ಕೊರೋನಾ ಗಲಾಟೆ ನಡುವೆಯೇ ಚಿಗುರಿಕೊಳ್ಳುತ್ತಿದೆ ಆಟೋಮೊಬೈಲ್ ಕ್ಷೇತ್ರ!

By Suvarna NewsFirst Published Dec 16, 2021, 7:45 PM IST
Highlights

ಕೊರೋನಾ ಕಾಟ ಆರಂಭಕ್ಕೂ ಮುಂಚೆಯೇ ಆಟೋಮೊಬೈಲ್ ಕ್ಷೇತ್ರ ಸಾಕಷ್ಟು ಸಂಕಟ ಅನುಭವಿಸುತ್ತಿತ್ತು. ಓಲಾ, ಊಬರ್‌ನಂಥ ವಾಹನ ಸೇವೆಯ ಕಾರಣ ಜನರು ಕಾರು ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ವಿತ್ತ ಸಚಿವೆ ನಿರ್ಮಲಾ ಸೇತುರಾಮನ್ ಹೇಳಿಕೆ ಸಾಕಷ್ಚು ಚರ್ಚೆಗೆ ಕಾರಣವಾಗಿತ್ತು. ಆದರೆ, ಇದಕ್ಕೆ ಮಹಿಂದ್ರಾ ಕಂಪನಿಯ ಮಾಲೀಕ ಆನಂದ್ ಮಹಿಂದ್ರಾ ಧ್ವನಿಗೂಡಿಸಿದ್ದರಿಂದ ಚರ್ಚೆ ಸ್ವಲ್ಪ ತಣ್ಣಗಾಗಿತ್ತು. ಆದರೂ. ಆಟೋ ಕ್ಷೇತ್ರ ಸುಧಾರಿಸಿಕೊಂಡಿದ್ದು ಹೇಗೆ? 

ಕೊರೋನಾ ಕಾಟ ಆರಂಭಕ್ಕೂ ಮುಂಚೆಯೇ ಆಟೋಮೊಬೈಲ್ ಕ್ಷೇತ್ರ ಸಾಕಷ್ಟು ಸಂಕಟ ಅನುಭವಿಸುತ್ತಿತ್ತು. ಓಲಾ, ಊಬರ್‌ನಂಥ ವಾಹನ ಸೇವೆಯ ಕಾರಣ ಜನರು ಕಾರು ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ವಿತ್ತ ಸಚಿವೆ ನಿರ್ಮಲಾ ಸೇತುರಾಮನ್ ಹೇಳಿಕೆ ಸಾಕಷ್ಚು ಚರ್ಚೆಗೆ ಕಾರಣವಾಗಿತ್ತು. ಆದರೆ, ಇದಕ್ಕೆ ಮಹಿಂದ್ರಾ ಕಂಪನಿಯ ಮಾಲೀಕ ಆನಂದ್ ಮಹಿಂದ್ರಾ ಧ್ವನಿಗೂಡಿಸಿದ್ದರಿಂದ ಚರ್ಚೆ ಸ್ವಲ್ಪ ತಣ್ಣಗಾಗಿತ್ತು. ಆದರೂ. ಆಟೋ ಕ್ಷೇತ್ರ ಸುಧಾರಿಸಿಕೊಂಡಿದ್ದು ಹೇಗೆ? ಆಟೊಮೊಬೈಲ್‌ ಕ್ಷೇತ್ರವನ್ನು ಕಾಡುತ್ತಿರುವ ಸೆಮಿಕಂಡಕ್ಟರ್‌ ಕೊರತೆ, ಕೋವಿಡ್‌-19 ಸಾಂಕ್ರಾಮಿಕ, ಕಚ್ಚಾ ತೈಲದ ದರದ ಏರಿಕೆಯ ನಡುವೆಯೂ 2021ರ ನವೆಂಬರ್‌ ತಿಂಗಳಲ್ಲಿ ಕಾರುಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ. ಈ ತಿಂಗಳಲ್ಲಿ ಮಾರಾಟವಾದ 10 ಪ್ರಮುಖ ಕಾರುಗಳ ಪಟ್ಟಿ ಇಲ್ಲಿದೆ.

ಆಸಕ್ತಿಕರ ವಿಷಯವೆಂದರೆ, ಈ ಟಾಪ್‌ ಹತ್ತು ಕಾರುಗಳ ಪೈಕಿ 7 ಕಾರುಗಳು ಮಾರುತಿ ಸುಜುಕಿ ಕಂಪನಿಗಳಿಗೆ ಸೇರಿವೆ.

