ಕಡಿಮೆ ದರ, ಸುರಕ್ಷತೆ: ಹೋಂಡಾ ಅಮೇಜ್ ಕಾರಿನ ಮಾರಾಟ ಅಮೇಜಿಂಗ್!

By Suvarna NewsFirst Published Dec 17, 2021, 8:48 PM IST
Highlights
  • 2 ಲಕ್ಷದ ವಿತರಣೆಯ ಗಡಿ ದಾಟಿದ ಹೊಂಡಾ ಅಮೇಜ್‌
  • 2018ರಲ್ಲಿ ಎರಡನೇ ಪೀಳಿಗೆಯ ಕಾರು ಬಿಡುಗಡೆ
  •  ಕಾರಿನ ದರ 6.32 ಲಕ್ಷ ರೂ.ಗಳಿಂದ ಆರಂಭ

ಕೋವಿಡ್‌ ಸಾಂಕ್ರಾಮಿಕದ (Covid19) ನಂತರ ಮಾರುಕಟ್ಟೆಯಲ್ಲಿ ಎಸ್‌ಯುವಿಗಳ(SUV) ಭರಾಟೆ ಹೆಚ್ಚಳವಾಗಿದ್ದರೂ, ಅದರ ಬೆನ್ನಲ್ಲೇ ಅಗ್ಗದ ಹಾಗೂ ಸುರಕ್ಷಿತ ಕಾರುಗಳಿಗೆ (Safery Cars) ಬೇಡಿಕೆ ಹೆಚ್ಚಾಗಿದೆ.
ಹೊಂಡಾ ಅಮೇಜ್‌ (Honda Amaze) ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ 2013ರಲ್ಲಿ ಬಿಡುಗಡೆಗೊಂಡಿತ್ತು ಮತ್ತು ಮಾರುಕಟ್ಟೆಯಲ್ಲಿ ಸ್ಥಿರವಾಗಿ ನಿಲ್ಲುವಲ್ಲಿ ಯಶಸ್ವಿಯಾಗಿದೆ. ಅಂದಿನಿಂದ ಇಂದಿನವರೆಗೆ ಹೊಂಡಾ ಅಮೇಜ್‌ 4.6 ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ.2018ರಲ್ಲಿ ಎರಡನೇ ಪೀಳಿಗೆಯ ಅಮೇಜ್‌ನ ಪರಿಚಯಿಸುವ ಮೂಲಕ ಕಂಪನಿ ಇನ್ನಷ್ಟು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದು ಹಿಂದಿಗಿಂತಲೂ ಹೆಚ್ಚಿನ ಬೋಲ್ಡ್‌ ಪ್ರೊಫೈಲ್‌ (Bold Profile) ಮತ್ತು ವಿಶಾಲ ಕ್ಯಾಬಿನ್‌ಗಳನ್ನು ಹೊಂದಿದೆ.

ಈ ಹೊಂಡಾ ಅಮೇಜ್‌ ಕಾರುಗಳು ವಿಶೇಷವಾಗಿ ಭಾರತದಲ್ಲಿಯೇ ತಯಾರಿಸಲಾಗಿದೆ ಮತ್ತು ಇದರಲ್ಲಿ ಶೇ.95ರಷ್ಟು ಬಿಡಿ ಭಾಗಗಳು ದೇಶೀಯವಾಗಿರುವುದು ಇದರ ಜನಪ್ರಿಯತೆ ಹೆಚ್ಚಳಕ್ಕೆ ಕಾರಣವಾಯಿತು ಎಂದು ಹೊಂಡಾಕಾರ್‌ ಇಂಡಿಯಾ ಅಭಿಪ್ರಾಯಪಟ್ಟಿದೆ. ಇನ್ನೊಂದು ಆಸಕ್ತಿಕರ ವಿಷಯವೆಂದರೆ, ಈ ಸೆಡಾನ್‌ ಕಾರಿಗೆ ದೇಶದ ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿಯೇ ಹೆಚ್ಚು ಬೇಡಿಕೆಯಿದೆ. ಇದರ ಶೇ.67ರಷ್ಟು ಮಾರಾಟಗಳು ಈ ನಗರಗಳಲ್ಲಿಯೇ ದಾಖಲಾಗಿವೆ.

