಮಾಹಿತಿ ನೀಡುವಾಗ ಹೇಳಿದೆ. ಮತ್ತೂ ಆಶ್ಚರ್ಯದ ಸಂಗತಿ ಏನೆಂದರೆ, ಒಟ್ಟು  ಬುಕ್ಕಿಂಗ್‌ಗಳ ಪ್ರಕಾರ ಶೇ.45ರಷ್ಟು ಬುಕ್ಕಿಂಗ್‌ಗಳು ಆಟೋಮ್ಯಾಟಿಕ್ ವೆರಿಯೆಂಟ್‌ಗಳಿಗೆ ಮಾಡಲಾಗಿದೆ. ಎಸ್‌ಯುವಿ ವಿಭಾಗದಲ್ಲಿ ಆಟೋಮ್ಯಾಟಿಕ್ ಹೆಚ್ಚುತ್ತಿರುವ ಬೇಡಿಕೆಯನ್ನು ಇದು ಸೂಚಿಸುತ್ತದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಮನಾಗಿ ಈ ಥಾರ್‌ಗೆ ಬೇಡಿಕೆಯ ಸೃಷ್ಟಿಯಾಗಿದೆ ಎಂಬುದು ಕಂಪನಿಯ ವಿವರಣೆಯಾಗಿದೆ. ಸದ್ಯಕ್ಕೆ ವೇಟಿಂಗ್  ಪಿರಿಯಡ್ ಐದು ತಿಂಗಳವರೆಗೂ ಇದೆ. ಅಂದರೆ ನೀವು ಬಕ್ ಮಾಡಿದ ಐದು ತಿಂಗಳ ಬಳಿಕ ಥಾರ್ ಡೆಲಿವರಿ ಸಿಗುತ್ತದೆ.

ಹೊಸ ಥಾರ್ 2020 ಎಸ್‌ಯುವಿ ವಾಹನವನ್ನು ಬಾಡಿ-ಆನ್-ಫ್ರೇಮ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ ಮತ್ತು ಇದು ಈ ಹಿಂದಿದ್ದ ಎಸ್‌ಯುವಿಗಿಂತಲೂ ಗಮನಾರ್ಹವಾಗಿ ದೊಡ್ಡದಾಗಿದೆ ಎಂದು ಹೇಳಬಹುದು. ಹೀಗಿದ್ದರೂ, ಹೊಸ ವಾಹನವು ಹಳೆಯ ಲುಕ್‌ನ್ನು ಹಾಗೆಯೇ ಉಳಿಸಿಕೊಂಡಿದೆ.  ಎಎಕ್ಸ್ ಶ್ರೇಣಿಯಲ್ಲಿ 16 ಇಂಚಿನ ಸ್ಟೀಲ್ ವ್ಹೀಲ್ಸ್, ಕಡಿಮೆ ಉಪಕರಣಗಳು ಮತ್ತು ಸ್ವಯಂಚಾಲಿತ ಗೇರ್‌ಬಾಕ್ಸ್‌ಗಳಿಲ್ಲ. ಆದರೆ ದೊಡ್ಡದಾದ 18 ಇಂಚಿನ ಅಲಾಯ್ ವೀಲ್‌ಗಳು, ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳು ಮತ್ತು ಹೆಚ್ಚಿನ ಫೀಚರ್‌ಗಳನ್ನು ಈ ಹೊಸ ಥಾರ್ ವಾಹನ ಹೊಂದಿದೆ.

ಫೆ.16ಕ್ಕೆ ಸಿಬಿ350 ಆಧರಿತ ಹೋಂಡಾ ಬೈಕ್.. ಏನೆಲ್ಲ ವಿಶೇಷ?

ವಿನ್ಯಾಸದ ಬಗ್ಗೆ ಹೇಳುವುದಾದರೆ ಇದು ನಿಜವಾಗಿಯೂ ತ್ರಿಡೋರ್ ಮಾದರಿಯನ್ನು ಮುಂದುವರಿಸಿದೆ. ಈ ವಾಹನದಲ್ಲಿ ಚಕ್ರಗಳ ಅನುಪಾತವೂ ಇನ್ನೂ ಚೆನ್ನಾಗಿದೆ. ಒಟ್ಟಾರೆ ವಾಹನದ ಅಂದವೂ ಕೂಡ ಗಮನ ಸೆಳೆಯುತ್ತದೆ. ಹಳೆಯ ಮಾಡೆಲ್‌ಗಿಂತಲೂ ಹೆಚ್ಚಿನ ಪ್ರಮಾಣದ ಸುಧಾರಣೆಗಳನ್ನು ನೀವು ಹೊಸ ಮಾಡೆಲ್‌ನಲ್ಲಿ ಕಾಣಬಹುದು. ಎಂಜಿನ್ ಬಗ್ಗೆ ಹೇಳುವುದಾದರೆ, ಥಾರ್‌ನಲ್ಲಿ 2.0 ಲೀಟರ್ ಎಂಸ್ಟಾಲಿಯನ್ 150 ಟಿ ಜಿಡಿಐ ಪೆಟ್ರೋಲ್ ಎಂಜಿನ್ ಇದ್ದು, 5000 ಆರ್‌ಪಿಎಂಗೆ 150 ಬಿಎಚ್‌ಪಿ ಪವರ್ ಉತ್ಪಾದಿಸುತ್ತದೆ ಮತ್ತು 1,500ರಿಂದ 3,000 ಆರ್‌ಪಿಎಂ ಮಧ್ಯೆ 320 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇದೇ ವೇಳೆ, 2.2 ಡಿಸೇಲ್ ಎಂಜಿನ್ 3,760 ಆರ್‌ಪಿಎಂನಲ್ಲಿ 130 ಹಾರ್ಸ್ ಪವರ್ ಉತ್ಪಾದಿಸುತ್ತದೆ. ಹಾಗೆಯೇ 1,600ರಿಂದ 2,800 ಆರ್‌ಪಿಎಂ ಮಧ್ಯೆ 300 ಎನ್‌ಎಂ ಟಾರ್ಕ್ ಕೂಡ ಸಿಗುತ್ತದೆ. ಎರಡೂ ಎಂಜಿನ್‌ಗಳು 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್‌ಗಳನ್ನು ಹೊಂದಿವೆ. ಈ ಥಾರ್ ಬಿಡುಗಡೆಯಾದ ನಾಲ್ಕು ದಿನದಲ್ಲೇ 9,000 ಬುಕ್ಕಿಂಗ್‌ಗಳನ್ನು ಪಡೆದು ದಾಖಲೆ ಸೃಷ್ಟಿಸಿತ್ತು. ಎಸ್‌ಯುವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ 12 ದಿನದಲ್ಲಿ 9,000 ಬುಕ್ ಆಗಿ ದಾಖಲೆ ಬರೆದಿತ್ತು.  ಆ  ದಾಖಲೆಯನ್ನು ನಾಲ್ಕೇ ದಿನಕ್ಕೆ ಥಾರ್ ಮುರಿದು ಹಾಕಿತ್ತು.