ಮಾರುತಿ ಸುಜುಕಿ ವ್ಯಾಗನಾರ್‌
ಮಾರುತಿ ಸುಜುಕಿಯ ವ್ಯಾಗನಾರ್‌ ನವೆಂಬರ್‌ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಮಾದರಿಯಾಗಿದೆ. ಈ ಕಾರು ಕಳೆದ ತಿಂಗಳಲ್ಲಿ 16,853 ಕಾರುಗಳು ಮಾರಾಟವಾಗಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 16,256 ಕಾರುಗಳ ಮಾರಾಟ ದಾಖಲಾಗಿತ್ತು. ಮಾರುತಿ ಸುಜುಕಿ ವ್ಯಾಗನಾರ್‌, 1.0 ಮತ್ತು 1.2 ಲೀಟರ್‌ ಪೆಟ್ರೋಲ್‌ ಇಂಜಿನ್‌ ಆಯ್ಕೆಗಳಲ್ಲಿ ಲಭ್ಯವಿವೆ. ಇದು ಸಿಎನ್‌ಜಿ ಆಯ್ಕೆಯನ್ನು ಕೂಡ ನೀಡಲಿದೆ. ಇದು ಮ್ಯಾನ್ಯುವಲ್‌ ಮತ್ತು ಎಎಂಟಿ ಆಯ್ಕೆಗಳಲ್ಲಿ ಸಿಗುತ್ತಿವೆ.

ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ವಿಶೇಷ ಕೊಡುಗೆ

ಮಾರುತಿ ಸುಜುಕಿ ಸ್ವಿಫ್ಟ್‌:
ಮಾರುತಿ ಸುಜುಕಿಯ ಜನಪ್ರಿಯ ಕಾರುಗಳಲ್ಲಿ ಒಂದಾದ ಸ್ವಿಫ್ಟ್‌ ಕಳೆದೊಂದು ತಿಂಗಳಲ್ಲೇ 18,498 ಕಾರುಗಳ ಮಾರಾಟ ದಾಖಲಿಸಿದೆ. ಸೆಮಿ ಕಂಡಕ್ಟರ್‌ ಕೊರತೆ ಸ್ವಿಫ್ಟ್‌ ಕಾರಿನ ಮಾರಾಟದ ಮೇಲೆ ಕೂಡ ಪರಿಣಾಮ ಬೀರಿದೆ. ಅಕ್ಟೋಬರ್‌ ತಿಂಗಳಲ್ಲಿ ಇದರ ಮಾರಾಟ ಶೇ.63ಕ್ಕೆ ಇಳಿದಿತ್ತು. ಇದರಿಂದ ಈ ಕಾರು 9ನೇ ಸ್ಥಾನಕ್ಕೆ ಕುಸಿದಿತ್ತು.

ಮಾರುತಿ ಸುಜುಕಿ ಆಲ್ಟೋ:
ನವೆಂಬರ್‌ ತಿಂಗಳಲ್ಲಿ ಮಾರುತಿ ಸುಜುಕಿ ಆಲ್ಟೋ ಮಾರಾಟ ಗಣನೀಯವಾಗಿ ಇಳಿಕೆಯಾಗಿದ್ದು, ಮೂರನೇ ಸ್ಥಾನಕ್ಕೆ ಕುಸಿದಿತ್ತು. ಸುಜುಕಿ ಆಲ್ಟೋ ಮಾರಾಟ 13,812 ಕಾರುಗಳ ಮಾರಾಟ ದಾಖಲಿಸಿದೆ. ಕಳೆದ ವರ್ಷ ಈ ತಿಂಗಳ ಅವಧಿಯಲ್ಲಿ 15,321 ಕಾರುಗಳು ಮಾರಾಟವಾಗಿದ್ದವು. ಇದು 0.8 ಲೀಟರ್‌ ಪೆಟ್ರೋಲ್‌ ಇಂಜಿನ್‌ನಲ್ಲಿ ಲಭ್ಯವಿದೆ. ಇದರಲ್ಲಿ ಕೂಡ ಸಿಎನ್‌ಜಿ ಆಯ್ಕೆಗಳು ದೊರೆಯುತ್ತವೆ.

ಮಾರುತಿ ಸುಜುಕಿ ವಿಟಾರಾ ಬ್ರೀಝಾ:
ಈ ಪಟ್ಟಿಯಲ್ಲಿನ ನಾಲ್ಕನೇ ಕಾರು ಎಂದರೆ ಮಾರುತಿ ಸುಜುಕಿ ವಿಟಾರಾ ಬ್ರೀಝಾ.  ಇದು 10,760 ವಾಹನಗಳ ಮಾರಾಟದಿಂದ ನವೆಂಬರ್‌ ತಿಂಗಳಲ್ಲಿ ಶೇ.37ರಷ್ಟು ಪ್ರಗತಿ ದಾಖಲಿಸಿದೆ. 2020ರ ನವೆಂಬರ್‌ ತಿಂಗಳಲ್ಲಿ ಇದು 7,838 ವಾಹನಗಳು ಮಾರಾಟವಾಗಿದ್ದವು. ಇದು ಮ್ಯಾನ್ಯುಯಲ್‌ ಮತ್ತು ಆಟೊಮೆಟಿಕ್‌ ಟ್ರಾನ್ಸ್‌ಮಿಷನ್‌ ಆಯ್ಕೆ ಹಾಗೂ ಸ್ಮಾರ್ಟ್‌ ಹೈಬ್ರಿಡ್ ತಂತ್ರಜ್ಞಾನ ಹೊಂದಿದೆ.

