2020ರಲ್ಲಿ 3,66,138 ಆಕ್ಸಿಡೆಂಟ್, 1,31,714 ದುರ್ಮರಣ!

By Suvarna News  |  First Published Aug 6, 2021, 4:10 PM IST

ದೇಶದಲ್ಲಿ ರಸ್ತೆ ಅಪಘಾತಗಳನ್ನು ಗಣನೀಯವಾಗಿ ಕಡಿಮೆಗೊಳಿಸಲು ಹಲವು ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ. ಇಷ್ಟಾಗಿಯೂ ಅಪಘಾತಗಳ ಸಂಖ್ಯೆಯನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗುತ್ತಿಲ್ಲ. 2020ರಲ್ಲಿ ಸಂಭವಿಸಿದ ಅಪಘಾತಗಳಲ್ಲಿ 1.30 ಲಕ್ಷಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ.


ಕಳೆದ ಎರಡು ವರ್ಷಗಳಿಂದ ಕೋವಿಡ್ ಸಾವುಗಳು ಹೆಚ್ಚಾಗಿರಬಹುದು. ಆದರೆ, ಪ್ರತಿ ವರ್ಷ ದೇಶದಲ್ಲಿ ರಸ್ತೆ ಅಪಘಾತಗಳಲ್ಲಿ ಸಾಯುವವರ ಸಂಖ್ಯೆ ಏನೂ ಕಡಿಮೆ ಇಲ್ಲ. ಕೇಂದ್ರ ಸರ್ಕಾರವೇ ನೀಡುವ ಮಾಹಿತಿಯ ಪ್ರಕಾರ, 2020ರಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 1,31,714 ಮಂದಿ ಮೃತಪಟ್ಟಿದ್ದಾರೆ.  ಕೋವಿಡ್ ಸಾವುಗಳ ಸಂಖ್ಯೆ ಬಹುತೇಕ 1.50 ಲಕ್ಷ ದಾಖಲಾಗಿದೆ. ಅಂದರೆ, ಕೋವಿಡ್ ಸಾವುಗಳಿಗೂ ಮತ್ತು ರಸ್ತೆ ಅಪಘಾತ ಸಾವುಗಳಿಗೂ ಅಂಥ ಸಿಕ್ಕಾಪಟ್ಟೆ ವ್ಯತ್ಯಾಸವೇನೂ ಇಲ್ಲ!

ಇ ವಾಹನ ಖರೀದಿಸಿದ್ರೆ ನೋಂದಣಿ ಸರ್ಟಿಫಿಕೇಟ್ ಶುಲ್ಕ ಕೊಡಬೇಕಿಲ್ಲ!

Tap to resize

Latest Videos

undefined

ದಿಲ್ಲಿಯಲ್ಲಿ ಸಂಸತ್ ಅಧಿವೇಶನ ನಡೆಯುತ್ತಿದ್ದು, ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ಸಚಿವ ನಿತಿನ್ ಗಡ್ಕರಿ ಅವರು, 2020ರ ಸಾಲಿನಲ್ಲಿ ಒಟ್ಟು 3,66,138 ರಸ್ತೆ ಅಪಘಾತಗಳು ಸಂಭವಿಸಿದ್ದು, ಈ ಪೈಕಿ 1,31,714 ಜನರು ಮೃತಪಟ್ಟಿದ್ದಾರೆಂದು ಮಾಹಿತಿ ನೀಡಿದ್ದಾರೆ.

ಬಹುಶಃ ಯಾವುದೇ ರೋಗ ರುಜುನಿಗಳಿಂದಲೂ ಸಾಯುವುದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಜನರು ಭಾರತದಲ್ಲಿ ರಸ್ತೆ ಅಪಘಾತದಲ್ಲಿ ಸಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷೆತೆಗೆ ಸಂಬಂಧಿಸಿದಂತೆ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೂ, ಅಪಘಾತ ಸಾವುಗಳನ್ನ ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.

ಲೋಕಸಭೆಗೆ ಉತ್ತರ ನೀಡಿರುವ ಕೇಂದ್ರ ರಸ್ತೆ ಸಾರಿಗೆ  ಮತ್ತು ಹೆದ್ದಾರಿ ಇಲಾಖೆ ಸಚಿವ ನಿತಿನ್ ಗಡ್ಕರಿ ಅವರು, ಶಿಕ್ಷಣ, ರಸ್ತೆ ಮತ್ತು ವಾಹನಕ್ಕೆ ಸಂಬಂಧಿಸಿದ ಎಂಜಿನಿಯರಿಂಗ್, ಜಾರಿಗೊಳಿಸುವಿಕೆ ಮತ್ತು ರಸ್ತೆ ಆಧಾರಿತ ರಸ್ತೆ ಸುರಕ್ಷತೆಯ ಸಮಸ್ಯೆಯನ್ನು ಪರಿಹರಿಸಲು ತಮ್ಮ ಸಚಿವಾಲಯವು ಬಹುಮುಖಿ ಕಾರ್ಯತಂತ್ರವನ್ನು ರೂಪಿಸಿದೆ ಎಂದು ಹೇಳಿದರು. 