ಜನರು ಅಮೇಜ್‌ ಅನ್ನು ಅತಿ ಹೆಚ್ಚಾಗಿ ಖರೀದಿಸಲು ಕಾರಣವೇನು ಎಂಬ ವಿಷಯ ಗಮನಿಸಿದರೆ, ಇದರ ಸಿವಿಟಿ ಮತ್ತು ಟ್ತಾನ್ಸ್‌ಮಿಷನ್‌ (Transmission) ವೇರಿಯಂಟ್‌ಗಳು ಶೇ.20ರಷ್ಟು ಕೊಡುಗೆ ನೀಡಿದೆ ಎಂದು ವಿಶ್ಲೇಷಿಸಬಹುದು. ಇನ್ನೊಂದು ಗಮನಾರ್ಹ ಅಂಕಿ ಅಂಶವೆಂದರೆ, ಇದರ ಖರೀದಿದಾರರಲ್ಲಿ ಶೇ.40ರಷ್ಟು ಜನರು ಮೊದಲ ಬಾರಿ ಕಾರು ಖರೀದಿಸಿದವರಾಗಿದ್ದಾರೆ. ಇದರ ದೊಡ್ಡ ಕ್ಯಾಬಿನ್‌ ಸ್ಪೇಸ್‌ (Cabin Space) ಮತ್ತು 1.2 ಲೀಟರ್‌ ಐ-ವಿಟಿಇಸಿ ಪೆಟ್ರೋಲ್‌ ಮತ್ತು 1.5 ಲೀಟರ್‌-ಐ-ಡಿಟಿಇಸಿ ಇಂಜಿನ್‌ಗಳ ಲಭ್ಯತೆ ಇದನ್ನು ಹೆಚ್ಚು ಜನರಿಗೆ ಪ್ರಿಯವಾಗಿಸಿದೆ.

ಭಾರತದಲ್ಲಿ ಕೈ ಗೆಟಕುವ ದರದಲ್ಲಿ ಎಲೆಕ್ಟ್ರಿಕ್ ಕಾರು

ಹೊಂಡಾ ಕಾರುಗಳ ಪೋರ್ಟ್‌ಪೋಲಿಯೋದಲ್ಲಿ ಅಮೇಜ್‌ ಅತ್ಯುತ್ತಮ ಮಾರಾಟ ದಾಖಲಿಸಿದ ಕಂಪನಿಯಾಗಿದೆ. ಈಗಾಗಲೇ ಸಿಆರ್‌-ವಿ ಮತ್ತು ಸಿವಿಕ್‌ ಮಾದರಿಗಳ ಉತ್ಪಾದನೆ ಸ್ಥಗಿತಗೊಳಿಸಿದ ನಂತರ ಕಂಪನಿ, ಅಮೇಜ್‌ ಮೇಲೆಯೇ ಹೆಚ್ಚಿನ ಭರವಸೆ ಇರಿಸಿದೆ.  ಈ ಕುರಿತು ಹೇಳಿಕೆ ನೀಡಿರುವ ಹೊಂಡಾ ಕಾರ್ ಇಂಡಿಯಾದ ಅಧ್ಯಕ್ಷ ಮತ್ತು ಸಿಜಿಒ ಗಾಕು ನಕನಿಷಿ, “ಹೊಂಡ ಅಮೇಜ್‌ ನಮಗೆ ಅತ್ಯಂತ ಮಹತ್ವದ ಕಾರಾಗಿದೆ ಮತ್ತು ಅದು ಸದ್ಯ ಸದೃಢ ಮಾರುಕಟ್ಟೆ ಸ್ಥಾನ ಹೊಂದಿದೆ” ಎಂದಿದ್ದಾರೆ.

ಹೊಂಡಾ ಅಮೇಜ್‌ ಮಾರುಕಟ್ಟೆಯಲ್ಲಿನ ಮಾರುತಿ ಸುಜುಕಿ ಡಿಸೈರ್‌ಗೆ ಸ್ಪರ್ಧೆ ನೀಡುತ್ತದೆ. ಇದು ಕೂಡ ದೇಶದ ಅತ್ಯಂತ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಒಂದಾಗಿದೆ.
ಹೊಂಡಾ ಅಮೇಜ್‌ನ ಮ್ಯಾನ್ಯುಯಲ್‌ ಟ್ರಾನ್ಸ್‌ಮಿಷನ್‌ನ ಇ ವೇರಿಯಂಟ್‌ 6.32 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ. ಇದರ ಟಾಪ್‌ ಎಂಡ್‌ ವಿಎಕ್ಸ್‌ ಸಿವಿಟಿ ಡೀಸೆಲ್‌ ಕಾರು 11.15 ಲಕ್ಷ ರೂ. ಶೋರೂಂ ದರ ಹೊಂದಿದೆ.

ಕಾರು ಮೈಲೇಜ್ ಕೊಡಲು ಹೀಗೆ ಮಾಡು
 

click me!