ಸೇಫ್ಟಿಯಲ್ಲಿ ನಾಲ್ಕು ಸ್ಟಾರ್
ಭಾರತದ ಆಫ್‌ರೋಡ್ ವೆಹಿಕಲ್ ವಿಭಾಗದಲ್ಲಿ  ಭಾರಿ ಸಂಚಲನ ಸೃಷ್ಟಿಸಿರುವ ಎರಡನೇ ತಲೆಮಾರಿನ ಮಹೀಂದ್ರಾ ಥಾರ್, ಸೇಫ್ಟಿ ಕ್ರ್ಯಾಶ್ ಟೆಸ್ಟ್‌ನಲ್ಲಿ 4 ಸ್ಟಾರ್‌ಗಳನ್ನು ಪಡೆದುಕೊಂಡಿದೆ. ಈ ಮೂಲಕ ಬಾಡಿ ಆನ್ ಫ್ರೇಮ್ ಎಸ್‌ಯುವಿ ವಿಭಾಗದಲ್ಲಿ ಮಹೀಂದ್ರಾ ಥಾರ್  ಗರಿಷ್ಠ ಸ್ಟಾರ್ ಪಡೆದ ಭಾರತದ ಆಫ್‌ರೋಡ್ ವೆಹಿಕಲ್ ಆಗಿದೆ.

ಗ್ಲೋಬಲ್ ಎನ್‌ಸಿಎಪಿ ಈ ಸೇಫ್ಟಿ ಕ್ರ್ಯಾಶಿಂಗ್ ಪರೀಕ್ಷೆಯನ್ನು ನಡೆಸಿದ್ದು, ಮಹೀಂದ್ರಾ ಥಾರ್‌ಗೆ ಒಟ್ಟಾರೆ ನಾಲ್ಕು ಸೇಫ್ಟಿ ಸ್ಟಾರ್‌ಗಳು ದೊರೆತಿವೆ.
ಗ್ಲೋಬಲ್ ಎನ್‌ಸಿಎಪಿ ನಡೆಸಿದ ಚಾಲ್ಡ್ ಸೇಫ್ಟ್‌ಯಲ್ಲೂ ಮಹೀಂದ್ರಾ ಥಾರ್ ಅತಿ ಹೆಚ್ಚು ಶ್ರೇಯಾಂಕವನ್ನು ಸಂಪಾದಿಸಿದೆ. ದೇಶೀಯವಾಗಿ ವಿನ್ಯಾಸಗೊಂಡಿರುವ ಥಾರ್‌ ಆಫ್‌ರೋಡ್ ಡ್ರೈವಿಂಗ್ ಸಾಮರ್ಥ್ಯಕ್ಕೆ ಬೇರೆ ಯಾವುದೇ ಸಾಟಿ ಇಲ್ಲ ಎಂಬುದನ್ನು ಈ ಪರೀಕ್ಷೆ ಒತ್ತಿ ಹೇಳುತ್ತಿದೆ. ಕಾರಿನ ಅದ್ಭುತ ಚಾಲನಾಶಕ್ತಿಯ ಹೊರತಾಗಿಯೂ, ವಿಶಿಷ್ಟವಾದ ವಿನ್ಯಾಸ, ಹೊಸ ಹೊಸ ವೈಶಿಷ್ಟ್ಯಗಳಿಂದ ಗಮನ ಸೆಳೆಯುತ್ತಿರುವ ಥಾರ್ ಇದೀಗ, ಸೇಫ್ಟಿ ವಿಷಯದಲ್ಲಿ ಈ ಸೆಗ್ಮೆಂಟ್ ಇತರ ಯಾವುದೇ ವೆಹಿಕಲ್‌ಗಳಿಗಿಂತ ತುಂಬ  ಮುಂದಿದೆ.

ಆಂಧ್ರದ ಕರ್ನೂಲ್‌ನಿಂದ ಬೆಂಗಳೂರಿಗೆ ಇಂಡಿಗೋ ವಿಮಾನ.. ಯಾವಾಗಿನಿಂದ?

click me!