ಹ್ಯುಂಡೈ ಕ್ರೇಟಾ:
ಹ್ಯುಂಡೈ ಕ್ರೇಟಾ ಐದನೇ ಉತ್ತಮ ಮಾರಾಟದ ಪಟ್ಟಿಗೆ ಸೇರಿದ ಕಾರಾಗಿದೆ. ಕ್ರೇಟಾ ಕಳೆದ ತಿಂಗಳ ಅತ್ಯುತ್ತಮ ಬೇಡಿಕೆ ಪಡೆದುಕೊಂಡ ಎಸ್‌ಯುವಿಗಳಲ್ಲಿ ಕೂಡ ಒಂದಾಗಿದೆ. ಇದು 10,300 ವಾಹನಗಳ ಮಾರಾಟ ದಾಖಲಿಸಿದೆಯಾದರೂ, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.14ರಷ್ಟು ಇಳಿಕೆಯಾಗಿದೆ. 2020ರ ನವೆಂಬರ್‌ನಲ್ಲಿ 12,017 ವಾಹನಗಳು ಮಾರಾಟವಾಗಿದ್ದವು.

ಹೋಂಡಾ ಟು ವ್ಹೀಲರ್ಸ್ ಮಾರುಕಟ್ಟೆಗೆ

ಮಾರುತಿ ಸುಜುಕಿ ಬೊಲೆನೊ;
ಮಾರುತಿಯ ಪ್ರೀಮಿಯಮ್‌ ಹ್ಯಾಚ್‌ಬ್ಯಾಕ್‌ ಬೊಲೆನೋ, ಕಳೆದ ತಿಂಗಳಲ್ಲಿ ಶೇ.44ರಷ್ಟು ಮಾರಾಟದ ಇಳಿಕೆ ಕಂಡಿದೆ. ನವೆಂಬರ್‌ ತಿಂಗಳಲ್ಲಿ 9,931 ವಾಹನಗಳು ಮಾರಾಟವಾಗಿವೆ. 2020ರ ನವೆಂಬರ್‌ನಲ್ಲಿ ಇದು 17,872ರಷ್ಟಿತ್ತು.

ಟಾಟಾ ನೆಕ್ಸಾನ್‌:
2021ರ ನವೆಂಬರ್‌ ತಿಂಗಳಲ್ಲಿ ಟಾಟಾ ನೆಕ್ಸಾನ್‌ ಭಾರಿ ಪ್ರಗತಿ ದಾಖಲಿಸಿದೆ. ನೆಕ್ಸಾನ್‌ ಒಂದು ತಿಂಗಳಲ್ಲಿ 9,831 ವಾಹನಗಳು ಮಾರಾಟವಾಗಿದೆ. ಇದು ಕಂಪನಿಯ ಮಾರಾಟದಲ್ಲಿ ಬಹುದೊಡ್ಡ ಕೊಡುಗೆ ನೀಡುತ್ತದೆ.

ಮಾರುತಿ ಸುಜುಕಿ ಈಕೋ:
ಮಾರುತಿ ಸುಜುಕಿ ಈಕೋ ಕಳೆದ ತಿಂಗಳಲ್ಲಿ ಶೇ.14ರಷ್ಟು ವ್ಯಾಪಾರದಲ್ಲಿ ಕುಸಿತ ಕಂಡಿದೆ. ನವೆಂಬರ್‌ ತಿಂಗಳಲ್ಲಿ 9,571 ಕಾರುಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ತಿಂಗಳಲ್ಲಿ ಇದು 11,183ರಷ್ಟಿತ್ತು.

ಕಿಯಾ ಸೆಲ್ಟೋಸ್‌:
ಭಾರತದ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿರುವ ಕಿಯಾ ಕಂಪನಿಯ ಸೆಲ್ಟೋಸ್‌, ನವೆಂಬರ್‌ ತಿಂಗಳಲ್ಲಿ 8,859 ವಾಹನಗಳ ಮಾರಾಟ ದಾಖಲಿಸಿದೆ. ಕಳೆದ ವರ್ಷದ ಈ ತಿಂಗಳಿಗೆ ಹೋಲಿಸಿದರೆ, ಇದರಲ್ಲಿ ಶೇ.4ರಷ್ಟು ಇಳಿಕೆಯಾಗಿದೆ.

ಮಾರುತಿ ಸುಜುಕಿ ಎರ್ಟಿಗಾ:
ದೇಶದ ಜನಪ್ರಿಯ ಎನ್‌ಪಿವಿ ಮಾರುತಿ ಸುಜುಕಿ ಎರ್ಟಿಗಾ, ನವೆಂಬರ್‌ ತಿಂಗಳಲ್ಲಿ 8,752 ವಾಹನಗಳ ಮಾರಾಟ ದಾಖಲಿಸಿದೆ. 2020ರ ನವೆಂಬರ್‌ ತಿಂಗಳಲ್ಲಿ ಇದು 9,557 ವಾಹನಗಳ ಮಾರಾಟ ದಾಖಲಿಸಿತ್ತು. ಈ ವರ್ಷ ಇದರ ಮಾರಾಟ ಶೇ.8ರಷ್ಟು ಇಳಿಕೆಯಾಗಿದೆ.

click me!