ಜುಲೈನಲ್ಲಿ 1.36 ಲಕ್ಷ ವಾಹನ ಮಾರಾಟ ಮಾಡಿದ ಮಾರುತಿ!

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಸಂಸತ್ ಸದಸ್ಯರ ರಸ್ತೆ ಸುರಕ್ಷತಾ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಪ್ರತಿ ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ಬರಲಿದ್ದು, ರಸ್ತೆ ಬಳಕೆದಾರರ ಮಧ್ಯೆ  ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಿದೆ. ಈ ಸಮಿತಿಗೆ ಸ್ಥಳೀಯ ಸಂಸದರು ಅಧ್ಯಕ್ಷರಾಗಿರುತ್ತಾರೆ. ಅಂದ ಸಂಬಂಧಿಸಿದ ಜಿಲ್ಲಾ ಸಮಿತಿಗಳು ಸಂಬಂಧಿಸಿದ ಸಂಸದರ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದಲ್ಲಿ ಕಾರ್ಯನಿರ್ವಹಿಸಲಿವೆ. ಈ ಮೂಲಕ ಜನರಲ್ಲಿ ರಸ್ತೆ ಅಪಘಾತಗಳ ಬಗ್ಗೆ ಮಾಹಿತಿ, ರಸ್ತೆ ಸುರಕ್ಷತೆಯ ಮಹತ್ವವದ ಅರಿವು ಮೂಡಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲು ಮುಂದಾಗಿದೆ.


ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೊಂದು ಪ್ರತ್ಯೇಕ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳ ಅವಧಿಯಲ್ಲಿ 2,284 ಕಿ.ಮೀ.  ರಾಷ್ಟ್ರೀಯ ಹೆದ್ದಾರಿಯನ್ನು ದೇಶದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.  ಸಚಿವರು ಪ್ರಕಾರ, 2021-22ರ ಸಾಲಿನಲ್ಲಿ ಒಟ್ಟು 12 ಸಾವಿರ ಕಿಲೋ ಮೀಟರ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಗುರಿಯನ್ನು ಹಾಕಿಕೊಳ್ಳಲಾಗಿದೆ.

ಇದೇ ವೇಳೆ ಸಚಿವ ನಿತಿನ್ ಗಡ್ಕರಿ ಅವರು ,ತಮ್ಮ ಸಚಿವಾಲಯವು 100 ಪ್ರವಾಸಿ ತಾಣಗಳ ಪಟ್ಟಿಯನ್ನು ಸ್ವೀಕರಿಸಿದೆ, ತರುವಾಯ 50 ಸ್ಥಳಗಳಿಗೆ ಪರಿಷ್ಕರಿಸಲಾಗಿದೆ. ಪ್ರವಾಸೋದ್ಯಮ ಸಚಿವಾಲಯದಿಂದ ವೇಸೈಡ್ ಸೌಕರ್ಯಗಳು, ಪ್ರಮುಖ ಸಂಕೇತಗಳು ಮತ್ತು ಪ್ರದೇಶವನ್ನು 15ರಿಂದ 20 ಮೀ ಅಂತರದಲ್ಲಿ ಪ್ರವಾಸಿ ತಾಣಗಳನ್ನು ಸುಂದರಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಕರ್ನಾಟದಲ್ಲಿವೆ ದೇಶದಲ್ಲೇ ಅತಿ ಹೆಚ್ಚು ಹಳೆಯ ವಾಹನಗಳು!

ನಿರ್ಭಯಾ ಫ್ರೇಮ್‌ವರ್ಕ್ ಅಡಿಯಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ AIS 140 ನಿರ್ದಿಷ್ಟತೆಗಳ ಪ್ರಕಾರ ಸುರಕ್ಷತೆ ಮತ್ತು ಜಾರಿಗಾಗಿ ರಾಜ್ಯವಾರು ವಾಹನ ಟ್ರ್ಯಾಕಿಂಗ್ ವೇದಿಕೆಯ ಅಭಿವೃದ್ಧಿ, ಗ್ರಾಹಕೀಕರಣ, ನಿಯೋಜನೆ ಮತ್ತು ನಿರ್ವಹಣೆಗೆ ಇಲಾಖೆಯು 2020 ರ ಜನವರಿಯಲ್ಲಿ ಯೋಜನೆಯನ್ನು ಅನುಮೋದಿಸಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು. ಇದಕ್ಕಾಗಿ ಇಲಾಖೆಯು 463 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ.

click me!